ಮನೆಯಿಂದ ಮೊದಲು ಇವುಗಳನ್ನು ಹೊರಗೆ ಹಾಕಿ ಉದ್ದಾರ ತಾನಾಗಿಯೇ ಆಗುತ್ತೆ

0

ನಾವು ಈ ಲೇಖನದಲ್ಲಿ ಮನೆಯಿಂದ ಇವುಗಳನ್ನು ಹೊರಗೆ ಹಾಕಿ ಉದ್ಧಾರ ಹೇಗೆ ಆಗುತ್ತದೆ ಎಂದು ಇಲ್ಲಿ ನೋಡೋಣ . ಮನೆಯಿಂದ ಮೊದಲು ಇವುಗಳನ್ನು ಹೊರಗೆ ಹಾಕಿ , ಉದ್ಧಾರ ತಾನಾಗಿಯೇ ಆಗುತ್ತೆ …..!
ಮನೆಯಲ್ಲಿ ಇಂತಹ ವಸ್ತುಗಳನ್ನು ಇಡಲೇಬಾರದು . ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ .ಯಾಕೆ ಗೊತ್ತಾ …?ಇಂತಹ ವಸ್ತುಗಳು ಮನೆಯಲ್ಲಿದ್ದರೆ ಏನಾಗುತ್ತೆ … ಇದು ನಮ್ಮ ಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ನೋಡೋಣ .

ನಮ್ಮ ಶಾಸ್ತ್ರದಲ್ಲಿ ಮನೆಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಉಲ್ಲೇಖಿಸಲಾಗಿದೆ . ಈ ವಿಚಾರಗಳನ್ನು ನಾವು ಅಳವಡಿಸಿಕೊಳ್ಳುವುದರಿಂದ , ಶಾಂತಿ , ಸಂತೋಷ ಮತ್ತು ಸಕಾರಾತ್ಮಕತೆಯನ್ನು ಪಡೆದುಕೊಳ್ಳಬಹುದು . ಒಂದು ವೇಳೆ ನೀವು ಈ ನಿಯಮಗಳನ್ನು ಅಲ್ಲಗಳೆದರೆ, ವಾಸ್ತುದೋಷ ಸೇರಿದಂತೆ , ಇನ್ನಿತರ ಸಮಸ್ಯೆಗಳು ನಿಮ್ಮ ಮನೆಯನ್ನು ಆಗಮಿಸುತ್ತದೆ . ಅನೇಕ ಬಾರಿ ಜನರು ತಮ್ಮ ಮನೆಯಲ್ಲಿ ಇಂತಹ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದು , ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ವಸ್ತುಗಳು ಮನೆಗೆ ಅಶುಭವಾಗಿ ಇರುತ್ತದೆ . ಮನೆಯಲ್ಲಿ ಎಂತಹ ವಸ್ತುಗಳನ್ನು ಇಟ್ಟುಕೊಳ್ಳಬಾರದು ಗೊತ್ತಾ….?

ಮುಳ್ಳಿನ ಸಸ್ಯ : ಸಾಮಾನ್ಯವಾಗಿ ಜನರು ತಮ್ಮ ಮನೆಗಳನ್ನು ಬಳ್ಳಿ ಹಾಗೂ ಸಸ್ಯಗಳಿಂದ ಅಲಂಕರಿಸಲು ಇಷ್ಟಪಡುತ್ತಾರೆ . ಆದರೆ ಮನೆಯಲ್ಲಿ ತಿಳಿಯದೆ ಇಂತಹ ಗಿಡಗಳನ್ನು ನೆಡುವುದರಿಂದ ನಕಾರಾತ್ಮಕ ಶಕ್ತಿಗಳ ಕಂಪನ ಹೆಚ್ಚಾಗುವ ಸಾಧ್ಯತೆ ಇದೆ . ಮನೆಯಲ್ಲಿ ನೀವು ಕಳ್ಳಿ ಗಿಡಗಳನ್ನು ನೆಡಬಾರದು. ಇದನ್ನು ವಾಸ್ತು ಶಾಸ್ತ್ರದಲ್ಲೂ ಹೇಳಲಾಗಿದೆ. ಏಕೆಂದರೆ ಈ ಸಸ್ಯವು ನಿಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿ ಮತ್ತು ತೊಂದರೆಗಳನ್ನು ತರುತ್ತದೆ . ಆದ್ದರಿಂದ , ನಿಮ್ಮ ಮನೆಯಲ್ಲಿ ಕಳ್ಳಿ ಗಿಡವಿದ್ದರೆ ತಕ್ಷಣ ಅದನ್ನು ತೆಗೆಯಬೇಕು .

ಹಳೆಯ ಪತ್ರಿಕೆಗಳು :ಕೆಲವರು ಹಳೆಯ ದಿನಪತ್ರಿಕೆಗಳು ಮುಂದೊಂದು ದಿನ ಉಪಯೋಗಕ್ಕೆ ಬರಬಹುದು , ಎಂದುಕೊಂಡು ಮನೆಗಳಲ್ಲಿ ಇಟ್ಟುಕೊಳ್ಳುತ್ತಾರೆ . ಆದರೆ ಶಾಸ್ತ್ರದ ಪ್ರಕಾರ ಹಳೆಯ ದಿನಪತ್ರಿಕೆಗಳು ಮತ್ತು ಜಂಕ್ ನಿಮ್ಮ ಮನೆಗೆ ನಕರಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು. ಏಕೆಂದರೆ , ಈ ವಸ್ತುಗಳ ಮೇಲೆ ಧೂಳು ಮತ್ತು ಕೊಳಕು ಸಂಗ್ರಹವಾಗಬಹುದು . ಇದು ನಿಮ್ಮ ಕುಟುಂಬದಲ್ಲಿ ನಕಾರಾತ್ಮಕ ಭಾವನೆಗಳನ್ನು ಮತ್ತು ಅಪಶ್ರುತಿಗಳನ್ನು ಉಂಟುಮಾಡಬಹುದು .ಆದ್ದರಿಂದ ಹಳೆಯ ಪತ್ರಿಕೆಗಳು ಮತ್ತು ಜಂಕ್ ಗಳನ್ನು ಮನೆಯಿಂದ ಹೊರಗೆ ಹಾಕಬೇಕು.

ಮುರಿದ ಬೀಗ : ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಮುರಿದ ಬೀಗಗಳನ್ನು ಇಡಬಾರದು . ಇಂತಹ ಬೀಗಗಳು ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಮತ್ತು ಅಡೆತಡೆಗಳನ್ನು ತರಬಹುದು.. ಅಂತಹ ಬೀಗಗಳು ವೃತ್ತಿ ಜೀವನಕ್ಕೂ ಅಡ್ಡಿ ಆಗಬಹುದು ಎನ್ನುವ ನಂಬಿಕೆ ಇದೆ. ಆದ್ದರಿಂದ ಈ ನಕಾರಾತ್ಮಕ ಪರಿಣಾಮವನ್ನು ತಪ್ಪಿಸಲು ಮುರಿದ ಬೀಗಗಳನ್ನು ಇಟ್ಟುಕೊಳ್ಳಬೇಡಿ .

ನಿಂತು ಹೊಂದ ಗಡಿಯಾರ : ಶಾಸ್ತ್ರದ ಪ್ರಕಾರ ಹಾಳಾದ ಅಥವಾ ನಿಂತು ಹೋದ ಗಡಿಯಾರವನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ . ನಿಂತ ಗಡಿಯಾರವನ್ನು ನಿಶ್ಚಲ ತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ . ಆದ್ದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ನಿಮ್ಮ ಮನೆಯಲ್ಲಿರುವ ಎಲ್ಲಾ ಗಡಿಯಾರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ನೋಡಿಕೊಳ್ಳಬೇಕು .

ದೇವರ ಈ ವಿಗ್ರಹ : ಹಳೆಯದಾದ ಅಥವಾ ಒಡೆದ ದೇವರ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ , ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸುತ್ತವೆ .ಎನ್ನುವ ನಂಬಿಕೆ ಇದೆ .ಇದಲ್ಲದೆ ಮನೆಯಲ್ಲಿಯೂ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಆದ್ದರಿಂದ ಹಳೆಯ ಅಥವಾ ಮುರಿದ ವಿಗ್ರಹವನ್ನು ಎಂದಿಗೂ ಮನೆಯಲ್ಲಿ ಇಡಬಾರದು .

Leave A Reply

Your email address will not be published.