ನಾವು ಈ ಲೇಖನದಲ್ಲಿ ಧನಸ್ಸು ರಾಶಿಯ ಜನವರಿ ಮಾಸದ ಭವಿಷ್ಯ ಹೇಗೆ ಇರುತ್ತದೆ. ಎಂಬುದನ್ನು ನೋಡೋಣ . ಧನಸ್ಸು ರಾಶಿಯವರಿಗೆ ವಿಚಿತ್ರವಾದ ಆಲೋಚನೆಗಳು ಮತ್ತು ಚಿಂತನೆಗಳು ಇರುತ್ತದೆ . ಜನವರಿ ತಿಂಗಳ ಪ್ರಾರಂಭವನ್ನು ಚೆನ್ನಾಗಿ ಮಾಡಲಾಗುತ್ತದೆ . ತೃತೀಯದಲ್ಲಿ ಇರುವ ಶನಿ , ಚತುರ್ಥದಲ್ಲಿ ಇರುವ ರಾಹು ಹಾಗೆಯೇ ದಶಮ ಭಾಗದಲ್ಲಿ ಕೇತು ಗ್ರಹ ಇದೆ .
ಪಂಚಮದಲ್ಲಿ ಗುರು .ಇವೆಲ್ಲ ಗ್ರಹಗಳು ನಿಮಗೆ ಧನಾತ್ಮಕವಾಗಿ ಸಹಾಯ ಮಾಡುತ್ತದೆ . ಗ್ರಹಗಳ ಚಲನೆಗಳು ಹಲವಾರು ಬದಲಾವಣೆಗಳು ತರುತ್ತವೆ. ಒಂದಷ್ಟು ನಕಾರಾತ್ಮಕ ಅಂಶಗಳು ಮತ್ತು ಒಂದಷ್ಟು ಧನಾತ್ಮಕ ಅಂಶಗಳನ್ನು ತರುತ್ತವೆ. ಯಾವುದೇ ಒಂದು ಕೆಲಸದಲ್ಲಿ 98% ಮುಕ್ತಾಯ ಮಾಡುವ ಸಾಮರ್ಥ್ಯ ನಿಮಗೆ ಇರುತ್ತದೆ. ಇನ್ನು 2% ಉಳಿದಿರುತ್ತದೆ. ಆ ಉಳಿದಿರುವ ಕೆಲಸಕ್ಕೆ ಅಡಚಣೆಗಳು ಉಂಟಾಗುತ್ತದೆ. ನಿಮ್ಮ ಮನಸ್ಸಿನಲ್ಲೂ ಗೊಂದಲ ಶುರುವಾಗುತ್ತದೆ.
ಈ ತರಹದ ಪ್ರಶ್ನೆಗಳು ಕಾಡುವುದಕ್ಕೆ ಶುರುವಾಗುತ್ತದೆ. ಮತ್ತೆ ಸ್ವಲ್ಪ ಅಳುಕು ಮತ್ತು ಅಂಜಿಕೆ ನಿಮ್ಮಲ್ಲಿ ಇರುತ್ತದೆ. ವ್ಯರ್ಥ ಪ್ರಯತ್ನಗಳನ್ನು ಮಾಡಲಾಗುತ್ತದೆ. ಒಂದೇ ದಾರಿಯಲ್ಲಿ ಹೋದರೆ ನೀವು ದಾರಿಯನ್ನು ತಲುಪಬಹುದು. ಆದರೆ ಇದು ಮೊದಲೇ ನಿರ್ಧಾರವಾಗಿರುತ್ತದೆ. ಆದರೆ ನೀವು ಆ ದಾರಿಯಲ್ಲಿ ಹೋಗುವದಕ್ಕೆ ಪ್ರಯತ್ನ ಮಾಡುವುದಿಲ್ಲ..ನಿಮಗೆ ನೀವೇ ಗೊಂದಲ ಮಾಡಿಕೊಳ್ಳಬಹುದು . ಮನಸ್ಸಿನಲ್ಲಿ ದ್ವಂದ್ವ ಶುರುವಾಗುತ್ತದೆ. ನಿಮ್ಮ ಜೊತೆಯಲ್ಲಿ ಇರುವ ಸಹೋದ್ಯೋಗಿಗಳು ಬೇರೆಯ ರೀತಿ ಹೇಳುತ್ತಾರೆ .
ಸರಿಯಾಗಿ ಮಾರ್ಗದರ್ಶನ ಮಾಡುವವರು ಸಿಕ್ಕರೆ ನೀವು ಅದನ್ನು ಸಯೋಷದಿಂದ ಅರ್ಥ ಮಾಡಿಕೊಳ್ಳಬಹುದು. ಸಹಜವಾಗಿ ಸ್ವೀಕರಿಸಿಕೊಂಡು ನಡೆದು ಕೊಳ್ಳಲಾಗುತ್ತದೆ. ಇದು ಗುರಿ ತಲುಪಲು ಸಹಾಯ ಮಾಡುತ್ತದೆ. ಆದರೆ ಅವರ ಮನಸ್ಸಿನಲ್ಲಿ ಇರುವ ಗೊಂದಲಗಳನ್ನು ನಿಮ್ಮ ಮೇಲೆ ಏರಲು ಪ್ರಯತ್ನಿಸುತ್ತಾರೆ. ಸುಲಭವಾಗಿ ಆಗುವ ಕೆಲಸಕ್ಕೂ ಕೂಡ ಹೆಚ್ಚಿನ ಸಮಸ್ಯೆ ಮಾಡಿಕೊಳ್ಳುತ್ತೀರಿ . ಅಂದರೆ ವ್ಯರ್ಥ ಗೊಂದಲಕ್ಕೆ ದಾರಿ ಮಾಡಿ ಕೊಡುವಂತದ್ದು .
ಹಾಗೇನೆ ಒಂದಷ್ಟು ಈ ತರಹದ ಘಟನೆಗಳು ನಡೆಯಬಹುದು . ಪ್ರಯಾಣದ ಸಂದರ್ಭದಲ್ಲಿ ಏನಾದರೂ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ . ಅನಗತ್ಯ ಕೆಲಸಗಳು ಅನಗತ್ಯ ಒತ್ತಡಗಳು ನಿಮಗೆ ಒದಗಿ ಬರುತ್ತದೆ . ಆಗ ನಿಮಗೆ ಉದ್ವೇಗ ಜಾಸ್ತಿ ಆಗುತ್ತದೆ . ಮೂರು ಬಲಿಷ್ಠ ಗ್ರಹಗಳು ನಿಮ್ಮ ರಾಶಿಯಲ್ಲಿ ಇರುತ್ತವೆ .ರವಿ , ಕುಜ ಮತ್ತು ಬುಧ ನಿಮ್ಮ ರಾಶಿಯಲ್ಲಿ ಕೇಂದ್ರ ಬಿಂದು ಆಗಿರುತ್ತದೆ . ನಿಮ್ಮ ಬಗ್ಗೆ ನಿಮಗೆ ಯೋಚನೆ ಶುರುವಾಗುತ್ತದೆ .
ನೀವು ಹೋಗುತ್ತಿರುವ ದಾರಿ ಸರಿಯಾಗಿ ಇದಿಯಾ ಎಂದು ನಿಮಗೆ ಯೋಚನೆ ಆಗುತ್ತದೆ . ನಿಮ್ಮ ಕೆಲಸವನ್ನು ನೀವು ಸರಿಯಾಗಿ ನಿಭಾಯಿಸುವದಕ್ಕೆ ಮಹತ್ವವನ್ನು ಕಂಡು ಕೊಳ್ಳಲಾಗುತ್ತದೆ . ವಿಚಾರಗಳನ್ನು ಸ್ವಾಭಾವಿಕವಾಗಿ ತೆಗೆದುಕೊಳ್ಳುವುದಕ್ಕೆ ಆಗದೇ ಇರುವ ಪರಿಸ್ಥಿತಿ ನಿರ್ಮಾಣವಾಗುವುದು . ನೀವು ನಿಮ್ಮ ಮೇಲೆ ತುಂಬಾ ಜವಾಬ್ದಾರಿ ಮತ್ತು ಒತ್ತಡಗಳನ್ನು ಹಾಕಿಕೊಳ್ಳಲಾಗುತ್ತದೆ .ಬೇರೆಯವರನ್ನು ಉಪೇಕ್ಷೆ ಮಾಡೋದು ನಿಮ್ಮ ಗುಣವಾಗಿರುತ್ತದೆ .ಬೇರೆಯವರು ಮಾಡುವ ಕೆಲಸ ನಿಮಗೆ ಸರಿಯಾಗಿ ಹೊಂದುವುದಿಲ್ಲ .
ಒಳ್ಳೆಯ ದಾರಿಯಲ್ಲಿ ಹೋದರೆ ಹೆಚ್ಚು ಖರ್ಚು ಆಗುವುದಿಲ್ಲ ಎಂದು ನಿಮ್ಮ ಮನಸ್ಸಿಗೆ ಬರುತ್ತದೆ . ಬೇರೆಯವರು ತಂದಿರುವ ವಸ್ತುಗಳು ನಿಮಗೆ ಇಷ್ಟವಾಗದೇ ಇರಬಹುದು . ಅಗತ್ಯವಿಲ್ಲದ ಜವಾಬ್ದಾರಿಯನ್ನು ನಿಮ್ಮ ಮೈ ಮೇಲೆ ಎಳೆದುಕೊಳ್ಳುವ ಗುಣ ನಿಮ್ಮದು . ಇದು ನಿಮ್ಮ ಅನುಭವಕ್ಕೂ ಕೂಡ ಬರುತ್ತದೆ . ನಿಮಗೆ ಮಾನಸಿಕ ಒತ್ತಡಗಳನ್ನು ತರುತ್ತವೆ .ಆರೋಗ್ಯ ಕೂಡ ಸ್ವಲ್ಪ ಬಿಗಡಾಯಿಸುತ್ತದೆ .ಅತಿಯಾಗಿ ಸೂಕ್ಷ್ಮತೆಗೆ ಒಳಗಾಗುತ್ತೀರಿ .ಇಲ್ಲದೆ ಇರುವ ಮಾತುಗಳನ್ನು ಕೂಡ ನೀವು ಕೇಳಬೇಕಾಗುತ್ತದೆ .
ನಿಮಗೆ ಬೇರೆಯವರಿಂದ ತೆಗಳಿಕೆಯ ಮಾತುಗಳು ಕೇಳಿ ಬರುತ್ತದೆ . ಬೇರೆಯವರು ನಿಮ್ಮನ್ನು ಆಡಿಕೊಳ್ಳುವಾಗ ಅದು ನಿಮಗೆ ನುಂಗಲಾರದ ತುತ್ತಾಗಿ ಬಿಡುತ್ತದೆ . ನಿಮಗೆ ಮನಸ್ಸಿನ ಕಿರಿಕಿರಿ ಸಾಕಷ್ಟು ರೀತಿಯಲ್ಲಿ ಆಗುವ ಸಾಧ್ಯತೆಗಳು ಇದೆ . ಹಾಗೆಯೇ ಅದು ದೇಹದ ಆಯಾಸವನ್ನು ಕೂಡ ಜಾಸ್ತಿ ಮಾಡುತ್ತದೆ . ನಿಮಗೆ ಜವಾಬ್ದಾರಿ ಜಾಸ್ತಿಯಾಗಿರುತ್ತದೆ . ಈ ಕಾರಣದಿಂದ ಆರೋಗ್ಯ ಹಾಳಾಗುತ್ತದೆ . ನೀವು ಆರೋಗ್ಯದ ಬಗ್ಗೆ ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ .
ಕೆಲಸ ಮತ್ತು ವಿಶ್ರಾಂತಿಗೆ ಒಂದು ಸಮಯವನ್ನು ಕೊಡಬೇಕು . ಎರಡರಲ್ಲೂ ಸಮತೋಲನವನ್ನು ಕಾಪಾಡಬೇಕು . ಮೊದಲನೇ ತಿಂಗಳು ಆರೋಗ್ಯ ಚೆನ್ನಾಗಿದ್ದರೆ ಇನ್ನು ಮುಂದೆ ಬರುವ ಎಲ್ಲಾ ತಿಂಗಳುಗಳು ಆರಾಮಾಗಿ ಇರಬಹುದು . ರವಿ , ಬುಧ , ಮತ್ತು ಕುಜ ಸೇರಿಕೊಂಡು ಮಾಡುವುದು ನಿಮಗೆ ನಕಾರಾತ್ಮಕ ವಿಚಾರ ತರುತ್ತವೆ. ಸುಖದ ವಿಚಾರಗಳಲ್ಲಿ ಬಹಳಷ್ಟು ತೊಂದರೆಗಳು ಇವೆ . ಆದರೆ ಅದು ಪರಿಹಾರವಾಗುತ್ತದೆ . ಎಂದರೆ ಶುಕ್ರ ಗ್ರಹ ಇರುವುದು ನಿಮ್ಮ ದ್ವಾದಶ ಗ್ರಹದಲ್ಲಿ .
ಶುಕ್ರ ಗ್ರಹಕ್ಕೆ ಬಂದಾಗ ನಿಮ್ಮ ಹಣದ ಅರಿವು ನಿರಾತಂಕವಾಗಿ ಇರುತ್ತದೆ . ಖುಷಿ ಮತ್ತು ಸಂತೋಷಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ . ಮಾನಸಿಕ ಒತ್ತಡವು ಕೂಡ ಇರುವುದಿಲ್ಲ . ಶುಕ್ರ ಗ್ರಹ ನಿಮಗೆ ಒಂದು ಸಮತೋಲನವನ್ನು ತಂದುಕೊಡುತ್ತದೆ . ನಿಮಗೆ ಸಾಕಷ್ಟು ನಿಯಂತ್ರಣವನ್ನು ಕೂಡ ತಂದು ಕೊಡುತ್ತಾನೆ .ಅತಿಯಾದ ಯೋಚನೆಯನ್ನು ಬಿಡಬೇಕು ನೀವು ಅಷ್ಟೇ .ಮನಸ್ಸಿನಲ್ಲಿ ಬರುವ ಆಲೋಚನೆಗಳನ್ನು ಯೋಚನೆ ಮಾಡುವುದನ್ನು ಬಿಟ್ಟು , ಜೀವನವನ್ನು ಸರಳವಾಗಿ ತೆಗೆದುಕೊಂಡು ಹೋಗಿ ಎಂದು ಹೇಳಲಾಗುತ್ತದೆ .