ನಾವು ಈ ಲೇಖನದಲ್ಲಿ ಹಾಸಿಗೆ ಮೇಲೆ ಕುಳಿತು ಊಟ ಮಾಡುವವರು ಈ ಲೇಖನವನ್ನು ಓದಬೇಕು ಎಂಬುದಾಗಿ ಹೇಳಲಾಗಿದೆ. ಒಂದು ಬಾರಿ ಯಮ ರಾಜರು ಮತ್ತು ಚಿತ್ರ ಗುಪ್ತರು ಯಮ ಲೋಕದಲ್ಲಿ ಕುಳಿತುಕೊಂಡು , ಒಂದು ಚರ್ಚೆಯನ್ನು ಮಾಡುತ್ತಿದ್ದರು . ಆಗ ಚಿತ್ರ ಗುಪ್ತರು ಯಮ ರಾಜರ ಬಳಿ ಒಂದು ಪ್ರಶ್ನೆಯನ್ನು ಮಾಡುತ್ತಾರೆ . ಹೇ ಪ್ರಭುಗಳೇ ಯಾವ ಕಾರಣದಿಂದಾಗಿ ಮನುಷ್ಯರಿಗೆ ಅಕಾಲಿಕ ಮೃತ್ಯು ಆಗುತ್ತದೆ. ಯಾವ ಮನುಷ್ಯರಿಗೆ ಸಂತಾನ ಸುಖ ಸಿಗುವುದಿಲ್ಲ.
ಮತ್ತು ಕೆಲವು ಮನುಷ್ಯನ ಮೃತ್ಯು ಶಿಶುವಿನ ಅವಸ್ಥೆಯಲ್ಲಿ ಏಕೆ ಆಗುತ್ತದೆ .ಇವುಗಳ ಹಿಂದೆ ಯಾವ ಕಾರಣವಿದೆ . ಎಂದು ಕೇಳಿದಾಗ , ಯಮ ರಾಜರು ಚಿತ್ರ ಗುಪ್ತರಿಗೆ ಹೇಳುತ್ತಾರೆ …. ! ಹೇ ಚಿತ್ರ ಗುಪ್ತರೇ ನೀವು ಸರಿಯಾದ ಪ್ರಶ್ನೆಯನ್ನು ಮಾಡಿದ್ದೀರಿ.. ! ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮನುಷ್ಯನ ಹವ್ಯಾಸಗಳಲ್ಲಿ ಅಡಗಿದೆ . ಮನುಷ್ಯರು ಯಾವ ಪ್ರಕಾರದಲ್ಲಿ ಆಚರಣೆಯನ್ನು ಮಾಡುತ್ತಾರೋ , ಅವರಿಗೆ ಅವುಗಳ ಅನುಸಾರವಾಗಿ ಸುಖ – ದುಃಖಗಳು ಸಿಗುತ್ತವೆ .
ಮನುಷ್ಯರಿಗೆ ಅಕಾಲಿಕ ಮೃತ್ಯು ಆಗುವುದೂ ಕೂಡ , ಅವರ ಹವ್ಯಾಸಗಳೇ ಕಾರಣ ಆಗಿರುತ್ತದೆ . ನಾವು ಹೇಳುವ ಈ ಕಥೆಯಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ . ಹಾಗಾಗಿ ಈ ಕಥೆಯನ್ನು ನೀವು ತುಂಬಾ ಗಮನವಿಟ್ಟು ಓದಬೇಕು . ಈ ಕಥೆಯಲ್ಲಿ ಮನುಷ್ಯನ ಆಚರಣೆ , ವಿಚಾರಣೆ , ಒಳ್ಳೆಯ ಹವ್ಯಾಸಗಳು , ಜೊತೆಗೆ ಜನ್ಮ – ಮೃತ್ಯುವಿನ ವಿಷಯದ ಬಗ್ಗೆ ಮಹತ್ವಪೂರ್ಣವಾದ ಜ್ಞಾನವನ್ನು ನೀಡಲಾಗಿದೆ . ಈ ಜ್ಞಾನವನ್ನು ಯಾವುದೇ ಕಾರಣಕ್ಕೂ ಅರ್ಧ ಮತ್ತು ಅಪೂರ್ಣವಾಗಿ ಓದಬಾರದು .
ಈಗ ಇದರ ಬಗ್ಗೆ ತಿಳಿಯೋಣ . ಯಮ ರಾಜರು ಈ ರೀತಿಯಾಗಿ ಹೇಳುತ್ತಾರೆ . ಹೇ ಚಿತ್ರ ಗುಪ್ತರೇ ಇದು ಒಂದು ಸಮಯದ ಮಾತಾಗಿದೆ . ಮಧ್ಯ ದೇಶದಲ್ಲಿ ಒಂದು ಸುಂದರವಾದ ನಗರ ಇತ್ತು . ಆ ಊರಿನಲ್ಲಿ ಒಬ್ಬ ಶ್ರೀಮಂತವಾದ ವ್ಯಕ್ತಿಯು ಇದ್ದ . ಆತನ ಹೆಸರು ಆತ್ಮ ರಾಮ . ಈತ ತುಂಬಾ ಶ್ರಮ ಪಡುವಂತಹ ವ್ಯಕ್ತಿ ಆಗಿದ್ದ . ಈತ ತನ್ನ ಶ್ರಮದಿಂದ ತುಂಬಾ ಹಣವನ್ನು ಕೂಡಿ ಹಾಕಿದ್ದ . ಒಂದು ದೊಡ್ಡದಾದ ವ್ಯಾಪಾರವನ್ನು ನಡೆಸುತ್ತಿದ್ದ . ಜೊತೆಗೆ ಈತನ ಬಳಿ ತುಂಬಾ ಹೊಲ ಗದ್ದೆಗಳು ಇದ್ದವು .
ಇಡೀ ಊರಿನಲ್ಲಿ ಆತ್ಮ ರಾಮನಂತ ದೊಡ್ಡ ಶ್ರೀಮಂತ ವ್ಯಕ್ತಿ ಯಾರು ಇರಲಿಲ್ಲ . ಅದೃಷ್ಟವಂತ ಆತ್ಮ ರಾಮನಿಗೆ ಮೂರು ಗಂಡು ಮಕ್ಕಳು ಇದ್ದರು .ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದರು . ಆತ್ಮ ರಾಮರ ಎಲ್ಲಾ ಮಕ್ಕಳ ಮದುವೆಯೂ ಕೂಡ ಆಗಿತ್ತು . ಗಂಡು ಮಕ್ಕಳು ತಮ್ಮ ತಂದೆಯೊಡನೆಗೆ ಇರುತ್ತಿದ್ದರು . ಮಕ್ಕಳು ಕೆಲಸ ಕಾರ್ಯದಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದರು .ಆತ್ಮ ರಾಮರ ದೊಡ್ಡ ಮಗನಾದ ಕಿಶನ್ ರವರು ತುಂಬಾ ತಿಳುವಳಿಕೆಯುಳ್ಳ , ತುಂಬಾ ಬುದ್ಧಿವಂತ ವ್ಯಕ್ತಿಯಾಗಿದ್ದರು .
ಇವರು ತಮ್ಮ ತಂದೆಯ ಎಲ್ಲಾ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು . ಚಿಕ್ಕ ಮಗನಾದ ಗಣೇಶನು ಕೂಡ ಹೊಲ – ಗದ್ದೆ , ತೋಟಗಳನ್ನು , ನೋಡಿಕೊಳ್ಳುತ್ತಿದ್ದ .ತೋಟದ ಎಲ್ಲಾ ಕೆಲಸ ಕಾರ್ಯಗಳು ಮಾಡುತ್ತಿದ್ದ .ಎಲ್ಲಕ್ಕಿಂತ ಚಿಕ್ಕ ಮಗನು ವಿದ್ಯಾಭ್ಯಾಸವನ್ನು ಮಾಡುತ್ತಿದ್ದನು . ವಿದ್ಯಾಭ್ಯಾಸ ಮುಗಿದ ನಂತರ ಈತನ ಮದುವೆಯನ್ನು ಕೂಡ ಮಾಡಿದರು .
ತಮ್ಮ ಕೆಲಸ ಕಾರ್ಯಗಳಲ್ಲಿ ಮಕ್ಕಳನ್ನು ಸೇರ್ಪಡಿಸಿಕೊಂಡರು .ಭಗವಂತನ ಕೃಪೆಯಿಂದ ಎಲ್ಲವೂ ಸರಿಯಾಗಿ ನಡೆಯುತ್ತಿತ್ತು . ಕೆಲವು ವರ್ಷಗಳು ಕಳೆದ ನಂತರ , ಆತ್ಮ ರಾಮನ ಮಗನು ವ್ಯಾಪಾರವನ್ನು ಇನ್ನಷ್ಟು ಹೆಚ್ಚಿಗೆ ಮಾಡಿದನು . ಮತ್ತು ಯಾವಾಗ ಆತ್ಮ ರಾಮ್ ಅವರ ಮೃತ್ಯುವಿನ ಸಮಯ ಹತ್ತಿರಕ್ಕೆ ಬಂತು ಆಗ , ಅವರ ಸಂಪತ್ತನ್ನು ಭಾಗ ಮಾಡಲು ಯೋಚನೆ ಮಾಡುತ್ತಾರೆ . ಮತ್ತು ತನ್ನ ಮೂರು ಮಕ್ಕಳಿಗೆ ಸರಿಯಾದ ಭಾಗವನ್ನು ಮಾಡಿ , ಎಲ್ಲಾ ಸಂಪತ್ತನ್ನು ತನ್ನ ಮೂರು ಮಕ್ಕಳಿಗೆ ಹಂಚುತ್ತಾರೆ ..
ನಂತರ ಅವರು ತುಂಬಾ ಖುಷಿಯಿಂದ ತಮ್ಮ ಮೃತ್ಯುವನ್ನು ಸ್ವೀಕಾರ ಮಾಡುತ್ತಾರೆ .ಆತ್ಮ ರಾಮ್ ಅವರ ಮೃತ್ಯುವಿನ ನಂತರ ಅವರ ಮೂರು ಗಂಡು ಮಕ್ಕಳು ತಮಗೆ ಸಿಕ್ಕ ಸಂಪತ್ತನ್ನು ಸಂಭಾಳಿಸಿಕೊಂಡು ಹೋಗಲು ಶುರು ಮಾಡುತ್ತಾರೆ . ಇದೇ ರೀತಿ ಸಮಯ ಕಳೆಯುತ್ತಾ ಹೋಗುತ್ತದೆ . ಆತ್ಮ ರಾಮ್ ಅವರ ಮಕ್ಕಳು ತಮ್ಮ ತಮ್ಮ ಮನೆಯಲ್ಲಿ ಪ್ರತಿ ವರ್ಷ ತನ್ನ ತಂದೆಯ ಶ್ರಾದ್ಧವನ್ನು ಮಾಡುತ್ತಿದ್ದರು . ಪ್ರತೀ ವರ್ಷವೂ ನದಿಗೆ ಹೋಗಿ ತರ್ಪಣ ಬಿಡುತ್ತಿದ್ದರು.
ಇದರಿಂದ ಆತ್ಮ ರಾಮ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವುದು ಅವರ ಉದ್ದೇಶ ಆಗಿತ್ತು . ಆತ್ಮ ರಾಮ್ ಅವರ ದೊಡ್ಡ ಮಗನಿಗೆ ಮೂರು ಸುಂದರವಾದ ಗಂಡು ಮಕ್ಕಳು ಜನಿಸುತ್ತಾರೆ . ನಂತರ ಚಿಕ್ಕ ಮಗನಿಗೆ ಎರಡು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗು ಜನಿಸುತ್ತದೆ . ಆದರೆ ಎಲ್ಲಕ್ಕಿಂತ ಚಿಕ್ಕ ಮಗನಿಗೆ ಯಾವುದೇ ಸಂತಾನ ಇರುವುದಿಲ್ಲ . ತುಂಬಾ ವರ್ಷಗಳೇ ಕಳೆಯುತ್ತವೆ .ಅಂದರೆ ಈ ಮಗನಿಗೆ ಸಂತಾನ ಭಾಗ್ಯ ಇರುವುದಿಲ್ಲ .ಇವರು ಯಾವುದೇ ಉಪಾಯ ಮಾಡಿದರು ಸಂತಾನ ಭಾಗ್ಯದ ಸುಖ ಸಿಗುವುದಿಲ್ಲ .
ಈ ಕಾರಣದಿಂದ ಇವರಿಗೆ ಯಾವತ್ತು ದುಃಖ ಮತ್ತು ನಿರಾಶೆಯಿಂದ ಇರಲು ಶುರು ಮಾಡುತ್ತಾರೆ . ಕೆಲವು ವರ್ಷಗಳು ಕಳೆದ ನಂತರ ಆತ್ಮ ರಾಮ್ ಅವರ ಚಿಕ್ಕ ಮಗನ ಆರೋಗ್ಯ ಹದಗೆಡಲು ಶುರುವಾಗುತ್ತದೆ. ಅವರು ತಮ್ಮ ಆರೋಗ್ಯವನ್ನು ಸುಧಾರಿಸಲು ತಮ್ಮ ಬಳಿ ಇದ್ದ ಸಂಪತ್ತೆಲ್ಲವನ್ನು ಖರ್ಚು ಮಾಡಬೇಕಾಯಿತು . ಇವರು ದೂರದ ಊರಿನಿಂದ ವೈದ್ಯರನ್ನು ಕರೆಸಿ, ತಾವು ಚಿಕಿತ್ಸೆಯನ್ನು ಪಡೆಯುತ್ತಿದ್ದರು . ಅನಾರೋಗ್ಯದ ಕಾರಣದಿಂದಾಗಿ ಅವರು ತಮ್ಮ ಕೆಲಸ ಕಾರ್ಯದ ಮೇಲೆ ಗಮನ ಹರಿಸಲಿಲ್ಲ .
ಹಾಗಾಗಿ ಇವರ ಪರಿಸ್ಥಿತಿ ಇನ್ನಷ್ಟು ಹಾಳಾಗಲು ಶುರುವಾಯಿತು . ಇವರು ಹಲವಾರು ಬಾರಿ ತಮ್ಮ ಅಣ್ಣಂದಿರ ಬಳಿ ಸಹಾಯ ಕೇಳುತ್ತಾರೆ .ಅವರಿಂದ ಹುದ್ದರಿ ಹಣವನ್ನು ಪಡೆದುಕೊಂಡು ಜೀವನ ನಡೆಸಲು ಶುರು ಮಾಡುತ್ತಾರೆ . ಹಲವಾರು ವೈದ್ಯರಿಗೆ ತೋರಿಸಿದರು ಇವರ ಆರೋಗ್ಯ ಸುಧಾರಣೆ ಆಗಲಿಲ್ಲ . ಇವರು ತುಂಬಾ ದುಃಖದಲ್ಲಿ ಇದ್ದರು .
ಇವರ ಅಣ್ಣಂದಿರು ಕೂಡ ಇವರಿಗೆ ಸಹಾಯ ಮಾಡಿ ಸಾಕಾಗಿ ಕುಳಿತಿದ್ದರು . ಹಾಗಾಗಿ ಅಣ್ಣಂದಿರು ಸಹಾಯ ಮಾಡುವುದನ್ನು ನಿಲ್ಲಿಸಿ ಬಿಡುತ್ತಾರೆ .
ಯಾಕೆಂದರೆ ಇವರು ಅಣ್ಣಂದಿರ ಜೊತೆ ಸರಿಯಾಗಿ ವರ್ತಿಸಲಿಲ್ಲ . ಇವರು ಅಣ್ಣಂದಿರ ಉನ್ನತಿಯನ್ನು ನೋಡಿ ಹೊಟ್ಟೆಕಿಚ್ಚು ಪಡಲು ಶುರು ಮಾಡುತ್ತಾರೆ .ಅವರ ಮೇಲೆ ದ್ವೇಷ ಸಾರಲು ಶುರು ಮಾಡುತ್ತಾರೆ .ಈ ಕಾರಣದಿಂದ ಇವರಿಗೆ ದುಃಖ ತಪ್ಪಿಲ್ಲ .ಒಂದು ದಿನ ಅಚಾನಕ್ಕಾಗಿ ಇವರ ಮೃತ್ಯು ಆಗುತ್ತದೆ . ನಂತರ ಯಮ ದೂತರು ಇವರನ್ನು ಕರೆದುಕೊಂಡು ಹೋಗಲು ಇವರ ಹತ್ತಿದ ಬರುತ್ತಾರೆ. ಯಮದೂತರು ಇವರನ್ನು ಎಳೆದುಕೊಳ್ಳುತ್ತಾ , ಯಮ ಲೋಕಕ್ಕೆ ಹೋಗಲು ಶುರು ಮಾಡುತ್ತಾರೆ .
ನಂತರ ಯಮ ಲೋಕ ತಲುಪಿದ ನಂತರ , ಇವರನ್ನ ಯಮ ರಾಜರ ಮುಂದೆ ನಿಲ್ಲಿಸುತ್ತಾರೆ. ಅಲ್ಲಿಗೆ ಹೋದ ನಂತರ ಚಿಕ್ಕ ಮಗನು ಅಳುತ್ತಾ , ಯಮ ರಾಜನಿಗೆ ಪ್ರಶ್ನೆ ಮಾಡುತ್ತಾರೆ . ಹೇ ಯಮ ರಾಜರೇ ನಾನು ಅಂತಹ ಯಾವ ಪಾಪ ಮಾಡಿದ ಕಾರಣ ಅಂತ ಈ ದಿನಗಳನ್ನು ನಾನು ನೋಡಬೇಕಾಗಿದೆ. ನಾನು ಒಳ್ಳೆಯ ವ್ಯಕ್ತಿಯೇ ಆಗಿದ್ದೆ. ಆದರೆ ಯಾವ ಕಾರಣಕ್ಕಾಗಿ ನನ್ನನ್ನು ರೋಗಗಳು ಆವರಿಸಿದವು .ಯಾಕೆ ಈ ರೀತಿ ನನ್ನದೆಲ್ಲ ನಷ್ಟ ಆಯಿತು . ಅಂತಹ ಪಾಪ ಯಾವುದು . ನಂತರ ಯಮ ರಾಜರು ಹೇಳುತ್ತಾರೆ .
ಎಲೈ ಮೂರ್ಖ ನೀನು ನಿನ್ನ ಜೀವನದಲ್ಲಿ ತುಂಬಾ ತಪ್ಪುಗಳನ್ನು ಮಾಡಿರುವೆ .ನಿನ್ನ ಕೆಟ್ಟ ಹವ್ಯಾಸಗಳಿಂದಲೇ ನೀನು ಈ ದಿನಗಳನ್ನು ನೋಡುತ್ತಿದ್ದೀಯಾ , ನಿನ್ನ ಅಕಾಲಿಕ ಮೃತ್ಯುವಿಗೆ ನೀನೇ ಕಾರಣ ಆಗಿರುವೆ , ನೀನು ಶಾಸ್ತ್ರಗಳ ಯಾವ ನಿಯಮವನ್ನು ಉಲ್ಲಂಘಿಸಿರುವೆ ಎಂದು ನಾನು ಹೇಳುತ್ತೇನೆ .ಈ ಕಾರಣಗಳಿಂದ ನಿನ್ನ ದೆಶೆ ಈ ರೀತಿ ಆಗಿದೆ .ಯಾವ ಮನುಷ್ಯರು ಶಾಸ್ತ್ರದ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾರೋ , ಅವರ ಸ್ಥಿತಿ ಕೂಡ ನಿನ್ನಂತೆಯೇ ಆಗುತ್ತದೆ .
ಯಮ ರಾಜರು ಆ ಚಿಕ್ಕ ಮಗನಿಗೆ ಹೇಳುತ್ತಾರೆ..ಮನುಷ್ಯರು ಯಾವತ್ತಿಗೂ ತಮ್ಮ ಐದೂ ಅಂಗಗಳನ್ನು ಸ್ವಚ್ಛಗೊಳಿಸಿದ ನಂತರವೇ ಊಟವನ್ನು ಮಾಡಬೇಕು . ತಮ್ಮ ಎರಡು ಕಾಲುಗಳನ್ನ ಮತ್ತು ಕೈ ಗಳನ್ನ ಜೊತೆಗೆ ಬಾಯಿಯನ್ನು ತೊಳೆದು ಕೊಂಡ ನಂತರವೇ ಊಟ ಮಾಡಬೇಕು . ಇದರಿಂದ ಮನುಷ್ಯನ ಶರೀರರಿಂದ ರೋಗಗಳು ದೂರ ಇರುತ್ತವೆ .ಅಂತ ವ್ಯಕ್ತಿ ದೀರ್ಘಾಯುಷ್ಯ ಪಡೆಯುತ್ತಾನೆ .ಅಂದರೆ ನೀನು ಸ್ನಾನವನ್ನು ಮಾಡದೆ ಊಟವನ್ನು ಮಾಡುತ್ತಿದ್ದೆ .
ಯಮ ರಾಜರು ಈ ರೀತಿಯಾಗಿ ಹೇಳುತ್ತಾರೆ .ಊಟವನ್ನು ಮಾಡುವ ಮುನ್ನ ಭಗವಂತನಿಗೆ ಧನ್ಯವಾದಗಳು ತಿಳಿಸಿ ಊಟ ಮಾಡಬೇಕು . ಮತ್ತು ಜಗತ್ತಿನ ಎಲ್ಲಾ ಪ್ರಾಣಿಗಳಿಗೆ ಊಟ ಸಿಗಲಿ ಎಂದು ಪ್ರಾರ್ಥನೆ ಮಾಡಬೇಕು . ಈ ರೀತಿಯಾಗಿ ಅನ್ನ ದೇವರಿಗೆ ನಮಸ್ಕಾರ ಮಾಡಿ , ಊಟವನ್ನು ಮಾಡಿದರೆ , ಮನುಷ್ಯನಿಗೆ ಯಾವುದೇ ರೀತಿಯ ಪಾಪ ಅಂಟುವುದಿಲ್ಲ .ಆದರೆ ನೀನು ಇಂತಹ ಯಾವುದೇ ಕಾರ್ಯಗಳನ್ನು ಮಾಡಿಲ್ಲ .ಯಾವತ್ತಿಗೂ ನೀನು ಈಶ್ವರನಿಗೆ ಧನ್ಯವಾದಗಳನ್ನು ಹೇಳಿಲ್ಲ .
ನೀನು ಯಾವತ್ತಿಗೂ ಪ್ರಾಣಿಗಳಿಗೆ ಆಹಾರವನ್ನು ನೀಡಲಿಲ್ಲ . ನಿನ್ನ ದ್ವಾರದ ಬಳಿ ಬಂದ ಭಿಕ್ಷುಕರಿಗೆ ಅನ್ನವನ್ನು ನೀಡಲಿಲ್ಲ .ಇದೇ ಕಾರಣದಿಂದ ನಿನ್ನ ಗತಿ ಈ ರೀತಿಯಾಗಿದೆ . ಯಮ ರಾಜರು ಹೇಳುತ್ತಾರೆ . ನೆಲದ ಮೇಲೆ ಕುಳಿತುಕೊಂಡು ಊಟ ಮಾಡುವುದು ಶ್ರೇಷ್ಠವಾಗಿ ಇರುತ್ತದೆ . ಹಾಸಿಗೆ ಮೇಲೆ ಕುಳಿತುಕೊಂಡು ಊಟ ಮಾಡುವುದರಿಂದ ಮನುಷ್ಯನಿಗೆ ರೋಗಗಳು ಉತ್ಪತ್ತಿಯಾಗುತ್ತವೆ . ನಂತರ ಅವರ ಆಯಸ್ಸು ಕಡಿಮೆಯಾಗುತ್ತದೆ . ನೀನು ಆರಾಮವಾಗಿ ಹಾಸಿಗೆ ಮೇಲೆ ಕುಳಿತುಕೊಂಡು ಊಟ ಮಾಡುತ್ತಿದ್ದೆ .
ಇದೇ ಕಾರಣದಿಂದ ನಿನ್ನ ಶರೀರದಲ್ಲಿ ರೋಗಗಳು ಹುಟ್ಟಿಕೊಂಡವು . ಶಾಸ್ತೃ ಈ ರೀತಿ ಹೇಳುತ್ತದೆ. ಮನೆಯ ಹೊಸ್ತಿಲ ಮೇಲೆ ಸಹ ಕೂತಿ ಕೊಂಡು ಊಟ ಮಾಡಬಾರದು . ಆದರೆ ನೀನು ಈ ನಿಯಮವನ್ನು ಕೂಡ ಪಾಲಿಸಲಿಲ್ಲ .ಇದರಿಂದ ನಿನ್ನ ಧನ ಸಂಪತ್ತು ಕೂಡ ನಷ್ಟವಾಯಿತು .ಹೊಸ್ತಿಲ ಮೇಲೆ ಕೂತು ಊಟ ಮಾಡಿದರೆ , ಧನ ಸಂಪತ್ತು ನಾಶವಾಗುತ್ತದೆ . ಎಂದು ಯಮ ರಾಜರು ಹೇಳುತ್ತಾರೆ .ಈ ಮೂರು ಪ್ರಕಾರವಾಗಿ ಊಟವನ್ನು ಮನುಷ್ಯರು ಮಾಡಬಾರದು .
ಇನ್ನು ಯಾರು ಆಹಾರದ ತಟ್ಟೆಯ ಮೇಲೆ ದಾಟಿ ಹೋಗಿರುತ್ತಾರೋ ,ಅದಕ್ಕೆ ತಮ್ಮ ಕಾಲುಗಳನ್ನ ಸ್ಪರ್ಶ ಮಾಡಿರುತ್ತಾರೋ , ಇಂತಹ ಆಹಾರವನ್ನು ಯಾವತ್ತಿಗೂ ಸೇವಿಸಬಾರದು . ಇಂತಹ ಆಹಾರ ಅಶುದ್ಧವಾಗುತ್ತದೆ . ಇಂತಹ ಆಹಾರವನ್ನು ಪಶುಗಳಿಗೆ ತಿನ್ನಿಸಬೇಕು . ಬೇರೆಯವರು ದಾಟಿ ಹೋದ ಆಹಾರವನ್ನು ಮನುಷ್ಯ ಸೇವಿಸಿದಾಗ , ಅವನ ಆಯಸ್ಸು ಕಡಿಮೆಯಾಗುತ್ತದೆ . ಅವರ ಶರೀರದಲ್ಲಿ ಭಿನ್ನ-ಭಿನ್ನವಾದ ರೋಗಗಳು ಉತ್ಪತ್ತಿಯಾಗುತ್ತದೆ .ಒಂದು ವೇಳೆ ಆಹಾರದಲ್ಲಿ ಕೂದಲು ಕಂಡು ಬಂದರೆ , ಅಂತಹ ಆಹಾರ ತ್ಯಾಜ್ಯವಾಗುತ್ತದೆ .ಒಂದು ವೇಳೆ ಆಹಾರದಲ್ಲಿ ಕೂದಲು ಕಂಡು ಬಂದರೆ ,
ನೈವೇದ್ಯದ ರೂಪದಲ್ಲಿ ಈಶ್ವರನಿಗೆ ಅರ್ಪಿಸಬಾರದು .ಸ್ವತಹ ಅದನ್ನು ತಾವೂ ತಿನ್ನಬಾರದು .ಇಂತಹ ಆಹಾರ ಪ್ರೇತಗಳಿಗೆ ಸಿಗುತ್ತದೆ .ಯಮ ರಾಜರು ಈ ರೀತಿಯಾಗಿ ಹೇಳುತ್ತಾರೆ .ಬೇರೆಯವರಿಗೆ ನೀಡಿದ ಆಹಾರವನ್ನು ಕೂಡ ಸೇವಿಸಬಾರದು . ಯಾವ ಮನುಷ್ಯರು ಬೇರೆಯವರ ಆಹಾರವನ್ನು ಕಸಿದುಕೊಂಡು ತಿನ್ನುತ್ತಾರೋ , ಬೇರೆಯವರಿಗೆ ನೀಡದೆ ಸ್ವತಹ ತಾವೇ ಸೇವಿಸುತ್ತಾರೋ , ಅವರ ಮೇಲೆ ತಾಯಿ ಅನ್ನಪೂರ್ಣೇಶ್ವರಿ ಕೋಪ ಗೊಳ್ಳುತ್ತಾರೆ .ಅನ್ನವನ್ನು ಎಲ್ಲರೊಂದಿಗೆ ಹಂಚಿ ತಿನ್ನಬೇಕು .
ಬೇರೆಯವರ ಭಾಗದ ಅನ್ನವನ್ನು ಸೇವಿಸಿದರೆ , ಅವರ ಪುಣ್ಯ ಕರ್ಮ ನಷ್ಟ ಆಗುತ್ತದೆ. ಆದರೆ ಇವುಗಳಲ್ಲಿ ನೀನು ಯಾವ ನಿಯಮಗಳನ್ನು ಕೂಡ ಪಾಲಿಸಲಿಲ್ಲ .ಇದೇ ಕಾರಣದಿಂದ ನಿನ್ನ ಆಯಸ್ಸು ಕಡಿಮೆಯಾಗಿದೆ .ಶಾಸ್ತ್ರಗಳ ಅನುಸಾರವಾಗಿ , ದಿನದ ಸಮಯದಲ್ಲಿ ಮನುಷ್ಯರು ಉತ್ತರ ದಿಕ್ಕಿನತ್ತ ತಮ್ಮ ಮುಖವನ್ನು ಮಾಡಿಕೊಂಡು ಮಲ ಮೂತ್ರದ ತ್ಯಾಗವನ್ನು ಮಾಡಬೇಕು . ಒಂದು ವೇಳೆ ರಾತ್ರಿಯ ಸಮಯದಲ್ಲಿ ಮಲ ಮೂತ್ರವನ್ನು ತ್ಯಾಗ ಮಾಡಲು ಇಷ್ಟಪಟ್ಟರೆ , ದಕ್ಷಿಣ ದಿಕ್ಕಿನತ್ತ ಮುಖ ಮಾಡಿ ಮಾಡಬೇಕು .
ಮಲಮೂತ್ರ ತ್ಯಾಗ ಮಾಡುವ ಸಮಯದಲ್ಲಿ ತಮ್ಮ ತಲೆ ಯಾವಾಗಲೂ ಕೆಳ ದಿಕ್ಕಿಗೆ ಮುಖ ಮಾಡಿ ಇರಬೇಕು . ಯಾವುದೇ ಮರದ ಹತ್ತಿರ , ನದಿಯ ದಡದ ಹತ್ತಿರ , ಬಾವಿಯ ಹತ್ತಿರ , ಗೋಶಾಲೆ ಹತ್ತಿರ , ದೇವ ಮಂದಿರ ಹತ್ತಿರ , ಅಗ್ನಿಯ ಹತ್ತಿರ , ಜೊತೆಗೆ ಸ್ಮಶಾನದ ಭೂಮಿ ಹತ್ತಿರವು ಸಹ ಮಲಮೂತ್ರ ವಿಸರ್ಜನೆ ಮಾಡಬಾರದು. ಶಾಸ್ತ್ರಗಳಲ್ಲಿ ಹೇಳುವ ಪ್ರಕಾರ ನಿಂತುಕೊಂಡು ಮಲಮೂತ್ರ ವಿಸರ್ಜನೆ ಮಾಡಬಾರದು . ಇದರಿಂದ ಶರೀರದಲ್ಲಿ ರೋಗ ವಿಕಾರಗಳು ನಿರ್ಮಾಣವಾಗುತ್ತದೆ.
ಇವುಗಳ ಜೊತೆಗೆ ಪೂರ್ತಿಯಾಗಿ ನಿರ್ವಸ್ತ್ರದಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು .ನಡೆದುಕೊಂಡು ಹೋಗುವಾಗಲೂ ಮೂತ್ರ ವಿಸರ್ಜನೆ ಮಾಡಬಾರದು .ಇದರಿಂದ ಜೀವನದಲ್ಲಿ ದುರ್ಭಾಗ್ಯಗಳು ಬರುತ್ತದೆ . ಶೂ , ಚಪ್ಪಲಿ ಧರಿಸಿಕೊಂಡು ಮಲಮೂತ್ರ ವಿಸರ್ಜನೆ ಮಾಡಬಾರದು . ಯಾವತ್ತಿಗೂ ಯಾವುದಾದರೂ ಸ್ತ್ರೀ ಗುರು ಅಥವಾ ದೇವತಾ , ದೇವಸ್ಥಾನ ಮತ್ತು ನೀರಿನ ಅತ್ತ ಮುಖ ಮಾಡಿಕೊಂಡು ಆಕಾಶದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳನ್ನು ನೋಡುತ್ತಾ , ಮಲಮೂತ್ರ ವಿಸರ್ಜನೆ ಮಾಡುವುದು ತಪ್ಪಾಗುತ್ತದೆ . ರಾತ್ರಿಯೂ ಕೂಡ ಚಂದ್ರನನ್ನು ನೋಡುತ್ತಾ ಮಲವಿಸರ್ಜನೆ ಮಾಡಬಾರದು .
ಇದರಿಂದ ದುಃಖ ಮತ್ತು ಸಂಕಟಗಳು ಬರುತ್ತವೆ .ಮಲಮೂತ್ರ ಮಾಡಿದ ನಂತರ ಆ ಭಾಗವನ್ನ ಸ್ವಚ್ಛಗೊಳಿಸಬೇಕು . ಜೊತೆಗೆ ನಿಮ್ಮ ಕೈಗಳನ್ನು ಶುದ್ಧವಾದ ನೀರಿನಿಂದ ತೊಳೆದುಕೊಳ್ಳಬೇಕು . ಮಲಮೂತ್ರ ಮಾಡಿದ ನಂತರ ಯಾವುದೇ ಗೋಡೆಯನ್ನು ಸ್ವಚ್ಛ ಮಾಡಬಾರದು . ಇದರಿಂದ ಪಶುವಿನ ರೂಪದಲ್ಲಿ ಜನ್ಮ ಸಿಗುತ್ತದೆ . ಮಲ ಮೂತ್ರ ಮಾಡಿದ ನಂತರ ಅದನ್ನು ಚೆನ್ನಾಗಿ ಮುಚ್ಚಬೇಕು . ಅದರ ಮೇಲೆ ಮಣ್ಣನ್ನ ಹಾಕಬೇಕು .ಅದನ್ನ ಯಾವುದೇ ಪಶು ಪಕ್ಷಿಗಳು ತಿನ್ನದಂತೆ ನೋಡಿಕೊಳ್ಳಬೇಕು .
ಯಾವತ್ತಿಗೂ ಮನುಷ್ಯರು ನಿರ್ವಸ್ತ್ರವಾಗಿ ಸ್ನಾನ ಮಾಡಬಾರದು .ಇದರಿಂದ ಪಿತ್ರ ದೇವರು ಕೋಪ ಗೊಳ್ಳುತ್ತಾರೆ. ಈ ರೀತಿ ಮಾಡಿದಾಗ ಮನುಷ್ಯರು ತಮ್ಮ ದು ಎಲ್ಲವನ್ನು ಕಳೆದುಕೊಳ್ಳುತ್ತಾರೆ . ಹಾಗಾಗಿ ನೀನು ನಿರ್ವಸ್ತ್ರ ವಾಗಿ ಸ್ನಾನ ಮಾಡಿದ್ದೀಯಾ , ಆದ್ದರಿಂದ ನಿನ್ನ ಪಿತ್ರು ನಿನ್ನ ಮೇಲೆ ಸಿಟ್ಟಾದರೂ , ಈ ರೀತಿಯಾಗಿ ಆ ಚಿಕ್ಕ ಮಗನಿಗೆ ಯಮ ರಾಜರು ಹಲವಾರು ರೀತಿಯ ಜ್ಞಾನವನ್ನು ಕೊಡುತ್ತಾರೆ . ನಂತರ ಯಮ ದೂತರನ್ನು ಕರೆದು ಅವನನ್ನು ನರಕಕ್ಕೆ ಕರೆದುಕೊಂಡು ಹೋಗಲು ಆದೇಶವನ್ನು ನೀಡುತ್ತಾರೆ . ಈ ರೀತಿಯಾಗಿ ಮನುಷ್ಯರು ಯಾವತ್ತಿಗೂ ಶಾಸ್ತ್ರದ ನಿಯಮವನ್ನು ಉಲ್ಲಂಘಿಸಬಾರದು . ಯಮ ರಾಜರು ಯಾವ ರೀತಿಯ ಜ್ಞಾನವನ್ನು ಚಿತ್ರ ಗುಪ್ತರಿಗೆ ನೀಡಿದ್ದಾರೋ ಅದು ಅತ್ಯಂತ ಮಹತ್ವ ಪೂರ್ಣವಾಗಿ ಇದೆ . ಈ ಮೇಲೆ ಯಮ ರಾಜ ಹೇಳಿರುವ ನಿಯಮಗಳನ್ನು ನಿಮ್ಮ ಜೀವನದಲ್ಲಿ ಪಾಲನೆ ಮಾಡಿ ಎಂದು ಹೇಳಲಾಗಿದೆ.