ಹೆಂಡತಿಗಿಂತ ಮುಂಚೆ ಗಂಡ ಯಾಕೆ ಮರಣ ಹೊಂದುತ್ತಾನೆ ಅನ್ನೋದರ ಬಗ್ಗೆ ಕೃಷ್ಣ ಹೇಳಿದ ರಹಸ್ಯದ ಕುತೂಹಲಕರ ಮಾಹಿತಿಯನ್ನ ಇಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಮಹಿಳೆಯರ ನಿಜವಾದ ಆಭರಣ ಅಂದ್ರೆ ಅವರ ಸೌಭಾಗ್ಯ. ಅಂದ್ರೆ ಅವರ ಗಂಡಂದಿರು. ಆಗಾಗ ನಾವು ಈ ಮಾತನ್ನು ಹಿರಿಯರ ಬಾಯಲ್ಲಿ ಕೇಳ್ತಾ ಇರ್ತೀವಿ. ಮಹಿಳೆಯರು ಯಾವಾಗಲೂ ಚೆನ್ನಾಗಿ ಅಲಂಕಾರವನ್ನ ಮಾಡಿಕೊಳ್ಳುವುದಕ್ಕೆ ಇಷ್ಟಪಡ್ತಾರೆ.
ಆದ್ರೆ ಕೆಲವೊಮ್ಮೆ ತಮ್ಮ ಅಜಾಗರೂಕತೆಯಿಂದ ಮಹಿಳೆಯರು ತಮ್ಮ ವೈವಾಹಿಕ ಜೀವನದಲ್ಲಿ ಕಹಿ ಉಂಟುಮಾಡುವ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಮತ್ತು ಗಂಡನ ಆಯಸ್ಸನ್ನ ಕಡಿಮೆ ಆಗೋ ಹಾಗೆ ಮಾಡುತ್ತಾರೆ. ಪತಿಗೆ ಸಂಕಷ್ಟಗಳನ್ನು ತರುವ, ಆಯಸ್ಸನ್ನ ಹಾಳು ಮಾಡುವಂತಹ ಮಹಿಳೆಯರು ಯಾವ ತಪ್ಪುಗಳನ್ನು ಮಾಡ್ತಾರೆ ನೋಡೋಣ ಬನ್ನಿ.
ಇವುಗಳನ್ನ ನೀವು ಮಾಡ್ತಾ ಇದ್ರೆ ಈಗಲೇ ಸರಿ ಮಾಡಿಕೊಳ್ಳಿ. ಮಂಗಳಸೂತ್ರ ಮತ್ತು ಸಿಂಧೂರವು ಸುಮಂಗಲಿಯರ ಅಲಂಕಾರದ ಪ್ರಮುಖ ವಿಷಯ ಅಂತ ಪರಿಗಣಿಸಲಾಗುತ್ತೆ ಅನ್ನೋದನ್ನ ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಎಲ್ಲಾ ಮಹಿಳೆಯರು ಇದನ್ನ ಗೌರವಿಸಬೇಕು. ಕೆಲವು ಮಹಿಳೆಯರು ತಮ್ಮ ಮಂಗಳಸೂತ್ರವನ್ನು ತೆಗೆದು ಎಲ್ಲೆಲ್ಲೋ ಇಡೋದನ್ನ ಹೆಚ್ಚಾಗಿ ಕಾಣಬಹುದು.
ಹೀಗೆ ಮಾಡೋದು ದೊಡ್ಡ ತಪ್ಪು ಅಂತ ಪರಿಗಣಿಸಲಾಗುತ್ತೆ. ಮಹಿಳೆಯರಿಗೆ ಅವರ ಮಂಗಳಸೂತ್ರವನ್ನ ಅತ್ಯಮೂಲ್ಯ ಚಿಹ್ನೆ ಅಂತ ಪರಿಗಣಿಸಲಾಗಿದೆ ಅನ್ನೋದನ್ನು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ನೀವು ಅದನ್ನ ತೆಗೆದಿಟ್ಟರು ಸಹ ಅದನ್ನ ಎಲ್ಲಿಯಾದರೂ ಸ್ವಚ್ಛವಾದ ಒಳ್ಳೆಯ ಸ್ಥಳದಲ್ಲಿ ಮಾತ್ರ ಇಡಬೇಕು ಅನ್ನೋದನ್ನ ನೆನಪಲ್ಲಿ ಇಟ್ಕೊಳ್ಳಿ.
ಮೇಕಪ್ ಮಾಡಿಕೊಳ್ಳುವ ಸಮಯದಲ್ಲಿ, ಆಭರಣ ಧರಿಸುವಾಗ ಆಭರಣ ಮುರಿದರೆ ಅದು ಬಹಳ ಕೆಟ್ಟ ಸಂಕೇತ ಅಂತ ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ನೀವು ಆಭರಣವನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ಮತ್ತು ಸಮಯ ಸಿಕ್ಕಾಗ ಅದನ್ನು ಸರಿಪಡಿಸಬೇಕು. ಆಭರಣವು ಮುರಿದ ನಂತರ ಅದನ್ನು ಎಲ್ಲೆಲ್ಲೋ ಇಡಬೇಡಿ. ಹೀಗೆ ಮಾಡೋದ್ರಿಂದ ನಿಮ್ಮ ಗಂಡನ ಪ್ರೀತಿ ಕಡಿಮೆಯಾಗುತ್ತೆ. ಅನೇಕ ಮಹಿಳೆಯರು ಮನೆಯಲ್ಲಿ ಎಲ್ಲರೂ ಸೇರಿ ಮೇಕಪ್ ಮಾಡಿಕೊಳ್ಳುವ ಸಂದರ್ಭದಲ್ಲಿ ಒಬ್ಬರ ಸಿಂಧೂರವನ್ನು ಇನ್ನೊಬ್ಬರು ಹಚ್ಚಿಕೊಳ್ಳುತ್ತಾರೆ.
ಅಂದ್ರೆ ಒಬ್ಬರು ಹಚ್ಚಿದ ಕುಂಕುಮವನ್ನು ಮತ್ತೊಬ್ಬರು ಹಚ್ಚಿಕೊಳ್ಳುತ್ತಾರೆ. ಆದರೆ ಹೀಗೆ ಮಾಡೋದು ಬಹಳ ಕೆಟ್ಟದ್ದು ಅಂತ ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ ಆ ಹೆಣ್ಣು ಮಗಳು ತನ್ನ ಗಂಡನಿಂದ ಬೇರೆ ಆಗ್ತಾಳೆ ಹಾಗೂ ಪತಿಯ ಆಯಸ್ಸು ಕಡಿಮೆಯಾಗುತ್ತೆ. ಮತ್ತು ಹಾಗೆ ಮಾಡೋದು ಗಂಡನನ್ನು ಅವಮಾನಿಸಿದಂತೆ ಅಂತ ನಂಬಲಾಗಿದೆ.
ವಿವಾಹಿತ ಮಹಿಳೆಯರು ಅವರ ಬಳೆಗಳನ್ನು ಯಾರಿಗೂ ಕೊಡಬಾರದು ಅಂತ ನಂಬಲಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ವೈವಾಹಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತೆ ಅಂತ ಹೇಳಲಾಗಿದೆ. ಬಳೆಗಳನ್ನ ಹಂಚಿಕೊಳ್ಳುವುದು ಗಂಡನ ಪ್ರೀತಿಯನ್ನು ಕೂಡ ಮರೆಯಾಗುವಂತೆ ಮಾಡುತ್ತದೆ. ನೀವು ಬಳೆಗಳನ್ನ ಯಾರಿಗಾದ್ರೂ ಕೊಡೋದಕ್ಕೆ ಬಯಸಿದರೆ ಹೊಸ ಬಳೆಗಳನ್ನು ದಾನ ಮಾಡಿ. ಅಲ್ಲದೆ ಒಬ್ಬ ವಿಧವೆಗೆ ಕೆಂಪು ಅಥವಾ ಹಳದಿ ಬಣ್ಣದ ಸೀರೆಗಳನ್ನು ನೀಡಬಾರದು ಅನ್ನೋದನ್ನ ನೆನಪಲ್ಲಿ ಇಟ್ಕೊಳ್ಳಿ.
ಹೀಗೆ ಮಾಡುವುದರಿಂದ ನಿಮ್ಮ ಸಂಬಂಧದಲ್ಲಿ ತೊಂದರೆ ಉಂಟಾಗುತ್ತದೆ. ಸುಮಂಗಲಿ ಮಹಿಳೆಯರು ಎಂದಿಗೂ ತಮ್ಮ ಕಾಲು ಬೆರಳುಗಳನ್ನ ಖಾಲಿ ಬಿಟ್ಟಿರಬಾರದು ಅಂತ ಹೇಳಲಾಗಿದೆ. ಅಂದ್ರೆ ನೀವು ಕಾಲ್ನಲ್ಲಿ ಕನಿಷ್ಠ ಒಂದು ಕಾಲು ಉಂಗುರವನ್ನಾದರೂ ಧರಿಸಿರಬೇಕು. ಒಂದು ವೇಳೆ ನೀವು ಖಾಲಿ ಕಾಲಿನಲ್ಲಿದ್ರೆ ನಿಮ್ಮ ಗಂಡನೊಂದಿಗೆ ನಿಮ್ಮ ಸಂಬಂಧವು ಹಾಳಾಗುತ್ತೆ ಮತ್ತು ನೀವು ದುರದೃಷ್ಟವನ್ನು ಎದುರಿಸಬೇಕಾಗುತ್ತದೆ ಅನ್ನೋ ನಂಬಿಕೆ ಇದೆ. ಸಾಮಾನ್ಯವಾಗಿ ವೈಧವ್ಯ ಯೋಗ ಅಂದ್ರೆ ವಿಧವೆಯಾಗೋದು.
ಅದು ಕೆಲವು ಮಹಿಳೆಯರ ಜಾತಕದಲ್ಲಿ ಇದ್ದರೆ ಅವಳ ಪತಿ ಮರಣ ಹೊಂದಬಹುದು. ಅದಕ್ಕಾಗಿ ಈ ಯೋಗವನ್ನ ಬಹಳ ಮಾರಕ ಮತ್ತು ಅಶುಭ ಅಂತ ಪರಿಗಣಿಸಲಾಗಿದೆ. ಯಾಕೆಂದ್ರೆ ಇದು ಮಹಿಳೆಯ ಜಾತಕದಲ್ಲಿ ರೂಪುಗೊಂಡಾಗಲೆಲ್ಲಾ ಅದು ಮಹಿಳೆಗೆ ಶಾಪ ಅಂದ್ರೆ ತಪ್ಪಾಗಲ್ಲ. ಏಳನೇ ಮನೆಯ ಅಧಿಪತಿ ಮಂಗಳ ಮತ್ತು ಮೂರನೇ, ಏಳನೇ ಅಥವಾ ಹತ್ತನೇ ಮನೆಯ ಮೇಲೆ ಶನಿಯ ದೃಷ್ಟಿಯಿಂದ ವೈಧವ್ಯ ಯೋಗ ರೂಪುಗೊಳ್ಳುತ್ತದೆ. ಹಾಗೆಯೇ ಸಪ್ತಮ ಅಧಿಪತಿ ಶನಿ ಮತ್ತು ಮಂಗಳ ಸಂಬಂಧಿಗಳಾಗಿದ್ದರೆ ಸಪ್ತಮ ಅಧಿಪತಿ ಬಲಹೀನನಾಗಿದ್ದರೆ ವೈಧವ್ಯ ಯೋಗ ಉಂಟಾಗುತ್ತೆ.
ಸಪ್ತಮ ಅಧಿಪತಿ ಶನಿಯು ಮಂಗಳನನ್ನು ನೇರವಾಗಿ ನೋಡಿದಾಗಲೂ ವೈಧವ್ಯ ಯೋಗ ರೂಪುಗೊಳ್ಳುತ್ತೆ. ಮಹಿಳೆಯರ ಜಾತಕದಲ್ಲಿ ವೈಧವ್ಯ ಯೋಗವಿದ್ರೆ ದೇವಿ ಮಂಗಳ ಗೌರಿಯನ್ನು ಐದು ವರ್ಷಗಳ ಕಾಲ ಪೂಜಿಸಬೇಕು. ಜೊತೆಗೆ ಮಹಿಳೆಯು ವಿವಾಹದ ಮೊದಲು ಕುಂಭ ವಿವಾಹವನ್ನು ಮಾಡಬೇಕು. ಮದುವೆಯಾದ ನಂತರ ಸ್ತ್ರೀಯರಿಗೆ ವೈಧವ್ಯ ಯೋಗವಿದೆ
ಅನ್ನೋದು ತಿಳಿದು ಬಂದರೆ ಮಂಗಳ ಮತ್ತು ಶನಿಗೆ ಸಂಬಂಧಿಸಿದ ಪರಿಹಾರ ಕ್ರಮಗಳನ್ನು ತಗೋಬೇಕು. ಈ ಸಮಯದಲ್ಲಿ ಯಾವ ಪಾಪಗ್ರಹವು ವೈಧವ್ಯ ಯೋಗವನ್ನು ಉಂಟುಮಾಡುತ್ತದೆಯೋ ಆ ಪಾಪಗ್ರಹವನ್ನು ಶಾಂತಗೊಳಿಸಬೇಕು. ವಿವಾಹದ ನಂತರ ವೈಧವ್ಯ ಯೋಗದ ಅಶುಭ ಪರಿಣಾಮಗಳನ್ನು ಕಡಿಮೆ ಮಾಡುವುದಕ್ಕೆ ಭಗವಾನ್ ಶಿವನನ್ನ ನಿಯಮಿತವಾಗಿ ಪೂಜಿಸಬೇಕು.
ಮನೆಯ ಮುಖ್ಯ ಬಾಗಿಲಿಗೆ ಮಾವಿನ ತೋರಣಗಳನ್ನು ಕಟ್ಟಬೇಕು. 15 ದಿನಗಳ ನಂತರ ನೀವು ಹಳೆಯ ಎಲೆಗಳನ್ನು ತೆಗೆದುಹಾಕಿ ಹೊಸ ಎಲೆಗಳನ್ನು ಹಾಕಬೇಕು. ಗುರುವಿನ ದೆಸೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ನೀವು ಗುರುವಿನ ಪೂಜೆಯನ್ನು ಸಹ ಮಾಡಬೇಕು. ಅದೇ ರೀತಿ ಹಿಂದೂ ಧರ್ಮದಲ್ಲಿ ಮದುವೆಯಾದ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ನಾನಾ ರೀತಿಯ ಉಪವಾಸಗಳನ್ನ ಮಾಡ್ತಾರೆ.
ಅವುಗಳಲ್ಲಿ ವಟಸಾವಿತ್ರಿ ವ್ರತ ಕೂಡ ಒಂದು. ಈ ದಿನ ಮಹಿಳೆಯರು ಆಲದ ಮರವನ್ನ ಪೂಜಿಸಿ ಆಲದ ಮರಕ್ಕೆ ಪ್ರದಕ್ಷಿಣೆಯನ್ನು ಹಾಕ್ತಾರೆ. ವಟ ಸಾವಿತ್ರಿ ವ್ರತವನ್ನು ಪ್ರತಿ ವರ್ಷ ಆಚರಿಸಲಾಗುತ್ತೆ. ಈ ಸಮಯದಲ್ಲಿ ಆಲದ ಮರದ ಸುತ್ತ ದಾರವನ್ನು ಕಟ್ಟಿ ತಾಮ್ರ ಅಥವಾ ಯಾವುದೇ ನಾಣ್ಯಗಳನ್ನು ಇಟ್ಟು ಪತಿಯ ಆಯಸ್ಸಿಗೆ ಮುತ್ತೈದೆಯರು ಪ್ರಾರ್ಥಿಸುತ್ತಾರೆ. ಹೆಂಡತಿಗಿಂತ ಮೊದಲು ಗಂಡ ಯಾಕೆ ಮರಣ ಹೊಂದುತ್ತಾನೆ ಎನ್ನುವುದರ ಬಗ್ಗೆ ಕೃಷ್ಣ ಹೇಳಿದ ರಹಸ್ಯವನ್ನು ತಿಳಿದುಕೊಂಡ್ರಿ ಅಲ್ವಾ..