ಪಿಗ್ಮೆಂಟೇಷನ್ ಅಥವಾ ಬಂಗು ಇದರ ಬಗ್ಗೆ ತಿಳಿದುಕೊಳ್ಳೋಣ

ಆತ್ಮೀಯರೇ ಇವತ್ತಿನ ವಿಚಾರವೇನೆಂದರೆ ಪಿಗ್ಮೆಂಟೇಷನ್ ಅಥವಾ ಬಂಗು ಇದರ ಬಗ್ಗೆ ತಿಳಿದುಕೊಳ್ಳೋಣ. ಮತ್ತು ಈ ಸಮಸ್ಯೆಗೆ ಪರಿಹಾರವನ್ನು ನೋಡೋಣ. ಇದು ಬರುವುದಕ್ಕೆ ಪ್ರಧಾನ ಕಾರಣವಿನೆಂದರೆ ಪಿತ್ತ ವಿಕಾರ ಹಾಗೂ ಪಿತ್ತ ವಿಕಾರಕ್ಕೆ ಮೂಲ ಕಾರಣವೇನೆಂದರೆ ಮಲಬದ್ಧತೆ, ಅಜೀರ್ಣ ಹೈಪರ್ ಆಸಿಡಿಟಿ ಹೈಪೋಆಸಿಡಿಟಿ ಈ ಕಾರಣದಿಂದ ಬಂದಿರುವ ಬಂಗಿಗೆ ನಾವು ಏನು ಮಾಡುತ್ತೇವೆ

ಎಂದರೆ ಯಾವ ಯಾವುದು ಸೌಂದರ್ಯ ವರ್ಧಕವನ್ನು ಬಳಸಿ ಅದ ನಿವಾರಣೆ ಮಾಡಿಕೊಳ್ಳಲು ಹೋಗುತ್ತೇವೆ ಆದರೆ ಅದು ಮತ್ತೆ ಮತ್ತೆ ಬರುತ್ತಿರುತ್ತದೆ. ಆದ್ದರಿಂದ ಈ ಬಂಗು ಬರೆದಂತೆ ತಡೆಯುವುದು ಮುಖ್ಯ ಅದು ಪಿತ್ತ ಶಮನ ಆದರೆ ಮಾತ್ರ ಬಂಗಿನ ಸಮಸ್ಯೆ ಕಡಿಮೆಯಾಗುತ್ತದೆ. ಅದು ಬರೆದಂತೆ ತಡೆಯಲು ಎಕ್ಸ್ಟ್ರನಲ್ ಔಷಧಿಯನ್ನು ಹೇಳುತ್ತೇವೆ .

ಅದು ಬರೆದಂತೆ ತಡೆಯಲು ಇಂಟರ್ನಲ್ ಔಷಧಿಯನ್ನು ಹೇಳುತ್ತೇನೆ. ಮೊದಲು ದೀಪಿನ ಪಾಷಣ ಶಕ್ತಿ ಕ್ರಿಯಾಶೀಲಗೊಳಿಸಿ ಹೊಟ್ಟೆ ಶುದ್ದಿ ಮಾಡಿ ಪಿತ್ತದೋಷವನ್ನು ಸಮತೋಲನದಲ್ಲಿಡುವ ಈ ತುಪ್ಪ ಹಸುವಿನ ತುಪ್ಪವನ್ನು ಪ್ರತಿ ದಿನ ಬೆಳಗ್ಗೆ ಒಂದರಿಂದ ಒಂದೂವರೆ ಸ್ಪೂನ್ ಸೇವನೆ ಮಾಡಬೇಕು. ಇದನ್ನು ಮೂರು ತಿಂಗಳ ಕಾಲ ಮಾಡಬೇಕು.

ಹಾಗೆಯೇ ಈಗಾಗಲೇ ಆಗಿರುವ ಬಂಗುಗಳನ್ನು ನಿಯಂತ್ರಣ ಮಾಡಲು ನಾವು ಹೇಳುವ ಲೇಪನವನ್ನು ಮಾಡಿಕೊಳ್ಳಬೇಕು. ಅದೇನೆಂದರೆ ಕಕ್ಕೆಮರ ಈ ಮರದ ಹೂವ ಇದು ಸೀಜನ್ ನಲ್ಲಿ ಹೂ ಬಿಡುತ್ತದೆ ಆ ಸಮಯದಲ್ಲಿ ಹೂವಿನಿಂದ ತುಂಬಿದ ಮರವು ಬಂಗಾರದ ಮರದಂತೆ ಕಾಣುತ್ತದೆ. ಅದರ ಕಾಯಿ ಕೊಳವೆ ಆಕಾರದಲ್ಲಿ ಉದ್ದವಿರುತ್ತದೆ. ಅದರ ಲಾಭಗಳು ಹಲವಾರು ಇವೆ. ದಾತುಪುಷ್ಟಿಗೆ ಶಕ್ತಿ ವೃದ್ಧಿಗೆ ನರ ದೌರ್ಬಲ್ಯ ಕ್ಕೆ ಇದಕ್ಕೆಲ್ಲ ಬೀಜವನ್ನು ಬಳಸುತ್ತಾರೆ. ಆದರೆ ಬಂಗಿಗೆ ಅದರ ಹೂವನ್ನು ಬಳಸಬೇಕು.

ಅದು ಹೇಗೆಂದರೆ ಆ ಹೂವನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಬೇಕು. ಆ ಪುಡಿಯನ್ನು ಕೊಬ್ಬರಿ ಎಣ್ಣೆ ಜೊತೆಗೆ ಮಿಶ್ರಣ ಮಾಡಬೇಕು. ಇದನ್ನು ಮಿಕ್ಸ್ ಮಾಡಿ ಹಾಗೆ ಬಿಡಬಾರದು ಒಂದು ಅರ್ಧ ಚಮಚ ಕೊಬ್ಬರಿ ಎಣ್ಣೆ ಮತ್ತು ಅದಕ್ಕೆ ಸಾಕಾಗುವಷ್ಟು ಕಕ್ಕೆ ಹೂವಿನ ಪುಡಿ ಮಿಶ್ರಣ ಮಾಡಿಕೊಂಡು ಎಲ್ಲಿ ಬಂಗು ಇದೆ ಅಲ್ಲಿಗೆ ಲೇಪನ ಮಾಡಿಕೊಳ್ಳಬೇಕು.

10 ನಿಮಿಷದವರೆಗೆ. ಹಾಗೆ ಮಲಗಿಕೊಳ್ಳಬೇಕು ರಾತ್ರಿ ಬೆಳಗ್ಗೆ ಎದ್ದ ತಕ್ಷಣ ಕಡಲೆ ಹಿಟ್ಟಿನಿಂದ ಮುಖ ತೊಳೆಯಬೇಕು. ಒಂದು ತಿಂಗಳಲ್ಲಿ ಎಷ್ಟೇ ಬಂಗಿದ್ದರು ಕೂಡ ಗುಣವಾಗುತ್ತದೆ. ಈ ಸಮಸ್ಯೆಗೆ ಕೆಲವರು ಲೇಸರ್ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಾರೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಾರೆ ಇದು ಅಷ್ಟು ಒಳ್ಳೆಯದಲ್ಲ ಇದರಿಂದ ಹಲವಾರು ಸಮಸ್ಯೆಗಳು ಬರಬಹುದು ಮುಖದಲ್ಲಿ ತುಂಬಾ ಸೆನ್ಸಿಟಿವ್ ನರಗಳಿರುತ್ತವೆ. ಅವುಗಳಿಗೆ ತೊಂದರೆಯಾಗಿ ಪಾರ್ಸೆಲ್ ಸ್ಟ್ರೋಕ್ ಆಗಬಹುದು ಕೆಲವು ಸಮಯದಲ್ಲಿ ಈ ಸರ್ಜರಿ ಇಂದ ಸ್ಕಿನ್ ಕ್ಯಾನ್ಸರ್ ಬರವ ಸಾಧ್ಯತೆಯೂ ಇದೆ. ಅದಕ್ಕೆ ಈ ಸುಲಭವಾದ ಮನೆ ಮದ್ದನ್ನು ಬಳಸಿ ನಿಮ್ಮ ಬಂಗನ್ನ ನಿವಾರಿಸಿಕೊಳ್ಳಿ.

Leave a Comment