ನಾವು ಈ ಲೇಖನದಲ್ಲಿ ಕುಲ ದೇವತಾ ಶಾಪ ಎಂದರೇನು.. ? ಮತ್ತು ಕುಲ ದೇವರನ್ನು ಕಂಡುಹಿಡಿಯುವುದು ಹೇಗೆ ..? ಎಂಬುದರ ಬಗ್ಗೆ ತಿಳಿಯೋಣ . ಕುಲದೇವರು ಎಂದರೆ ಯಾರು ಅನ್ನುವ ಪ್ರಶ್ನೆಗೆ ಉತ್ತರ . ಇದನ್ನು ಹಿರಿಯರು ಕುಲ ದೇವರು ಎಂದು ಮಾಡಿದರು. ಪೂಜೆಗೆ ಹೋದಾಗ , ಅಥವಾ ಸಹಜವಾಗಿ ಕೇಳುವಾಗ ಮತ್ತು ಮದುವೆಯ ವಿಷಯ ಬಂದಾಗ , ನಿಮ್ಮ ಕುಲ ದೇವರು ಯಾರು ಎಂದು ಕೇಳುತ್ತಾರೆ . ಇಲ್ಲಿಂದ ಪ್ರಶ್ನೆಗಳು ಮೂಡುವುದಕ್ಕೆ ಶುರುವಾಗುತ್ತವೆ .
ಕುಲ ದೇವರು ಯಾರು ಎಂದು ಕೇಳಿದಾಗ ಹಿರಿಯರು ನಮಗೆ ಹೇಳಿರುವುದಿಲ್ಲ .ಅಥವಾ ಅದು ಮರೆತು ಹೋಗಿರುವ ಸಾಧ್ಯತೆ ಇರುತ್ತದೆ .ಅವರಿಗೂ ಗೊತ್ತಿಲ್ಲದೇ ಇರಬಹುದು . ನಾವು ಕುಲದೇವರ ಆರಾಧನೆಯನ್ನು ಮಾಡುತ್ತಿರುವುದಿಲ್ಲ . ಕುಲದೇವರ ಶಾಪ ಇದೆ ಎಂದು ಯಾರೋ ಹೇಳುತ್ತಾರೆ . ಈ ರೀತಿಯಾಗಿ ಅನೇಕ ಪ್ರಶ್ನೆಗಳು ಕುಲದೇವರ ಕುರಿತಾಗಿ ಮೂಡುತ್ತದೆ .ಕುಲ ದೇವರನ್ನು ಹಿಂದೆ ಹಿರಿಯರೇ ಮಾಡಿದ್ದರು . ಯಾಕೆಂದರೆ ಹಿಂದೆ ಅವಿಭಕ್ತ ಕುಟುಂಬಗಳು ಇರುತ್ತಿದ್ದವು .
ಮನೆಯ ಯಜಮಾನ ಮನೆಯ ಒಂದು ಪರಿಸ್ಥಿತಿಯನ್ನು ನೋಡಿ , ಕೆಲವು ಮನೆಗಳಲ್ಲಿ ಕುಟುಂಬದ ಸ್ಥಿರತೆಯ ಕೊರತೆ , ಕೆಲವೊಂದು ಕುಟುಂಬಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವ ಕೊರತೆ , ಇನ್ನು ಕೆಲವೊಂದು ಕುಟುಂಬಗಳಲ್ಲಿ ಅಡ್ಡಿ ಆತಂಕಗಳು ಕಾಡುತ್ತಿರುತ್ತವೆ .ಈ ರೀತಿಯ ವಿಚಾರಗಳು ಅವರ ಗಮನಕ್ಕೆ ಬಂದಿರುತ್ತವೆ . ಆಗ ಒಂದು ನಿರ್ಧಾರವನ್ನು ತೆಗೆದುಕೊಂಡು ನಮ್ಮ ಕುಟುಂಬಕ್ಕೆ ಒಂದು ಕುಲ ದೇವರನ್ನು ಮಾಡಿಕೊಳ್ಳಬೇಕು ಎಂದು ತೀರ್ಮಾನಿಸುತ್ತಾರೆ .
ಆಗ ಅದಕ್ಕೆ ಸಂಬಂಧಪಟ್ಟ ದೇವರುಗಳ ಸ್ಥಳಕ್ಕೆ ಹೋಗಿ , ಸನ್ನಿಧಿಗೆ ಹೋಗಿ ಕುಲದೇವರನ್ನಾಗಿ ಸ್ವೀಕಾರ ಮಾಡುತ್ತಾರೆ . ಅಲ್ಲಿಂದ ನಂತರ ತಲೆಮಾರಿನಿಂದ ತಲೆಮಾರಿಗೆ ಆರಾಧನೆಯನ್ನು ಮಾಡುತ್ತಾ ಬರುತ್ತಾರೆ. ಕುಟುಂಬದಲ್ಲಿ ಅಥವಾ ಆ ಒಂದು ಕುಲದಲ್ಲಿ ಯಾವ ಒಂದು ವಿಶೇಷವಾದ ಕೊರತೆ ಕಾಣಿಸುತ್ತೋ , ಅದಕ್ಕೆ ಅನುಗುಣವಾಗಿ ಆ ಕೊರತೆಯ ನಿವಾರಣೆಗೆ , ಆ ಕುಲದಲ್ಲಿನ ಕಷ್ಟಗಳು , ತೊಂದರೆಗಳು , ಆ ಕುಲಕ್ಕೆ ಬರುವ ಯಾವುದೇ ರೀತಿಯ ವಿಘ್ನಗಳು ಇದೆಲ್ಲದಕ್ಕೆ ಸಂಬಂಧಪಟ್ಟ ಒಂದು ದೇವರನ್ನು ಅಥವಾ ಇದೆಲ್ಲವನ್ನು ನಿವಾರಣೆ ಮಾಡುವ ದೇವರನ್ನು
ಕುಲ ದೇವರನ್ನಾಗಿ ನಿರ್ಧಾರ ಮಾಡಿ , ಅದಕ್ಕೆ ಸಂಬಂಧಪಟ್ಟ ಕುಲ ದೇವರಿಗೆ ಆರಾಧನೆಯನ್ನು ಮಾಡುತ್ತಾ ಬರುತ್ತಾರೆ. ಆದರೆ ನಂತರ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದಂತೆ ಹಿರಿಯರು ಹೇಳದೇ ಇರಬಹುದು . ಅಥವಾ ಯಾವುದೋ ಒಂದು ರೀತಿಯಲ್ಲಿ ಮುಂದಿನ ತಲೆಮಾರಿಗೆ ಆ ವಿಷಯ ಹೋಗದೆ ಇರಬಹುದು . ಆಗ ಕುಲದೇವರು ಯಾರು ಎಂಬ ಪ್ರಶ್ನೆ ಉಂಟಾಗುತ್ತದೆ . ಕೆಲವೊಂದು ಸಾರಿ ಬೇರೆ ಎಲ್ಲಿಂದಲೋ ಮೂಲದಿಂದ ಬಂದು , ಬೇರೆ ಯಾವುದೋ ಪ್ರದೇಶದಲ್ಲಿ ಮನೆಯನ್ನು ಮಾಡಿ ,
ಯಾವುದೋ ಮೂಲದಲ್ಲಿ ಇರುವ ಕುಲ ದೇವರನ್ನು ಆರಾಧನೆ ಮಾಡುತ್ತಿರುತ್ತಾರೆ . ಆಗ ಬರುವ ಸಮಸ್ಯೆ ಹೇಗೆ ನಾವು ಕಂಡುಹಿಡಿಯುವುದು ಎಂದು .ಅದೇ ರೀತಿ ಇತಿಹಾಸದ ಹಿನ್ನೆಲೆ ಹುಡುಕುವುದಕ್ಕೆ ಹೋದಾಗ ಅದು ಸಿಗುವುದಿಲ್ಲ .ನಮಗೆ ಕುಲ ದೇವರನ್ನು ತಿಳಿದು ಕೊಳ್ಳಲೇಬೇಕು ಎಂಬ ಮನಸ್ಸಿನ ಇಚ್ಛೆ ಇದ್ದರೆ , ಯಾಕೆಂದರೆ ಆ ಕುಲಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಯುವುದಕ್ಕೆ ಮತ್ತು ಕೆಲವೊಂದು ಸಾರಿ ನಾವು ಎಷ್ಟೇ ಪರಿವರ್ತನೆಗಳನ್ನು ಮಾಡಿಕೊಂಡರು ಸಹ , ಕುಲ ದೇವತೆಯ ಆರಾಧನೆ ಆಗಿಲ್ಲ ಎಂದರೆ ,
ನಾವು ಬೇರೆ ದೇವರಿಗೆ ಮಾಡಿದರು ಸಹ ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ . ಅದಕ್ಕೆ ಕುಲ ದೇವರನ್ನ ಪ್ರತಿಯೊಂದು ವಿಷಯದಲ್ಲಿ ಮುಂದಿಟ್ಟುಕೊಂಡು , ಮುಂದೆ ಹೋಗಬೇಕಾಗುತ್ತದೆ .ಆ ಕುಲದ ಅಭಿವೃದ್ಧಿಗಾಗಿ ತುಂಬಾ ಒಳ್ಳೆಯದು ಮತ್ತು ಅ ಕುಲದ ತೊಂದರೆಗಳ ನಿವಾರಣೆಗೆ ಅತ್ಯಗತ್ಯವಾಗಿರುತ್ತದೆ . ಹಾಗಾದರೆ , ಕುಲ ದೇವರನ್ನು ಹೇಗೆ ಕಂಡುಹಿಡಿಯುವುದು …?
ನಿಮಗೆ ತೀವ್ರವಾಗಿ ಕುಲದೇವರ ಅವಶ್ಯಕತೆ ಇದೆ ಎಂದರೆ ಈ ರೀತಿಯಾಗಿ ಮಾಡಬಹುದು .ಯಾವುದಾದರೂ ಕುಲ ದೇವರ ಬಳಿ ಸೂಚನೆ ಸಿಗುತ್ತದೆ . ಅಲ್ಲಿಗೆ ಹೋಗುವ ವಾತಾವರಣ ನಿಮಗೆ ನಿರ್ಮಾಣವಾಗುತ್ತದೆ . ಏನು ಮಾಡಬೇಕು ಎಂದರೆ , ಧೂಪ , ಚಂದನದ ಪುಡಿ , ಹಾಗೆಯೇ ಭಸ್ಮ, ಕುಂಕುಮ ಮತ್ತು ಅರಿಶಿಣದ ಕೊಂಬು ಇದೆಲ್ಲವನ್ನು ಒಂದು ಚೌಕಾಕಾರದ ಕೆಂಪು ಬಟ್ಟೆಯನ್ನು ತೆಗೆದುಕೊಂಡು , ಇದೆಲ್ಲವನ್ನು ಹಾಕಿ ಒಂದು ಕೆಂಪು ದಾರದಿಂದ ಕಟ್ಟಬೇಕು .
ಆ ನಂತರ ಅದನ್ನು ಕೈಯಲ್ಲಿ ಹಿಡಿದುಕೊಂಡು , ಇದನ್ನು ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳಿ ಇದನ್ನು ಮನೆಯಲ್ಲಿ ಇರುವ ಪುರುಷರೇ ಮಾಡಬೇಕು . ಅದನ್ನು ಎತ್ತಿಕೊಂಡು ಕೈಯಲ್ಲಿ ಇಟ್ಟುಕೊಂಡು ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಬೇಕು . ಏನಂತ ಅಂದರೆ , “ಕುಲ ದೇವರನ್ನು ನಾನು ನೋಡಲೇ ಬೇಕಾಗಿದೆ , ದಯವಿಟ್ಟು ನೀನು ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದೀಯಾ ಎಂದು , ಅಂತ ನಾನು ಭಾವಿಸುತ್ತೇನೆ . ನೀನು ಎಲ್ಲೇ ಇದ್ದರೂ , ನನಗೆ ಯಾವುದಾದರೂ ರೀತಿ ನಿನ್ನಲ್ಲಿಗೆ ಬರಲು ಅವಕಾಶ ಮಾಡಿಕೊಡು .
ನೀನು ಅವಕಾಶ ಮಾಡಿ ಕೊಟ್ಟೆ ಕೊಡುತ್ತೀಯಾ” ಎಂಬ ನಂಬಿಕೆಯಿಂದ ಸಂಕಲ್ಪ ಮಾಡುತ್ತಾ , ಇದನ್ನು ಶುಕ್ಲ ಪಕ್ಷದ ಅಷ್ಟಮಿ ದಿವಸ ಮಾಡಬೇಕು .ಇದನ್ನು ದಿನದಲ್ಲಿ ಎರಡು ಸಾರಿ ಸಂಕಲ್ಪ ಮಾಡಬೇಕು .ಅಂದರೆ ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ, ಒಂದು ಸಲ ಮತ್ತು ಸೂರ್ಯಾಸ್ತವಾದ ಮೇಲೆ ಒಂದು ಸಲ ಸಂಕಲ್ಪ ಮಾಡಬೇಕು .ಬೆಳಿಗ್ಗೆ ಮಾಡಲು ತುಂಬಾ ಪ್ರಶಸ್ತವಾದ ಸಮಯ ಆಗಿರುತ್ತದೆ .ಇದನ್ನು ಮನೆಯ ಬಾಗಿಲಿನ ಹಿಂದೆ ಅಂದರೆ ಮೇಲೆ ಗೋಡೆಗೆ ಅದನ್ನು ಕಟ್ಟಬೇಕು .
ಈ ರೀತಿ ಕಟ್ಟಿ ಸಂಕಲ್ಪ ಮಾಡಿದ ನಂತರ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಕುಲದೇವರಿಗೆ ಹೋಗುವ ಸೂಚನೆ ನಮಗೆ ಲಭ್ಯವಾಗುತ್ತದೆ .ಇದು ಒಂದು ವಿಚಾರ ಆಯ್ತು . ಈ ರೀತಿಯಾಗಿ ಕುಲ ದೇವರನ್ನು ಹುಡುಕಲು ಕಷ್ಟವಾಗುತ್ತದೆ ಅಂದರೆ , ಅಂತಹ ಸಂದರ್ಭದಲ್ಲಿ ಮನೆಯ ಹತ್ತಿರ ಇರುವಂತಹ , ಯಾವುದಾದರೂ ಶಕ್ತಿ ದೇವರನ್ನ , ಅಂದರೆ ಶಕ್ತಿ ಕುಲದೇವರು ಸ್ತ್ರೀ ಇರಬಹುದು ಅಥವಾ ಪುರುಷ ದೇವರು ಇರಬಹುದು . ಯಾವುದೇ ಆಗಬಹುದು ಅಲ್ಲಿಗೆ ಹೋಗಿ ನಾವು ವಿನಂತಿ ಮಾಡಿಕೊಂಡು ,
ಕುಲದೇವರು ಯಾರು ಎಂದು ನನಗೆ ಗೊತ್ತಿಲ್ಲ ಇಷ್ಟು ಸಮಯ ಕಳೆದಿದೆ , ಅಂದರೆ ನಮ್ಮ ಕುಲಕ್ಕೆ ನಮಗೆ ಮಾರ್ಗದರ್ಶನವನ್ನು ನೀಡುವಂತೆ ಆಗಬೇಕು ಎಂದು ಅಲ್ಲಿಯ ದೇವರನ್ನ ಭಕ್ತಿಯಿಂದ ಅಥವಾ ಶ್ರದ್ಧೆಯಿಂದ ಬೇಡಿಕೊಂಡು, ಅಲ್ಲಿ ಏನು ಪದ್ಧತಿ ಇದೆ , ಯಾವ ರೀತಿ ಆರಾಧನೆ ಇದೆ ,ಅಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ ಎಲ್ಲವನ್ನು ತಿಳಿದುಕೊಳ್ಳಬೇಕು .ನಮಗೆ ಸಾಧ್ಯವಾದಷ್ಟು ನಾವು ನಡೆದುಕೊಂಡು ಹೋದರೆ ,
ಈ ಒಂದು ನಿವಾರಣೆ ಆಗುತ್ತದೆ .ಆದರೆ ಇದು ಸಂಪೂರ್ಣವಾಗಿ ಕುಲದೇವರು ಯಾರು ಎಂದು ಗೊತ್ತಿಲ್ಲದ ಪಕ್ಷದಲ್ಲಿ ಮಾತ್ರ ಮಾಡಬೇಕು. ನಿಮ್ಮ ಕುಲದೇವರು ನಿಮಗೆ ಯಾರೆಂದು ಗೊತ್ತಿದ್ದಲ್ಲಿ ಒಂದು ವರ್ಷಕ್ಕೆ ಒಂದು ಸಲ ಹೋಗಿ ಬರುವ ಪ್ರಯತ್ನ ಮಾಡಬೇಕು . ಈ ರೀತಿ ಮಾಡಿದಾಗ ಒಳ್ಳೆಯದಾಗುತ್ತದೆ . ಕುಲದೇವರ ಶಾಪ ಹೇಗಿರುತ್ತದೆ .ಇದನ್ನು ಹೇಗೆ ಮತ್ತು ಯಾವ ರೀತಿ ಕಂಡು ಹಿಡಿಯುವುದು ಹೇಗೆ ಎಂದು ತಿಳಿಯೋಣ. ಕೆಲವೊಂದು ಸಾರಿ ಸ್ತ್ರೀ ಕುಲ ದೇವತೆ ಮಾಡಿಕೊಳ್ಳುವುದೋ ಅಥವಾ ಪುರುಷ ಕುಲದೇವರನ್ನು ಆಯ್ಕೆ ಮಾಡಿಕೊಳ್ಳುವುದೋ
ಎಂಬ ಗೊಂದಲ ಬಂದಾಗ , ಆಗ ನಮ್ಮ ಮನಸ್ಸಿನಲ್ಲಿ ಯಾರ ಬಗ್ಗೆ ಅತಿಯಾದ ಭಾವನೆ ಇದೆ .ನಮ್ಮ ಮನಸ್ಸಿಗೆ ಯಾವುದು ತೋಚುತ್ತದೆ ಅಂತಹ ದೇವರನ್ನು ಕುಲ ದೇವತೆಯಾಗಿ ಮಾಡಿಕೊಳ್ಳಬೇಕು . ಯಾರು ಎಂದು ಗೊತ್ತಿಲ್ಲ ಅನ್ನುವ ಪಕ್ಷದಲ್ಲಿ ಮಾತ್ರ . ಶಾಪದ ಬಗ್ಗೆ ನೋಡುವುದಾದರೆ , ಕುಂಡಲಿಯಲ್ಲಿ ಹೇಗೆ ಕಂಡುಹಿಡಿಯಬಹುದು ಎಂದರೆ , ಲಗ್ನ ಕುಂಡಲಿಯನ್ನು ತೆಗೆದುಕೊಂಡು ಲಗ್ನದಿಂದ ನಾವು ನೋಡಬೇಕು , ಶನಿ ಎಲ್ಲಿ ಇದ್ದಾನೆ ಎಂದು ನೋಡಿದಾಗ , ಶನಿ ನಮ್ಮ ಕುಲದೇವರ ಶಾಪವನ್ನು ಸೂಚಿಸುತ್ತದೆ .
ಶನಿಯಿಂದ ಆರನೇ ಮನೆಗೆ ಲೆಕ್ಕ ಹಾಕಬೇಕು . ಶನಿ ಒಂದನೆ ಮನೆಯಲ್ಲಿ ಕುಳಿತಿರುತ್ತಾನೆ .ಅಲ್ಲಿಂದ ಗಡಿಯಾರದ ರೀತಿಯಲ್ಲಿ ಲೆಕ್ಕ ಮಾಡುತ್ತಾ ಹೋಗಬೇಕು .ಆರನೇ ಮನೆ ಒಂದು ವೇಳೆ ಶನಿ ರೆಟ್ರೋ ಇದ್ದರೆ , ರೆಟ್ರೋ ಇದ್ದರೂ ಸಹ ಶನಿ ಒಂದನೇ ಮನೆಯಲ್ಲಿ ಕುಳಿತಿದ್ದರೆ ಅಲ್ಲಿಂದಲೂ ಸಹ ಆರನೇ ಮನೆ . ಆ ಆರನೇ ಮನೆಯಲ್ಲಿ ಸೂರ್ಯ , ಕುಜ ,
ಬುಧ, ಕೇತು ಗ್ರಹಗಳು ಕುಳಿತಿದ್ದಲ್ಲಿ ಜೊತೆಗೆ ಮಂಗಳ ಗ್ರಹ ಒಟ್ಟಿಗೆ ಕುಳಿತಿರಬಹುದು ಅಥವಾ ಒಂದೇ ಗ್ರಹ ಇರಬಹುದು . ಅಥವಾ ಶನಿಯ ಮನೆಯಲ್ಲಿ ಕುಳಿತಿದ್ದರೆ , ಶನಿಯ ಮನೆ ಎಂದರೆ ಮಕರ ಮತ್ತು ಕುಂಭ . ಹೀಗೆ ಕುಳಿತಿದ್ದರೆ ಆಗ ಕುಲ ದೇವತಾ ಶಾಪ ಇರುತ್ತದೆ . ಆಗ ನಾವು ಕುಲ ದೇವತೆಗೆ ಸಂಬಂಧಪಟ್ಟಂತೆ ನಡೆದುಕೊಳ್ಳಬೇಕು ಮತ್ತು ತಿಳಿದುಕೊಳ್ಳಬೇಕು .ನಾವು ಕುಲ ದೇವರನ್ನು ನಿರ್ಲಕ್ಷಿಸಿದಾಗ ಜೀವನದಲ್ಲಿ ಹಲವಾರು ರೀತಿಯ ಏರುಪೇರುಗಳು ಆಗುತ್ತದೆ .ಅದನ್ನು ತಿಳಿದುಕೊಂಡು ಮುಂದೆ ಹೋಗುವುದರಿಂದ ತುಂಬಾ ಒಳ್ಳೆಯದಾಗುತ್ತದೆ .