ನಿಮ್ಮ ಬೆರಳಿನ ಮೇಲಿನ ಅರ್ಧ ಚಂದ್ರನ ರಹಸ್ಯ

0

ನಾವು ಈ ಲೇಖನದಲ್ಲಿ ನಿಮ್ಮ ಬೆರಳಿನ ಮೇಲಿನ ಅರ್ಧ ಚಂದ್ರನ ರಹಸ್ಯ ಏನು ಎಂದು ತಿಳಿಯೋಣ .
ನಮ್ಮ ಬೆರಳಿನ ಉಗುರಿನ ಮೇಲೆ ರಚನೆಯಾದಂತ ಅರ್ಧ ಚಂದ್ರನ ಆಕಾರದ ಅರ್ಥ ಏನಿರುತ್ತದೆ, ನಾವು ಶಾರೀರಿಕ ಅಂಗವನ್ನು ಗಮನವಿಟ್ಟು ನೋಡಿದರೆ , ಕೆಲವೊಮ್ಮೆ ಅಚ್ಚರಿ ಮೂಡಿಸುತ್ತದೆ. ನಮ್ಮ ತ್ವಚೆಯ ಮೇಲೆ ಇರುವ ರೋಮಗಳು ಆಗಲಿ, ಮಚ್ಚೆಗಳಾಲಿ , ಅಂಗೈ ಮೇಲೆ ಇರುವ ರೇಖೆಗಳಾಗಲಿ , ಕಾಲು ಮತ್ತು ಅಂಗೈ ಮೇಲೆ ಇರುವ ಬೆರಳಿನ ಉಗುರುಗಳು ಆಗಲಿ ,

ಇವು ಕೆಲವು ಯಾವ ರೀತಿಯ ವಿಷಯ ಆಗಿದೆ ಎಂದರೆ, ಈ ಅಂಗಗಳನ್ನು ಪೂರ್ಣಗೊಳಿಸುತ್ತವೆ. ನಮ್ಮ ಕೈಗಳಲ್ಲಿ ಹಲವಾರು ರಹಸ್ಯಗಳು ಅಡಗಿರುತ್ತವೆ. ಅಂಗೈಯಲ್ಲಿ ಇರುವ ರೇಖೆಗಳನ್ನು ನೋಡಿ ನಿಮ್ಮ ಭವಿಷ್ಯವನ್ನು ತಿಳಿಸಬಹುದಾಗಿದೆ . ನಿಮ್ಮ ಬೆರಳುಗಳನ್ನು ನೋಡಿ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು . ಆದರೆ ನೀವು ಗಮನವಿಟ್ಟು ನಿಮ್ಮ ಬೆರಳಿನ ಉಗುರುಗಳನ್ನು ನೋಡಿ . ನಿಮ್ಮ ಉಗುರಿನ ಕೆಳಭಾಗವನ್ನು ಸ್ವಲ್ಪ ಗಮನವಿಟ್ಟು ನೋಡಿ . ಅಲ್ಲಿ ಅರ್ಧ ಚಂದ್ರನ ಆಕಾರದಲ್ಲಿ ಕೂಡಿರುತ್ತದೆ .

ಇದು ಶುಭ್ರವಾದ ಬಣ್ಣದಲ್ಲಿ ಇರುತ್ತದೆ . ನಿಮ್ಮ ಬೆರಳಿನ ಮೇಲೆ ಯಾಕೆ ಇದು ಮೂಡುತ್ತದೆ ಎಂದರೆ , ಅರ್ಧ ಚಂದ್ರ ಬೆರಳಿನ ಉಗುರಿನ ಪ್ರಮುಖವಾದ ಭಾಗ ಆಗಿರುತ್ತದೆ. ಇದು ಬೇರೆ ಬೆರಳಿನ ಉಗುರಿಗಿಂತ ಸ್ವಲ್ಪ ಶುಭ್ರವಾಗಿ ಇರುತ್ತದೆ. ವಾಸ್ತವದ ಪ್ರಕಾರ ಈ ಅರ್ಧ ಚಂದ್ರನ ಬಿಳಿ ಭಾಗ ಬೆರಳು ಉಗುರಿನ ಮುಖ್ಯ ವಾದ ಭಾಗ ಆಗಿರುತ್ತದೆ. ಇದು ನಿಮ್ಮ ಆರೋಗ್ಯದ ಬಗ್ಗೆ ಕೂಡ ಹಲವಾರು ರಹಸ್ಯಗಳನ್ನು ಬಿಚ್ಚಿಡುತ್ತದೆ . ನಿಮ್ಮ ಹತ್ತು ಬೆರಳುಗಳಲ್ಲಿ ಅಥವಾ 8 ಬೆರಳುಗಳಲ್ಲಿ ಅರ್ಧ ಚಂದ್ರನ ಆಕಾರ ಮೂಡಿದ್ದರೆ, ಆರೋಗ್ಯದಲ್ಲಿ ನಿಮಗೆ ಸುಧಾರಣೆ ಆಗಿದೆ ಎಂದರ್ಥ. ಇಲ್ಲಿ ಆರೋಗ್ಯದ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ .

ಇನ್ನೂ ಮಾಯವಾಗುತ್ತಿರುವ ಚಂದ್ರನ ಗುರುತು ನಿಮ್ಮ ಬೆರಳಿನ ಉಗುರಿನಿಂದ ಚಂದ್ರನ ಗುರುತು ಮರೆಯಾಗುತ್ತಿದ್ದರೆ, ಅಥವಾ ಕೇವಲ ನಿಮ್ಮ ಹೆಬ್ಬೆರಳಿನ ಮೇಲೆ ಅರ್ಧ ಚಂದ್ರನ ಆಕಾರ ಇದ್ದರೆ, ಇಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು.

ಬೆರಳಿನ ಉಗುರಿನ ಅರ್ಧ ಚಂದ್ರ ಏನನ್ನು ತಿಳಿಸುತ್ತದೆ. ಎಂದು ತಿಳಿಯೋಣ . ಯಾರ ಬೆರಳಿನ ಉಗುರಿನಲ್ಲಿ ಎಷ್ಟು ಶುಭ್ರವಾಗಿ , ಹೆಚ್ಚಾಗಿ ಕಾಣುತ್ತಿರುತ್ತದೆಯೋ , ಅಷ್ಟೇ ಆ ಮನುಷ್ಯನ ಶಾರೀರಿಕ ಮತ್ತು ಮಾನಸಿಕ ರೂಪದಲ್ಲಿ ಶಕ್ತಿಶಾಲಿಯಾಗಿ ಇರುತ್ತಾನೆ. ಜ್ಯೋತಿಷ್ಯ ವಿಧ್ಯೆಯಲ್ಲಿ ಈ ರೀತಿಯಾಗಿ ಹೇಳುತ್ತಾರೆ. ಯಾವ ವ್ಯಕ್ತಿಯ ಬೆರಳಿನ ಉಗುರುಗಳು ಆಕಾರದಲ್ಲಿ ಸರಿಯಾಗಿ ನೋಡಲು ಸುಂದರವಾಗಿ ಇರುತ್ತದೆಯೋ , ಅಂತಹ ಜನರು ಆರ್ಥಿಕ ಉನ್ನತಿಯನ್ನು ಮಾಡುತ್ತಾರೆ.

ಯಾವ ಸ್ತ್ರೀಯರ ಬೆರಳಿನ ಉಗುರುಗಳು ನೋಡಲು ಗುಲಾಬಿ ವರ್ಣ ಮತ್ತು ಸುಂದರವಾಗಿ ಇರುತ್ತದೆಯೋ , ಅಂಥವರು ತುಂಬಾ ಅದೃಷ್ಟವಂತರು ಆಗಿರುತ್ತಾರೆ . ಯಾರ ಕೈಯಲ್ಲಿ ಬೆರಳಿನ ಉಗುರುಗಳು ತುಂಬಾ ಚಿಕ್ಕದಾಗಿ ಇರುತ್ತದೆಯೋ, ಅವರಿಗೆ ಕುತ್ತಿಗೆಗೆ ಸಂಬಂಧ ಪಟ್ಟ ಖಾಯಿಲೆಗಳು ಇರುತ್ತವೆ. ಯಾರ ಕೈಯಲ್ಲಿನ ಬೆರಳಿನ ಉಗುರುಗಳು ಚಿಕ್ಕದು ಮತ್ತು ಹಳದಿ ಬಣ್ಣ ಇರುತ್ತದೆಯೋ, ಇಂಥವರಲ್ಲಿ ಸೊಕ್ಕಿನ ಸ್ವಭಾವ ಇರುತ್ತದೆ. ಇನ್ನೊಂದೆಡೆ ಯಾವ ವ್ಯಕ್ತಿಯ ಬೆರಳಿನ ಉಗುರುಗಳು ದುಂಡಾಕಾರದಲ್ಲಿ ಸುಂದರವಾಗಿ ಇರುತ್ತದೆಯೋ , ಅಂಥವರು ತಕ್ಷಣವೇ ನಿರ್ಧಾರವನ್ನು ತೆಗೆದುಕೊಳ್ಳುವ ವ್ಯಕ್ತಿ ಆಗಿರುತ್ತಾರೆ.

ಮತ್ತು ಒಳ್ಳೆಯ ವಿಚಾರಗಳನ್ನು ಹೊಂದಿರುತ್ತಾರೆ. ತೆಳುವಾದ ಮತ್ತು ಉದ್ದ ಬೆರಳಿನ ಉಗುರು ಇರುವ ವ್ಯಕ್ತಿಗಳು ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ . ಈ ಕಾರಣದಿಂದಾಗಿ ಇವರು ಹಲವಾರು ಬಾರಿ ನಷ್ಟಗಳನ್ನು ಎದುರಿಸುತ್ತಾರೆ . ಇಂಥಹ ಜನರು ಕೆಟ್ಟ ಅವಸ್ಥೆಗಳಿಗೆ ಬಲಿಯಾಗಿ ಇರುತ್ತಾರೆ .ಇವರ ಕುಟುಂಬದವರು ಮತ್ತು ಅಕ್ಕಪಕ್ಕದವರು ಇವರಿಂದ ಸಮಸ್ಯೆಯಲ್ಲಿ ಇರುತ್ತಾರೆ . ಸುಂದರವಾಗಿರುವ ಮತ್ತು ಚಿಕ್ಕದಾಗಿರುವ ಬೆರಳಿನ ಉಗುರುಗಳು ಇದ್ದರೆ, ಇಂತಹ ಜನರು ತಮ್ಮ ಜೀವನ ಸಂಗಾತಿಗಳನ್ನು ತಮ್ಮ ಮಾತಿನಲ್ಲಿ ಕುಣಿಸುತ್ತಾರೆ . ಚರಿತ್ರೆಯಿಂದ ಇವರು ತುಂಬಾ ಒಳ್ಳೆಯವರು ಆಗಿರುತ್ತಾರೆ .

ಆದರೆ ಪೂರ್ತಿಯಾಗಿ ಇಂಥವರನ್ನು ನಂಬಲು ಸಾಧ್ಯವಿಲ್ಲ . ಬಿರುಸಾದ ಬೆರಳಿನ ಉಗುರು ಇರುವಂತಹ ವ್ಯಕ್ತಿಗಳು ಜಗಳ ಆಡುವ ಗುಣವನ್ನು ಹೊಂದಿರುವುದರ ಜೊತೆಗೆ , ತಮ್ಮ ಹಠವನ್ನು ಇವರು ಯಾವತ್ತಿಗೂ ಬಿಡುವುದಿಲ್ಲ . ಇವರು ಅಂದುಕೊಂಡಿದ್ದನ್ನು ಮಾಡಿಯೇ ಬಿಡುತ್ತಾರೆ . ಅದು ಸರಿಯಾಗಿ ಇರಲಿ, ಅಥವಾ ತಪ್ಪು ಇರಲಿ , ಇವರು ಯಾವುದೇ ವಿಷಯದ ಚಿಂತೆ ಇರುವುದಿಲ್ಲ . ಬೆರಳಿನ ಉಗುರಿನ ಮೇಲೆ ಮೂಡುವಂತಹ ಈ ಬಿಳಿ ಚಂದ್ರನ ಆಕಾರವು ಪ್ರೀತಿಯಲ್ಲಿ ಸಿಗುವ ಯಶಸ್ಸನ್ನು ತೋರಿಸಿಕೊಡುತ್ತದೆ . ಆದರೆ ಕೆಲವೊಮ್ಮೆ ಈ ಬಿಳಿ ಬಣ್ಣದ ಗುರುತು ಸೋಲಿಗೂ ಕೂಡ ಕಾರಣವಾಗುತ್ತದೆ .

ಹಾಗಾದರೆ ಬೆರಳಿನ ಉಗುರಿನ ಬಣ್ಣ ಏನನ್ನು ತಿಳಿಸುತ್ತದೆ ಎಂದು ತಿಳಿದುಕೊಳ್ಳೋಣ . ಶುಭ್ರವಾದ ಬೆರಳಿನ ಉಗುರುಗಳು ಹಲವಾರು ಬಾರಿ ಉಗುರಿನ ಮೇಲೆ ಬಿಳಿ ಬಣ್ಣದ ಗುರುತುಗಳು ಕಾಣಿಸುತ್ತವೆ . ಕೆಲವೊಮ್ಮೆ ಪೂರ್ತಿಯಾಗಿ ಬಿಳಿ ಬಣ್ಣದಲ್ಲಿ ಕಾಣುತ್ತವೆ . ಪೂರ್ತಿಯಾದ ಬಿಳಿ ಬಣ್ಣದ ಉಗುರುಗಳು ಲಿವರ್ ಗೆ ಸಂಬಂಧಪಟ್ಟ ಸಮಸ್ಯೆಗಳಾಗಲಿ ,ಕಣ್ಣುಗಳ ಸಮಸ್ಯೆಗಳ ಬಗ್ಗೆ ಕೂಡ ತೋರಿಸಿ ಕೊಡುತ್ತವೆ . ಉಬ್ಬಿದಂತಹ ಬೆರಳಿನ ಉಗುರುಗಳು ಉಗುರಿನ ಅಕ್ಕಪಕ್ಕದಲ್ಲಿ ತ್ವಚೆ ಏನಾದರೂ ಉಬ್ಬಿದ್ದರೆ , ಶ್ವಾಸಕೋಶ ಮತ್ತು ಕಣ್ಣುಗಳಿಗೆ ಸಂಬಂಧಪಟ್ಟ ಸಮಸ್ಯೆಯನ್ನು ತೋರಿಸಿಕೊಡುತ್ತದೆ .

ಇನ್ನು ಹಳದಿ ಬಣ್ಣದ ಬೆರಳಿನ ಉಗುರುಗಳು ಹನಿಮಿಯ , ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು , ಜೊತೆಗೆ ಲಿವರ್ ಗೆ ಸಂಬಂಧಪಟ್ಟ ರೋಗಗಳ ಲಕ್ಷಣಗಳನ್ನು ತೋರಿಸಿಕೊಡುತ್ತದೆ . ಫಂಗಸ್ ಇನ್ಫೆಕ್ಷನ್ ಕಾರಣದಿಂದಾಗಿ ಪೂರ್ತಿ ಬೆರಳಿನ ಉಗುರು ಹಳದಿ ಬಣ್ಣಕ್ಕೆ ಬರುತ್ತದೆ . ಹಲವಾರು ಬಾರಿ ಥೈರಾಯಿಡ್ ಆಗಲಿ , ಮಧುಮೇಹ ಆಗಲಿ, ಕಾಮಾಲೆ ರೋಗಗಳಿಗೂ ಕೂಡ ಈ ರೀತಿ ಆಗುತ್ತದೆ .ಒಂದು ವೇಳೆ ಬೆರಳಿನ ಉಗುರುಗಳು ತುಂಬಾ ದಪ್ಪದಾಗಿದ್ದು , ಹಳದಿ ಬಣ್ಣದಲ್ಲಿದ್ದು ತುಂಬಾ ವೇಗವಾಗಿ ಬೆಳೆಯುತ್ತಿದ್ದರೆ , ಇವು ಶ್ವಾಸಕೋಶಗಳಿಗೆ ಸಂಬಂಧಪಟ್ಟ ರೋಗಗಳನ್ನು ತೋರಿಸಿ ಕೊಡುತ್ತದೆ .

ಇನ್ನು ನೀಲಿ ಬಣ್ಣದ ಬೆರಳಿನ ಉಗುರುಗಳು ಶರೀರದಲ್ಲಿ ಆಕ್ಸಿಜನ್ ಸಂಚಾರ ಸರಿಯಾಗಿ ಆಗಲಿಲ್ಲ ಎಂದರೆ , ಬೆರಳಿನ ಉಗುರುಗಳು ನೀಲಿ ಬಣ್ಣಕ್ಕೆ ಬರುತ್ತವೆ . ಇನ್ನೂ ಚಮಚದ ರೀತಿ ಇರುವ ಬೆರಳಿನ ಉಗುರುಗಳು ರಕ್ತದ ಕೊರತೆ ಅಷ್ಟೇ ಅಲ್ಲದೆ , ಅನುವಂಶಿಕ ರೋಗಗಳ ಕಾರಣದಿಂದ ಈ ರೀತಿಯಾಗಿ ಆಗುತ್ತದೆ . ಇನ್ನೂ ಕಂದು ಬಣ್ಣದ ಬೆರಳಿನ ಉಗುರುಗಳು ಇದು ಹೆಚ್ಚಿನ ರಕ್ತದ ಒತ್ತಡದ ಸಂಕೇತವನ್ನು ಕೊಡುತ್ತದೆ. ಒಂದು ವೇಳೆ ನೇರಳೆ ಬಣ್ಣದ ಆಕಾರದಲ್ಲಿ ಇದ್ದರೆ , ಕಡಿಮೆ ರಕ್ತದ ಒತ್ತಡದ ಸಂಕೇತವನ್ನು ಕೊಡುತ್ತದೆ . ಅರ್ಧ ಬಿಳಿ ಮತ್ತು ಅರ್ಧ ಗುಲಾಬಿ ಬಣ್ಣದ ಬೆರಳಿನ ಉಗುರುಗಳು ಅಚಾನಕ್ಕಾಗಿ ಬೆರಳಿನ ಉಗುರು ಅರ್ಧ ಬಿಳಿ ಮತ್ತು ಗುಲಾಬಿ ಬಣ್ಣಕ್ಕೆ ಬಂದರೆ, ಇದು ಕಿಡ್ನಿ ರೋಗಗಳಿಗೆ ಸಂಬಂಧ ಪಡುತ್ತದೆ. ಎಂದು ಹೇಳಲಾಗಿದೆ.

Leave A Reply

Your email address will not be published.