ನಾವು ಈ ಲೇಖನದಲ್ಲಿ ಕನ್ಯಾ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಫೆಬ್ರವರಿ ತಿಂಗಳ ಮಟ್ಟಿಗೆ ನೋಡುವುದಾದರೆ , ಒಂದು ವಿಷಯದ ಸುತ್ತ ಒಟ್ಟಾರೆಯಾದ ಗಮನ ಇರುತ್ತದೆ. ಜೀವನದ ಸಂದರ್ಭಗಳು ಕೂಡ ಅದೇ ತರ ಬರಬಹುದು. ಅಥವಾ ಅಂತಹ ಸಂದರ್ಭಗಳನ್ನು ನೀವು ಸೃಷ್ಠಿ ಮಾಡಿಕೊಳ್ಳಬಹುದು. ಕೆಲವರು ತುಂಬಾ ಸಾಮರ್ಥ್ಯ ಉಳ್ಳವರು ಆಗಿರುತ್ತಾರೆ. ಒಂದು ಕಡೆ ಹಣ ಗಳಿಸುತ್ತಿದ್ದರೆ, ಆ ಹಣವನ್ನು ಒಂದಲ್ಲಾ ಒಂದು ರೀತಿಯಲ್ಲಿ ಹೂಡಿಕೆ ಮಾಡುವುದರಲ್ಲಿ ತೊಡಗಿರುತ್ತಾರೆ. ವಿಶೇಷವಾಗಿ
ಚಿತ್ತಾ ನಕ್ಷತ್ರದ ವ್ಯಕ್ತಿಗಳು ತುಂಬಾ ಬಹು ಮುಖ ಪ್ರತಿಭೆಗಳು ಆಗಿರುತ್ತಾರೆ. ಬುಧ ಗ್ರಹ ಬಲವಾಗಿ ಇದ್ದಾಗ , ಕ್ರಿಯಾತ್ಮಕವಾಗಿ ಸ್ಪರ್ಧಿಸುವ ಗುಣ ಇರುತ್ತದೆ. ಹಣಕಾಸಿನ ವಿಷಯದಲ್ಲಿ ಚೆನ್ನಾಗಿ ತಿಳಿದು ಕೊಂಡಿರುತ್ತಾರೆ. ಒಂದಲ್ಲಾ ಹತ್ತು ವಿಚಾರಗಳಲ್ಲಿ ಯಶಸ್ಸನ್ನು ಹುಡುಕುತ್ತಾರೆ. ಸಾಧಾರಣವಾಗಿ ತಮ್ಮ ಕೆಲಸ ಕಾರ್ಯಗಳನ್ನು ಹೇಗೆ ಬರುತ್ತದೆ ಹಾಗೆ ನಡೆಸಿಕೊಂಡು ಹೋಗುವುದು . ಇದರಲ್ಲಿ ಪ್ರಶಂಸೆಯನ್ನು ಪಡೆಯುತ್ತಾರೆ. ಈ ರಾಶಿಯವರ ಪೂರ್ತಿಯಾದ ಗಮನ ಯಶಸ್ಸಿನ ಸುತ್ತಲೂ ಸುತ್ತುತ್ತಿರುತ್ತದೆ .
ಗೃಹಿಣಿಯರಿಗೂ ಕೂಡ ಜೀವನದಲ್ಲಿ ಬಹಳ ಪ್ರಾಮುಖ್ಯತೆ ಇರುತ್ತದೆ . ಮಾಡುವ ಕೆಲಸವನ್ನು ಹಚ್ಚು ಕಟ್ಟಾಗಿ ಮಾಡುವುದು . ಖುಷಿ ನೆಮ್ಮದಿ ಕೂಡ ಒಂದು ರೀತಿಯ ಯಶಸ್ಸು . ಯಶಸ್ಸು ಸಿಗಬೇಕು ಎಂದರೆ , ಯಾವಾಗಲೂ ನಾವು ಕೆಲಸದಲ್ಲಿ ತೊಡಗಿರಬೇಕು. ಜೊತೆಗೆ ನಮ್ಮ ಪ್ರಯತ್ನ ಕೂಡ ಇರಬೇಕು . ಆದರೆ ನಿಮಗೆ ನೀವು ನಿರೀಕ್ಷೆ ಮಾಡಿದ ಮಟ್ಟಕ್ಕೆ ಯಶಸ್ಸು ಸಿಗುತ್ತಿಲ್ಲ ಅಂತ ನಿಮಗೇ ಗೊತ್ತಾಗುತ್ತದೆ . ಬಹಳಷ್ಟು ಜನರು ಜೀವನದಲ್ಲಿ ಸವಾಲುಗಳನ್ನು ಎದುರಿಸುತ್ತಾರೆ .
ಪ್ರಗತಿ ಕುಂಠಿತವಾಗಿರುವ ಸಾಧ್ಯತೆ ಕೂಡ ಇರುತ್ತದೆ . ಏಕೆಂದರೆ ಅಷ್ಟಮದಲ್ಲಿ ಗುರು ಗ್ರಹ ಇದೆ . ಕೇತು ಗ್ರಹವನ್ನು ಭಾಯಾಗ್ರಹ ಎಂದು ಕರೆಯುತ್ತಾರೆ. ಕೇತು ಗ್ರಹ ರಾಶಿಯಲ್ಲಿಯೇ ಇದೆ . ಸಪ್ತಮದಲ್ಲಿ ರಾಹು ಗ್ರಹ . ಒಂದು ರೀತಿಯ ಮಾಯೆಯ ಮುಸುಕು ಆವರಿಸಿರುವ ವಾತಾವರಣ . ಸ್ವಲ್ಪ ಮಟ್ಟಿಗೆ ಭ್ರಾಂತಿ . ನಿಮಗೆ ಕೆಲವೊಂದು ವಿಚಾರವನ್ನು ನಂಬಲು ಸಾಧ್ಯವಾಗುವುದಿಲ್ಲ . ಕೆಲವೊಂದು ವಿಚಾರಗಳನ್ನು ನಿಮಗೆ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ . ಜೀವನ ಸಕಾರಾತ್ಮಕವಾಗಿ ಇರುತ್ತದೆ ಎಂದರೆ ,
ಅದನ್ನು ನೀವು ಒಪ್ಪಲು ತಯಾರು ಇರುವುದಿಲ್ಲ . ಮುಂಬರುವ ದಿನಗಳಲ್ಲಿ ಪ್ರಗತಿಯಾಗುತ್ತದೆ ಅನ್ನೋದನ್ನು ನೀವು ಸ್ಪಷ್ಟವಾಗಿ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ . ಏನೋ ಸಮಸ್ಯೆಗಳು ಬರಬಹುದು . ಅನಾರೋಗ್ಯದ ಸಮಸ್ಯೆಗಳು ಉಂಟಾಗಬಹುದು . ಹಲವಾರು ರೀತಿಯ ಯೋಚನೆಗಳು ಗೊಂದಲಗಳು ಉಂಟಾಗುತ್ತದೆ . ಕನ್ಯಾ ರಾಶಿಯಲ್ಲಿ ಬೌದ್ಧಿಕ ಶಕ್ತಿ ಇರುವ ವ್ಯಕ್ತಿಗಳು ಇರುತ್ತಾರೆ . ಬುಧ ಗ್ರಹ ಬಲಿಷ್ಠನಾಗಿದ್ದರೆ , ಕನ್ಯಾ ರಾಶಿಯ ಜೊತೆ ಕನ್ಯಾ ಲಗ್ನವೂ ಆಗಿದ್ದರೆ,
ಹೊಂದಾಣಿಕೆಗಳು ನಿಮ್ಮನ್ನು ಬುದ್ಧಿ ಜೀವಿಗಳಾಗಿ ಮಾಡುವ ಸಾಧ್ಯತೆ ಇರುತ್ತದೆ . ಗ್ರಹಗಳು ಪ್ರಗತಿಯನ್ನು ತಂದುಕೊಡಬಹುದು . ಈ ವಾತಾವರಣದಲ್ಲಿ ಒಪ್ಪಿಕೊಳ್ಳುವುದು ಕಷ್ಟವಾಗಬಹುದು . ನಂಬಿಕೆ ಬರದೇ ಇರಬಹುದು . ಇದನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ. ಶುಕ್ರ ಗ್ರಹ ಬಹಳ ಬಲಿಷ್ಠ ವಾಗಿದ್ದು ವಿಶೇಷವಾದ ಅನುಗ್ರಹವನ್ನು ಉಂಟುಮಾಡುವ ಸಾಧ್ಯತೆ ಇದೆ . ಕೇಂದ್ರದಲ್ಲಿ ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ರೀತಿಯ ಪ್ರಗತಿ ಆಗುತ್ತದೆ . ಕೊರತೆಗಳು ಇದ್ದರೆ,
ನೀಗಿಸಿಕೊಳ್ಳುವ ಸಾಮರ್ಥ್ಯ ಇರುತ್ತದೆ. ತಾಯಿ ಮತ್ತು ನಿಮ್ಮೊಂದಿಗಿನ ಸಂಬಂಧ ಉತ್ತಮವಾಗುತ್ತದೆ . ತಾಯಿಯ ಆರೋಗ್ಯದಲ್ಲಿ ಸುಧಾರಣೆಗಳನ್ನು ಕಾಣಬಹುದು . ಖುಷಿ ಒಂದು ಮಟ್ಟಕ್ಕೆ ಶುಕ್ರ ಗ್ರಹದಿಂದ ದೊರೆಯುತ್ತದೆ .ಇದು ಫೆಬ್ರವರಿ 11ರವರೆಗೆ ನಡೆಯುವಂತಹ ಘಟನೆಗಳು . ಕುಜ ಗ್ರಹ ಪಂಚಮ ಭಾವದಲ್ಲಿ ಇರುತ್ತದೆ . ಮಕ್ಕಳ ವಿಷಯದಲ್ಲಿ ಚಿಂತೆ , ಕಿರಿಕಿರಿ , ಹಠ , ಮಾಡುವುದು , ನಿಮ್ಮ ಕೈಗೆ ಸಿಗದೇ ಇರುವುದು , ಇಂತಹ ವಿಚಾರದಲ್ಲಿ ವೈಪರಿತ್ಯಗಳು ಇರುತ್ತವೆ .
ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು . ದಂಪತಿಗಳ ಜೀವನದಲ್ಲೂ ವಾದ – ವಿವಾದಗಳು ಇರುತ್ತವೆ. ಮಾತಿಗೆ ಮಾತು ಬೆಳೆಯುವುದು, ಕೋಪ ವಿಕೋಪಕ್ಕೆ ಹೋಗುವುದು . ಇಂತಹ ಪರಿಸ್ಥಿತಿಗಳು ಇದ್ದರೆ , ಬಿಗಡಾಯಿಸುವ ಸಾಧ್ಯತೆ ಇರುತ್ತದೆ . ಎಚ್ಚರ ವಹಿಸಬೇಕಾಗುತ್ತದೆ . ಬಿರುಕುಗಳನ್ನು ಮುಚ್ಚುವುದಕ್ಕೆ ಹೋಗಿ ಹೊಸ ಬಿರುಕುಗಳು ಉಂಟಾಗುವ ಸಾಧ್ಯತೆಗಳಿವೆ . ಬಿರುಕುಗಳನ್ನು ಮುಚ್ಚುವುದಕ್ಕೆ ಬಹಳ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು.
ಷಷ್ಟದಲ್ಲಿ ಇರುವ ಶನಿಯ ಬಲ ನಿಮಗೆ ಇದೆ. ಶತ್ರು ನಾಶವನ್ನು ಕೊಡುತ್ತಿದೆ. ಶನಿ ಬಲ . ಯಾವುದೇ ಸಮಸ್ಯೆಗಳು ಇದ್ದರೂ ನಿವಾರಣೆಯಾಗುತ್ತದೆ . 13ನೇ ತಾರೀಖಿಗೆ ರವಿ ಬರುವುದು ನಿಮ್ಮ ಆರನೇ ಭಾವಕ್ಕೆ . ಶನಿ ಗ್ರಹ ಕೂಡ ಇರುತ್ತದೆ . ಸ್ವಲ್ಪ ಮಾನಸಿಕ ಕಳವಳ, ತಳಮಳ ವಿರೋಧ ಭಾಸಗಳು ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ .ಆದರೂ ಕೂಡ ರವಿ ಗ್ರಹ ಷಷ್ಟ ಭಾವಕ್ಕೆ ಬಂದಾಗ ಯಶಸ್ಸನ್ನು ಸಾಲಾಗಿ ತಂದು ಕೊಡುತ್ತದೆ . ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ ಉಂಟಾಗುತ್ತದೆ . ಸರ್ಕಾರದಿಂದ ಮನ್ನಣೆ , ಸ್ಥಾನಮಾನ , ಗೌರವ , ಇತ್ಯಾದಿಗಳು ಕೂಡ ದೊರೆಯುತ್ತದೆ .
ಶನಿ , ಬುಧ ಮತ್ತು ರವಿ ಕೂಡುವುದು ಬಹಳ ದೊಡ್ಡ ಯೋಗ ಆಗುತ್ತದೆ .ರವಿ ಕೂಡುವುದು ಷಷ್ಠ ಭಾವದಲ್ಲಿ . ಬುಧಾಧಿತ್ಯ ಯೋಗ ಕೂಡ ಆಗುತ್ತದೆ . ಶನಿ ಗ್ರಹ ಕೂಡ ಉಪಸ್ಥಿತಿಯಲ್ಲಿ ಇರುತ್ತದೆ . ಸ್ವಲ್ಪ ಮಟ್ಟಿಗೆ ವಿರೋಧ ಭಾಸಗಳು ಕೂಡ ಇರುತ್ತವೆ . ಜಗತ್ತಿನಲ್ಲಿ ಯಾವುದು ನೂರರಷ್ಟು ಇರುವುದಿಲ್ಲ . ವಿಚಾರಗಳು ಕೆಟ್ಟದ್ದು ಮತ್ತು ಒಳ್ಳೆಯದು ಎರಡನ್ನು ಪಡೆದು ಕೊಂಡಿರುತ್ತದೆ . ಒಂದು ರೀತಿಯ ಹತಾಶೆ ಹುಟ್ಟುತ್ತದೆ. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು . ನಮ್ಮ ಮೇಲೆ ನಾವೇ ಏರಿಕೊಳ್ಳುವ ಒತ್ತಡ ನಮ್ಮನ್ನು ಯಶಸ್ಸಿನತ್ತ ಕರೆದುಕೊಂಡು ಹೋಗುತ್ತದೆ .ಯಾವ ವಿಚಾರದಲ್ಲಿ ತೊಂದರೆ ಆಗಬಹುದು ಎಂದರೆ ,
ಹಗಲು ರಾತ್ರಿ ಅನ್ನದೆ ಕೆಲಸ ಮಾಡುವುದು , ನೀವು ಚೆನ್ನಾಗಿ ಕೆಲಸ ಮಾಡುತ್ತೀರಿ ಅನ್ನೋದು ಅನುಕೂಲ ವಾಗಬೇಕು. ಒತ್ತಡಗಳನ್ನು ನಿಭಾಯಿಸುವುದಕ್ಕೆ ಕೆಲವೊಂದು ಪರಿಹಾರಗಳನ್ನು ನೀಡಲಾಗುತ್ತದೆ. ಜೀವನದಲ್ಲಿ ಪ್ರಾರ್ಥನೆ ಎನ್ನುವುದು ಇರಬೇಕು . ಬ್ರಾಂತಿಗಳು ಅನುಮಾನಗಳು , ನಂಬಿಕೆಯಲ್ಲಿ ಕೊರತೆ . ಜೀವನದಲ್ಲಿ ಪ್ರಾರ್ಥನೆ ಇರುತ್ತದೆ. ವಾಲ್ಮೀಕಿ ಗುರುಗಳು ವೃತ್ತಿಯಲ್ಲಿ ಒಬ್ಬ ಬೇಟೆಗಾರರು ಆಗಿರುತ್ತಾರೆ . ಶಿಕಾರಿ ಮಾಡುವುದು , ಪ್ರಾಣಿಗಳನ್ನು ಕೊಲ್ಲುವುದು ,
ಪ್ರಾಣಿಯ ಉತ್ಪನ್ನಗಳನ್ನು ಮಾರಿ ಜೀವನ ಸಾಗಿಸುವುದು , ಮತ್ತು ಜನರನ್ನು ಲೂಟಿ ಮಾಡುವುದು . ಅವರ ಜೀವನದಲ್ಲಿ ಮಹತ್ವವಾದ ಪರಿವರ್ತನೆ ಆಗುತ್ತದೆ . ಆ ಪರಿವರ್ತನೆ “ರಾಮ” ಅನ್ನುವ ಶಬ್ದದಿಂದ ಶುರುವಾಗುತ್ತದೆ . ಅಂದರೆ ಆ ಮಂತ್ರದ ಶಕ್ತಿ ಆಗಿರುತ್ತದೆ . ಇಂಥಹ ಒಂದು ಪ್ರಾರ್ಥನೆ ವ್ಯಕ್ತಿಯನ್ನು ಯಾವುದೇ ಮಟ್ಟಕ್ಕೂ ಕೂಡ ತೆಗೆದುಕೊಂಡು ಹೋಗಬಹುದು. ಧನಾತ್ಮಕವಾಗಿ ಜೀವನದಲ್ಲಿ ಮುಂದೆ ಹೋಗುವುದಕ್ಕೆ ಸಹಾಯ ಮಾಡಬಹುದು . ಮಂತ್ರವನ್ನು ಹೇಳುವುದರಿಂದ ನಿಮಗೆ ಒಂದು ರೀತಿಯ ಪ್ರೇರಣೆ ಸಿಗುತ್ತದೆ. ಮಂತ್ರವನ್ನು ನಾವು ಪದೇ ಪದೇ ಹೇಳಿದಾಗ ನಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ .
ಧನಾತ್ಮಕ ಅಲೆಗಳು ನಮ್ಮನ್ನು ಆವರಿಸುತ್ತಾ ಹೋಗುತ್ತದೆ . ಅದ್ಭುತವಾದ ಶಕ್ತಿಯನ್ನು ನಿಮ್ಮಲ್ಲಿ ತುಂಬುತ್ತದೆ . ನಿಮಗೆ ಪ್ರೇರಣೆ ಕೊಡುವ ಕೆಲಸವನ್ನು ಆ ಒಂದು ಮಂತ್ರ ಮಾಡುತ್ತದೆ ಎಂದು ಹೇಳಲಾಗಿದೆ . ಸಾಧ್ಯವಾದಷ್ಟು ಮನೋ ವೈಜ್ಞಾನಿಕವಾಗಿ ಅದು ಯಾವ ರೀತಿಯ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ತಿಳಿಸಲಾಗಿದೆ. ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಧನಾತ್ಮಕವಾಗಿ ಬದಲಾಯಿಸುವ ಶಕ್ತಿ ಆ ಒಂದು ಮಂತ್ರಕ್ಕೆ ಇರುತ್ತದೆ . ಬಹಳಷ್ಟು ಸಲ ನಾವು ಅನುಮಾನದಲ್ಲೇ ಕಾಲ ಕಳೆಯುತ್ತೇವೆ .ವಿಶೇಷವಾಗಿ ಗುರು ಅಷ್ಟಮದಲ್ಲಿ ಇರುವಾಗ ಬರುವಂತಹ ತೊಂದರೆಗಳು ಇವು . ಇವುಗಳಿಂದ ಹೊರ ಬರಬೇಕಾಗುತ್ತದೆ .