ನಿಮ್ಮ ಕೈಯಲ್ಲಿ “X” ಗುರುತು ಇದೆಯೇ

ಇಂದಿನ ಲೇಖನದಲ್ಲಿ ನಿಮ್ಮ ಹಸ್ತದಲ್ಲಿ x ಗುರುತು ಇದ್ದರೆ ಇದರ ಅರ್ಥ ಏನು? ನಿಮ್ಮ ಗುಣ ಲಕ್ಷಣಗಳೇನು? ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಡುತ್ತೇವೆ. ಈ ರೀತಿಯ ಗುರುತು ಇರುವುದು ತುಂಬಾ ಅಪರೂಪ ಎಂದು ಹೇಳುತ್ತಾರೆ ಅಂದರೆ ನೂರು ಜನರಲ್ಲಿ ಇಬ್ಬರು ಅಥವಾ ಮೂರು ಜನಕ್ಕೆ ಮಾತ್ರ ಇರುತ್ತದೆ. ಈ ಎಕ್ಸ್ ಗುರುತನ್ನು ಹೊಂದಿರುವವರು ತುಂಬಾ ಭಾಗ್ಯಶಾಲಿಯಾಗಿರುತ್ತಾರೆ ಮತ್ತು ಧಾರ್ಮಿಕವಾಗಿರುತ್ತಾರೆಂದು ಹೇಳಲಾಗುತ್ತದೆ.

ಹಸ್ತರೇಖೆಯಲ್ಲಿ ಎಕ್ಸ್ ಆಕಾರವು ಡಾರ್ಕ್ ಆಗಿ ಕಾಣಬೇಕೆಂದೇನು ಇಲ್ಲ ಸ್ವಲ್ಪ ಲೈಟ್ ಆಗಿ ಕಂಡರೂ ಸರಿಯೇ ಅದನ್ನು ಎಕ್ಸ್ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಎಕ್ಸ್ ಇದ್ದವರೂ ತುಂಬಾನೇ ಲಕ್ಕಿ ಎಂದು ಹೇಳಬಹುದು. ಇವರು ಧರ್ಮಕ್ಕೆ ತುಂಬಾ ಬೆಲೆ ಕೊಡುತ್ತಾರೆ. ಹಿಂದೂ ಆಗಿರಲಿ, ಮುಸ್ಲಿಂ ಆಗಿರಲಿ ಅವರ ಧರ್ಮದಲ್ಲಿ ಏನೆಲ್ಲಾ ನಿಯಮಗಳು ಇವೆಯೋ ಅದಕ್ಕೆ ಬೆಲೆ ಕೊಟ್ಟು ಅದನ್ನು ಪಾಲಿಸುತ್ತಾರೆ. ಇವರ ಇನ್ನೊಂದು ವಿಶೇಷತೆ ಏನೆಂದರೆ

ಇವರು ದಾನಧರ್ಮದ ಬಗ್ಗೆ ಬಹಳ ನಂಬಿಕೆಯನ್ನು ಇಟ್ಟಿರುತ್ತಾರೆ ಹಾಗೂ ಸಾಕಷ್ಟು ದಾನಧರ್ಮಗಳನ್ನು ಮಾಡುತ್ತಾರೆ. ಇವರಲ್ಲಿ ನಾಯಕತ್ವದ ಗುಣ ಹೆಚ್ಚು ಇರುತ್ತದೆ. ಯಾವುದಾದರೂ ಕೆಲಸದಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಕೊಟ್ಟರೇ ಅದನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಇವರ ಕೈ ಕೆಳಗೆ ಒಂದು ಸಾವಿರ ಜನ ಇದ್ದರೂ ಅದನ್ನು ಮೈಂಟೈನ್ ಮಾಡುವ ಕ್ಯಪಾಸಿಟಿ ಇವರಲ್ಲಿ ಇರುತ್ತದೆ. ಏಕೆಂದರೆ ಇವರಲ್ಲಿ ಲೀಡರ್ ಶಿಪ್ ಗುಣ ಚೆನ್ನಾಗಿ ಇರುತ್ತದೆ. ಇವರು ಎಷ್ಟೇ ಕಷ್ಟ ಬಂದರೂ ದೇವರು ಇವರ ಕೈ ಬಿಡುವುದಿಲ್ಲ. ಇವರು ಏನೇ ಕೆಲಸ ಮಾಡಿದರೂ ದೇವರ ಅನುಗ್ರಹ ಚೆನ್ನಾಗಿ ಇರುತ್ತದೆ.

Leave a Comment