ಇಂತಹ ಬಟ್ಟೆಗಳನ್ನು ಧರಿಸಿದರೆ ದಾರಿದ್ರ್ಯ

ನಾವು ಈ ಲೇಖನದಲ್ಲಿ ಇಂತಹ ಬಟ್ಟೆಗಳನ್ನು ಧರಿಸುವುದರಿಂದ ದಾರಿದ್ರ್ಯ ಹೇಗೆ ಉಂಟಾಗುತ್ತದೆ ಎಂದು ತಿಳಿಯೋಣ . ಇಂತಹ ಬಟ್ಟೆಗಳನ್ನು ಧರಿಸಿದರೆ ದರಿದ್ರ ಎನ್ನುತ್ತದೆ ಶಾಸ್ತ್ರ ….! ಶಾಸ್ತ್ರದಲ್ಲಿ ಕೆಲವೊಂದು ರೀತಿಯ ಬಟ್ಟೆಗಳನ್ನು ಧರಿಸಬಾರದೆಂದು ಹೇಳಲಾಗಿದೆ . ಇಂತಹ ಬಟ್ಟೆಗಳನ್ನು ಧರಿಸುವುದರಿಂದ ಜೀವನದಲ್ಲಿ ಸಮಸ್ಯೆಗಳು ತಾಂಡವ ಮಾಡುತ್ತದೆ . ಶಾಸ್ತ್ರದ ಪ್ರಕಾರ , ನಾವು ಯಾವ ಬಟ್ಟೆಗಳನ್ನು ಧರಿಸಬಾರದು ….?
ನಾವು ಧರಿಸುವ ಬಟ್ಟೆಗಳು ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ .

ಎಂದರೆ ನೀವು ನಂಬುತ್ತೀರಾ …? ಹೌದು. ಕೆಲವೊಮ್ಮೆ ನಾವು ಧರಿಸುವ ಬಟ್ಟೆಗಳು ಕೂಡ ನಮ್ಮ ಜೀವನದ ಮೇಲೆ ಋಣಾತ್ಮಕ ಹಾಗೂ ಧನಾತ್ಮಕ ಪ್ರಭಾವ ಬೀರುತ್ತದೆ . ನಮ್ಮ ಶಾಸ್ತ್ರದಲ್ಲೂ ಇದರ ಬಗ್ಗೆ ಉಲ್ಲೇಖಗಳಿವೆ. ನಾವು ಮನೆಯಿಂದ ಹೊರಗಡೆ ಹೋಗುವಾಗ ಬಳಸುವ ಬಟ್ಟೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಶಾಸ್ತ್ರದಲ್ಲಿ ಹೇಳಲಾಗಿದೆ. ಶಾಸ್ತ್ರದ ಪ್ರಕಾರ, ನಾವು ಎಂತಹ ಬಟ್ಟೆಗಳನ್ನು ಧರಿಸಿ ಮನೆಯಿಂದ ಹೊರಗೆ ಹೋಗಬೇಕು…? ಎಂದರೆ,

1. ಹರಿದ ಜೇಬು : – ಶಾಸ್ತ್ರದ ಪ್ರಕಾರ, ನಾವು ಮನೆಯಿಂದ ಹೊರಗಡೆ ಹೋಗುವಾಗ ಹರಿದ ಜೇಬಿರುವ ಬಟ್ಟೆಗಳನ್ನು ಧರಿಸಬಾರದು . ಇಂತಹ ಬಟ್ಟೆಗಳನ್ನು ಧರಿಸುವುದರಿಂದ , ಹಣದ ಸಮಸ್ಯೆ ಎದುರಾಗಬಹುದು ಎಚ್ಚರವಾಗಿರಬೇಕು . ಹರಿದ ಜೇಬಿನಲ್ಲಿ ನಾವು ಹಣವನ್ನು ಇಟ್ಟಾಗ, ಅದು ಹೇಗೆ ಜೇಬಿನಲ್ಲಿ ನಿಲ್ಲುವುದಿಲ್ಲ . ಹಾಗೆ ಹರಿದ ಜೇಬಿನ ಬಟ್ಟೆಯನ್ನು ಧರಿಸಿದಾಗ , ನಮ್ಮ ಕೈಯಲ್ಲಿ ಹಣ ನಿಲ್ಲುವುದಿಲ್ಲ .

2 . ಹರಿದ ಬಟ್ಟೆ : – ಶಾಸ್ತ್ರಗಳಲ್ಲಿ ಹರಿದ ಜೇಬಿರುವ ಬಟ್ಟೆಯನ್ನು ಮಾತ್ರವಲ್ಲ , ಹರಿದ ಬಟ್ಟೆಯನ್ನು ಕೂಡ ಧರಿಸಬಾರದು ಎಂದು ಹೇಳಲಾಗಿದೆ . ಹರಿದ ಬಟ್ಟೆಯನ್ನು ಧರಿಸುವುದು ದಾರಿದ್ರ್ಯದ ಸಂಕೇತವಾಗಿದೆ . ಇಂತಹ ಬಟ್ಟೆಗಳನ್ನು ಧರಿಸುವುದರಿಂದ ದಾರಿದ್ರ ನಮ್ಮತ್ತ ಆಕರ್ಷಿತವಾಗುತ್ತದೆ . ಈ ಕಾರಣಕ್ಕಾಗಿ ನಾವು ಹರಿದ ಬಟ್ಟೆಗಳನ್ನು ಧರಿಸಬಾರದು .

3. ಸುಟ್ಟ ಬಟ್ಟೆ : – ವಾಸ್ತವವಾಗಿ ಶಾಸ್ತ್ರದಲ್ಲಿ ಯಾವುದೇ ರೀತಿಯ ಬಟ್ಟೆಗಳನ್ನು ಅಂದರೆ , ನಾವು ಉಪಯೋಗಿಸುವ ಬಟ್ಟೆಯನ್ನೇ ಆಗಿರಲಿ , ಉಪಯೋಗಿಸಿದ ಬಳಿಕವೇ ಆಗಿರಲಿ, ಆ ಬಟ್ಟೆಯನ್ನು ಹರಿದು ಹಾಕುವುದು ಅಥವಾ ಸುಡುವುದು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ . ಅನೇಕರು ಸುಟ್ಟ ಬಟ್ಟೆಯನ್ನು ಧರಿಸುವುದನ್ನು ನೀವು ನೋಡಿರಬಹುದು . ಇಂತಹ ತಪ್ಪುಗಳನ್ನು ಎಂದಿಗೂ ಮಾಡದಿರಿ. ಇಂತಹ ಬಟ್ಟೆಗಳನ್ನು ಧರಿಸುವುದು ಅಶುಭವೆಂದು ಹೇಳಲಾಗುತ್ತದೆ . ಎಲ್ಲಾದರೂ ಅಪ್ಪಿ- ತಪ್ಪಿ ಬಟ್ಟೆ ಸುಟ್ಟು ಹೋದರೂ , ಅಂತಹ ಬಟ್ಟೆಯನ್ನು ನಾವು ಧರಿಸಬಾರದು .

4 . ಬಣ್ಣ ಬಣ್ಣದ ಬಟ್ಟೆ :- ಸಾಮಾನ್ಯವಾಗಿ ನಾವು ಶುಭ ಸಮಾರಂಭಗಳಲ್ಲಿ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿರುವುದನ್ನು ನೋಡಿರುತ್ತೇವೆ . ಬಣ್ಣ ಬಣ್ಣದ ಬಟ್ಟೆ ಎಂದರೆ , ಒಂದೇ ಬಟ್ಟೆಯ ಮೇಲೆ ವಿವಿಧ ಬಣ್ಣಗಳಿರುವ ಬಟ್ಟೆಗಳನ್ನು ಧರಿಸಬಾರದು . ಇದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ . ಒಂದು ಅಥವಾ ಎರಡು ಬಣ್ಣಗಳ ಮಿಶ್ರಣವಿರುವ ಬಟ್ಟೆಯನ್ನು ಧರಿಸುವುದು ಉತ್ತಮ . ನೀವು ಕೂಡ ಶಾಸ್ತ್ರದಲ್ಲಿ ನಿಶಿದ್ಧವಾದ ಈ ಮೇಲಿನ ಬಟ್ಟೆಯ ನಿಯಮಗಳನ್ನು ಅನುಸರಿಸುತ್ತಿದ್ದರೆ , ಅದನ್ನು ಹಿಂದೆ ಬಿಟ್ಟುಬಿಡಿ. ಈ ಮೇಲೆ ಹೇಳಲಾದ ಬಟ್ಟೆಗಳನ್ನು ನೀವು ಧರಿಸದಿರುವುದೇ ಉತ್ತಮ . ಹಾಗೂ ಬೇರೆಯವರು ಧರಿಸಿದ ಬಟ್ಟೆಯನ್ನು
ಕೂಡ ನಾವು ಧರಿಸಬಾರದು ….. ಎಂದು ಹೇಳಲಾಗಿದೆ.

Leave a Comment