ಪ್ರತಿನಿತ್ಯ ರಾಗಿ ಅಂಬಲಿಯನ್ನು ಕೊಡುವುದರಿಂದ ಆಗುವ ಲಾಭಗಳು

0

ಮೊದಲೆಲ್ಲಾ ಉಪಯೋಗಿಸುತ್ತಿದ್ದ ರಾಗಿ ಮುದ್ದೆ , ರಾಗಿ ಅಂಬಲಿ, ರಾಗಿ ಗಂಜಿ, ಮುಂತಾದ ರಾಗಿಯಿಂದ ಮಾಡುವ ಪದಾರ್ಥಗಳು ಈಗ ನಗರ ಪ್ರದೇಶಗಳಲ್ಲೂ ತುಂಬಾ ಪ್ರಚಲಿತದಲ್ಲಿವೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚಿನ ಉಷ್ಣದಿಂದಾಗಿ ದೇಹವು ನಾನಾ ಬಾಧಿಗೆ ಒಳಗಾಗುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡಲು ತಂಪು ಪಾನೀಯಗಳನ್ನು ಸೇವಿಸಿದರೇ ಆರೋಗ್ಯಕ್ಕೆ ಮತ್ತಷ್ಟು ಹಾನಿಕಾರಕವಾಗುತ್ತದೆ.

ಹೀಗಾಗಿ ದೇಹಕ್ಕೆ ತಂಪು ನೀಡುವ ರಾಗಿಯಿಂದ ಮಾಡಿದ ಆಹಾರ ಬೇಸಿಗೆ ಕಾಲಕ್ಕೆ ಉತ್ತಮ ಆಹಾರವಾಗಿದೆ. ಇಂದಿನ ಲೇಖನದಲ್ಲಿ ರಾಗಿ ಅಂಬಲಿಯನ್ನು ಸೇವಿಸುವುದರಿಂದ ಆಗುವ ಲಾಭಗಳನ್ನು ತಿಳಿಸಿಕೊಡುತ್ತೇವೆ.
ರಾಗಿಯು ದೇಹವನ್ನು ಬಲಪಡಿಸುವ ಆಹಾರವಾಗಿದೆ. ಇದು ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಹೆಚ್ಚಾಗಿ ನೀಡುವುದಲ್ಲದೇ ಕೊಬ್ಬನ್ನು ಸಹ ಕರಗಿಸುತ್ತದೆ.

ಇದರಲ್ಲಿಯುವ ಕ್ಯಾಲ್ಸಿಯಂ, ಪ್ರೊಟೀನ್, ಮೂಳೆಗಳನ್ನ ಬಲಪಡಿಸುತ್ತದೆ. ವಯಸ್ಸಾದವರು ರಾಗಿ ಗಂಜಿಯನ್ನು ಸೇವನೆ ಮಾಡುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಅದರಲ್ಲಿರುವ ಕ್ಯಾಲ್ಸಿಯಂ, ಪ್ರೊಟೀನ್ ಅವರ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಸಕ್ಕರೆಯನ್ನು ಕಾಯಿಲೆಯನ್ನು ನಿಯಂತ್ರಿಸುತ್ತದೆ. ಪ್ರಪಂಚದಾದ್ಯಂತ ಸಕ್ಕರೆ ಕಾಯಿಲೆಯು ಹರಡಿಕೊಂಡಿದೆ. ರಾಗಿಯಲ್ಲಿರುವ ಮೆಗ್ನೇಷಿಯಂ ಅಂಶವು ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲೋಕೋಶ್ ಅಂಶಗಳನ್ನು ಸಮತೋಲನದಲ್ಲಿರಿಸುತ್ತದೆ.

ರಾಗಿ ಗಂಜಿಯನ್ನು ಸೇವನೆ ಮಾಡುವವರಲ್ಲಿ ಸಕ್ಕರೆ ಅಂಶವು ಸಮತೋಲನದಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ಆಹಾರಗಳ ಕ್ರಮದಿಂದಾಗಿ ಮಕ್ಕಳಿಗೆ ಸರಿಯಾದ ವಿಟಮಿನ್, ಪ್ರೋಟೀನ್ ಇರುವ ಆಹಾರಗಳು ಸಿಗುತ್ತಿಲ್ಲ ಅಂತಹ ಮಕ್ಕಳು ಜೀವಸತ್ವಗಳ ಕೊರತೆಯಿಂದ ನರಳಬೇಕಾಗುತ್ತದೆ. ಇಂತಹ ಮಕ್ಕಳಿಗೆ ರಾಗಿ ಗಂಜಿಯನ್ನು ಸೇವನೆ ಮಾಡಿಸುವುದರಿಂದ ಜೀವಸತ್ವದ ಕೊರತೆಯನ್ನು ಕಡಿಮೆ ಮಾಡುತ್ತದೆ.

ಇದರಲ್ಲಿರುವ ಮೆಗ್ನೇಷಿಯಂ ಅಂಶವು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ಹೃದಯಘಾತದಿಂದ ಉಂಟಾಗುವ ಪಾರ್ಶ್ವವಾಯುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಮ್ಮ ದೇಹದಲ್ಲಿರುವ ವಿಷ ಆಮ್ಲವನ್ನು ತೆಗೆದು ಹಾಕಲು ರಾಗಿಯು ಅತ್ಯುತ್ತಮ ಆಹಾರವಾಗಿದೆ. ರಾಗಿ ಅಂಬಲಿಯಿಂದ ನಮ್ಮ ತಲೆಕೂದಲು ಚೆನ್ನಾಗಿರುತ್ತದೆ ಮತ್ತು ವಿಟಮಿನ್ ಡಿ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೇ ರಾತ್ರಿ ವೇಳೆ ರಾಗಿಯಿಂದ ತಯಾರಿಸಿದ ಊಟವನ್ನು ಮಾಡುವುದರಿಂದ ಸುಖವಾದ ನಿದ್ದೆ ಬರುತ್ತದೆ.

Leave A Reply

Your email address will not be published.