ಕನಸಿನಲ್ಲಿ ಸತ್ತುಹೋದ ಜನರು ಕಂಡರೆ ಸಿಗುತ್ತವೆ ಈ 7 ಸಂಕೇತ ಯಾವತ್ತಿಗೂ ನಿರ್ಲಕ್ಷ್ಯ ಮಾಡಬೇಡಿ

ನಾವು ಈ ಲೇಖನದಲ್ಲಿ ಕನಸಿನಲ್ಲಿ ಸತ್ತುಹೋದ ಜನರು ಕಂಡರೆ ಸಿಗುತ್ತವೆ. ಈ 7 ಸಂಕೇತ . ಯಾವತ್ತಿಗೂ ನಿರ್ಲಕ್ಷ್ಯ ಮಾಡಬೇಡಿ ಎಂದು ಹೇಳಲಾಗಿದೆ. ಒಂದು ವೇಳೆ ಕನಸಿನಲ್ಲಿ ಸತ್ತು ಹೋದ ಜನರು ಕಾಣುತ್ತಿದ್ದರೆ , ತುಂಬಾ ಮಹತ್ವಪೂರ್ಣವಾದ ಸಂಕೇತಗಳು ಸಿಗುತ್ತವೆ . ಒಂದು ಬಾರಿ ನಾರದ ಮುನಿಗಳು ಯಮ ರಾಜರನ್ನು ಭೇಟಿಯಾಗಲು ಯಮ ಲೋಕಕ್ಕೆ ಹೋಗುತ್ತಾರೆ . ಯಮರಾಜರು ನಾರದ ಮುನಿಗಳನ್ನು ತುಂಬಾ ಗೌರವದಿಂದ ಸ್ವಾಗತ ಮಾಡುತ್ತಾರೆ . ಅವರಿಗೆ ನಮಸ್ಕಾರ ಮಾಡಿ ಒಂದು ಮಾತನ್ನು ಕೇಳುತ್ತಾರೆ .

ಹೇ ಮಹರ್ಷಿ ಯಮಪುರಿಗೆ ನಿಮಗೆ ಸ್ವಾಗತ .ನಿಮ್ಮ ದರ್ಶನದಿಂದ ನಾನು ಇಂದು ಧನ್ಯನಾಗಿದ್ದೇನೆ . ನಿಮ್ಮ ಆಗಮನದಿಂದ ಯಮ ಪುರಿಯ ಶೋಭೆಯು ಹೆಚ್ಚಾಗಿದೆ . ಈ ರೀತಿಯಾಗಿ ಯಮ ರಾಜರು ಸ್ವಾಗತ ಮಾಡಿದ್ದಕ್ಕೆ , ದೇವ ಋಷಿ ನಾರದರು ಒಲಿಯುತ್ತಾರೆ . ಯಮ ರಾಜರಿಗೂ ಕೂಡ ನಮಸ್ಕಾರ ಮಾಡುತ್ತಾರೆ . ಹೇ ಮೃತ್ಯುವಿನ ದೇವರಾದ ಯಮ ರಾಜರೇ ನಿಮಗೂ ನನ್ನ ನಮಸ್ಕಾರಗಳು . ನಿಮ್ಮ ಆದರ ಸತ್ಕಾರಗಳಿಂದ ನಾವು ತುಂಬಾ ಖುಷಿಯಾಗಿದ್ದೇವೆ .

ನಂತರ ಯಮ ರಾಜರು ನಾರದರಿಗೆ ಹೇಳುತ್ತಾರೆ . ಹೇ ದೇವ ಋಷಿ ನೀವು ಯಮ ಲೋಕಕ್ಕೆ ಬಂದಿರುವ ಕಾರಣವನ್ನು ತಿಳಿಸಿ . ಖಂಡಿತವಾಗಿ ನೀವು ಯಾವುದೇ ಮಹತ್ವ ಪೂರ್ಣವಾದ ಕಾರ್ಯವಾಗಲಿ , ಅಥವಾ ಸುದ್ದಿ ಆಗಲಿ ತಂದಿರಬಹುದು . ಅಥವಾ ನಮ್ಮಿಂದ ಯಾವುದೇ ತಪ್ಪು ಆಗಿಲ್ಲ ಅಲ್ಲವೇ . ದಯವಿಟ್ಟು ಅದನ್ನು ತಿಳಿಸಿರಿ . ನಾನು ನಿಮಗೆ ಯಾವ ರೀತಿಯ ಸೇವೆಯನ್ನು ಮಾಡಬಹುದು .ಆಗ ನಾರದ ಮುನಿಗಳು ಹೇಳುತ್ತಾರೆ . ಹೇ ಧರ್ಮರಾಜ ನೀವು ಮೃತ್ಯುವಿನ ಮತ್ತು ನ್ಯಾಯದ ದೇವರು ಆಗಿದ್ದೀರಾ . ಈ ಮೂರು ಲೋಕದ ಎಲ್ಲ ಜೀವಂತ ಮತ್ತು ಮೃತ ಪ್ರಾಣಿಗಳ ಲೆಕ್ಕಾಚಾರವನ್ನು ಇಟ್ಟುಕೊಳ್ಳುತ್ತೀರಾ .

ನಿಮಗೆ ಎಲ್ಲಾ ಜಲಚರಗಳ ಭೂತ ಮತ್ತು ಭವಿಷ್ಯದ ಬಗ್ಗೆ ಜ್ಞಾನ ಇದೆ . ಹಾಗಾಗಿ ನಾನು ನಿಮ್ಮ ಬಳಿ ಪ್ರಶ್ನೆಗಳಿಗೆ ಇರುವ ಉತ್ತರಗಳನ್ನು ತಿಳಿದುಕೊಳ್ಳಲು ಬಂದಿರುವೆನು . ಇದನ್ನು ಬಗೆಹರಿಸಲು ಸಹಾಯವನ್ನು ಮಾಡಿರಿ . ನಂತರ ಯಮ ರಾದರು ಹೇಳುತ್ತಾರೆ . ಹೇ ದೇವ ಋಷಿ ನೀವು ಸತ್ಯವನ್ನು ಹೇಳುತ್ತೀರಾ. ಮೂರು ಲೋಕದಲ್ಲಿ ವಾಸ ಮಾಡುವಂತಹ ಎಲ್ಲಾ ಮೃತ ಮತ್ತು ಜೀವಂತ ವ್ಯಕ್ತಿಗಳ ಲೆಕ್ಕಾಚಾರವನ್ನು ಇಟ್ಟುಕೊಳ್ಳುತ್ತೇವೆ . ಆದರೆ ನಿಮ್ಮ ಮನಸ್ಸಿನಲ್ಲಿರುವ ವಿಷಯಗಳನ್ನು ನಮ್ಮಿಂದ ತಿಳಿದುಕೊಳ್ಳಲು ಸಾಧ್ಯವಿಲ್ಲ .

ನೀವು ಮೂರು ಲೋಕದ ಮಾಹಿತಿಯನ್ನು ತಿಳಿದಿರಬಹುದು . ಭಗವಂತನಾದ ವಿಷ್ಣುವಿನ ಪ್ರಿಯ ಭಕ್ತರು ಆಗಿದ್ದೀರಾ . ನಿಮಗೆ ಎಲ್ಲಾ ಶಾಸ್ತ್ರಗಳ ಜ್ಞಾನವು ಇದೆ . ಆದರೆ ನನ್ನಿಂದ ನಿಮಗೆ ಯಾವುದಾದರೂ ವಿಷಯ ತಿಳಿಯಲು ಇಷ್ಟ ಇದ್ದರೆ , ಖಂಡಿತವಾಗಿ ನಾನು ನಿಮಗೆ ಸಹಾಯ ಮಾಡುತ್ತೇನೆ . ಹೇ ದೇವ ಋಷಿ ನಿಮ್ಮಲ್ಲಿ ಏನೇ ಅನುಮಾನ ಪ್ರಶ್ನೆಗಳು ಇದ್ದರೂ , ನಿಸ್ಸಂದೇಹವಾಗಿ ನನ್ನನ್ನು ಕೇಳಿರಿ . ನಾನು ನನ್ನ ಸಾಮರ್ಥ್ಯದ ಅನುಸಾರವಾಗಿ ಅವುಗಳಿಗೆ ಉತ್ತರವನ್ನು ತಿಳಿಸುತ್ತೇನೆ.

ದೇವ ಋಷಿ ನಾರದರೂ ಹೇಳುತ್ತಾರೆ . ಹೇ ಯಮ ರಾಜರೇ ನಾನು ಭೂ ಲೋಕವನ್ನು ಸುತ್ತಿಕೊಂಡು ಬಂದಿರುವೆನು . ನಾನು ಭೂತ, ಪ್ರೇತ , ಪಿಶಾಚಿ , ಕೂಶ್ಮಾಂಡ , ಬೇತಾಳ ಆಗಲಿ ಇತ್ಯಾದಿ ಪ್ರಕಾರದ ಹಲವಾರು ವಿಚಿತ್ರ ಜೀವಿಗಳನ್ನು ನೋಡಿದ್ದೇನೆ. ಇವು ಕಾಡಿನಲ್ಲಿ ವಾಸ ಮಾಡುತ್ತವೆ. ಇವುಗಳ ಜೊತೆಗೆ ಈ ಎಲ್ಲಾ ದುಷ್ಟಶಕ್ತಿಗಳು ಮನುಷ್ಯರಿಗೆ ತೊಂದರೆ ಕೊಡುವುದನ್ನು ಕಂಡಿದ್ದೇನೆ. ಅವರಿಗೆ ದುಃಖವನ್ನು ಸಹ ಕೊಡುತ್ತವೆ. ಇವುಗಳಿಗೆ ಇರುವ ಕಾರಣ ಏನು . ಈ ಎಲ್ಲಾ ಕೆಟ್ಟ ಶಕ್ತಿಗಳು ಮನುಷ್ಯನಿಗೆ ಯಾಕೆ ತೊಂದರೆಯನ್ನು ಕೊಡುತ್ತವೆ. ಜೊತೆಗೆ ನನ್ನ ಮನಸ್ಸಿನಲ್ಲಿ ಬೇರೆ ಒಂದು ಪ್ರಶ್ನೆ ಕೂಡ ಇದೆ.

ಮನುಷ್ಯರು ಹಲವಾರು ಬಾರಿ ತಮ್ಮ ಕನಸ್ಸಿನಲ್ಲಿ ಪೂರ್ವಜರನ್ನು ನೋಡುತ್ತಾರೆ. ಇದರ ಅರ್ಥ ಏನಿದೆ. ಕನಸ್ಸಿನಲ್ಲಿ ಸತ್ತು ಹೋದ ಜನರು ಕಾಣುವ ಅರ್ಧ ಏನಿದೆ. ಇವುಗಳ ಮೂಲಕ ಮನುಷ್ಯನಿಗೆ ಯಾವ ಸಂಕೇತಗಳು ಸಿಗುತ್ತದೆ. ನಾನು ಎಲ್ಲಾ ಮನುಷ್ಯ ಜಾತಿಯ ಕಲ್ಯಾಣಕ್ಕಾಗಿ ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಇಲ್ಲಿಗೆ ಬಂದಿರುವೆನು . ನಾರದರ ಈ ಎಲ್ಲಾ ಪ್ರಶ್ನೆಗಳನ್ನು ಕೇಳಿದ ಯಮ ರಾಜರು ಹೇಳುತ್ತಾರೆ , ಹೇ ದೇವ ಋಷಿ ನೀವು ಸಮಸ್ತ ಮಾನವ ಜಾತಿಯ ಕಲ್ಯಾಣಕ್ಕಾಗಿ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ದೀರಾ . ನಾನು ನಿಮಗೆ ಈ ಎಲ್ಲಾ ಪ್ರಶ್ನೆಗಳಿಗೂ ಇರುವ ಉತ್ತರವನ್ನು ಖಂಡಿತ ತಿಳಿಸುತ್ತೇನೆ .

ಆದರೆ ಅದಕ್ಕೂ ಮುನ್ನ ನಾನು ನಿಮಗೆ ಅತ್ಯಂತ ಪವಿತ್ರವಾದ ಕಥೆಯನ್ನು ಹೇಳುತ್ತೇನೆ . ಈ ಕಥೆಯಲ್ಲಿ ನಿಮಗೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ನೀವು ಈ ಕಥೆಯನ್ನು ಗಮನವಿಟ್ಟು ಕೇಳಿರಿ . ಯಾವ ಮನುಷ್ಯರು ಈ ಕಥೆಯನ್ನು ಗಮನವಿಟ್ಟು ಕೇಳುತ್ತಾರೋ , ನಾನು ಅವರ 32 ಅಪರಾಧಗಳನ್ನು ಕ್ಷಮಿಸುತ್ತೇನೆ. ಆಗ ನಾರದರು ಹೇಳುತ್ತಾರೆ. ಹೇ ಧರ್ಮ ರಾಜರೇ ನನಗೆ ಆ ಮಹಾನ್ ಕಥೆಯನ್ನು ತಿಳಿಸಿರಿ . ನಾನು ಇದನ್ನು ಗಮನವಿಟ್ಟು ಕೇಳುತ್ತೇನೆ. ನಂತರ ಯಮ ರಾಜರು ನಾರದರಿಗೆ ಈ ಮಹಾನ್ ಕಥೆಯನ್ನು ಹೇಳುತ್ತಾರೆ.

ಮಧ್ಯ ದೇಶದಲ್ಲಿ ಒಂದು ಸುಂದರವಾದ ನಗರ ಇತ್ತು. ಇಲ್ಲಿ ಒಬ್ಬ ಶ್ರೀಮಂತ ವ್ಯಕ್ತಿಯು ತನ್ನ ಐದೂ ಜನ ಅಣ್ಣ ತಮ್ಮಂದಿರ ಜೊತೆ ವಾಸ ಮಾಡುತ್ತಿದ್ದ. ಶ್ರೀಮಂತ ವ್ಯಕ್ತಿ ಮತ್ತು ಈತನ ಅಣ್ಣ , ತಮ್ಮಂದಿರ ವಿವಾಹ ಆಗಿತ್ತು. ಎಲ್ಲರೂ ಪ್ರೀತಿಯಿಂದ ಜೊತೆಯಾಗಿ ಇರುತ್ತಿದ್ದರು. ಆ ಶ್ರೀಮಂತ ವ್ಯಕ್ತಿಯ ಬಳಿ , ಯಾವುದೇ ವಸ್ತುವಿನ ಕೊರತೆ ಇರಲಿಲ್ಲ. ಇವರು ಮತ್ತು ಇವರ ಅಣ್ಣತಮ್ಮಂದಿರು ತುಂಬಾ ಶ್ರಮ ಪಟ್ಟು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು . ಎಲ್ಲರೂ ಕೂಡಿಕೊಂಡು ವ್ಯಾಪಾರ ಮತ್ತು ಹೊಲದಲ್ಲಿ ಕೆಲಸ ಮಾಡುತ್ತಿದ್ದರು .

ಇಡೀ ಊರಿನಲ್ಲಿ ಈ ವ್ಯಕ್ತಿ ಎಷ್ಟು ಯಾವ ಶ್ರೀಮಂತ ವ್ಯಕ್ತಿಗಳು ಇರಲಿಲ್ಲ . ಎಲ್ಲಾ ಧನ ಸಂಪತ್ತು ಇವರಿಗೆ ಪೂರ್ವಜರಿಂದಲೇ ಸಿಕ್ಕಿತ್ತು . ಈ ವ್ಯಕ್ತಿಯ ಪೂರ್ವಜರು ಮಹಾ ದಾನಿ ಮತ್ತು ದಯೆ ಉಳ್ಳ ವ್ಯಕ್ತಿಯಾಗಿದ್ದರು . ಇವರು ದಾನ ಧರ್ಮ ಜೊತೆಗೆ ಎಲ್ಲಾ ಪ್ರಕಾರದ ಯಜ್ಞ , ಹವನ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದರು . ಆದರೆ ಶ್ರೀಮಂತ ಜಿಪುಣತನ ಗುಣವನ್ನು ಹೊಂದಿದ್ದನು . ಇವರ ಒಳಗಡೆ ಪೂರ್ವಜರ ಯಾವ ಲಕ್ಷಣವೂ ಇರಲಿಲ್ಲ . ಈತ ಯಾವುದೇ ದಾನ- ಧರ್ಮ ಆಗಲಿ , ಯಜ್ಞ , ಹವನಗಳನ್ನು ಮಾಡುತ್ತಿರಲಿಲ್ಲ . ಈ ವ್ಯಕ್ತಿ ತುಂಬಾ ಧನ ಸಂಪತ್ತನ್ನು ಕೂಡಿ ಹಾಕಿದ್ದ .

ಆದರೆ ಈತ ಯಾವತ್ತಿಗೂ ತನ್ನ ಧನ ಸಂಪತ್ತನ್ನು ಸದುಪಯೋಗ ಪಡಿಸಿಕೊಳ್ಳಲಿಲ್ಲ . ಈತ ಯಾರಿಗೂ ಅನ್ನದಾನ ಮಾಡಲಿಲ್ಲ . ಈ ವ್ಯಕ್ತಿಯ ಪೂರ್ವಜರು ದೇವಸ್ಥಾನಗಳಿಗೆ ದಾನ ಧರ್ಮ ಮಾಡುತ್ತಿದ್ದರು . ಬಡವರಿಗೆ ಬಟ್ಟೆಗಳು ಮತ್ತು ಅನ್ನದ ದಾನ ಮಾಡುತ್ತಿದ್ದರು . ಆದರೆ ಈ ವ್ಯಕ್ತಿ ಅಂತೂ ಯಾವತ್ತಿಗೂ ತನ್ನ ಪೂರ್ವಜರನ್ನು ಅನುಸರಿಸಲಿಲ್ಲ . ಈತ ಹಣ ಗಳಿಸುವುದರಲ್ಲಿ ಮತ್ತು ಕೂಡಿ ಹಾಕುವುದರಲ್ಲಿ ನಿರತನಾಗಿದ್ದ . ಒಂದು ಕಾರಣದಿಂದಾಗಿ ಈತನ ಬಳಿ ತುಂಬಾ ಧನ ಸಂಪತ್ತು ಇತ್ತು .

ಆದರೆ ಇವನ ಕಾರಣದಿಂದಾಗಿ ಈತನ ಪೂರ್ವಜರು ತುಂಬಾ ದುಃಖದಲ್ಲಿ ಇದ್ದರು . ಈತ ಹಣ ಗಳಿಸುವುದರಲ್ಲಿ ತನ್ನ ಪೂರ್ವಜರನ್ನು ಮರೆತುಬಿಟ್ಟ . ಈತ ತನ್ನ ಪೂರ್ವಜರ ಶ್ರಾದ್ಧ ಮತ್ತು ಕಾರ್ಯಗಳನ್ನು ಮಾಡುತ್ತಿರಲಿಲ್ಲ . ಇದರಿಂದ ಇವರ ಪೂರ್ವಜರ ಆತ್ಮ ತೃಪ್ತಿಯಾಗುತ್ತಿರಲಿಲ್ಲ . ಅವರು ತಮ್ಮ ಪುತ್ರನ ಈ ವ್ಯವಹಾರವನ್ನು ಕಂಡು ದುಃಖದಲ್ಲಿ ಇದ್ದರು . ನಂತರ ಒಂದು ದಿನ ವ್ಯಕ್ತಿಯ ಪೂರ್ವಜರು ಚರ್ಚೆಯನ್ನು ಮಾಡುತ್ತಾರೆ . ಆತನನ್ನು ಭೇಟಿಯಾಗುವ ವಿಷಯದ ಬಗ್ಗೆ ಯೋಚನೆ ಮಾಡುತ್ತಾರೆ . ನಂತರ ಎಲ್ಲಾ ಪಿತೃ ಗಣ್ಯರು ಯಮ ರಾಜರ ಬಳಿ ಹೋಗುತ್ತಾರೆ . ಅವರ ಬಳಿ ಪ್ರಾರ್ಥನೆಯನ್ನು ಮಾಡುತ್ತಾರೆ .

ಪೂರ್ವಜರು ಯಮ ರಾಜರಿಗೆ ಹೇಳುತ್ತಾರೆ .ಹೇ ಯಮ ರಾಜರೇ ನಮ್ಮ ಮಕ್ಕಳ ಬುದ್ಧಿ ಕೆಟ್ಟಿದೆ . ಈ ಒಂದು ಕಾರಣದಿಂದ ನಮಗೆ ಸಮಾಧಾನ ಸಿಗುತ್ತಿಲ್ಲ . ದಯವಿಟ್ಟು ನಮ್ಮ ಮಕ್ಕಳನ್ನು ಭೇಟಿಯಾಗಲು ಒಂದು ಅವಕಾಶವನ್ನು ಕೊಡಿ . ನಾವು ನಮ್ಮ ಮಕ್ಕಳಿಗೆ ತಿಳಿಹೇಳಿ ಮರಳಿ ಬರುತ್ತೇವೆ . ಅವರಿಗೆ ಶಾಸ್ತ್ರದ ಜ್ಞಾನವನ್ನು ಕೊಟ್ಟು ಮರಳಿ ಬರುತ್ತೇವೆ . ಆಗ ಯಮ ರಾಜರು ಅವರಿಗೆ ಆಜ್ಞೆಯನ್ನು ಕೊಡುತ್ತಾ ಒಂದು ಮಾತನ್ನು ಹೇಳುತ್ತಾರೆ . ಹೇ ಮಹಾತ್ಮರೇ ನೀವು ನಿಮ್ಮ ಮಕ್ಕಳನ್ನು ಭೇಟಿಯಾಗಲು ಹೋಗಲು ಸಾಧ್ಯವಿಲ್ಲ . ಆದರೆ ನೀವು ನಿಮ್ಮ ಮಕ್ಕಳಿಗೆ ಸ್ವಪ್ನದ ಮೂಲಕ ಅಂದರೆ ,

ಕನಸಿನ ಮೂಲಕ ಕೆಲವು ಸಂದೇಶಗಳನ್ನು ಕೊಡಬಹುದು . ಆಗ ಎಲ್ಲಾ ಪೂರ್ವಜರು ಯಮ ರಾಜರ ಈ ಮಾತನ್ನು ಒಪ್ಪುತ್ತಾರೆ . ನಂತರ ಒಬ್ಬೊಬ್ಬರಾಗಿ ತಮ್ಮ ಎಲ್ಲಾ ಮಕ್ಕಳ ಕನಸಿನಲ್ಲಿ ಹೋಗಿ ಅವರಿಗೆ ದರ್ಶನ ಕೊಡುತ್ತಾರೆ . ಆ ಶ್ರೀಮಂತ ವ್ಯಕ್ತಿಯ ಬಳಿ ಹೋಗಿ ದರ್ಶನ ಕೊಡುತ್ತಾರೆ. ಆತನಿಗೆ ಸಂಕೇತವನ್ನು ಕೊಡುತ್ತಾರೆ . ಆದರೆ ಇವರ ದೊಡ್ಡ ಮಗ ಸಂಕೇತವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಮಾರನೇ ದಿನ ಎಚ್ಚರವಾದಾಗ ಕನಸನ್ನು ಮರೆತು ಬಿಡುತ್ತಾನೆ . ನಂತರ ಪೂರ್ವಜರು ತಮ್ಮ ಬೇರೆ ಮಕ್ಕಳ ಕನಸಿನಲ್ಲಿ ಹೋಗಿ ,

ಅವರಿಗೆ ದರ್ಶನವನ್ನು ಕೊಡುತ್ತಾರೆ . ಜೊತೆಗೆ ಅವರಿಗೆ ಅನೇಕ ಪ್ರಕಾರದ ಸಂಕೇತಗಳನ್ನು ಕೊಡುತ್ತಾರೆ . ಆದರೆ ಉಳಿದ ಮಕ್ಕಳು ಸಹ ಸಂಕೇತಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ . ಯಾರು ಸಹ ತಮ್ಮ ಪೂರ್ವಜರು ನೀಡಿದ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ . ಇದರಿಂದ ಅವರ ಎಲ್ಲಾ ಪೂರ್ವಜರು ದುಃಖಕ್ಕೆ ಒಳಗಾಗುತ್ತಾರೆ . ಇಲ್ಲಿ ಶ್ರೀಮಂತ ವ್ಯಕ್ತಿ ಮತ್ತು ಈತನ ಎಲ್ಲಾ ಅಣ್ಣ-ತಮ್ಮಂದಿರು ಧನ ಸಂಪತ್ತನ್ನು ಗಳಿಸುವ ದುರಾಸೆಯಲ್ಲಿ ಪೂರ್ತಿಯಾಗಿ ಕುರುಡರಾಗಿದ್ದರು . ಇವರಿಗೆ ಪೂರ್ವಜರು ನೀಡಿದ ಸಂಕೇತಗಳ ಮಹತ್ವ ಗೊತ್ತೇ ಆಗಲಿಲ್ಲ . ಆದರೆ ಪೂರ್ವಜರು ಕನಸಿನಲ್ಲಿ ಬಂದು ಕೆಲವೇ ದಿನಗಳ ನಂತರ ಆ ವ್ಯಕ್ತಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ .

ನಂತರ ಈತನ ಎಲ್ಲ ಧನ ಸಂಪತ್ತು ನಷ್ಟವಾಗಲು ಶುರುವಾಗುತ್ತದೆ . ಇಲ್ಲಿ ಅಣ್ಣ- ತಮ್ಮಂದಿರಲ್ಲಿ ವಾದ ವಿವಾದಗಳು , ಜಗಳಗಳು ಕೂಡ ಆಗುತ್ತದೆ. ಪೂರ್ವಜರು ಕೂಡಿ ಹಾಕಿರುವ ಎಲ್ಲಾ ಜಮೀನನ್ನು ಮಾರಾಟ ಮಾಡುತ್ತಾರೆ . ಪೂರ್ತಿಯಾಗಿ ಇವರು ನಾಶವಾಗುತ್ತಾರೆ . ಎಲ್ಲ ಅಣ್ಣ ತಮ್ಮಂದಿರು ಒಬ್ಬರನ್ನು ಒಬ್ಬರು ಬಿಟ್ಟು ಬೇರೆಯಾಗುತ್ತಾರೆ . ಎಲ್ಲರೂ ತಮ್ಮ ಹೊಟ್ಟೆ ಪಾಡಿಗೋಸ್ಕರ ಅಲೆದಾಡಲು ಶುರು ಮಾಡುತ್ತಾರೆ . ಸ್ವರ್ಗದಲ್ಲಿ ಇರುವ ಆ

ಪೂರ್ವಜರಿಗೆ ತಮ್ಮ ಮಕ್ಕಳ ಈ ಕತೆಯನ್ನು ನೋಡಿ ತುಂಬಾ ತೊಂದರೆ ಆಗಲು ಶುರುವಾಗುತ್ತದೆ . ಮತ್ತೆ ಮರಳಿ ಅವರೆಲ್ಲ ಯಮರಾಜನ ಬಳಿ ಹೋಗುತ್ತಾರೆ . ಹೇ ಯಮ ರಾಜರೇ ನಮ್ಮಿಂದ ಮಕ್ಕಳ ದುರ್ಗತಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ . ನಾವು ಮಾಡಿದ ಎಲ್ಲಾ ಪುಣ್ಯ ಕರ್ಮಗಳನ್ನು ನಮ್ಮ ಮಕ್ಕಳು ನಾಶ ಮಾಡಿದ್ದಾರೆ . ದಯವಿಟ್ಟು ನಮ್ಮ ಮಕ್ಕಳಿಗೆ ಅವರ ಅರಿವು ಆಗುವಂತೆ ಯಾವುದಾದರೂ ಉಪಾಯ ಮಾಡಿ , ಅಂತ ಯಮರಾಜ ರ ಬಳಿ ಪೂರ್ವಜರು ಕೇಳಿಕೊಳ್ಳುತ್ತಾರೆ .

ನಂತರ ಯಮ ರಾಜರು ಆ ಪೂರ್ವಜರಿಗೆ ಹೇಳುತ್ತಾರೆ . ಹೇ ಮಹಾತ್ಮರೆ ನನಗೆ ಈ ಕಷ್ಟ ಅರ್ಥವಾಗುತ್ತದೆ . ಖಂಡಿತವಾಗಿ ನಾನು ನಿಮಗೆ ಸಹಾಯವನ್ನು ಮಾಡುತ್ತೇನೆ . ನಂತರ ಯಮ ರಾಜರು ಒಬ್ಬ ಸಾಧುವಿನ ರೂಪ ಧರಿಸಿ, ಭೂಮಿಯ ಮೇಲೆ ಬರುತ್ತಾರೆ .. ನಂತರ ಆ ಪೂರ್ವಜರ ಮಕ್ಕಳನ್ನು ಭೇಟಿಯಾಗಲು ಹೋಗುತ್ತಾರೆ . ಎಲ್ಲಕ್ಕಿಂತ ಮೊದಲು ಆ ಶ್ರೀಮಂತ ವ್ಯಕ್ತಿ ಮನೆಗೆ ಹೋಗುತ್ತಾರೆ . ಆ ಶ್ರೀಮಂತ ವ್ಯಕ್ತಿ ತುಂಬಾ ಅನಾರೋಗ್ಯದಿಂದ ಮಲಗಿರುತ್ತಾನೆ . ಆ ವ್ಯಕ್ತಿಯ ಹೆಂಡತಿಯು ಸಾಧು ಅವರನ್ನು ಸ್ವಾಗತ ಮಾಡುತ್ತಾಳೆ . ದಾನ ಮಾಡಲು ಮುಂದಾಗುತ್ತಾಳೆ . ಆಗ ಸಾಧು ಹೇಳುತ್ತಾರೆ .

ಹೇ ಮಗಳೇ ನಿನ್ನ ಮನೆಯಲ್ಲಿ ಪಿತೃ ದೋಷ ಇದೆ. ಆ ಒಂದು ಕಾರಣದಿಂದಾಗಿ ನಿನ್ನ ಗಂಡನ ಸ್ಥಿತಿ ಈ ರೀತಿ ಆಗಿದೆ. ನಿನ್ನ ಗಂಡನ ಕರ್ಮಗಳ ಕಾರಣದಿಂದಾಗಿ , ಆತನ ಪೂರ್ವಜರು ಸಿಟ್ಟಾಗಿದ್ದಾರೆ . ಆ ಸಾಧುವಿನ ಮಾತನ್ನು ಕೇಳಿದ ವ್ಯಕ್ತಿ ಈ ರೀತಿ ಹೇಳುತ್ತಾನೆ . ಹೇ ಸಾಧುಗಳೇ ನಾನು ಆ ರೀತಿಯ ತಪ್ಪನ್ನು ಏಕೆ ಮಾಡಿದ್ದೇನೆ . ಇಲ್ಲಿ ನನ್ನ ಜೀವನ ಹಾಳಾಗಿದೆ. ಮತ್ತು ನನ್ನ ಅಣ್ಣ-ತಮ್ಮಂದಿರು ನನ್ನನ್ನು ಬಿಟ್ಟು ಹೋಗಿದ್ದಾರೆ . ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ .

ಆಗ ಸಾಧು ಹೇಳುತ್ತಾರೆ . ಹೇ ಪುತ್ರ ನೀನು ನಿನ್ನ ಪೂರ್ವಜರಿಗೆ ನೋವನ್ನು ಉಂಟು ಮಾಡಿದ್ದೀಯಾ . ಯಾವ ಪುಣ್ಯ ಮತ್ತು ಧನ ಸಂಪತ್ತನ್ನು ನಿನ್ನ ಪೂರ್ವಜರು ಕೂಡಿ ಹಾಕಿದ್ದರೋ , ಅದನ್ನು ನೀನು ಮತ್ತು ನಿನ್ನ ಅಣ್ಣತಮ್ಮಂದಿರು ಸೇರಿ ಅದನ್ನು ನಾಶ ಮಾಡಿದ್ದೀರಾ . ಇದೇ ಒಂದು ಕಾರಣದಿಂದಾಗಿ ನಿನ್ನ ಸ್ಥಿತಿ ಈ ರೀತಿ ಆಗಿದೆ . ನಿನ್ನ ಪೂರ್ವಜರು ನಿನ್ನ ಕನಸ್ಸಿನಲ್ಲಿ ಹಲವಾರು ಬಾರಿ ಬಂದು ಮಹತ್ವಪೂರ್ಣವಾದ ಸಂಕೇತಗಳನ್ನು ಕೊಟ್ಟಿದ್ದಾರೆ . ಆದರೆ ನೀನು ಆ ಸಂಕೇತಗಳನ್ನು ನಿರ್ಲಕ್ಷ್ಯಮಾಡಿದ್ದೀಯಾ .

ನಿನ್ನ ಹಿರಿಯರಿಗೆ ನೀನು ಅವಮಾನ ಮಾಡಿದ್ದೀಯಾ .ಇದೇ ಒಂದು ಕಾರಣದಿಂದಾಗಿ ನಿನ್ನ ಎಲ್ಲಾ ವೈಭವ ನಷ್ಟ ಆಗಿದೆ . ಈ ರೀತಿಯಾಗಿ ಸಾಧು ಅವರು ತಿಳಿಸಿದ ನಂತರ , ಆ ವ್ಯಕ್ತಿಗೆ ಎಲ್ಲ ವಿಷಯ ಅರ್ಥವಾಗುತ್ತದೆ . ಆತನಿಗೆ ನೆನಪು ಆಗುತ್ತದೆ . ಆತನ ಕನಸಿನಲ್ಲಿ ಅವರ ಪೂರ್ವಜರು ದರ್ಶನ ಕೊಟ್ಟಿದ್ದರು . ಇಲ್ಲಿ ಆ ವ್ಯಕ್ತಿ ಸಾಧುವಿಗೆ ಒಂದು ಮಾತನ್ನು ಹೇಳುತ್ತಾನೆ .ಆದರೆ ನೀವು ಸತ್ಯವನ್ನೇ ಹೇಳಿದ್ದೀರಾ , ನಮ್ಮ ಪೂರ್ವಜರು ಕನಸಿನಲ್ಲಿ ದರ್ಶನ ಕೊಟ್ಟಿದ್ದರು . ಆದರೆ ಅವರು ನೀಡಿದ ಸಂಕೇತಗಳನ್ನು ನಾವು ಅರ್ಥ ಮಾಡಿಕೊಳ್ಳಲಿಲ್ಲ ..ದಯವಿಟ್ಟು ನೀವು ಕನಸಿನಲ್ಲಿ ಪೂರ್ವಜರು ಕಂಡರೆ , ಯಾವ ರೀತಿ ಸಂಕೇತಗಳನ್ನು ಕೊಡುತ್ತಾರೆ ಎಂದು ತಿಳಿಸಿಕೊಡಿ .

ಆಗ ಸಾಧು ಹೇಳುತ್ತಾರೆ . ಹೇ ಮಗನೇ ನೀನು ಗಮನವಿಟ್ಟು ಕೇಳು . ನಾನು ನಿನಗೆ ಪೂರ್ವಜರು ಕನಸಿನಲ್ಲಿ ಕಾಣುವುದರ ಸಂಕೇತ ತಿಳಿಸಿ ಕೊಡುತ್ತೇನೆ . ಹೇ ಪುತ್ರ ಪಿತ್ರರ ಉದ್ದಾರ ಆಗಲಿಲ್ಲ ಅಂದರೆ, ಅವರು ಪ್ರೇತವಾಗಿ ಭೂಮಿಯಲ್ಲಿ ಅಲೆದಾಡುತ್ತಾ ಇರುತ್ತಾರೆ . ಅವರು ಹಸಿವಿನಿಂದ ವ್ಯಾಕುಲಗೊಂಡು , ತಮ್ಮ ಕುಟುಂಬದವರ ಮನೆಯ ಒಳಗಡೆ ಪ್ರವೇಶ ಮಾಡುತ್ತಾರೆ . ಒಂದು ವೇಳೆ ಕನಸಿನಲ್ಲಿ ಕುದುರೆ, ಆನೆ , ಹಸು , ಅಥವಾ ಮನುಷ್ಯನ ವಿಕೃತ ರೂಪ ಕಂಡುಬಂದರೆ ,

ಈ ಮಾತಿನ ಅರ್ಥ ನಿಮ್ಮ ಪೂರ್ವಜರು ನಿಮ್ಮ ವ್ಯವಹಾರದಿಂದ ತುಂಬಾ ದುಃಖದಲ್ಲಿ ಇದ್ದಾರೆ ಎಂದು ಅರ್ಥವಾಗುತ್ತದೆ . ಯಾವ ಮನುಷ್ಯರು ಪಶು ಪಕ್ಷಿಗಳಿಗೆ ಅನ್ನದಾನ ಮಾಡುವುದಿಲ್ಲವೋ , ಅವರ ಪೂರ್ವಜರು ಅತ್ಯಂತ ದುಃಖಕ್ಕೆ ಒಳಗಾಗಿ ಪಶು ಪಕ್ಷಿಗಳ ರೂಪವನ್ನು ಧರಿಸಿಕೊಂಡು , ಕನಸಿನಲ್ಲಿ ಕಾಣುತ್ತಾರೆ . ಈ ರೀತಿಯ ಯಾವುದಾದರೂ ಕನಸು ಬಿದ್ದರೆ , ಕನಸಿನಲ್ಲಿ ಪಶು ಪಕ್ಷಿಗಳು ಮನುಷ್ಯನ ರೀತಿ ಮಾತನಾಡುತ್ತಿರುತ್ತವೆ . ಈ ಮಾತಿನ ಅರ್ಧ ಮನುಷ್ಯನ ಪೂರ್ವಜರು ಅವನ ಮೇಲೆ ತುಂಬಾ ಸಿಟ್ಟಾಗಿದ್ದಾರೆ ಎಂದು ಅರ್ಥ . ಇಂಥಹ ಮನುಷ್ಯರು ಭವಿಷ್ಯದಲ್ಲಿ ಭಯಂಕರವಾದ ಅವಮಾನಗಳನ್ನು ಎದುರಿಸುವ ಸ್ಥಿತಿ ಬರುತ್ತದೆ.

ಇವರ ಅಣ್ಣತಮ್ಮಂದಿರು ಪಶುಗಳ ರೀತಿ ಜಗಳ ಮಾಡುತ್ತಾರೆ . ಕನಸಿನಲ್ಲಿ ಪೂರ್ವಜರು ಏನನ್ನಾದರೂ ಕೇಳುವುದು ಕಂಡು ಬಂದರೆ , ಈ ಕನಸನ್ನು ಮನುಷ್ಯರು ಯಾವತ್ತಿಗೂ ನಿರ್ಲಕ್ಷ್ಯ ಮಾಡಬಾರದು . ಈ ಕನಸಿನ ಅರ್ಥ ಆ ಮನುಷ್ಯನ ಪೂರ್ವಜರು ತುಂಬಾ ದುಃಖದಲ್ಲಿ ಇದ್ದಾರೆ ಎಂದು ಅರ್ಥವಾಗುತ್ತದೆ . ಪಿತೃ ಲೋಕದಲ್ಲಿ ಅವರಿಗೆ ತೃಪ್ತಿ ಸಿಕ್ಕಿರುವುದಿಲ್ಲ . ಕನಸಿನಲ್ಲಿ ಪೂರ್ವಜರು ಏನನ್ನಾದರೂ ಕೇಳುವುದು ಕಂಡು ಬಂದರೆ, ಆ ವ್ಯಕ್ತಿಯ ಧನ ಸಂಪತ್ತು ಪೂರ್ತಿಯಾಗಿ ನಾಶವಾಗುತ್ತದೆ .

ಇವರು ದೊಡ್ಡದಾದ ದರಿದ್ರತೆಯಲ್ಲಿ ಸಿಲುಕುತ್ತಾರೆ . ಹಾಗಾಗಿ ಅಂತ ಮನುಷ್ಯರು ತಕ್ಷಣವೇ ಅನ್ನ ದಾನವನ್ನು ಮಾಡಿ . ನಿಮ್ಮ ಮೃತ ಪೂರ್ವಜರನ್ನು ಖುಷಿ ಪಡಿಸಬೇಕು . ಒಂದು ವೇಳೆ ಕನಸಿನಲ್ಲಿ ಪೂರ್ವಜರು ಸಿಟ್ಟಿನ ಅವಸ್ಥೆಯಲ್ಲಿ ಕಂಡು ಬಂದರೆ , ಮನುಷ್ಯನ ಕಾರ್ಯಗಳಿಂದ ಸಂತೋಷ ಗೊಂಡಿಲ್ಲ ಎಂದು ಅರ್ಥವಾಗುತ್ತದೆ . ಇಲ್ಲಿ ಆ ಮನುಷ್ಯ ವ್ಯಾಪಾರ ವ್ಯವಹಾರದಲ್ಲಿ ಖಂಡಿತವಾಗಿ ನಷ್ಟವನ್ನು ಅನುಭವಿಸುತ್ತಾನೆ . ಇವರ ಮೂಲಕ ಮಾಡಿದ ಎಲ್ಲಾ ಕಾರ್ಯಗಳು ನಷ್ಟವಾಗುತ್ತದೆ .

ಇವುಗಳ ಫಲ ಯಾವುದೇ ರೀತಿ ಇವರಿಗೆ ಸಿಗುವುದಿಲ್ಲ . ಒಂದು ವೇಳೆ ಕನಸಿನಲ್ಲಿ ಪೂರ್ವಜರು ಕಂಡು ಅಚಾನಕ್ಕಾಗಿ ಅದೃಶ್ಯವಾದರೆ , ಮುಂಬರುವ ಸಮಯದಲ್ಲಿ ಆ ಮನುಷ್ಯನ ಮೇಲೆ ಯಾವುದೋ ಒಂದೇ ರೀತಿಯ ಸಂಕಟ ಕಾಡುತ್ತದೆ . ಕನಸಿನಲ್ಲಿ ಪೂರ್ವಜರು ಕಣ್ಣೀರು ಹಾಕುತ್ತಿರುವುದನ್ನು ಕಂಡರೆ , ಭವಿಷ್ಯದಲ್ಲಿ ನಷ್ಟವನ್ನು ಅನುಭವಿಸುತ್ತಾರೆ .ಇವರ ಎಲ್ಲಾ ಧನ ಸಂಪತ್ತು ನಷ್ಟವಾಗುತ್ತದೆ . ಪೂರ್ವಜರು ಕನಸಿನಲ್ಲಿ ಗಲೀಜಾದ ಬಟ್ಟೆಯನ್ನು ಧರಿಸಿರುವ ರೀತಿ ಕಂಡರೆ,

ನಿಶ್ಚಿತವಾಗಿ ಆ ಮನುಷ್ಯ ಧನ ಸಂಪತ್ತು ನಷ್ಟವಾಗುತ್ತದೆ . ಹೇ ಮಗನೇ ನಿನಗೂ ಈ ರೀತಿಯ ಕನಸು ಬಿದ್ದಿರಬಹುದು . ಇಲ್ಲಿ ನೀನು ನಿನ್ನ ಪೂರ್ವಜರನ್ನು ಒಲಿಸಿಕೊಳ್ಳಲು ದಾನ, ಧರ್ಮ , ಶ್ರಾದ್ಧ ಕರ್ಮಗಳನ್ನು ಮಾಡಬೇಕು . ಇದರಿಂದ ನಿನ್ನ ಎಲ್ಲಾ ಕಷ್ಟಗಳು ದೂರವಾಗುತ್ತದೆ . ಆ ಸಾಧುವಿನ ಮಾತು ಕೇಳಿದ ಆ ವ್ಯಕ್ತಿಗೆ ತನ್ನ ತಪ್ಪಿನ ಹರಿವು ಆಗುತ್ತದೆ..ಆದ ತಕ್ಷಣ ಅಣ್ಣ ತಮ್ಮಂದಿರ ಬಳಿ ಹೋಗುತ್ತಾನೆ . ಆ ಸಾಧು ತಿಳಿಸಿದ ಮಾತುಗಳನ್ನು ಅವರಿಗೆ ತಿಳಿಸುತ್ತಾನೆ . ನಂತರ ಎಲ್ಲಾ ಅಣ್ಣ-ತಮ್ಮಂದಿರಿಗೆ ಅವರು ಮಾಡಿದ ತಪ್ಪು ಅರಿವಾಗುತ್ತದೆ . ನಂತರ ಅಣ್ಣತಮ್ಮಂದಿರು ಎಲ್ಲರೂ ಸೇರಿ ನದಿಯ ದಡದ ಹತ್ತಿರ ಹೋಗುತ್ತಾರೆ .

ತಮ್ಮ ಪೂರ್ವಜರಿಗೋಸ್ಕರ ಶ್ರಾದ್ಧ, ದರ್ಪಣ, ದಾನ, ಧರ್ಮ ಇತ್ಯಾದಿ ಕಾರ್ಯಗಳನ್ನು ಮಾಡುತ್ತಾರೆ . ತಮ್ಮ ಪೂರ್ವಜರ ಆಶೀರ್ವಾದವನ್ನು ಸಹ ಪಡೆದುಕೊಳ್ಳುತ್ತಾರೆ . ನಂತರ ಒಂದು ದಿನ ಇವರ ಪೂರ್ವಜರು ಇವರೆಲ್ಲರ ಕನಸಿನಲ್ಲಿ ಬಂದು ಇವರಿಗೆ ದರ್ಶನ ಕೊಡುತ್ತಾರೆ . ಇವರಿಗೆ ನಾನಾ ಪ್ರಕಾರದ ಸಂಕೇತಗಳನ್ನು ಕೊಡುತ್ತಾರೆ .ಯಮರಾಜರು ನಾರದರಿಗೆ ಹೇಳುತ್ತಾರೆ . ಯಾವಾಗ ಮನುಷ್ಯನ ಪೂರ್ವಜರು ಖುಷಿಯಾಗುತ್ತಾರೋ , ಆಗ ಮನುಷ್ಯನಿಗೆ ಅನೇಕ ಪ್ರಕಾರದ ಸಂಕೇತಗಳು ಸಿಗುತ್ತವೆ .

ಒಂದು ವೇಳೆ ಕನಸಿನಲ್ಲಿ ಪೂರ್ವಜರು ಕೈಗಳಿಂದ ತಲೆಯನ್ನು ಸವರುವುದು ಕಂಡುಬಂದರೆ , ಈ ಕನಸಿನ ಅರ್ಥ ಅವರು ತುಂಬಾ ಖುಷಿಯಾಗಿ ಇರುತ್ತಾರೆ ಎಂದು ಹೇಳಲಾಗಿದೆ. ಆ ವ್ಯಕ್ತಿಯ ಜೀವನದಲ್ಲಿ ಒಳ್ಳೆಯ ಘಟನೆಗಳು ನಡೆಯುತ್ತವೆ ಎಂದು ತೋರಿಸಿ ಕೊಡುತ್ತಾರೆ . ಪೂರ್ವಜರು ಮನುಷ್ಯನತ್ತ ಕೈ ಮಾಡುವುದು ಕಂಡು ಬಂದರೆ , ಮನುಷ್ಯರು ಮಾಡುವ ಕಾರ್ಯದಲ್ಲಿ ಖಂಡಿತವಾಗಿ ಯಶಸ್ಸು ಸಿಗುತ್ತದೆ . ಕನಸಿನಲ್ಲಿ ಪೂರ್ವಜರು ಆರೋಗ್ಯವಾಗಿ ಇರುವುದು ಕಂಡುಬಂದರೆ ,

ಅವರ ಮುಖದಲ್ಲಿ ನಗು ಕಾಣಿಸುತ್ತಿದ್ದರೆ, ಅವರ ಬಟ್ಟೆಗಳು ಹೊಳೆಯುತ್ತಿದ್ದರೆ, ಆ ಪೂರ್ವಜರಿಗೆ ಮುಕ್ತಿ ಸಿಕ್ಕಿದೆ ಎಂದರ್ಥ . ನಿಮ್ಮ ಪೂರ್ವಜರು ಆಕಾಶದಲ್ಲಿ ಮೋಡಗಳ ಮೇಲೆ ಕುಳಿತಿರುವುದು ಕಂಡು ಬಂದರೆ, ಇದು ಶುಭ ಸಂಕೇತ ಆಗಿದೆ. ಅವರು ತಮ್ಮ ಮಕ್ಕಳಿಗೆ ಆಶೀರ್ವಾದ ಕೊಡುತ್ತಾರೆ. ಈ ರೀತಿಯಾಗಿ ಎಲ್ಲಾ ಅಣ್ಣ ತಮ್ಮಂದಿರಿಗೆ ತಮ್ಮ ಪೂರ್ವಜರಿಂದ ಆಶೀರ್ವಾದ ಸಿಗುತ್ತದೆ. ಅವರು ಕಳೆದುಕೊಂಡಿರುವ ಎಲ್ಲಾ ಧನ ಸಂಪತ್ತು ಮರಳಿ ದೊರೆಯುತ್ತದೆ . ಅಣ್ಣ ತಮ್ಮಂದಿರು ಕೂಡಿಕೊಂಡು ನೂರು ವರ್ಷ ಬಾಳುತ್ತಾರೆ . ಈ ರೀತಿಯಾಗಿ ಯಮ ರಾಜರು ಪೂರ್ವಜರು ಕೊಡುವ ಸಂಕೇತಗಳನ್ನು ಸೂಚಿಸುತ್ತಾರೆ.

Leave a Comment