ಈ ಬಾರಿ ಮಕರ ಸಂಕ್ರಾಂತಿ ಜನವರಿ 14 ಅಥವಾ 15 ಕ್ಕಾ?

0

ನಾವು ಈ ಲೇಖನದಲ್ಲಿ ಈ ಬಾರಿ ಮಕರ ಸಂಕ್ರಾಂತಿ ಜನವರಿ 14 ಅಥವಾ 15 ಕ್ಕಾ…? ಮತ್ತು ಇದರ ಇತಿಹಾಸವೇನು ..? ಎಂಬುದನ್ನು ತಿಳಿಯೋಣ . ಹಿಂದೂಗಳ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ದಿನಗಣನೆ ಆರಂಭವಾಗಿದೆ . ಜನವರಿ ತಿಂಗಳ ಮಧ್ಯಭಾಗದಲ್ಲಿ ಬರಲಿರುವ ಮಕರ ಸಂಕ್ರಾಂತಿಯನ್ನು ದೇಶದಾದ್ಯಂತ ಜನರು ಸಂಭ್ರಮದಿಂದ ಆಚರಿಸುತ್ತಾರೆ . ದೇಶದ ವಿವಿಧ ಭಾಗದಲ್ಲಿ ವಿವಿಧ ಹೆಸರುಗಳಿಂದ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ .

ಮಕರ ಸಂಕ್ರಾಂತಿಯ ಇತಿಹಾಸ : ಹಿಂದೂ ಪಂಚಾಂಗದ ಪ್ರಕಾರ ಸಂಕ್ರಾಂತಿ ಹಬ್ಬವನ್ನು ಪ್ರತಿವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ಎಂದು ಆಚರಿಸುತ್ತಾ ಬರಲಾಗಿದೆ . ಹಿಂದೂ ಶಾಸ್ತ್ರದ ಪ್ರಕಾರ ನಿರ್ಯಾಣ ಮಕರ ರಾಶಿಯನ್ನು ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ ಎನ್ನುತ್ತಾರೆ . ಬಹುತೇಕ ಪ್ರತಿ ವರ್ಷ ಜನವರಿ 14 ರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ . ಸಂಕ್ರಾಂತಿ ಹಬ್ಬವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸಲ್ಪಡುತ್ತದೆ .

ಹಿಂದುಗಳ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ದಿನಗಣನೆ ಆರಂಭವಾಗಿದೆ . ಜನವರಿ ತಿಂಗಳ ಮಧ್ಯಭಾಗದಲ್ಲಿ ಬರಲಿರುವ ಮಕರ ಸಂಕ್ರಾಂತಿಯನ್ನು ದೇಶದಾದ್ಯಂತ ಜನರು ಸಂಭ್ರಮದಿಂದ ಆಚರಿಸುತ್ತಾರೆ . ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸಲ್ಪಡುತ್ತದೆ . ತಮಿಳುನಾಡಿನಲ್ಲಿ ಮಕರ ಸಂಕ್ರಮಣವನ್ನು ಪೊಂಗಲ್ ಹೆಸರಿನಲ್ಲಿ ಆಚರಿಸಲಾಗುತ್ತಿದೆ .

ಗುಜರಾತ್ ಮತ್ತು ರಾಜಸ್ಥಾನದಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲ ಆರಂಭ ಎಂದೇ ಸಂಭ್ರಮಿಸಲಾಗುತ್ತದೆ .ಹರಿಯಾಣ ಹಾಗೂ ಪಂಜಾಬ್ ನಲ್ಲಿ ಮಕರ ಸಂಕ್ರಾಂತಿಯನ್ನು ಮಾಘ ಎಂದು ಕರೆಯುತ್ತಾರೆ .ಇನ್ನುಳಿದಂತೆ ಗೋವಾ , ಆಂಧ್ರಪ್ರದೇಶ , ಪಶ್ಚಿಮ ಬಂಗಾಳ , ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಕರ ಸಂಕ್ರಾಂತಿ ಅಥವಾ ಪುಷ್ಯ ಸಂಕ್ರಾಂತಿ ಎಂದು ಕರೆಯುತ್ತಾರೆ .

ಕರ್ನಾಟಕದಲ್ಲಿ ಮನೆಗಳಲ್ಲಿ ಎಳ್ಳು ಬೆಲ್ಲ ತಯಾರಿಸಿ , ಸುತ್ತಮುತ್ತ ಹಂಚುವುದು ಸಂಪ್ರದಾಯ . ಎಳ್ಳಿನ ಜೊತೆಗೆ ಬೆಲ್ಲದ ಹಚ್ಚು , ಹಣ್ಣು, ಕಬ್ಬಿನ ತುಂಡುಗಳನ್ನು ಕೊಡುತ್ತಾರೆ . ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ , ಎಳ್ಳು ಬೆಲ್ಲದೊಂದಿಗೆ ಸಂಬಂಧಿಕರನ್ನು ಭೇಟಿಯಾಗಿ , ಎಳ್ಳು ಬೆಲ್ಲ ವಿನಿಮಯ ಮಾಡಿಕೊಳ್ಳುತ್ತಾರೆ .

ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ಜನವರಿ 14 ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯ ಕಾಲವೆಂದು ಕರೆಯುತ್ತಾರೆ . ಕೇವಲ ಬದುಕುವುದಕ್ಕೆ ಮಾತ್ರವಲ್ಲ , ಈ ದಿನದಂದು ಕೊನೆಯುಸಿರೆಳೆದರೂ ಅವರಿಗೆ ಸ್ವರ್ಗ ಪ್ರಾಪ್ತಿ ಎಂಬ ನಂಬಿಕೆ ಇದೆ . ಅದಕ್ಕಾಗಿ ಮಹಾಭಾರತದಲ್ಲಿ ಭೀಷ್ಮ ದೇಹ ತೈಜಿಸಲು ಉತ್ತರಾಯಣ ಕಾಲದವರೆಗೂ ಶರಶಯ್ಯೆಯಲ್ಲಿ ಹರೀಶ್ಮರಣೆ ಮಾಡುತ್ತಾ ಕಾದಿದ್ದರೂ ಎಂಬ ಉಲ್ಲೇಖವಿದೆ .

2024ರಲ್ಲಿ ಮಕರ ಸಂಕ್ರಾಂತಿ ಜನವರಿ 14 ಅಥವಾ 15 ಕ್ಕಾ… ? ಪ್ರತಿ ವರ್ಷ ಜನವರಿ 14ರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ . ಆದರೆ 2024 ಈ ಬಾರಿ ಅಧಿಕ ವರ್ಷವಾಗಿದೆ . ( ಅಂದರೆ ಫೆಬ್ರವರಿ 29 ದಿನ ) ಈ ಹಿನ್ನೆಲೆಯಲ್ಲಿ 2024 ಜನವರಿ 15ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತಿದೆ . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಜನವರಿ 15ರಂದು ಸೂರ್ಯ ದೇವನು ಧನು ರಾಶಿಯಿಂದ ಹೊರಬಂದು , 2:50 ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾರೆ . ಆದ್ದರಿಂದ ಜನವರಿ 15ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ .

ಮಕರ ಸಂಕ್ರಾಂತಿಯ ಶುಭ ಮುಹೂರ್ತ : ಮಕರ ಸಂಕ್ರಾಂತಿಯ ದಿನಾಂಕ ಜನವರಿ 15 . ಮಕರ ಸಂಕ್ರಾಂತಿಯ ಪುಣ್ಯಕಾಲ : ಬೆಳಿಗ್ಗೆ 7:15 ಕ್ಕೆ ಆರಂಭವಾಗಿ ಸಂಜೆ 5:46 ಕ್ಕೆ ಕೊನೆಗೊಳ್ಳಲಿದೆ .ಮಕರ ಸಂಕ್ರಾಂತಿ ಮಹಾ ಪುಣ್ಯಕಾಲ :
ಬೆಳಿಗ್ಗೆ 7: 15 ರಿಂದ ಬೆಳಗ್ಗೆ 9 ಗಂಟೆ ವರೆಗೆ .

Leave A Reply

Your email address will not be published.