ಕನ್ಯಾ ರಾಶಿ ವರ್ಷ ಭವಿಷ್ಯ 2024

0

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯ 2024ರ ವರ್ಷ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ . ನಿಮ್ಮ ರಾಶಿಗೆ ಸಂಬಂಧಪಟ್ಟಂತೆ ಒಂದು ಸ್ವಾರಸ್ಯಕರವಾದ ವಿಷಯ ಅಡಗಿದೆ ಎಂಬುದರ ಬಗ್ಗೆ ತಿಳಿಯೋಣ . ನಿಮ್ಮ ಮೇಲೆ ಹಲ್ಲಿ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ . ಆದರೆ ಹಲ್ಲಿಯೇ ಬೀಳುವುದಿಲ್ಲ . ಅದರ ಬಾಲ ಬೀಳುತ್ತದೆ. ಎಂದು ಹೇಳಲಾಗಿದೆ. ಇದರ ಮಹತ್ವ ಮತ್ತು ನಿಮ್ಮ ಮಟ್ಟಿಗೆ ಹೇಳಬೇಕಾದರೆ , ಒಂದು ರೀತಿಯ ನಿಗೂಢತೆ ಇದೆ. ಅಂದರೆ ನಾವು ಒಂದು ಒಳ್ಳೆಯ ಸಮಯವನ್ನು ಕಾಯುತ್ತಿರುತ್ತೇವೆ .

ಒಳ್ಳೆಯ ಸಮಯ ಅನ್ನೋದು ಹಲವಾರು ವಿಚಾರಗಳಿಗಾಗಿ ಬರುತ್ತದೆ . ಒಂದು ಒಳ್ಳೆಯ ಕೆಲಸಕ್ಕಾಗಿ , ವ್ಯವಹಾರಗಳಲ್ಲಿ ಅದೃಷ್ಟ ಬದಲಾವಣೆ ಆಗಬಹುದು . ಈ ತರಹದ ವಿಚಾರಗಳಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ . ಸಹೋದ್ಯೋಗಿಗಳ ಜೊತೆ ಒಳ್ಳೆಯ ಸಂಬಂಧ ಹೊಂದಿರುತ್ತಾರೆ .ಆದರೆ ಅಲ್ಲಲ್ಲೇ ಕಿರಿ ಕಿರಿಗಳು ಶುರುವಾಗುತ್ತವೆ . ಇಂತಹ ಪ್ರಯತ್ನಗಳಿಗೆ ಒಂದು ಒಳ್ಳೆಯ ಸಮಯ ಎಂದು ಹೇಳಬಹುದು . ಶನಿ ಮಹಾತ್ಮನ ಸತತವಾದ ಕೃಪೆ ಈ ರಾಶಿಯವರ ಮೇಲೆ ಇದೆ .

ಅಂದರೆ ಈ ರಾಶಿಯ ಜನರಿಗೆ ಶನಿ ಮಹಾತ್ಮನಿಂದ ಒಂದು ಸ್ಥಿರತೆ ಎನ್ನುವುದು ದೊರೆಯುತ್ತದೆ . ಕೆಲಸದಲ್ಲಿ ಇವರಿಗೆ ಹೆಚ್ಚಿನ ಯಶಸ್ಸು ಸಿಗಲಿದೆ . ಜೀವನದಲ್ಲಿ ಒಟ್ಟಾರೆಯಾಗಿ ಒಂದು ರೀತಿಯ ಖುಷಿ ಸಿಗುತ್ತದೆ ಎಂದು ಹೇಳಬಹುದು . ಆರೋಗ್ಯದಲ್ಲಿ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿದೆ . ಶತ್ರುಗಳ ವಿರುದ್ಧ ಸ್ಪರ್ಧಾತ್ಮಕ ವಿಚಾರಗಳಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆ ಇದೆ . ಶನಿ ಗ್ರಹವು ಸರಿಯಾಗಿ ಅವರ ರಾಶಿಯಲ್ಲಿ ಇದ್ದಾಗ , ಎಲ್ಲವೂ ಸಮತೋಲನವಾಗಿ ನಡೆಯುತ್ತದೆ ಎಂದು ಹೇಳಬಹುದು .

ಶನಿಯ ಸರಿಯಾದ ಸ್ಥಾನ ಜೀವನದಲ್ಲಿ ತುಂಬಾ ಪ್ರಾಮುಖ್ಯತೆಯನ್ನು ಪಡೆಯುತ್ತದೆ . ಕುಂಭ ರಾಶಿಯಲ್ಲಿ ಶನಿ ಇರುವವರೆಗೆ ಭಯಪಡುವ ಯಾವುದೇ ಅವಶ್ಯಕತೆ ಇರುವುದಿಲ್ಲ. ದುಃಖಗಳು ದೂರವಾದಾಗ ನಮ್ಮನ್ನು ನಾವು ಎದುರಿಸಿಕೊಳ್ಳಲು ಸಾಮರ್ಥ್ಯ ಇರುತ್ತದೆ . ಶನಿ ಒಂದು ತಟಸ್ಥ ಜಾಗಕ್ಕೆ ಮುಂದೆ ಹೋದಾಗಲೂ ಕೂಡ ಭಯಪಡುವ ಅವಶ್ಯಕತೆ ಇರುವುದಿಲ್ಲ . ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಮುಂದೆ ಹೋಗುವ ಸಂದರ್ಭ ಈ ಸಮಯವಾಗಿರುತ್ತದೆ .

ಒಂದೇ ಒಂದು ಸಮಸ್ಯೆ ಈ ರಾಶಿಯವರಿಗೆ ಇರುವುದು ಅಂದರೆ , ಅಷ್ಟಮದಲ್ಲಿ ಇರುವ ಗುರು . ಸ್ವಲ್ಪ ತಾಳ್ಮೆಯಿಂದ ಇರಬೇಕಾಗುತ್ತದೆ . ಮೇ ತಿಂಗಳ ಹೊತ್ತಿಗೆ ಗುರು ಭಾಗ್ಯದ ರಾಶಿಗೆ ಬರುತ್ತಾನೆ. ಷಷ್ಟದಲ್ಲಿ ಇರುವಂತ ಶನಿ ಮತ್ತು ಭಾಗ್ಯದಲ್ಲಿ ಇರುವ ಗುರು ಎರಡು ಗ್ರಹಗಳ ಗುದ್ದಾಟ ಬಹಳಷ್ಟು ರೀತಿಯ ಪ್ರಯೋಜನಕಾರಿಯಾಗಿ ಅಥವಾ ಅನುಕೂಲಕರವಾಗಿ ಮಾರ್ಪಾಡು ಆಗುತ್ತದೆ . ಗುರು ಯಾವ ರೀತಿಯಲ್ಲಿ ಲಾಭ ತಂದು ಕೊಡುತ್ತಾನೆ ಎಂದು ಹೇಳುವುದಾದರೆ , ವಿಶೇಷವಾಗಿ ಅದೃಷ್ಟ ಈ ರಾಶಿಯವರಿಗೆ ಬದಲಾವಣೆಯಾಗುತ್ತದೆ .ಯಾವ ವಿಚಾರದಲ್ಲಿ ನಿಮಗೆ ನಕಾರಾತ್ಮಕತೆ ಇತ್ತು .

ಮತ್ತು ಯಾವ ವಿಷಯದಲ್ಲಿ ತುಂಬಾ ಬೇಜಾರು ಇತ್ತು. ಈ ತರದ ವಿಚಾರಗಳಿಗೆ ಅರ್ಧ ಗಂಟೆ ಮತ್ತು ಪ್ರಾರ್ಥನೆ ಮಾಡುವುದರಿಂದ , ನಿಮ್ಮ ಜೀವನದ ಹಾದಿಯ ಬದಲಾವಣೆ ಆಗುತ್ತದೆ . ಏಕಾಗ್ರತೆ ಕಡಿಮೆ ಇರುತ್ತದೆ . ಈ ತರ ತೊಂದರೆಗಳು ದೂರವಾಗುವ ಸಾಧ್ಯತೆ ಇದೆ . ಒಳ್ಳೆಯ ಸಮಯ ಅನ್ನೋದು ಕೂಡ ಹತ್ತಿರ ಬರುತ್ತದೆ . ಗುರು ಬಲ ಕೂಡ ಹೆಚ್ಚಾಗುತ್ತದೆ .ಗುರು ಮತ್ತು ಶನಿ ಗ್ರಹಗಳು ಯಾವ ಸ್ಥಾನದಲ್ಲಿ ಕೂತು ಲಾಭವನ್ನು ಕೊಡಬಹುದು ಆ ಸ್ಥಾನದಲ್ಲಿ ಇರುತ್ತವೆ .

ಎರಡು ಗ್ರಹಗಳು ಸೇರುವುದರಿಂದ ಒಬ್ಬ ವಿಜಯ ವ್ಯಕ್ತಿಯಾಗಿ ಮಾರ್ಪಾಡಾಗುತ್ತದೆ . ಶನಿ ಮತ್ತು ಗುರು ಈ ರಾಶಿಯವರಿಗೆ ಒಳ್ಳೆಯದನ್ನೇ ಮಾಡುವಾಗ ಇನ್ನೊಂದು ಕಡೆ ರಾಹು ಕೇತು ಬರುತ್ತಾರೆ. ಇಲ್ಲಿ ಹಲ್ಲಿಯ ಬಾಲದ ವಿಚಾರಕ್ಕೆ ಬಂದಾಗ , ಬಾಲ ಕುಣಿಯುವುದಕ್ಕೆ ಶುರು ಮಾಡುತ್ತದೆ. ಈ ಕಥೆ ಯಾವಾಗ ಶುರುವಾಗುತ್ತದೆ . ಎಂದರೆ, ಮಹಾ ವಿಷ್ಣು ರಾಹುವಿನ ಮೇಲೆ ಪ್ರಹಾರ ಮಾಡಿದಾಗ , ಅಂದರೆ ಸರ್ಪದ ಮೇಲೆ ಪ್ರಹಾರ ಮಾಡಿದಾಗ , ತುಂಡಾಗಿ ಎರಡು ಭಾಗಗಳು ಆಗುತ್ತದೆ . ಆಗ ಬಾಲ ಒಂದು ಕಡೆ .

ಮತ್ತು ತಲೆ ಒಂದು ಕಡೆ ಆಗುತ್ತದೆ. ಈ ಬಾಲದ ಭಾಗ ಕೇತು. ಈ ವಿಚಾರ ಬಂದು ನಿಮ್ಮ ರಾಶಿಯಲ್ಲಿ ಕೂತಿರುತ್ತದೆ .ಈ ಗುರು ಮತ್ತು ಶನಿ ಒಳ್ಳೆಯ ಫಲಗಳನ್ನು ನೀಡುತ್ತಿದ್ದರೆ , ಈ ಸಮತೋಲನ ಆಗುವ ಸಮಯದಲ್ಲಿ ಸಪ್ತಮದಲ್ಲಿ ರಾಹು ಮತ್ತು ರಾಶಿಯಲ್ಲಿ ಕೇತು ಇರುತ್ತಾರೆ. ಶನಿ ಮತ್ತು ಗುರು ಗ್ರಹ ಕೊಡುವ ಒಳ್ಳೆಯ ಫಲವನ್ನು ಈ ರಾಹು ಮತ್ತು ಕೇತು ಹಾಳು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ . ಆದರೆ ಒಂದು ಸಣ್ಣ ಸಮಸ್ಯೆಯನ್ನು ತರುತ್ತದೆ . ಒಂದು ರೀತಿಯ ಬ್ರಾಂತಿಯನ್ನು ಕೊಡುತ್ತವೆ .

ನಿಮಗೆ ತೊಂದರೆ ಕೊಡುವ ಸಾಧ್ಯತೆ ಇದೆ . ಸ್ವಲ್ಪ ಮಟ್ಟಿನ ಗೊಂದಲಗಳು ಶುರುವಾಗುತ್ತದೆ . ಜೀವನದಲ್ಲಿ ಕಿರಿ ಕಿರಿಗಳು ಶುರುವಾಗುತ್ತದೆ . ನೀವು ಮಾಡುವ ಕೆಲಸದಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ನೀವೇ ಹುಡುಕುವ ಹಾಗೆ ಆಗುತ್ತದೆ . ಈ ತರಹದ ಭಯಗಳು ನಿಮ್ಮನ್ನು ಕಾಡುತ್ತಿರುತ್ತವೆ . ನೀವು ಯಾವುದೇ ಕೆಲಸವನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು . ಕೆಲಸದಲ್ಲಿ ಏರುಪೇರು ಮಾಡುವ ಸಾಧ್ಯತೆ ಇರುತ್ತದೆ .ರಾಹು ಕೇತುವಿನ ವಿಚಾರದಲ್ಲಿ ಸ್ವಲ್ಪ ಎಚ್ಚರವಾಗಿ ಇರುವುದರಿಂದ ಬೇರೆ ಯಾವುದೇ ರೀತಿಯ ಸಮಸ್ಯೆಗಳು ಆಗುವುದಿಲ್ಲ .

Leave A Reply

Your email address will not be published.