ಮಕರ ರಾಶಿ ವರ್ಷ ಭವಿಷ್ಯ 2024

0

ನಾವು ಈ ಲೇಖನದಲ್ಲಿ ಮಕರ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ .
ಈ ರಾಶಿಯವರಿಗೆ ಕೊನೆ ಹಂತದ ಸಾಡೇಸಾತಿ . ಅದರಲ್ಲೂ ಕೂಡ ಕೊನೆಯ ವರ್ಷ . ಜೀವನದಲ್ಲಿ ತುಂಬಾ ಸವಾಲುಗಳು , ಗೊಂದಲದ ಪರಿಸ್ಥಿತಿಗಳು , ವಿಪರೀತ ಖರ್ಚುಗಳು ಈ ತರಹದ ಸಮಸ್ಯೆಗಳೆಲ್ಲವೂ , ಒಂದು ಹಂತಕ್ಕೆ ಬಂದಿದೆ. ಶನಿ ದೇವರಿಗೆ ನಮಸ್ಕಾರ ಎಂದು ಹೇಳಿ ದೀಪ ಹಚ್ಚುವ ಸಮಯ ಬಂದಿದೆ . ಈ ಸಮಯ ಹೇಗಿರುತ್ತದೆ . ಮತ್ತು ಈ ಸಂದರ್ಭದಲ್ಲಿ ಏನನ್ನು ನಿರೀಕ್ಷೆ ಮಾಡಬಹುದು .

ಮತ್ತು ನಿಮಗೆ ಗುರು ತುಂಬಾ ಅನುಕೂಲಕರಾಗಿ ಇರುತ್ತದೆ. ಗುರುವಿನಿಂದ ನಿಮಗೆ ತುಂಬಾ ಪ್ರಯೋಜನ ಕೂಡ ಆಗುತ್ತದೆ . ಗುರು ಬಲದ ಪೂರ್ಣ ಆಶೀರ್ವಾದ ಈ ರಾಶಿಯವರಿಗೆ ಸಿಗಲಿದೆ . ಶನಿ ನಿಮ್ಮಿಂದ ದೂರ ಹೋಗುವುದು ಅಷ್ಟೇ ಅಲ್ಲ , 2024 ರಲ್ಲಿ ನೀವು ತುಂಬಾ ಬಲಶಾಲಿ ಆಗಬಹುದು . ರಾಹು ಕೂಡ ಈ ರಾಶಿಯವರಿಗೆ ಧನಾತ್ಮಕ ಶಕ್ತಿಯನ್ನು ನೀಡುತ್ತಾನೆ .ಮೊದಲೇ ಹೇಳಿದಂತೆ ನೀವು ಮೂರು ವಿಚಾರಗಳನ್ನು ಮೊದಲು ತಿಳಿದುಕೊಳ್ಳಬೇಕು . ಶನಿಯಿಂದ ಅಂದರೆ , ಸಾಡೇ ಸಾತಿ ಯಾವಾಗ ಮುಗಿಯುತ್ತದೆ ,

ನಿಮಗೆ ಧನಾತ್ಮಕ ಶಕ್ತಿ ಶುರುವಾಗಲು ಆರಂಭವಾಗುತ್ತದೆ ಎಂದು ಹೇಳಬಹುದು . ಅಂದರೆ ನೀವು ಜೀವನದಲ್ಲಿ ಸೋಲುತ್ತಿರುವ ಭಯ ಇದ್ದಾಗ , ಚೇತರಿಕೆ ಆಗುವ ಸಾಧ್ಯತೆ ಇರುತ್ತದೆ .ಅಂದರೆ ಮೊದಲಿಗಿಂತ ಜೀವನದಲ್ಲಿ ಪ್ರಗತಿ ಆಗುವ ಸಾಧ್ಯತೆ ಇದೆ . ಒಳ್ಳೆಯದರ ಜೊತೆಗೆ ಸಣ್ಣ ಪುಟ್ಟ ನಕಾರಾತ್ಮಕ ವಿಚಾರಗಳು ಇರುತ್ತವೆ. ಅಂದರೆ ಜೀವನದಲ್ಲಿ ನೀವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕು. ಸಣ್ಣ ಪುಟ್ಟ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದರಿಂದ ಪ್ರಗತಿ ಕಾಣಬಹುದು .

ಮಕರ ರಾಶಿಯ ಮಟ್ಟಿಗೆ ಶನಿ ತುಂಬಾ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ . ಇದು ರಾಶಿಯಾಧಿಪತಿ ಆಗಿರುವುದರಿಂದ , ಸಾಡೇ ಸಾತಿ ದೃಷ್ಟಿಯಿಂದ ಶನಿ ಪೂರ್ತಿಯಾಗಿ ಬದಲಾವಣೆಯಾಗಬೇಕು ಅಂದರೆ, 2025 ರವರೆಗೆ ಕಾಯಬೇಕು . ಇನ್ನೂ ಕಾಯಬೇಕಾ ಎಂಬ ಯೋಚನೆ ಬೇಡ . ಕುಂಡಲಿಯಲ್ಲಿ ಗ್ರಹಗಳ ಬಲಾಬಲ ಚೆನ್ನಾಗಿದ್ದರೆ , ನೀವು ನಿಮ್ಮ ಜೀವನದಲ್ಲಿ ಸತತವಾದ ಪ್ರಯತ್ನ ಹಾಕುತ್ತಿದ್ದರೆ , ನಿಮ್ಮ ವಿಚಾರದಲ್ಲಿ ಎಲ್ಲಾ ಗ್ರಹಗಳು ಒಳ್ಳೆಯದನ್ನೇ ಮಾಡುತ್ತವೆ ..

ಶನಿ ಕೂಡ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಗೆ ಮಾಡುತ್ತಾನೆ. ಪರಿವರ್ತನೆ ಅನ್ನೋದು ಬಹಳಷ್ಟು ಶುರು ವಾಗಿರುತ್ತದೆ . ಸಾಡೇ ಸಾತಿ ಅನ್ನೋದು ಅನುಭವಕ್ಕೆ ಬಾರದೆ ಇರುವ ಮಟ್ಟಿಗೆ ಜೀವನದಲ್ಲಿ ಮುಂದೆ ಹೋಗಿರುತ್ತೀರಾ . ನಿಮ್ಮ ಜೀವನದಲ್ಲಿ ಇದು ನಡೆಯುತ್ತಿಲ್ಲ ಅಂದರೆ , ಬರುವಂತಹ ಪ್ರಶ್ನೆಗಳಿಗೆ ನಿಧಾನವಾಗಿ ಉತ್ತರ ಸಿಗುತ್ತಾ ಹೋಗುತ್ತದೆ .ನಿಮ್ಮ ಮತ್ತು ಬೆಳಕಿನ ಮಧ್ಯೆ ಒಂದು ಪರದೆ ಇದೆ ಎನ್ನುವುದಾದರೆ , ಅದು ನಿಧಾನವಾಗಿ ಕರಗುತ್ತಾ ಹೋಗುತ್ತದೆ .

ಮಂಜು ಕರಗಿದಾಗ ನಿಮಗೆ ಪೂರ್ಣವಾದ ಪ್ರಕಾಶಮಾನ ಸಿಗುತ್ತದೆ . ವಿಶೇಷವಾಗಿ ಹಾಗೂ ಪರಿವರ್ತನೆ ಎಂದರೆ ನಿಮ್ಮ ಮಾನಸಿಕ ಮಟ್ಟದಲ್ಲಿ ಆಗುವ ಬದಲಾವಣೆ .ನಿಮ್ಮಲ್ಲಿ ಪ್ರೇರಣೆಯ ಕೊರತೆ ಇರುತ್ತದೆ .ಏನೋ ಒಂದು ಶಕ್ತಿ ನಿಮ್ಮನ್ನ ತಡೆಯುತ್ತಿರುತ್ತದೆ . ನೀವು ಮಾಡಲೇಬೇಕು ಅಂದುಕೊಂಡ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ . ನಿಮ್ಮ ಮನಸ್ಸು ತುಂಬಾ ಜಡವಾಗಿ ಇರುತ್ತದೆ .ನಿಮಗೆ ಜೀವನದಲ್ಲಿ ಚೈತನ್ಯ ಇರುವುದಿಲ್ಲ .ಜಡತ್ವ ಹೆಚ್ಚಾಗಿರುತ್ತದೆ .ಇನ್ನು ಮುಂದೆ ಈ ತರಹದ ಅಡ್ಡಿ ಆತಂಕಗಳು ಕಡಿಮೆಯಾಗುತ್ತದೆ .

ಈ ತರಹದ ಪ್ರೇರಣೆಗಳು ನಡೆಯುತ್ತವೆ ಸ್ವಲ್ಪ ಕಾಯಬೇಕು .ನಿಮ್ಮನ್ನು ನೀವು ಚುರುಕಾಗಿ ಇಟ್ಟುಕೊಳ್ಳಬೇಕು .ಅರ್ಧ ಪ್ರಯತ್ನ ನಿಮ್ಮಿಂದಲೇ ಆಗಬೇಕು ಇನ್ನರ್ಧ ದೇವರಿಗೆ ಬಿಡಬೇಕು .ಇವೆರಡು ಸೇರಿದಾಗ ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಹೊರ ಹೊಮ್ಮಲು ಸಾಧ್ಯ ಆಗುತ್ತದೆ. ಶನಿ ದ್ವಿತೀಯದಲ್ಲಿ ಇದ್ದಾಗ , ಹಣದ ನಷ್ಟ ಹೆಚ್ಚಾಗಿ ಆಗುತ್ತದೆ .ಎಚ್ಚರಿಕೆಯಿಂದ ಇರಬೇಕು .ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ . ಆದ್ದರಿಂದ ಮಕ್ಕಳ ವಿಚಾರದಲ್ಲೂ ಕೂಡ ಎಚ್ಚರಿಕೆಯಿಂದ ಇರಬೇಕು .

ಎಷ್ಟು ಸಾಧ್ಯವೋ ಅಷ್ಟು ಜೋಪಾನವಾಗಿ ಮಕ್ಕಳನ್ನು ನೋಡಿಕೊಳ್ಳಬೇಕು .ಇಲ್ಲವಾದಲ್ಲಿ ಕುಟುಂಬದವರ ಜೊತೆ ಎಚ್ಚರಿಕೆಯಿಂದ ನೋಡಿಕೊಳ್ಳಲು ಹೇಳಬೇಕು . ಗುರುವಿನಿಂದ ಹೇಳುವ ಫಲಗಳು ಬಹಳ ಅದ್ಭುತವಾಗಿ ಇರುತ್ತದೆ . ಮೇ ತಿಂಗಳವರೆಗೆ ಗುರು ಅಷ್ಟಾಗಿ ಚೆನ್ನಾಗಿರುವುದಿಲ್ಲ .ಮೇ ತಿಂಗಳ ನಂತರ , ಗುರುರಾಯರು ವೃಷಭ ರಾಶಿಗೆ ಹೋಗುತ್ತಾರೆ . ಆಗ ಪಂಚಮ ಭಾವ ಆಗುತ್ತದೆ .ಪಂಚಮ ಅಂದರೆ ಇದು ತ್ರಿಕೋನವಾಗಿದ್ದು , ಇದು ಗುರುವಿಗೆ ಅತ್ಯಂತ ಖುಷಿ ಕೊಡುವ ಸ್ಥಾನ ಆಗುತ್ತದೆ .

ಆದ್ದರಿಂದ ಗುರು ಹೃದಯದಿಂದ ಆಶೀರ್ವಾದವನ್ನು ಈ ರಾಶಿಯವರ ಮೇಲೆ ಮಾಡುತ್ತಾನೆ .ಗುರುವಿನಿಂದ ಒಂದು ದೊಡ್ಡದಾದ ಪರಿವರ್ತನೆ ಕೂಡ ಆಗುತ್ತದೆ .ಮಕ್ಕಳಿಂದ ಖುಷಿ ಅಥವಾ ಮಕ್ಕಳನ್ನು ಪಡೆದುಕೊಳ್ಳುವುದು .ಸಹಾಯ ಮಾಡುವ ವ್ಯಕ್ತಿಗಳು ನಿಮ್ಮ ಬಳಿಯೇ ಬರುತ್ತಾರೆ . ದೈನಂದಿನ ವಿಚಾರದಲ್ಲಿ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು .ಅಂದರೆ ಚುರುಕಾಗಿ ಇರಬೇಕು . ಮತ್ತು ಈ ತರಹದ ಒಂದು ಸಾಮರ್ಥ್ಯವನ್ನು ಗುರುತಿಸುವ ಹಾಗೆ ಇರಬೇಕು .

ಅವರಾಗಿ ಅವರೇ ಬಂದು ನಿಮ್ಮನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ . ರಾಜಾನುಗ್ರಹ ಆಗುವ ಸಾಧ್ಯತೆ ಇದೆ .ಅಂದರೆ ಸರ್ಕಾರಿ ಕೆಲಸ ಸಿಗುವಂತದ್ದು .ಗೌರವಗಳು ಹಿಮ್ಮಡಿಯಾಗುತ್ತದೆ .ಪ್ರಶಸ್ತಿ ಪುರಸ್ಕಾರಗಳು ಕೂಡ ದೊರೆಯುತ್ತದೆ . ಸರ್ಕಾರದಿಂದ ಸಹಕಾರ ಸಹಾಯಗಳು , ಅನುದಾನಗಳು , ಯೋಜನೆಗಳು , ಸಾಲ – ಸೌಲಭ್ಯಗಳು ಈ ತರಹದ ವಿಚಾರಗಳಲ್ಲಿ ಅನುಕೂಲ ಹೆಚ್ಚಾಗಿ ಇರುತ್ತದೆ . ಮುಖ್ಯವಾಗಿ ರಾಹು ತೃತೀಯದಲ್ಲಿ ಇರುವುದರಿಂದ , ಖುಷಿಯನ್ನು ಕೊಡುತ್ತಾನೆ. ದುಃಖ ದೂರವಾದಾಗ ಮನಸ್ಸಿಗೆ ಒಂದು ರೀತಿಯ ಪ್ರೇರಣೆ ಸಿಗುತ್ತದೆ . ಸ್ವಲ್ಪ ಚುರುಕುತನ ಹೆಚ್ಚಾಗುತ್ತದೆ.

ನಿಮ್ಮ ಖುಷಿಯನ್ನು ನೀವು ಪಡೆಯುವುದಕ್ಕೆ , ಈ ಸಮಯದಲ್ಲಿ ಸಾಧ್ಯವಾಗುತ್ತದೆ ಎಂದು ಹೇಳಬಹುದು .ಏಕೆಂದರೆ ರಾಹುವಿನಿಂದ ಒಂದು ರೀತಿಯ ಅಂತಃಕರಣ ಬರುತ್ತದೆ. ಅಂದರೆ ನಿಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ . ನಾವು ದುಃಖದಲ್ಲಿ ಇರುವಾಗ ಯಾವುದು ಕೂಡ ನಮ್ಮ ಕಣ್ಣಿಗೆ ಕಾಣುವುದಿಲ್ಲ . ಈ ರಾಹು ಗ್ರಹಕ್ಕೆ ಸತತವಾಗಿ ಧನಾತ್ಮಕವಾದ ಶಕ್ತಿಯನ್ನು ಕೊಡುವ ತಾಕತ್ತು ಇರುತ್ತದೆ . ಅಂದರೆ ನಮಗೆ ನಾವೇ ಧೈರ್ಯವನ್ನು ತಂದುಕೊಳ್ಳುವ ಗುಣ ಇರಬೇಕು .

ಇಂಥ ಒಂದು ಧೈರ್ಯವನ್ನು ನಿಮಗೆ ರಾಹು ಗ್ರಹದಿಂದ ಸಿಗುತ್ತದೆ .ನಿಮ್ಮ ರಾಶಿಯಿಂದ ಶನಿ ದೂರವಾದಾಗ ನಿಮ್ಮಲ್ಲಿ ಗಟ್ಟಿತನ ಹೆಚ್ಚಾಗುತ್ತದೆ. ಈ ಧೈರ್ಯ ಅನ್ನುವುದಕ್ಕೆ ರಾಹು ಈ ರಾಶಿಯವರಿಗೆ ಒಂದು ಗಟ್ಟಿಯಾದ ಅಡಿಪಾಯವನ್ನು ಹಾಕಿ ಕೊಡುತ್ತಾನೆ .ಈ ರಾಶಿಯವರಿಗೆ ಕೇತು ಅಷ್ಟೊಂದು ಚೆನ್ನಾಗಿ ಇರುವುದಿಲ್ಲ .ಒಟ್ಟಾರೆಯಾಗಿ ಹೇಳುವುದಾದರೆ , ಕೇತುವಿನಿಂದ ನಿಮಗೆ ಏರಿಳಿತಗಳು ಕಂಡುಬರುತ್ತದೆ ಎಂದು ಹೇಳಬಹುದು . ನಿಮಗೆ ಹೆಚ್ಚಿನ ಧೈರ್ಯ ಬೇಕಾಗುತ್ತದೆ .

ಹಣಕಾಸಿನ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು . ಮತ್ತು ಗಂಭೀರವಾಗಿ ಇರಬೇಕು . ನೀವು ಸ್ವಲ್ಪ ಹಣಕಾಸನ್ನು ಕೂಡಿಡಬೇಕು .ಮುಂದೆ ಬರುವ ಸವಾಲುಗಳಿಗೆ ಸಹಾಯವಾಗುತ್ತದೆ .ಹಾಗೆ ರಾಹುವಿನಿಂದ ಸಾಹಸ ಮಾಡುವ ಯೋಚನೆ ನಿಮ್ಮಲ್ಲಿ ಬರುತ್ತದೆ .ಶನಿ ಕೂಡ ಒಂದು ಮಟ್ಟಿಗೆ ಪ್ರೇರಣೆಯನ್ನು ನೀಡುತ್ತಾನೆ .ಇವೆರಡು ವಿಚಾರಗಳಿಂದ ಹಣಕಾಸಿನ ಹೂಡಿಕೆ ಮಾಡಲು ಅವಕಾಶವನ್ನು ಮಾಡಿಕೊಡುತ್ತದೆ . ಆದರೆ , ಎಚ್ಚರಿಕೆಯಿಂದ ಮಾಡಬೇಕು .ಇದು ವ್ಯವಹಾರಸ್ತರಿಗೆ ಅನ್ವಯಿಸುತ್ತದೆ .

ಕೆಲಸ ಮಾಡುವವರಿಗೆ ಆದರೆ ಕೆಲಸಗಳು ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ .ಜೀವನದಲ್ಲಿ ಸವಾಲುಗಳು ಎದುರಾಗುತ್ತದೆ . ಕಲಿಯಬೇಕಾದ ಹೊಸ ವಿಚಾರಗಳು ಬರುವ ಸಾಧ್ಯತೆ ಇದೆ . ನೀವು ಬೇರೆಯವರಿಗೆ ಹೊಂದಿಕೊಳ್ಳುವ ಗುಣ ಇರಬೇಕು .ನೀವು ಬೇರೆಯವರಿಗೆ ಹೊಂದಿಕೊಂಡು ಹೋದಾಗ ಸಮಸ್ಯೆಗಳು ಸಹಜವಾಗಿ ನಿವಾರಣೆ ಆಗುತ್ತದೆ . ಸಾಡೇಸಾತಿ ಇನ್ನು ಮುಗಿದಿಲ್ಲದ ಕಾರಣ ಪದೇಪದೇ ದುಃಖಗಳು ಎದುರಾಗುತ್ತಿರುತ್ತದೆ .ಮನಸ್ಸು ಪದೇ – ಪದೇ ಹದಗೆಡುತ್ತಿರುತ್ತದೆ . ಅದನ್ನು ನೀವೇ ಮುಂದೆ ಹೋಗುವ ಹಾಗೆ ಮುನ್ನಡೆಸಬೇಕು . ಒಳ್ಳೆಯ ವಿಚಾರಗಳನ್ನು ನೀವು ಆಲೋಚನೆ ಮಾಡಬೇಕು . ಸಣ್ಣ ಪುಟ್ಟ ವಿಚಾರಗಳಿಗೆ ಸಮಾಧಾನ ತಂದುಕೊಂಡು ಖುಷಿ ಪಡಬೇಕು .
ಪ್ರತಿಕೂಲ ಪರಿಸ್ಥಿತಿಯಲ್ಲೂ ಒಂದು ಒಳ್ಳೆಯ ವಿಚಾರವನ್ನು ನೆನಪಿಗೆ ತಂದುಕೊಂಡು ಮನಸ್ಸನ್ನ ನಿಮ್ಮತ್ತ ಎಳೆದುಕೊಂಡು ಬರಬೇಕು . ನಿಮ್ಮ ಮನಸ್ಸನ್ನು ನೀವು ಧನಾತ್ಮಕ ಚಿಂತನೆಯ ಕಡೆಗೆ ಎಳೆದು ತರಬೇಕು . ನಿಮ್ಮ ಮನಸ್ಸಿನಲ್ಲಿ ಶುಭ ವಿಚಾರಗಳೇ, ಪದೇ ಪದೇ ಬರುತ್ತಿರಬೇಕು . ಕೆಟ್ಟ ವಿಚಾರಗಳನ್ನು ನಿಮ್ಮ ಮನಸ್ಸಿಗೆ ತೆಗೆದುಕೊಳ್ಳಬಾರದು . ಸಾಡೇ ಸಾತಿ ಇರುವವರು ನಮ್ಮ ದೈನಂದಿನ ಜೀವನ ಶೈಲಿಯಲ್ಲಿ , ಬದಲಾವಣೆ ಮಾಡಿಕೊಳ್ಳಬೇಕು. ಅಂದರೆ ಬೆಳಗ್ಗೆ ಬೇಗ ಹೇಳುವುದು ,

ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು , ಸಾಕಷ್ಟು ವಿಶ್ರಾಂತಿ , ಆರೋಗ್ಯ ಕಾಪಾಡಿಕೊಳ್ಳುವುದು , ದುಶ್ಚಟಗಳಿಂದ ದೂರ ಇರುವುದು , ಇಂತಹ ಎಲ್ಲಾ ವಿಚಾರಗಳನ್ನು ನೀವು ಬಿಟ್ಟು ಸರಿಯಾದ ದಾರಿಯಲ್ಲಿ ಹೋಗುವುದನ್ನು ನೀವು ಪ್ರಯತ್ನ ಮಾಡುತ್ತಿರುತ್ತೀರಾ . ಇವುಗಳನ್ನು ನೀವು ಮುಂದುವರಿಸುತ್ತಾ , ಹೋಗುವುದರಿಂದ ಇಂದಲ್ಲ ನಾಳೆ ನಿಮಗೆ ಒಳ್ಳೆಯ ರೀತಿಯ ಫಲ ಸಿಕ್ಕೆ ಸಿಗುತ್ತದೆ ಎಂದು ಹೇಳಬಹುದು .ನಿಮ್ಮ ಜೀವನದಲ್ಲಿ ಧನಾತ್ಮಕ ವಿಚಾರಗಳೇ ತುಂಬಿರಲಿ ಎಂದು ಹೇಳಬಹುದು

Leave A Reply

Your email address will not be published.