ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರ ?

ನಾವು ಈ ಲೇಖನದಲ್ಲಿ ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡುವುದರಿಂದ, ಹೇಗೆ ಅಪಾರ ಹಣ ಹರಿದು ಬರುತ್ತದೆ ಎಂದು ತಿಳಿಯೋಣ . ಮನಿ ಪ್ಲಾಂಟ್ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಆದರೆ ಇದನ್ನು ಯಾವಾಗ ತರಬೇಕು . ಇದನ್ನು ಯಾವ ದಿಕ್ಕಿನಲ್ಲಿ ಇಡಬೇಕು . ಯಾವ ವಾರ ತರಬೇಕು, ಮತ್ತು ಯಾವ ರೀತಿ ತರಬೇಕು , ಹಾಗೂ ಮನಿ ಪ್ಲಾಂಟ್ ಬಗ್ಗೆ ಇರುವ ಅತೀ ಅಪರೂಪದ ರಹಸ್ಯಗಳನ್ನು ಇಲ್ಲಿ ತಿಳಿಸಲಾಗಿದೆ. ಪ್ರತಿಯೊಬ್ಬರು ಜೀವನದಲ್ಲಿ ಸುಖ , ಶಾಂತಿ , ಮತ್ತು ಸಮೃದ್ಧಿಯನ್ನು ಹೊಂದುವುದಕ್ಕೆ ಬಯಸುತ್ತಾರೆ.

ಅದಕ್ಕಾಗಿ ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ಜನರು ಸಂಪತ್ತು , ಸಮೃದ್ಧಿಗಾಗಿ ಮನೆಯಲ್ಲಿ ಮನಿ ಪ್ಲಾಂಟ್ ಸಸಿಯನ್ನು ಬೆಳೆಸುತ್ತಾರೆ. ಈ ಮನಿ ಪ್ಲಾಂಟನ್ನು ಬೆಳೆಸಿ ನಿಮ್ಮ ಕಷ್ಟಗಳಿಗೆ ಪರಿಹಾರವನ್ನು ಪಡೆಯಬಹುದು. ಮನಿ ಪ್ಲಾಂಟ್ ಮನೆಯಲ್ಲಿ ಇದ್ದರೆ, ಹಣ ಹೆಚ್ಚಾಗಿ ಬರುತ್ತದೆ. ಆದರೆ ಅವನ್ನು ಸರಿಯಾಗಿ ಇಟ್ಟರೆ , ಮಾತ್ರ ಅದು ಧನಾತ್ಮಕವಾಗಿ ಕೆಲಸ ಮಾಡುತ್ತದೆ. ಇಲ್ಲ ಅಂದರೆ ಸಕಾರಾತ್ಮಕ ಪರಿಣಾಮಗಳು ಹೆಚ್ಚಾಗುತ್ತವೆ. ಇದರಿಂದ ಹಣದ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ .

ಮನಿ ಪ್ಲಾಂಟ್ ಅನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟು ಬೆಳೆಸಿದರೆ ತುಂಬಾ ಒಳ್ಳೆಯದು ಆಗುತ್ತದೆ. ಮನಿ ಪ್ಲಾಂಟ್ ಯಾವಾಗಲೂ ಹಸಿರಾಗಿರಬೇಕು . ಅದು ಹಳದಿ ಬಣ್ಣಕ್ಕೆ ತಿರುಗಿದರೆ ಅದನ್ನು ಕೂಡಲೇ ತೆಗೆದು ಹಾಕಬೇಕು . ನೀವು ಇದನ್ನು ನೀಲಿ ಬಣ್ಣದ ಬಾಟಲಿನಲ್ಲಿ ಇಟ್ಟು ಬೆಳೆಸಿದರೆ ಒಳ್ಳೆಯದು ಆಗುತ್ತದೆ . ನೀಲಿ ಬಣ್ಣ ಶುಭ ಸಂಕೇತ ಎಂದು ಹೇಳುತ್ತಾರೆ . ಮನಿ ಪ್ಲಾಂಟ್ ಅದರ ಬೇರುಗಳನ್ನು ಭೂಮಿಯಲ್ಲಿ ಇಟ್ಟು ಬೆಳೆಸಬಹುದು . ಇಲ್ಲ ಅಂದರೆ ನೀರಿನಲ್ಲಿ ಕೂಡ ಬೆಳೆಸಬಹುದು .

ಇದನ್ನು ನೆಲದಲ್ಲಿ ಹಾಕುವುದಕ್ಕಿಂತ ಸ್ವಲ್ಪ ಎತ್ತರದ ಪಾಟ್ ನಲ್ಲಿ ಹಾಕಿದರೆ , ತುಂಬಾ ಒಳ್ಳೆಯದು. ಮನಿ ಪ್ಲಾಂಟ್ ಅನ್ನು ನೆಲದಲ್ಲಿ ಹಾಕುವುದರಿಂದ , ಆರೋಗ್ಯದ ಸಮಸ್ಯೆ ಕಾಡುತ್ತದೆ. ಮತ್ತು ಹಣಕಾಸಿನ ವ್ಯವಹಾರದಲ್ಲೂ ಅಭಿವೃದ್ಧಿ ಕಾಣುವುದಿಲ್ಲ . ಮನಿ ಪ್ಲಾಂಟ್ ಅನ್ನು ಮನೆಯ ಹೊರ ಭಾಗದಲ್ಲಿ ಬೆಳೆಸಬಾರದು. ಅದನ್ನು ಮನೆಯ ಒಳಗಡೆ ಬೆಳಸಿದರೆ, ಬಹಳ ಒಳ್ಳೆಯ ಫಲವನ್ನು ಕೊಡುತ್ತದೆ . ಇದನ್ನು ಮನೆಯ ಹೊರಗಡೆ ಬೆಳೆಸಿದರೆ , ಜನರ ದೃಷ್ಟಿ ಬಿದ್ದು, ಅದು ಒಣಗಿ ಹೋಗುತ್ತದೆ.

ಮನಿ ಪ್ಲಾಂಟ್ ಅನ್ನು ಪೂರ್ವ ಮತ್ತು ದಕ್ಷಿಣದ ಮಧ್ಯ ಇರುವ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಆಗ್ನೇಯ ದಿಕ್ಕಿನಲ್ಲಿ ಗಣೇಶನ ಅನುಗ್ರಹ ತುಂಬಾ ಇರುತ್ತದೆ. ಆದ್ದರಿಂದ ನೀವು ಇದನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದರಿಂದ ಹಣ ಹರಿವು ಹೆಚ್ಚಾಗುತ್ತದೆ. ಮನಿ ಪ್ಲಾಂಟ್ ಅನ್ನು ಪೂರ್ವ ಮತ್ತು ಉತ್ತರ ಭಾಗದಲ್ಲಿ ಇರುವ ಈಶಾನ್ಯ ದಿಕ್ಕಿನಲ್ಲಿ ಇಡಲೇ ಬಾರದು. ನೀವು ಬುಧವಾರ ದಂದು ಹೊರಗಡೆಯಿಂದ ತಂದು ಮನೆಯಲ್ಲಿ ಬೆಳೆಸುವುದರಿಂದ ತುಂಬಾ ಒಳ್ಳೆಯದಾಗುತ್ತದೆ.

ಪಾಟಿನಲ್ಲಿ ಎರಡು ಗೋಮತಿ ಚಕ್ರವನ್ನು ಯಾರಿಗೂ ಕಾಣದಂತೆ ಮಣ್ಣು ಮುಚ್ಚಬೇಕು. ಮತ್ತು ಇದಕ್ಕೆ ದಿನ ನೀರು ಹಾಕಬೇಕು. ಗೋಮತಿ ಚಕ್ರವನ್ನು ತೆಗೆಯುವಂತ ಅವಶ್ಯಕತೆ ಇಲ್ಲ . ಈ ಉಪಾಯವನ್ನು ನೀವು ಯಾರ ಹತ್ತಿರವೂ ಹೇಳಬೇಡಿ. ನೀವು ಇದನ್ನು ಗೌಪ್ಯವಾಗಿ ಮಾಡುತ್ತಾ ಹೋಗಿ . ನೀವು ಪ್ರತೀ ಶುಕ್ರವಾರ ಸ್ವಲ್ಪ ಸಕ್ಕರೆ ಹಾಕಿ ಅರ್ಧ ಚಮಚ ಹಸಿ ಹಾಲನ್ನು ಹಾಕಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆ ನಿಮಗೆ ಗೊತ್ತಾಗುತ್ತದೆ.

ಮತ್ತು ಹಣದ ಹರಿವು ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ಸಾಲ ಇದ್ದರೆ, ಅಥವಾ ಬೇರೆಯವರಿಗೆ ಕೊಟ್ಟ ಹಣ ಬರುತ್ತಿಲ್ಲಾ ಅಂದರೆ, ಈ ಉಪಾಯದಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ . ಮನಿ ಪ್ಲಾಂಟ್ ಅನ್ನು ಒಣಗುವುದಕ್ಕೆ ಬಿಡಬಾರದು . ನೀವು ದಿನಾ ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕುತ್ತಿರಬೇಕು. ಜಾಸ್ತಿ ನೀರು ಹಾಕಿದರೂ ಕೂಡ ಇದು ಕೊಳೆತು ಹೋಗುತ್ತದೆ. ಮನಿ ಪ್ಲಾಂಟ್ ಗಿಡವನ್ನು ಸರಿ ಸಂಖ್ಯೆಯಲ್ಲಿ ಬೆಳೆಸಬೇಕು. ಉದಾ : – 2 ,4 , 6 ಈ ರೀತಿಯಾಗಿ ಬೆಳೆಸಬೇಕು.

ಮನಿ ಪ್ಲಾಂಟ್ ಅನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಇದರಿಂದ ಗಂಡ ಹೆಂಡತಿಯ ನಡುವೆ ವಾದ – ವಿವಾದಗಳು ಬರುತ್ತವೆ. ಮನಿ ಪ್ಲಾಂಟ್ ಅನ್ನು ಲಿವಿಂಗ್ ರೂಮ್ ಅಥವಾ ಮಕ್ಕಳ ಕೋಣೆಯಲ್ಲಿ ಅಥವಾ ಅಡುಗೆ ಮನೆಯಲ್ಲೂ ಕೂಡ ಇಟ್ಟು ಬೆಳೆಸಬಹುದು. ಮನಿಪ್ಲಾಂಟ್ ಅನ್ನು ಮನೆಯ ಮುಖ್ಯ ದ್ವಾರದ ಬಳಿ ಮಾತ್ರ ಇಡಬಾರದು. ಇದನ್ನು ಮನೆಯ ಒಳಗಡೆ ಇಟ್ಟು ಬೆಳೆಸುವುದರಿಂದ ಧನ ಆಗಮನ ಆಗುತ್ತದೆ. ಇದನ್ನು ನೀವೂ ಯಾರೂ ನೋಡದೆ ಇರೋ ರೀತಿ ಇಟ್ಟು ಬೆಳೆಸಿದರೆ, ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ.

ಇದು ಯಾರ ಮನೆಯಲ್ಲಿ ಚೆನ್ನಾಗಿ ಬೆಳೆದರುತ್ತದೆಯೋ , ಅವರನ್ನು ಕೇಳಿ ಮತ್ತು ಸ್ವಲ್ಪ ಹಣ ಕೊಟ್ಟು ತಂದು ಅದನ್ನು ಮನೆಯಲ್ಲಿ ಬೆಳೆಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತಾ ಹೋಗುತ್ತದೆ .ಮನಿ ಪ್ಲಾಂಟ್ ಬೆಳೆಯುತ್ತಾ ಅದು ಮೇಲೆ ಹೋಗುತ್ತಿರಬೇಕು . ಯಾವತ್ತೂ ಅದು ಕೆಳಗಡೆ ಬಗ್ಗಬಾರದು .ಮನಿ ಪ್ಲಾಂಟ್ ಬೆಳೆಯುತ್ತಿಲ್ಲ ಅಂದರೆ ಅದನ್ನು ತೆಗೆದು ಹಾಕಿ . ಬೇರೆ ಮನಿ ಪ್ಲಾಂಟ್ ಅನ್ನು ತಂದು ಮನೆಯಲ್ಲಿ ಬೆಳೆಸಿ .

ಮನಿ ಪ್ಲಾಂಟ್ ಇದು ಶುಕ್ರ ಗ್ರಹಕ್ಕೆ ಸಂಬಂಧ ಇರುವ ಗಿಡ . ಹಾಗಾಗಿ ನೀವು ಇದನ್ನು ನಿಮ್ಮ ಮನೆಯಲ್ಲಿ , ಕಚೇರಿಯಲ್ಲಿ , ವ್ಯಾಪಾರದ ಸ್ಥಳದಲ್ಲಿ , ಇದನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದರಿಂದ ನಿಮಗೆ ಒಳ್ಳೆಯದು ಆಗುತ್ತದೆ . ಮನಿ ಪ್ಲಾಂಟ್ ಗೆ ಕೆಂಪು ದಾರವನ್ನು ಕಟ್ಟುವುದರಿಂದ ನಿಮಗೆ ಒಳ್ಳೆಯ ಲಾಭ ದೊರೆಯುತ್ತದೆ . ಕೆಂಪು ಬಣ್ಣವು ಯಶಸ್ಸು ಮತ್ತು ಪ್ರಗತಿಯ ಸಂಕೇತವಾಗಿದೆ . ಅದಕ್ಕೆ ಕೆಲವರು ನಿಯಮಗಳನ್ನು ಪಾಲಿಸಬೇಕಾಗುತ್ತದೆ . ನೀವು ಶುಕ್ರವಾರ ಬೆಳಗ್ಗೆ ಸ್ನಾನದ ನಂತರ ,

ಲಕ್ಷ್ಮಿ ದೇವಿಯನ್ನು ಪೂಜಿಸಬೇಕು . ನಿಮ್ಮ ಕಷ್ಟಗಳನ್ನು ದೇವರ ಬಳಿ ಹೇಳಿಕೊಂಡು ಪ್ರಾರ್ಥನೆ ಮಾಡಬೇಕು . ಈ ಪೂಜೆಯ ನಂತರ ಲಕ್ಷ್ಮಿ ದೇವಿಯ ಪಾದಗಳಿಗೆ ನೀವು ಮನಿ ಪ್ಲಾಂಟ್‌ಗೆ ಕಟ್ಟಬೇಕು ಅಂತ ಇಟ್ಟು ಕೊಂಡಿರುವ ದಾರವನ್ನು ಅರ್ಪಿಸಬೇಕು .ನಂತರ ತಾಯಿಗೆ ಆರತಿ ಮಾಡಿ ನಂತರ , ಕೆಂಪು ದಾರದ ಮೇಲೆ ಕುಂಕುಮವನ್ನು ಹಚ್ಚಬೇಕು. ಈ ಪೂಜೆಯ ನಂತರ ಕೆಂಪು ದಾರವನ್ನು ಮನಿ ಪ್ಲಾಂಟ್ ಸುತ್ತಲೂ ಕಟ್ಟಬೇಕು. ಈ ಪರಿಹಾರ ಮಾಡಿದ ಕೆಲವು ದಿನಗಳ ನಂತರ ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಆಗುತ್ತದೆ. ಎಂದು ಹೇಳಲಾಗಿದೆ.

Leave a Comment