ನಾಯಿ ಸಾಕೋದ್ರಿಂದ ನಿಮ್ಮ ಮನೆಯಿಂದ 6 ಅಪಾಯಕಾರಿ ದೋಷ ಕಳೆಯುತ್ತದೆ.

ಮನುಷ್ಯನಿಗೆ ಸ್ನೇಹಿತನಂತಿರುವ ನಂಬಿಕಸ್ತ ಪ್ರಾಣಿ ಅಂದ್ರೆ ಶ್ವಾನ. ಮನುಷ್ಯನಿಗೆ ಸಹಾಯ ಮತ್ತು ಅದೃಷ್ಟವನ್ನು ನೀಡುವ ಏಕೈಕ ಪ್ರಾಣಿ ಅಂತ ಇದನ್ನು ಪರಿಗಣಿಸಲಾಗಿದೆ. ಮನೆಯನ್ನು ಕಾಯುವ ಉದ್ದೇಶಕ್ಕಾಗಿ ಸಾಕುವ ನಾಯಿಗಳಿಗೆ ವಿಶೇಷ ಅತಿಂದ್ರಿಯ ಶಕ್ತಿ ಇರುತ್ತೆ ಅಂತ ಹೇಳಲಾಗಿದೆ. ಅದರ ಮೂಗು, ಕಿವಿ, ನಾಲಿಗೆ ಹಾಗೂ ಗ್ರಹಿಸುವ ಶಕ್ತಿಯು ಮಾತ್ರ ಅದ್ಭುತವಾಗಿರುತ್ತೆ.

ನಾಯಿಯನ್ನ ಮನೇಲ್ ಸಾಕುವುದರಿಂದ ಅದು ನಮಗೆ ಗೊತ್ತಾಗದಂತೆನೆ ಮನೆಗೆ ಪ್ರವೇಶ ಮಾಡುವ ದುಷ್ಟ ಶಕ್ತಿಗಳನ್ನು ಮನೆಯ ಮುಂಬಾಗಿಲಿಂದಾನೆ ವಾಪಸ್ ಕಳಿಸುತ್ತೆ. ಈ ಜಗತ್ತಿನಲ್ಲಿ ನಾಯಿಯನ್ನು ಅತಿ ನಿಯತ್ತಿನ ಪ್ರಾಣಿ ಅಂತ ಹೇಳಲಾಗುತ್ತೆ. ಮನುಷ್ಯರು ಉಪ್ಪು ತಿಂದು ದ್ರೋಹ ಮಾಡ್ಬೋದು, ಆದ್ರೆ ನಾಯಿ ಯಾವಾಗ ಒಂದು ಮನೆಯ ರೊಟ್ಟಿಯನ್ನು ತಿನ್ನುತ್ತೋ ತನ್ನ ಕೊನೆ ಉಸಿರಿರುವರೆಗೂ ಆ ಮನೆಯವರಿಗೆ ಮೋಸ ಮಾಡೋದಿಲ್ಲ ಮತ್ತು ಅವರನ್ನ ಕಚ್ಚೋದಿಲ್ಲ.

ನಾಯಿಯ ಈ ಒಂದು ನಿಯತ್ತಿನ ಗುಣದಿಂದ ತುಂಬಾ ಜನರು ತಮ್ಮ ಮನೆಯಲ್ಲಿ ಇದನ್ನು ಸಾಕೋದಕ್ಕೆ ಇಷ್ಟಪಡುತ್ತಾರೆ. ದೇವರು ಶ್ವಾನಗಳಿಗೆ ಕೆಲವು ಅತಿಂದ್ರಿಯ ಶಕ್ತಿಗಳನ್ನು ಕರುಣಿಸಿದ್ದಾನೆ ಅಂತ ಪರಿಗಣಿಸಲಾಗಿದೆ .ಹಾಗಾಗಿ ಶ್ವಾನಗಳಿಗೆ ದೈವ ಶಕ್ತಿಯು ಇದ್ದೇ ಇರುತ್ತೆ ಅಂತ ಹೇಳಲಾಗಿದೆ. ವಾತಾವರಣದಲ್ಲಿ ಮನುಷ್ಯ ಗ್ರಹಿಸಲು ಸಾಧ್ಯವಾಗದಂತಹ ಸಂಗತಿಯನ್ನು ನಾಯಿ ಗ್ರಹಿಸುತ್ತೆ ಅದು ಸಕಾರಾತ್ಮಕ ಶಕ್ತಿಗಳು ಹಾಗೂ ಋಣಾತ್ಮಕ ಶಕ್ತಿಗಳನ್ನು ಸಹ ಕಂಡುಹಿಡಿಯುತ್ತೆ.

ನಾಯಿಯ ಓಡಾಟ ಕೂಗು ಹಾಗೂ ಕೆಲವು ವರ್ತನೆಗಳನ್ನು ಆಧರಿಸಿ ಮನುಷ್ಯ ತನ್ನ ಜೀವನದಲ್ಲಿ ನಡೆಯುವ ಸಂಗತಿಗಳನ್ನು ಕಂಡುಹಿಡಿಯಬಹುದು. ನಮ್ಮ ಶಾಸ್ತ್ರಗಳಲ್ಲಿ ಶ್ವಾನಗಳ ಬಗ್ಗೆ ಉಲ್ಲೇಖವಿದೆ. ಗೋಮಾತೆಯನ್ನು ಬಿಟ್ರೆ ಕೇವಲ ಶ್ವಾನಗಳ ಬಗ್ಗೆ ಪುರಾಣಶಾಸ್ತ್ರಗಳಲ್ಲಿ ಉಲ್ಲೇಖಗಳು ದೊರೆಯುತ್ತವೆ. ಇಂದಿನ ದಿನಮಾನಗಳಲ್ಲಿ ನಾಯಿಯನ್ನ ಮನೆಯಲ್ಲಿ ಸಾಕುವವರ ಸಂಖ್ಯೆ ಹೆಚ್ಚಾಗ್ತಾ ಇರೋದು ಸಂತೋಷದ ವಿಷಯ. ನಾವು ಮನೇಲಿ ನಾಯಿ ಸಾಕೀರ್ತಿವಿ. ಆದರೆ ನಾಯಿ ಸಾಕೋದ್ರಲ್ಲಿ ಏಳು ರಹಸ್ಯ ಸಂಗತಿಗಳಿವೆ ಅಂತ ನಮಗೆ ಗೊತ್ತೇ ಇರುವುದಿಲ್ಲ. ಆ ಏಳು ರಹಸ್ಯಗಳು ಯಾವುವು. ಮನೆಯಲ್ಲಿ ನಾಯಿ ಸಾಕುವುದರಿಂದ ನಮಗೆ ಗೊತ್ತಾಗದಂತೆ ನಾಯಿ ತನ್ನಲ್ಲಿರುವ ಅತಿಂದ್ರಿಯ ಶಕ್ತಿಗಳಿಂದ ಮನೆಯ ಯಜಮಾನನಿಗೆ ಮತ್ತು ಮನೆಯ ಸದಸ್ಯರಿಗೆ ಒಳ್ಳೆಯದನ್ನೇ ಮಾಡುತ್ತೆ. ಹಾಗೆ ಮನೆಯ ಹೊರಗಿನಿಂದ ಒಳಗೆ ಬರಲು ಯತ್ನಿಸುವ ದುಷ್ಟ ಶಕ್ತಿಗಳನ್ನು ಓಡಿಸುತ್ತೆ. ಹಾಗಾದ್ರೆ ನಾಯಿಗಿರುವ ಆ ಏಳು ರಹಸ್ಯ ಚಮತ್ಕಾರಿ ಶಕ್ತಿಗಳಾದರೂ ಯಾವುವು, ಬನ್ನಿ ಒಂದೊಂದಾಗಿ ತಿಳಿದುಕೊಳ್ಳೋಣ. ಮೊದಲನೆಯದಾಗಿ ಧನಾತ್ಮಕ ಶಕ್ತಿಯ ಸಂಚಾರ ಅಂದ್ರೆ ಪೋಸಿಟಿವ್ ಎನರ್ಜಿಯ ಸಂಚಾರ. ವೀಕ್ಷಕರೆ ಮನೆಯಲ್ಲಿ ನಾವ್ ಮಾಡುವ ಪೂಜೆ ಪುನಸ್ಕಾರ, ಒಳ್ಳೆಯ ಆಚರಣೆ, ಸದ್ವಿಚಾರ, ದಾನ, ಧರ್ಮ, ಹೀಗೆ ಒಳ್ಳೆಯ ಕೆಲಸಗಳಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಇರುತ್ತೆ. ಒಂದು ವೇಳೆ ನೀವು ಎಷ್ಟೇ ಒಳ್ಳೆಯ ಕೆಲಸ ಮಾಡಿದ್ರು ಸಹ ಮನೆಯ ವಾಸ್ತು ಸರಿ ಇಲ್ಲದಿದ್ದಾಗ ಅಥವಾ ಬೇರೆ ಇನ್ಯಾವುದೋ ಕಾರಣಗಳಿಂದ ಮನೆಯಲ್ಲಿ ನಕಾರಾತ್ಮಕ ಅಂದ್ರೆ ನೆಗೆಟಿವ್ ಎನರ್ಜಿ ಸುಲಭವಾಗಿ ಒಳಗಡೆ ಬರುತ್ತೆ. ಹಾಗೆ ದುಷ್ಟ ಶಕ್ತಿಗಳು ಕೂಡ ಒಳಗೆ ಬರುತ್ತೆ. ಹೀಗೆ ಒಳ ಬರುವ ನಕಾರಾತ್ಮಕ ಶಕ್ತಿಗಳನ್ನ ಮನೆಯಲ್ಲಿ ಸಾಕಿದ ನಾಯಿ ತಡೆಯುತ್ತೆ ಅಂದ್ರೆ ನಿಮಗೆ ಅಚ್ಚರಿಯಾಗುತ್ತೆ ಅಲ್ವಾ, ಇದು ಸತ್ಯ. ಮನೆಗೆ ಪ್ರವೇಶ ಮಾಡುವ ನಕರಾತ್ಮಕ ಶಕ್ತಿಗಳನ್ನು ತಡೆದು ಮನೆಯ ಬಾಗಿಲಿನಿಂದ ವಾಪಸ್ ಕಳಿಸತ್ತೆ. ಶ್ವಾನವು ನಮಗೆ ಮಾಡುವ ಬಹು ದೊಡ್ಡ ಉಪಕಾರವಿದು. ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರಲ್ವೋ ಆ ಮನೆಯಲ್ಲಿ ಧನಾತ್ಮಕ ಶಕ್ತಿ ಚೆನ್ನಾಗಿ ಸಂಚಾರ ಮಾಡುತ್ತೆ. ಹಾಗೂ ಆ ಮನೆಯಲ್ಲಿ ಸದಾ ಏಳಿಗೆ ಇರುತ್ತೆ. ಎರಡನೆಯದು ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಾ ಇದ್ದರೆ, ಒಂದ್ವೇಳೆ ನಿಮ್ಮ ಜೀವನದಲ್ಲಿ ಏಳಿಗೆ ಇಲ್ಲದಿದ್ರೆ, ಹಣಕಾಸಿನ ವಿಷಯದಲ್ಲಿ ನೀವು ತುಂಬಾ ಕಷ್ಟಪಡುತ್ತಿದ್ದರೆ ನಾಯಿ ಸಾಕ್ಬೇಕು. ಜೀವನದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡ್ತಾ ಇರ್ತೀರಾ, ಆದ್ರೆ ಹಣ ಕೈಯಲ್ಲಿ ನಿಲ್ಲುವುದೇ ಇಲ್ಲ. ಸಾಲ ಮಾಡಿ ಸುಸ್ತಾಗಿ ಹೋಗಿರ್ತೀರ, ಸಾಲ ತೀರಿಸುವುದಕ್ಕೆ ದಾರಿಗಳೇ ಕಾಣ್ಸುದಿಲ್ಲ. ಹೀಗೆ ಹಣಕಾಸಿನ ಸಮಸ್ಯೆಗಳು ನಿಮ್ಮನ್ನ ಹೈರಾಣಾಗಿಸಿರುತ್ತವೆ .ಇದಕ್ಕೆಲ್ಲ ಒಳ್ಳೆ ಪರಿಹಾರ ಮನೆಯಲ್ಲಿ ನಾಯಿ ಸಾಕುವುದು. ವೀಕ್ಷಕರೆ ನಿಮಗೆ ದೊಡ್ಡ ದೊಡ್ಡ ಜನರ ಉದಾರಣೆ ಕೊಡಬಹುದು. ಮಹೇಂದ್ರ ಸಿಂಗ್ ಧೋನಿ, ಬರಾಕ್ ಒಬಾಮಾ ಹೀಗೆ ದೇಶ ವಿದೇಶದ ಖ್ಯಾತನಾಮರ ಮನೆಗಳಲ್ಲಿ ನಾಯಿ ಸಾಕಿರೋ ಭಾವಚಿತ್ರಗಳನ್ನು ನೋಡಿರುತ್ತೀರಾ. ಅವರಿಗೆ ನಾಯಿಗಳಂದ್ರೆ ಪ್ರಾಣ. ಅಲ್ಲದೆ ಖ್ಯಾತನಾಮರ ಮನೆಯಲ್ಲಿ ನಾಯಿ ಸಾಕಿರೋ ಉದಾಹರಣೆ ಸಾಕಷ್ಟು ಇವೆ. ಮೂರನೇದು ನಿಮ್ಮ ಸಾಮಾಜಿಕ ಜೀವನದಲ್ಲಿ ಪ್ರಗತಿ. ಹೌದು ವೀಕ್ಷಕರೇ ನೀವು ಮನೆಯಲ್ಲಿ ನಾಯಿ ಸಾಕಿದ್ರೆ ನಿಮ್ಮ ಸಾಮಾಜಿಕ ಜೀವನದಲ್ಲಿ ಪ್ರಗತಿಯಾಗುತ್ತೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತೆ. ನೀವು ನಾಯಿ ಸಾಕಿದ ನಂತರ ನಿಮಗೆ ತಿಳಿದು ತಿಳಿಯದೆ ಜನ ನಿಮ್ಮನ್ನ ಮಾತನಾಡಿಸುವುದಕ್ಕೆ ಶುರು ಮಾಡ್ತಾರೆ. ಇದು ನಾಯಿಯಲ್ಲಿರುವ ಅತೀಂದ್ರಿಯ ಶಕ್ತಿಯ ಪರಿಣಾಮದಿಂದ ಆಗುತ್ತೆ. ಇದರಿಂದ ನಿಮ್ಮ ವೈಯಕ್ತಿಕ, ನೌಕರಿ, ಸಾಮಾಜಿಕ, ಹೀಗೆ ಎಲ್ಲಾ ಸ್ಥಳದಲ್ಲೇ ನೀವು ಏಳಿಗೆಯನ್ನು ಕಾಣುತ್ತೀರಾ. ಇನ್ನು ನಾಲಕನೆಯದು ಕೆಟ್ಟ ಕಣ್ಣು ದೃಷ್ಟಿಯಿಂದ ರಕ್ಷಣೆ. ನೀವು ಚೆನ್ನಾಗ್ ಡ್ರೆಸ್ ಮಾಡ್ಕೊಂಡು ಹೊರಗೆ ಹೋಗ್ತೀರಾ. ಮನೆಗೆ ಬರುವಷ್ಟರಲ್ಲಿ ಕೈ ಕಾಲು ನೋವು, ಸುಸ್ತು, ಅನುಭವಕ್ಕೆ ಬರುತ್ತೆ. ಇದರಿಂದ ಕೆಟ್ಟ ಕಣ್ ದೃಷ್ಟಿ ಕೆಲಸ ಮಾಡುತ್ತೆ. ಅಂದ್ರೆ ನೀವು ಚೆನ್ನಾಗಿ ಡ್ರೆಸ್ ಮಾಡ್ಕೊಂಡು ಹೋದಾಗ ಜನರ ದೃಷ್ಟಿ ನಿಮ್ಮ ಮೇಲೆ ಬೀಳುತ್ತೆ. ಅದ್ರಲ್ಲಿ ಕೆಲವರದು ಕೆಟ್ಟ ಕಣ್ಣ ದೃಷ್ಟಿ ಇರುತ್ತೆ. ಇದೊಂದು ಉದಾಹರಣೆ ಅಷ್ಟೇ. ನೀವು ಚೆನ್ನಾಗಿ ಮನೆ ಕಟ್ಟಿಸಿದ್ರಿ ಅಂದ್ರೆ ಓಹೋ ಏನಪ್ಪಾ ಸಕ್ಕತಾಗ್ ಮನೆ ಕಟ್ಸ್ ಬಿಟ್ಟಿದ್ದೀಯ ಅಂತ ಹೇಳಿದ ವ್ಯಕ್ತಿ ಕೆಟ್ಟ ಕಣ್ ದೃಷ್ಟಿ ಬಿಟ್ರೆ ಮುಗೀತು. ನಿಮ್ಮನೇಲಿ ಪ್ರಾಬ್ಲಮ್ ಶುರುವಾಗುತ್ತೆ. ಇದು ಇನ್ನೊಂದು ಉದಾಹರಣೆ. ಕೆಟ್ಟ ಕಣ್ ದೃಷ್ಟಿಗಳು ಜೀವನದಲ್ಲಿ ಸಾಕಷ್ಟು ತೊಂದ್ರೆಗಳನ್ನು ತಂದೊಡತ್ತೆ. ಈ ಕೆಟ್ಟ ಕಣ್ ದೃಷ್ಟಿಗಳನ್ನು ನಿಮ್ಮ ದೇಹದಿಂದ ತೆಗೆಯುವ ಶಕ್ತಿ ಮನೆಯಲ್ಲಿ ಸಾಕಿದ ನಾಯಿಗಳಿಗೆ ಇರುತ್ತೆ. ಒಂದು ವೇಳೆ ನಿಮಗೆ ಜನರ ಕೆಟ್ಟ ಕಣ್ ದೃಷ್ಟಿಯಿಂದ ಮೈ ಕೈ ನೋವು, ಅಥವಾ ಮನೆಯಲ್ಲಿ ಕಿರಿಕಿರಿ ಉಂಟಾಗಿದೆ ಅಂದ್ರೆ ನಿಮ್ಮ ಮನೆ ನಾಯಿಗೆ ನಿಮ್ಮ ಕೈಯಾರೆ ಊಟ ನೀಡಿ. ಊಟ ನೀಡೋ ಮೊದಲು ನಿಮ್ಮ ಮೈ ಮನಸ್ಸಿನಿಂದ ಮತ್ತು ಮನೆಯಿಂದ ಕೆಟ್ಟ ಕಣ್ ದೃಷ್ಟಿ ಹೊರಟು ಹೋಗ್ಲಿ ಅಂತ ಹೇಳಿ ನಾಯಿಗೆ ನಮಸ್ಕರಿಸಿ ಊಟ ಕೊಡಿ. ಚಮತ್ಕಾರ ನೋಡಿ ಕೆಟ್ಟ ಕಣ್ ದೃಷ್ಟಿಯಿಂದ ಉಂಟಾದ ಮೈಕೈ ನೋವು 24 ಗಂಟೆ ಒಳಗೆ ನಿವಾರಣೆಯಾಗಿರುತ್ತದೆ. ಐದನೇದು ಪ್ರಕೃತಿಯಲ್ಲಿ ಸುತ್ತಮುತ್ತಲು ಅವಘಡಗಳು ಸಂಭವಿಸುವ ಮೊದಲು ನಾಯಿಗಳು ಮನುಷ್ಯನಿಗೆ ಸಂಕೇತ ನೀಡುತ್ತದೆ. ಭೂಕಂಪ, ಪ್ರವಾಹ, ಮಳೆಯಿಂದ ತೊಂದ್ರೆ ಹೀಗೆ ಪ್ರಕೃತಿಯಲ್ಲಿ ದೊಡ್ಡಮಟ್ಟದ ಅವಗಡ ಆಗುವ ಮೊದಲು ನಾಯಿಗೆ ಅದರ ಅತಿಂದ್ರಿಯ ಶಕ್ತಿಯಿಂದ ಅದಕ್ಕೆ ತಿಳಿಯುತ್ತೆ. ಹಾಗಾಗಿ ಅದು ಊಳಿಡುವುದರ ಮುಖಾಂತರ, ನಿರಂತರವಾಗಿ ಅಳುವುದರ ಮುಖಾಂತರ ನಮಗೆ ಸೂಚನೆ ನೀಡುತ್ತೆ. ಅಷ್ಟೇ ಅಲ್ಲ ನಿಮ್ಮ ಮನೆ ಅಕ್ಕ ಪಕ್ಕ ಯಾವುದಾದರೂ ಆತ್ಮ ತಿರ್ಗಾಡ್ತಿದ್ರು ಕೂಡ ಅದು ವಿಚಿತ್ರ ಧ್ವನಿ ಮಾಡುವುದರ ಮೂಲಕ ನಿಮಗೆ ತಿಳಿಸುವುದಕ್ಕೆ ಪ್ರಯತ್ನಿಸುತ್ತೆ. ಇನ್ನು 6ನೇದು ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಮನೆಯಲ್ಲಿ ಸಾಕಿದ ನಾಯಿಯನ್ನು ನೋಡಬೇಕು. ಇದರಿಂದ ಅದರಲ್ಲಿರೋ ಅತಿಂದ್ರೀಯ ಶಕ್ತಿಯ ಪ್ರಭಾವದಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಆಗುತ್ತೆ. ಇದು ನಿಮ್ಮ ದೈನಂದಿನ ಕೆಲಸದಲ್ಲಿ ಸಕ್ರಿಯವಾಗಿರುವುದಕ್ಕೆ, ಚಟುವಟಿಕೆಯಿಂದ ಇರುವುದಕ್ಕೆ, ನಿಮ್ಮ ಕೆಲಸಗಳಲ್ಲಿ ಜಯ ಸಾಧಿಸುವುದಕ್ಕೆ ಸಹಾಯ ಮಾಡುತ್ತೆ. ಇನ್ನು ಕೊನೆಯದಾಗಿ ಏಳನೇದು ನಾಯಿ ಸಾಕೋ ವ್ಯಕ್ತಿಗೆ ಎಂದಿಗೂ ಬಡತನ ಬರುವುದಿಲ್ಲ ಅಂತ ಹೇಳಲಾಗುತ್ತೆ. ಯಾಕಪ್ಪ ಅಂದ್ರೆ ನಾಯಿ ಸಾಕುವವರ ಮನಸ್ಸಿನಲ್ಲಿ ಇನ್ನೊಬ್ಬರ ಮೇಲೆ ಪ್ರೀತಿ, ಪ್ರೇಮ, ದಯಾ ಭಾವನೆ ಇರುತ್ತೆ. ಅವರು ಸದಾ ಒಳ್ಳೆಯದನ್ನು ಯೋಚಿಸುತ್ತಾರೆ, ಒಳ್ಳೆಯದನ್ನೇ ಮಾಡ್ತಾರೆ. ಹಾಗಾಗಿ ನಾಯಿಯಲ್ಲಿರುವ ಅತಿಂದ್ರಿಯ ಶಕ್ತಿಯ ಆಶೀರ್ವಾದ ಮತ್ತು ಭಗವಂತನ ಕೃಪೆಯಿಂದ ಅವರಿಗೆ ಹಣದ ಕೊರತೆ ಆಗುವುದಿಲ್ಲ. ಅವರ ವೃತ್ತಿ ಜೀವನದಲ್ಲೂ ಅವರಿಗೆ ಸಾಕಷ್ಟು ಯಶಸ್ಸು ದೊರೆಯುತ್ತೆ. ಒಂದು ವೇಳೆ ನೀವು ವ್ಯಾಪಾರಿ ಆಗಿದ್ರು ನಿಮಗೆ ವ್ಯಾಪಾರದಲ್ಲಿ ಪ್ರಗತಿರುತ್ತೆ. ನಿಮ್ಮನೇಲಿ ನಾಯಿ ಸಾಕಿಲ್ಲ ಅಂದ್ರೆ ನೀವು ಸಾಕಿ, ಅದರಿಂದ ಒಳಿತನ್ನ ಪಡೆಯುವುದಕ್ಕೆ ಮರಿಬೇಡಿ. ಮನೆಯಲ್ಲಿ ಯಾವ ಬಣ್ಣದ ನಾಯಿ ಸಾಕಿದರೆ ಉತ್ತಮ ಎನ್ನುವ ಪ್ರಶ್ನೆಯನ್ನು ಹಲವಾರು ಜನ ಆಗಾಗ ಕೇಳ್ತಾನೆ ಇರ್ತಾರೆ. ನೀವು ಯಾವ ಬಣ್ಣದ ನಾಯಿಯನ್ನಾದ್ರೂ ಸಾಕ್ಬೋದು. ಆದರೆ ವಾಸ್ತು ಶಾಸ್ತ್ರದಲ್ಲಿ ವರ್ಣನೆ ಪ್ರಕಾರ ಕಪ್ಪು ಬಣ್ಣದ ನಾಯಿ ಶ್ರೇಷ್ಠ ಅಂತ ಹೇಳಲಾಗಿದೆ. ನೀವು ಮನೆಗೆ ನಾಯಿ ಸಾಕೋದಕ್ಕೆ ಅಂತ ತಂದ್ರೆ ಅದು ನಿಮ್ಮ ಮನೆಯ ಒಂದು ಸದಸ್ಯನೇ ಆಗುತ್ತೆ. ಅದನ್ನ ಚೆನ್ನಾಗಿ ನೋಡಿಕೊಳ್ಳಿ ಅದರ ಊಟ, ವಸತಿ, ಆರೋಗ್ಯ, ಒಳ್ಳೆಯ ಕಾಳಜಿ ತಗೊಳ್ಳಿ. ಇದರಿಂದ ನಿಮಗೆ ಮತ್ತು ನಿಮ್ಮ ಮನೆಗೆ ಖಂಡಿತ ಒಳ್ಳೆದೆ ಆಗುತ್ತೆ. ನೋಡುದ್ರಲ್ವಾ ನಾಯನ್ನ ಸಾಕುವುದರಿಂದ ನಾಯಿಯಲ್ಲಿರುವ ಏಳು ಅತೀಂದ್ರಿಯ ರಹಸ್ಯ ಶಕ್ತಿಗಳನ್ನು ತಿಳಿದುಕೊಂಡ್ರಿ.

Leave a Comment