ಶುಕ್ರವಾರ ಈ ಕೆಲಸ ಮಾಡಿದರೆ ಅದೃಷ್ಟ ಲಕ್ಷ್ಮಿ

0

ನಾವು ಈ ಲೇಖನದಲ್ಲಿ ಶುಕ್ರವಾರ ಈ ಕೆಲಸ ಮಾಡಿದರೆ , ಅದೃಷ್ಟ ಲಕ್ಷ್ಮಿ ಹೇಗೆ ಒಲಿಯುತ್ತಾಳೆ ಎಂದು ನೋಡೋಣ . ಶುಕ್ರವಾರ ಈ ಕೆಲಸ ಮಾಡಿದರೆ ಅದೃಷ್ಟ ಲಕ್ಷ್ಮಿ ಬೇಡವೆಂದರೂ ಒಲಿಯುತ್ತಾಳೆ ….. ! ಶುಕ್ರವಾರ ನಾವು ಈ ಕೆಲಸಗಳನ್ನು ಮಾಡುವುದರಿಂದ , ಅದೃಷ್ಟ ಲಕ್ಷ್ಮಿಯು ಅದೃಷ್ಟವನ್ನು ಮತ್ತು ಸಂಪತ್ತನ್ನು ಕರುಣಿಸುತ್ತಾಳೆ . ಶುಕ್ರವಾರ ನಾವು ಏನು ಮಾಡಬೇಕು …? ಶುಕ್ರವಾರ ಯಾವ ಮಂತ್ರಗಳನ್ನು ಪಠಿಸಬೇಕು ..? ಈ ಕೆಲಸ ಮಾಡುವುದರ ಪ್ರಯೋಜನವೇನು….? ಹಣವೇ ಮುಖ್ಯವಾದ ಪ್ರಸ್ತುತ ಯುಗದಲ್ಲಿ ಹಣವು ನೀರಿನಂತೆ ಹರಿದು ಹೋಗುತ್ತಿದೆ . ಪ್ರತಿಯೊಂದು ವಸ್ತುಗಳಿಗೂ ಹಣವೇ ಮುಖ್ಯ ವಾಹಕ ಆಗಿ ಕೆಲಸ ಮಾಡುತ್ತಿದೆ .

ಆದರೆ , ಅದರಲ್ಲಿ ನಾವು ಗಮನಿಸಬೇಕಾದ ಮುಖ್ಯ ವಿಚಾರವೆಂದರೆ, ಕೆಲವೊಬ್ಬರು ಎಷ್ಟೇ ಹಣವನ್ನು ಖರ್ಚು ಮಾಡಿದರು ಅವರಿಗೆ ಹಣದ ಸಮಸ್ಯೆ ಆಗಿರಬಹುದು ಅಥವಾ ಬಡತನವಾಗಲಿ ಇರಬಹುದು ಎದುರಾಗುವುದೇ ಇಲ್ಲ.. ಇದನ್ನು ನೀವು ಕೂಡ ಗಮನಿಸಬಹುದು .ಇದಕ್ಕೆ ಮುಖ್ಯ ಕಾರಣ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯ ಆಶೀರ್ವಾದ . ನೀವು ಆಕೆ ಆಶೀರ್ವಾದವನ್ನು ಪಡೆದುಕೊಳ್ಳಬೇಕೇ…? ಅಥವಾ ಮನೆಯಲ್ಲಿ ಹಣದ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕೆ….? ಹಾಗದರೆ , ಶುಕ್ರವಾರದಂದು ನೀವು ತಪ್ಪದೆ ಈ ಕೆಲಸಗಳನ್ನು ಮಾಡಿ ….

ಲಕ್ಷ್ಮಿ ಪೂಜೆ ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಶ್ರದ್ಧಾ – ಭಕ್ತಿಯಿಂದ ಆರಾಧಿಸಿ . ಈ ದಿನ ನೀವು ಬಿಳಿ ಅಥವಾ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ , ಬಿಳಿ ಅಥವಾ ಚೌಕಿಯ ಮೇಲೆ ಅಥವಾ ಬಟ್ಟೆಯ ಮೇಲೆ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಇಟ್ಟು , ಆಕೆಗೆ ಮಾಂಗಲ್ಯ ಸೂತ್ರ , ಗುಲಾಬಿ ಬಣ್ಣ , ಅಕ್ಷತೆ , ತುಪ್ಪ, ಜೇನುತುಪ್ಪ , ಹೂಗಳು ಇತ್ಯಾದಿಗಳಿಂದ ಲಕ್ಷ್ಮಿ ದೇವಿಯನ್ನು ನೀವು ಮನೆಯಲ್ಲಿ ಅಥವಾ ದೇವಸ್ಥಾನಕ್ಕೆ ಹೋಗಿ ಕೂಡ ಆಕೆಯನ್ನು ಪೂಜಿಸಬಹುದು .

” ಶುಕ್ರವಾರದ ಮಂತ್ರ ಶುಕ್ರವಾರದ ದಿನ ನೀವು ಮಂತ್ರಗಳನ್ನು ಪಠಿಸುವುದರಿಂದ , ಕೂಡ ಲಕ್ಷ್ಮಿ ದೇವಿಯ ಅನುಗ್ರಹವನ್ನು ಹೊಂದುತ್ತೀರಿ . ಹಾಗೂ ಈ ದಿನ ಲಕ್ಷ್ಮಿ ದೇವಿಯ ಮಂತ್ರದೊಂದಿಗೆ ಶುಕ್ರ ಮಂತ್ರವನ್ನು ಕೂಡ ಪಠಿಸಬೇಕು . ಶುಕ್ರನು ಕೂಡ ನಿಮಗೆ ಸಂಪತ್ತನ್ನು ಕರುಣಿಸುತ್ತಾನೆ . ಶುಕ್ರವಾರ ತಪ್ಪದೇ ಶುಕ್ರ ಮಂತ್ರವನ್ನು ಪಠಿಸಿ ನೋಡಿ . ನಿಮಗೆ ವ್ಯತ್ಯಾಸಗಳು ತಿಳಿಯುತ್ತದೆ.

” ಓಂ ದ್ರಾಂ ದ್ರೀಂ ದ್ರೌಂ ಸಃ ಶುಕ್ರಾಯ ನಮಃ ” ಈ ಮಂತ್ರವು ನಿಮಗೆ ಶುಕ್ರ ಗ್ರಹದ ಮಂಗಳವನ್ನು ಅಂದರೆ , ಶುಭವನ್ನು ಹೆಚ್ಚಿಸುತ್ತದೆ . ಹಾಗೂ ಸಮೃದ್ಧಿಯನ್ನು ಆಕರ್ಷಿಸುತ್ತದೆ .

ಗಿಡ ಮರಗಳು ಶುಕ್ರವಾರದಂದು ಮರಗಳನ್ನು ನೆಡುವುದು ಸಂಪತ್ತು ಮತ್ತು ಸಮೃದ್ಧಿಗೆ ಮಂಗಳಕರವೆಂದು , ಪರಿಗಣಿಸಲಾಗಿದೆ .ಇದಕ್ಕಾಗಿ , ಒಂದು ಕುಂಡದಲ್ಲಿ ಹೊಸ ಗಿಡವನ್ನು ನೆಟ್ಟು , ಅದನ್ನು ನಿಮ್ಮ ಮನೆಯ ಹತ್ತಿರ ಅಥವಾ ತೋಟದಲ್ಲಿ ಇರಿಸಿ , ಗಿಡವು ಸಾಯದಂತೆ ಅಥವಾ ಒಣಗದಂತೆ ನೋಡಿಕೊಳ್ಳಿ . ಈ ಗಿಡ ಬೆಳೆದಂತೆ ನಿಮ್ಮ ಮನೆಯ ಪುಗತಿಯು ಅಭಿವೃದ್ಧಿ ಹೊಂದುತ್ತಾ ಹೋಗುತ್ತದೆ.

ದಾನ ಶುಕ್ರವಾರದಂದು ಹಣವನ್ನು ದಾನ ಮಾಡುವುದು ಸಹ ಮಂಗಳಕರ ಎಂದು ಪರಿಗಣಿಸಲಾಗಿದೆ . ನೀವು ಬಡವರಿಗೆ ಆಹಾರ , ಬಟ್ಟೆ ಅಥವಾ ಅಗತ್ಯ ವಸ್ತುಗಳನ್ನು ದಾನ ಮಾಡಬಹುದು . ಇದು ನಿಮ್ಮ ಅದೃಷ್ಟ ಮತ್ತು ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ . ಆದರೆ , ನೀವು ದಾನ ಮಾಡಿರುವುದನ್ನು ಯಾರಿಗೂ ಹೇಳಬಾರದು . ನೀವು ಮಾಡುವ ದಾನ ರಹಸ್ಯವಾಗಿ ಇರಲಿ .

” ಸಂಪತ್ತು ಮತ್ತು ಸಮೃದ್ಧಿಗಾಗಿ ಕೃಷ್ಣ ಆರತಿಯನ್ನು ಪಠಿಸಿ “
ಶುಕ್ರವಾರದಂದು ಶ್ರೀ ಕೃಷ್ಣನ ಆರತಿಯನ್ನು ಪಠಿಸುವುದರಿಂದ , ಸಂಪತ್ತು – ಸಮೃದ್ಧಿ ಮತ್ತು ಅದೃಷ್ಟ ಹೆಚ್ಚಾಗುತ್ತದೆ . ಈ ದಿನ ನೀವು ಶ್ರೀಕೃಷ್ಣನನ್ನು ಪೂಜಿಸುವುದರಿಂದಲೂ ಲಕ್ಷ್ಮೀದೇವಿಯು ಸಂತೃಷ್ಠಲಾಗುವಳು. ಈ ದಿನ ಶ್ರೀ ಕೃಷ್ಣ ಆರತಿ ಪಠಣವೂ ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ಕರುಣಿಸುತ್ತದೆ , ಎಂದು ಹೇಳಲಾಗಿದೆ.

Leave A Reply

Your email address will not be published.