ಮೊಳಕೆ ಕಟ್ಟಿದ ರಾಗಿ ಹಾಲು 50% ರೋಗಗಳಿಗೆ ಸಂಜೀವಿನಿ

ನಾವು ಈ ಲೇಖನದಲ್ಲಿ ಮೊಳಕೆ ಕಟ್ಟಿದ ರಾಗಿ ಹಾಲು 50% ರೋಗಗಳಿಗೆ ಹೇಗೆ ಸಂಜೀವಿನಿ ಆಗುತ್ತದೆ. ಎಂದು ತಿಳಿಯೋಣ. ಇಲ್ಲಿ ರಾಗಿ ಹಾಲಿನ ಆರೋಗ್ಯದ ಲಾಭಗಳನ್ನು ಕುರಿತು ಮಾಹಿತಿಗಳನ್ನು ನೋಡೋಣ . ಕಾರ್ಬೋಹೈಡ್ರೇಟ್, ಮಿನರಲ್ಸ್ , ಫೈಬರ್ ಗಳು ಯಥೇಚ್ಛವಾಗಿ ನಮಗೆ ಸಿಗುತ್ತವೆ . ರಕ್ತವನ್ನು ವೇಗವಾಗಿ ಉತ್ಪತ್ತಿ ಮಾಡುವಂತಹ ಅದ್ಭುತವಾದ ಒಂದು ದಿವ್ಯ ಔಷಧಿ ರಾಗಿ ಹಾಲು . ಧಾನ್ಯಗಳಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಇರುವಂತಹ ಒಂದು ಧಾನ್ಯ ಎಂದರೆ ರಾಗಿ , ಕ್ಯಾಲ್ಸಿಯಂ ಕೊರತೆ ಬರುವುದಿಲ್ಲ .

ಮೂಳೆಗಳು ನೂರು ವರ್ಷ ಆದರೂ ಗಟ್ಟಿಯಾಗಿ ಇರುತ್ತದೆ . ರಾಗಿ ಹಾಲು ಅದ್ಭುತ ಪೋಷಕ ಸತ್ವಗಳನ್ನು ಹೊಂದಿದೆ. ಏಕೆಂದರೆ ರಾಗಿಯಲ್ಲಿ ಹೇರಳವಾಗಿ ಪ್ರೋಟೀನ್ , ವಿಟಮಿನ್ಸ್ ,ಕಾರ್ಬೋಹೈಡ್ರೇಟ್ಸ್, ಫೈಬರ್ , ಮಿನರಲ್ಸ್ ಗಳು , ಯಥೇಚ್ಛವಾಗಿ ನಮಗೆ ಸಿಗುತ್ತದೆ . ಈ ರಾಗಿಯಲ್ಲಿ ಕಬ್ಬಿಣದ ಅಂಶ ಕೂಡ ಹೆಚ್ಚು ಪ್ರಮಾಣದಲ್ಲಿ ಕಾಣಬಹುದು . ರಾಗಿ ಹಾಲನ್ನು ಮಾಡಿಕೊಂಡು ಸೇವನೆ ಮಾಡುವುದರಿಂದ , ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

ರಾಗಿ ಹಾಲು ತಯಾರಿಸುವುದು ಹೇಗೆ ಎಂದರೆ , ಒಂದು ಮುಷ್ಠಿಯಷ್ಟು ರಾಗಿಯನ್ನು ನೀರಿನಲ್ಲಿ ನೆನೆಸಬೇಕು . ನೆನೆಸಿದ ನಂತರ ಅದನ್ನು ಬಟ್ಟೆಯಲ್ಲಿ ಕಟ್ಟು ಇಡಬೇಕು . ಆಗ ಸ್ವಲ್ಪ ಪ್ರಮಾಣದಲ್ಲಿ ಮೊಳಕೆ ಬರುತ್ತದೆ . ಆ ರಾಗಿಯನ್ನು ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ರುಬ್ಬಬೇಕು . ಇದರಿಂದ ಹಾಲಿನ ಅಂಶ ಬರುತ್ತದೆ . ಇದನ್ನು ಸೋಸಿಕೊಳ್ಳಬೇಕು . ಹೀಗೆ ಎರಡು ಮೂರು ಸಲ ಅದಕ್ಕೆ ನೀರು ಹಾಕಿ ರುಬ್ಬಿ ಹಿಂಡುತ್ತಿರಬೇಕು . ಅದರಲ್ಲಿರುವ ಎಲ್ಲಾ ಸತ್ವಗಳು ಆ ಹಾಲಿನಲ್ಲಿ ಬೆರೆಯುತ್ತದೆ .

ಆ ಹಾಲಿಗೆ ಸ್ವಲ್ಪ ಪ್ರಮಾಣದಲ್ಲಿ ಬೆಲ್ಲ ಸೇರಿಸಿ ಸೇವನೆ ಮಾಡುವುದರಿಂದ , ಅಥವಾ ಡ್ರೈ ಫ್ರೂಟ್ಸ್ ಪುಡಿಯನ್ನು ಹಾಕಿಕೊಂಡು ಸೇವನೆ ಮಾಡಬಹುದು , ಈ ರೀತಿ ಸೇವನೆ ಮಾಡುವುದರಿಂದ ಅದ್ಭುತವಾದ ಪರಿಣಾಮ ಉಂಟುಮಾಡುತ್ತದೆ . ನಿಮ್ಮಲ್ಲಿ ರಕ್ತಹೀನತೆಯ ಸಮಸ್ಯೆ ಬರುವುದೇ ಇಲ್ಲ . ರಕ್ತವನ್ನು ಬೇಗ ಉತ್ಪತ್ತಿ ಮಾಡುವ ಅದ್ಭುತವಾದ ದಿವ್ಯ ಔಷಧಿ ಈ ರಾಗಿ ಹಾಲು ಆಗಿರುತ್ತದೆ . ಯಾರಿಗೆ ಕ್ಯಾಲ್ಸಿಯಂ ಕೊರತೆ ಇರುತ್ತದೆ ಇದರಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಇರುತ್ತದೆ .

ಮೂಳೆಗಳು ನೂರು ವರ್ಷ ಆದರೂ ಗಟ್ಟಿಯಾಗಿ ಇರುತ್ತದೆ . ಎಲ್ಲಾ ಸಮಸ್ಯೆಗಳಿಂದ ಇದು ನಮ್ಮನ್ನು ರಕ್ಷಣೆ ಮಾಡುತ್ತದೆ . ರಾಗಿ ಹಾಲನ್ನು ಕುಡಿಯುವುದರಿಂದ ಚರ್ಮದ ಕಾಂತಿ ಚೆನ್ನಾಗಿರುತ್ತದೆ . ಚರ್ಮ ರೋಗಗಳು ಬರದಂತೆ ಕಾಪಾಡುತ್ತದೆ . ಮತ್ತು ಪಳ ಪಳ ಎಂದು ಹೊಳೆಯುತ್ತದೆ . ರಾಗಿ ಹಾಲನ್ನು ಕುಡಿಯುವುದರಿಂದ ಅಜೀರ್ಣ ಮತ್ತು ಮಲಬದ್ಧತೆ ದೂರವಾಗುತ್ತದೆ . ಹಾಗೆಯೇ ರಾಗಿ ಹಾಲು ಸೇವನೆಯಿಂದ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ . ಮೆದುಳಿನ ಎಲ್ಲಾ ಶಕ್ತಿಗಳು ಸಹ ಕ್ರಿಯಾಶೀಲವಾಗುತ್ತದೆ . ಹೀಗೆ ರಾಗಿ ಹಾಲು ಕುಡಿಯುವುದರಿಂದ ಕರುಳಿನ ಶಕ್ತಿ ಹೆಚ್ಚಿಗೆ ಆಗುತ್ತಾ ವೀಕ್ಷಣೆಯ ಶಕ್ತಿ ಹೆಚ್ಚಿಗೆ ಆಗುತ್ತದೆ .

ರಾಗಿ ಹಾಲು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು . ರಾಗಿ ಹಾಲನ್ನು ಸೇವನೆ ಮಾಡುವುದರಿಂದ ಮಾಂಸ ಖಂಡದ ವೃದ್ಧಿಯಾಗುತ್ತದೆ . ಮಾಂಸ ಖಂಡಗಳು ಬಲಿಷ್ಠವಾಗುತ್ತದೆ . ತುಂಬಾ ಶಕ್ತಿ ಉತ್ಪತ್ತಿಯಾಗುತ್ತದೆ.. ನರ ನಾಡಿಗಳು ಕ್ರಿಯಾ ಶೀಲವಾಗುತ್ತದೆ. ರಾಗಿ ಹಾಲಿನ ಸೇವನೆಯಿಂದ ಹಾರ್ಮೋನ್ ಗಳ ಸಮತೋಲನ ಆಗುತ್ತದೆ. ನಾವು ಎಲ್ಲಾ ಸಮಸ್ಯೆಗಳಿಂದ ಪಾರಾಗಬೇಕು ಎಂದರೆ, ರಾಗಿ ಹಾಲನ್ನು ಕುಡಿಯುವುದು ಬಹಳ ಪ್ರಮುಖವಾಗುತ್ತದೆ . ನಮ್ಮ ನರಗಳಲ್ಲಿ ಆಮ ಸಂಗ್ರಹಣೆ ಆಗಿದೆ ಎಂದರೆ ,

ಅದು ವೆರಿಕೋಸ್ ವೇನ್ಸ್ , ನರನಾಡಿಗಳಲ್ಲಿ ಶೇಖರಣೆ ಆದಾಗ ಮೆದುಳಿನ ತೊಂದರೆ, ಹೃದಯದ ತೊಂದರೆಗಳು ಬರುತ್ತದೆ. ಹಾಗೆಯೇ ನರ ನಾಡಿಗಳಲ್ಲಿ ಕೊಲೆಸ್ಟ್ರಾಲ್ ಅಥವಾ ಟಾಕ್ ಸಿಕ್ ಎಂದು ಕೂಡ ಕರೆಯುತ್ತಾರೆ. ಇಂತಹ ಎಲ್ಲಾ ಕೆಟ್ಟ ಅಂಶಗಳನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವ ಕೆಲಸವನ್ನು ಈ ರಾಗಿಯ ಹಾಲು ಮಾಡುತ್ತದೆ .ರಾಗಿ ಸೇವನೆಯಿಂದ ಆರೋಗ್ಯ ಚೆನ್ನಾಗಿ ಇರುವುದರ ಜೊತೆಗೆ , ಆಯಸ್ಸು ಕೂಡ ಹೆಚ್ಚಿಗೆ ಆಗುತ್ತದೆ . ಹಿಂದೆ ರಾಗಿ ಮುದ್ದೆಯನ್ನು ಸೇವನೆ ಮಾಡುತ್ತಾ ಇದ್ದುದ್ದರಿಂದ ನೂರು ವರ್ಷಗಳ ಕಾಲ ಬದುಕುತ್ತಿದ್ದರು .

ಈಗ ಫಿಜಾ , ಬರ್ಗರ್ ಜಮಾನ ಆಗಿದೆ. ಸರ್ವರೂ ಹೇಳಿರುವ ಪ್ರಕಾರ ರಾಗಿಯನ್ನು ತಿಂದವನು ಯೋಗಿ ಆಗುತ್ತಾನೆ , ಎಂದು ಹೇಳಿದ್ದಾರೆ. ರಾಗಿಗೆ ಯೋಗಿ ಮಾಡುವ ಶಕ್ತಿ ಇದೆ . ಮನಸ್ಸನ್ನು ಪ್ರಸನ್ನ ಗೊಳಿಸುತ್ತದೆ . ರಾಗಿಯಲ್ಲಿ ಅದ್ಭುತವಾದ ಮೆದುಳನ್ನು ಸಮತೋಲನ ಮಾಡುವ ಅಂಶ ಇರುತ್ತದೆ . ದೇಹ ಆರೋಗ್ಯಕರವಾಗಿ ಇರುವ ಹಾಗೆ ಶಕ್ತಿಯಾಗಿ ಪರಿವರ್ತನೆ ಮಾಡುತ್ತದೆ . ಹೃದಯದ ರೋಗಗಳು ಬರದಂತೆ ತಡೆಯುತ್ತದೆ . ರಾಗಿಯನ್ನು ಸೇವನೆ ಮಾಡುವುದರಿಂದ ಪಿತ್ತ ಮತ್ತು ವಾತದ ಸಮಸ್ಯೆಗಳನ್ನು ತಡೆಗಟ್ಟಬಹುದು .

ಹೀಗೆ ಇಷ್ಟೆಲ್ಲಾ ಲಾಭವನ್ನು ಹೊಂದಿರುವ ರಾಗಿಯನ್ನು ನಾವು ಸರಿಯಾಗಿ ಮತ್ತು ಸರಿಯಾದ ವಿಧಾನದಲ್ಲಿ ಸೇವನೆ ಮಾಡಬೇಕು. ಪ್ಲಾಸ್ಟಿಕ್ ಕವರ್ ಅಲ್ಲಿ ಪ್ಯಾಕ್ ಆಗಿರುವ ಹಾಲನ್ನು ಕುಡಿಯುವ ಬದಲಿಗೆ ಈ ಒಂದು ರಾಗಿ ಹಾಲು ಕುಡಿಯುವುದು ಉತ್ತಮ . ಈ ಪ್ಯಾಕೆಟ್ ಹಾಲನ್ನು ಕುಡಿಯುವುದರಿಂದ ಬಿಪಿ, ಶುಗರ್ ಕ್ಯಾನ್ಸರ್ ,ಬರುತ್ತಿದೆ ಎಂದು ಹೇಳಲಾಗಿದೆ . ಹೀಗೆ ಹಲವಾರು ರೋಗಗಳು ಬರುತ್ತಿದೆ ಎಂದು ಹೇಳಲಾಗಿದೆ. ಈ ರಾಗಿ ಹಾಲು ಹಲವಾರು ಸಂಶೋಧನೆಗಳಿಂದ ರೋಗಗಳಿಗೆ ರಾಮ ಬಾಣ ಆಗುತ್ತದೆ. ಎಂದು ದೃಢಪಟ್ಟಿದೆ . ಅದಕ್ಕಾಗಿ ನೀವು ಮನೆಯಲ್ಲಿ ಈ ರಾಗಿ ಹಾಲನ್ನು ಮಾಡಿಕೊಂಡು ಕುಡಿಯುವುದು ಉತ್ತಮ ಎಂದು ಹೇಳಲಾಗಿದೆ .

ನಾವು ಹಾಲನ್ನು ಕ್ಯಾಲ್ಸಿಯಂ ಕೊರತೆಗಾಗಿ ಹೊರಗಡೆ ಸಿಗುವ ಹಾಲನ್ನು ಕುಡಿಯುತ್ತೇವೆ .ಆದರೆ ರಾಗಿಯಲ್ಲಿ ಕ್ಯಾಲ್ಸಿಯಂ ಯಥೇಚ್ಛವಾಗಿ ಇರುವುದರಿಂದ , ನಾವು ಮನೆಯಲ್ಲೇ ಮಾಡಿ ಕುಡಿಯುವುದು ಉತ್ತಮ . ರಾಗಿ ಹಾಲನ್ನು ಸೇವನೆ ಮಾಡುವುದರಿಂದ ಇಂತಹ ಸಮಸ್ಯೆಗಳಿಂದ ಪಾರಾಗಬಹುದು . ಕಿಡ್ನಿ ಸಮಸ್ಯೆ ಇರುವವರು ರಾಗಿಯನ್ನು ಸೇವನೆ ಮಾಡಲು ಸಾಧ್ಯ ಆಗುವುದಿಲ್ಲ . ಉಳಿದಂತೆ ಯಾರು ಬೇಕಾದರೂ ಈ ರಾಗಿಯ ಹಾಲನ್ನು ಸೇವನೆ ಮಾಡಬಹುದು . ಗರ್ಭಿಣಿ ಸ್ತ್ರೀಯರು ವೈದ್ಯರ ಸಲಹೆ ಮೇರೆಗೆ ಈ ಹಾಲನ್ನು ಸೇವನೆ ಮಾಡಬೇಕು . ಈ ಹಾಲನ್ನು ಬೆಳಗಿನ ಜಾವದಲ್ಲಿ ಸೇವನೆ ಮಾಡುವುದು ಉತ್ತಮ . ಹೀಗೆ ಮಾಡುವುದರಿಂದ ನಮ್ಮಲ್ಲಿ ಇಂತಹ ಎಲ್ಲಾ ಅದ್ಭುತ ಲಾಭಗಳು ಆಗುತ್ತವೆ ಎಂದು ಹೇಳಬಹುದು.

Leave a Comment