ನಾವು ಈ ಲೇಖನದಲ್ಲಿ ಮಾರ್ಚ್ ತಿಂಗಳ ಮೀನ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿದುಕೊಳ್ಳೋಣ. ಹೇಳಿ ಮಾಡಿಸಿದ ತಿಂಗಳು ಆಗುವ ಸಾಧ್ಯತೆ ಇದೆ. ಮಾರ್ಚ್ ಎಂದರೆ ಪರೀಕ್ಷೆಯ ತಿಂಗಳು ಎಂದು ಹೇಳಲಾಗುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಯಾವ ರೀತಿ ಇರುತ್ತದೆ. ಎನ್ನುವ ಒಂದು ರೀತಿಯ ಕುತೂಹಲದ ತಿಂಗಳು ಅಂದರೆ, ಪರೀಕ್ಷೆಯ ಫಲಿತಾಂಶ ಹೇಗಿರುತ್ತದೆ ಎಂದು ತಿಳಿಯುವ ತಿಂಗಳು ಆಗಿರುತ್ತದೆ. ಹಾಗೆಯೇ ಕೆಲಸ ಮಾಡುವವರಿಗೆ ವರ್ಷದ ತಿಂಗಳು ಇದಾಗಿರುತ್ತದೆ.
ವ್ಯವಹಾರಸ್ಥರಿಗೂ ಕೂಡ ಈ ತಿಂಗಳು ವರ್ಷದ ಕೊನೆಯ ತಿಂಗಳು ಆಗಿರುತ್ತದೆ. ಎಲ್ಲರಿಗೂ ನಿರೀಕ್ಷೆ ಕೂಡ ಇರುತ್ತದೆ. ಚೆನ್ನಾಗಿ ಪ್ರದರ್ಶನ ಮಾಡಬೇಕು ಎನ್ನುವ ಆಕಾಂಕ್ಷೆ ಕೂಡ ಇರುತ್ತದೆ. ನೀರಿಕ್ಷೆಗಳಿಗೆ ಅನುಗುಣವಾಗಿ ನೀವು ಅಂದು ಕೊಳ್ಳುವ ಕೆಲಸ ಆಗುತ್ತದೆಯೇ , ನಿಮ್ಮ ಗಮನ ಬೇರೆ ವಿಷಯದ ಕಡೆ ಹೋಗುತ್ತದೆಯೇ , ಆ ವಿಚಾರ ಯಾವುದು ನಮ್ಮ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ. ನಿಮ್ಮ ಇಡೀ ಶಕ್ತಿ ಮತ್ತು ಏಕಾಗ್ರತೆಯನ್ನು ಆ ಒಂದು ವಿಷಯದ ಬಗ್ಗೆ ಗಮನ ಕೊಡಲು ಸಾಧ್ಯವಾಗುತ್ತದೆಯೇ,
ಇದಕ್ಕೆ ಏನು ಪರಿಹಾರಗಳು ಇದೆ. ಈಗ ನಿಮಗೆ ಸಾಡೇಸಾತಿ ನಡೆಯುತ್ತಿದೆ. ಶ್ರಮ ಜೀವಿಗಳಿಗೆ ಅಂದರೆ , ಪರಿಶ್ರಮ ಪಡುವ ವ್ಯಕ್ತಿಗಳಿಗೆ ಅಷ್ಟೊಂದು ವ್ಯತ್ಯಾಸ ಗೊತ್ತಾಗುವುದಿಲ್ಲ. ಖಾಲಿ ಕೂತಿದ್ದರೆ, ಚಿಂತೆಗಳು , ಯೋಚನೆಗಳು, ರೋಗಗಳು ಜಾಸ್ತಿ . ನಿಮ್ಮ ಮೇಲೆ ನೀವು ನಿರೀಕ್ಷೆ ಮಾಡಿಕೊಳ್ಳುವುದು ಜಾಸ್ತಿಯಾಗುತ್ತದೆ. ಆಲೋಚನೆಯಲ್ಲಿ ಹೆಚ್ಚು ಸಮಯ ಕಳೆಯುವ ವ್ಯಕ್ತಿಗಳಿಗೆ ಭವಿಷ್ಯದ ಚಿಂತೆ ಜಾಸ್ತಿಯಾಗಿ ಇರುತ್ತದೆ . ಸಂದರ್ಭಕ್ಕೆ ಅನುಗುಣವಾಗಿ ಯೋಚನೆ ಮಾಡವ ಸಾಮರ್ಥ್ಯ ಇರುತ್ತದೆ .
ಶ್ರಮ ಪಡುವ ವ್ಯಕ್ತಿಗಳು ಹೆಚ್ಚಾಗಿ ಕೆಲಸದ ಕಡೆ ಹೆಚ್ಚು ಗಮನ ಕೊಡುವುದರಿಂದ , ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಬಹಳ ಕಡಿಮೆ ಇರುತ್ತದೆ . ನಿಮ್ಮ ಪರಿಸ್ಥಿತಿ, ಅನುಕೂಲ, ವಾತಾವರಣ ನೀವು ಎಷ್ಟರ ಮಟ್ಟಿಗೆ ಬಲಿಷ್ಠರಾಗಿದ್ದೀರಿ ಎನ್ನುವುದರ ಮೇಲೆ ಪರಿಸ್ಥಿತಿ ಬದಲಾವಣೆ ಆಗುತ್ತದೆ. ದ್ವಾದಶ ಭಾವದಲ್ಲಿ ಶುಕ್ರ ಗ್ರಹ . ಹಾಗೆಯೇ ಏಕಾದಶದಲ್ಲಿ ಕುಜ . ಏಕಾದಶ ಭಾವ ಎಂದರೆ, ಬಹಳಷ್ಟು ಲಾಭಗಳು . ದೈನಂದಿನ ಜೀವನಕ್ಕೆ ಉಪಯುಕ್ತವಾಗುವ ಸಲಕರಣೆಗಳನ್ನು ಖರೀದಿ ಮಾಡಲಾಗುವ ಸಾಧ್ಯತೆ ಇದೆ.
ಇದು ಬಹಳಷ್ಟು ಮಟ್ಟಿಗೆ ನೆಮ್ಮದಿಯನ್ನು ತಂದುಕೊಡುತ್ತದೆ . ಇದರಿಂದ ಸಾಕಷ್ಟು ಲಾಭವನ್ನು ಮಾಡಿಕೊಳ್ಳುವುದು ಈ ತಿಂಗಳಲ್ಲಿ ಇದೆ. ವ್ಯವಹಾರಸ್ಥರಿಗೆ ಬಹಳ ಲಾಭ ಆಗುತ್ತದೆ . ಕುಜ ಗ್ರಹ ಎನ್ನುವುದು ಹಾರ್ಡ್ವೇರ್ ಮತ್ತು ಕೆಲಸ ಮಾಡುವ ವ್ಯಕ್ತಿಗಳಿಗೆ ಇಂಥಹ ವೃತ್ತಿಯಲ್ಲಿ ಇರುವ ವ್ಯಕ್ತಿಯಲ್ಲಿರುವ ಜನರಿಗೆ ಕುಜ ಗ್ರಹ ಬಹಳ ಲಾಭವನ್ನು ತಂದುಕೊಡುತ್ತದೆ .
ಕಲೆ , ಸಾಹಿತ್ಯ , ಸಂಗೀತ , ಜರ್ನಲಿಸಂ, ಬರವಣಿಗೆಗಾರರು, ನಟನೆ, ಗಾಯನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಹಳಷ್ಟು ಲಾಭಗಳು ಇದೆ . ವೈದ್ಯಕೀಯ ರಂಗ , ಇಂಜಿನೀಯರಿಂಗ್ , ಇವೆಲ್ಲವೂ ಈ ತಿಂಗಳಲ್ಲಿ ತುಂಬಾ ಚೆನ್ನಾಗಿ ಸಾಗುತ್ತದೆ. ಏಕಾದಶದಲ್ಲಿ ಇರುವ ಕುಜ ಮತ್ತು ಶುಕ್ರನ ಪ್ರಭಾವ ನಿಮ್ಮ ಮೇಲೆ ಧನಾತ್ಮಕವಾಗಿ ಆಗುತ್ತದೆ. ಅಲಂಕಾರಿಕ ವಸ್ತುಗಳು , ಪೀಟೋಪಕರಣಗಳು , ಇಂಟೀರಿಯರ್ ಡಿಸೈನ್ , ವಸ್ತ್ರ ಈ ತರಹದ ವ್ಯಾಪಾರಸ್ಥರಿಗೆ ಹೇಳಿ ಮಾಡಿಸಿದ ತಿಂಗಳು ಆಗಿದೆ.
ವಿಶೇಷವಾಗಿ ನೀವು ಖರೀದಿ ಮಾಡುವ ವಸ್ತುಗಳ ಮೇಲೆ ಹೆಚ್ಚಿನ ಗಮನ ವಹಿಸಬೇಕು .ನಷ್ಟ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ನೇರವಾಗಿ ಖರೀದಿಸಲು ಹೋದರೆ ನಷ್ಟವಾಗುತ್ತದೆ ಎಚ್ಚರಿಕೆಯಿಂದ ಇರಬೇಕು. ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ . ಹೊಸದಾಗಿ ಕೆಲಸ ಕಾರ್ಯಗಳನ್ನು ಶುರು ಮಾಡಬೇಕು ಅಂದರೆ, ವ್ಯಯ ಭಾವದಲ್ಲಿ ಇರುವ ಶನಿ , ರವಿ ಮತ್ತು ಶುಕ್ರ . ಇಲ್ಲಿ ಶುಕ್ರನಿಂದ ಒಳ್ಳೆಯದಾದರೆ, ರವಿ ಮತ್ತು ಶನಿ ಸ್ವಲ್ಪ ಗೊಂದಲ ಶುರುಮಾಡುತ್ತಾರೆ. ಈ ತಿಂಗಳು ಮನೆ ಕಟ್ಟುವವರಿಗೆ ಬಹಳಷ್ಟು ಧನಾತ್ಮಕವಾಗಿ ಇದೆ. ಲಾಭದಲ್ಲಿ ಇರುವ ಕುಜ ಆಸ್ತಿ ಖರೀದಿ ಮಾಡಲು ಸಹಾಯಕವಾಗುತ್ತದೆ . ಈ ತಿಂಗಳ 15 ರ ಒಳಗೆ ಪ್ರಗತಿ ಆಗುವ ರೀತಿ ನೋಡಿಕೊಳ್ಳಬೇಕು .
ನಿಮ್ಮ ಪ್ರಯತ್ನ ಮೇಲ್ಮಟ್ಟದಲ್ಲಿ ಇರಬೇಕು . 15 ರ ನಂತರ ಸ್ಥಿತಿಗತಿಗಳು ವಿರುದ್ಧವಾಗುವ ಸಾಧ್ಯತೆ ಇರುತ್ತದೆ . ಕುಜ ವ್ಯಯ ಭಾವಕ್ಕೆ ಬಂದಾಗ , ಮೀನ ರಾಶಿಯ ವ್ಯಕ್ತಿಗಳ 15 ರ ನಂತರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು . ವಾತಾವರಣದಲ್ಲಿ ಉಷ್ಣತೆ ಜಾಸ್ತಿಯಾಗುವುದರಿಂದ , ತೊಂದರೆಗಳು ಸವಾಲುಗಳು ಎದುರಾಗುವ ಸಾಧ್ಯತೆ ಇದೆ . ಪ್ರಯಾಣದಲ್ಲಿ ಎಚ್ಚರ ವಹಿಸಬೇಕು . ಒಟ್ಟಾರೆಯಾಗಿ ಆರೋಗ್ಯದ ಬಗ್ಗೆ ಗಮನ ಹರಿಸಬೇಕು . ಹಣ ನೀರಿನಂತೆ ಖರ್ಚಾಗುವ ಸಂದರ್ಭ ಬರಬಹುದು .
ಶನಿ ವ್ಯಯದಲ್ಲಿ ಇರುವಾಗ ಅದರ ಜೊತೆ ರವಿ ಬಂದು ಕೂಡಿದಾಗ , ನಿಮ್ಮ ಏಕಾಗ್ರತೆ ಹೆಚ್ಚಾಗಿರಬೇಕು .ಅಂದರೆ ಮೂರು ಗ್ರಹಗಳು ವ್ಯಯ ಭಾವದಲ್ಲಿ ಇರುವುದರಿಂದ , ಇದು ಸಂಘರ್ಷವನ್ನು ಉಂಟುಮಾಡುತ್ತದೆ . ಕುಟುಂಬದಲ್ಲಿ ಖರ್ಚಿನ ಬಗ್ಗೆ ಹೆಚ್ಚಿನ ವಿರೋಧ ಭಾಸಗಳು ಕಂಡು ಬರುತ್ತವೆ . ವಿದ್ಯಾರ್ಥಿಗಳಿಗೆ ದ್ವಿತೀಯ ದಲ್ಲಿ ಗುರು ಗ್ರಹ ಇರುತ್ತದೆ . ಬುಧ ಗ್ರಹ ಕೂಡ ಬಂದು ಸೇರಿಕೊಳ್ಳುತ್ತದೆ . ಇದು ವಿದ್ಯಾರ್ಥಿಗಳ ಮಟ್ಟಿಗೆ ಬಹಳ ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದು .
ಮಾತಿನಿಂದ ಪ್ರಯೋಜನಗಳನ್ನು ಪಡೆಯುವವರಿಗೆ ತುಂಬಾ ಚೆನ್ನಾಗಿ ನಡೆಯುತ್ತದೆ . ಮಾತಿಗೆ ಪೂರಕ ಮತ್ತು ಪ್ರೇರಕವಾದ ಎರಡು ಗ್ರಹಗಳು ದ್ವಿತೀಯ ಭಾವದಲ್ಲಿ ಇರುತ್ತವೆ .ದುಡ್ಡಿನ ಹರಿವು ಕೂಡ ಚೆನ್ನಾಗಿರುತ್ತದೆ. ಖರ್ಚಿನಿಂದ ಬಿಡುಗಡೆ ಪಡೆಯುವುದು ಈ ತಿಂಗಳಲ್ಲಿ ಸುಲಭ ಆಗಿರುವುದಿಲ್ಲ .ದಾಂಪತ್ಯ , ಸಂಬಂಧಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು . ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಕೂಡ ಎಚ್ಚರ ವಹಿಸಬೇಕು . ಅಂದರೆ ಇಲ್ಲಿ ನೀವು ಚಾಪೆಯ ಕೆಳಗೆ ತೂರಿದರೆ , ಅವರು ರಂಗೋಲಿಯ ಕೆಳಗೆ ತೂರುವ ಸಾಧ್ಯತೆ ಇರುತ್ತದೆ . ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿಕೊಂಡು ಹೋಗಬೇಕು .
ನಿಮ್ಮ ಮಟ್ಟಿಗೆ ಹೇಳುವುದಾದರೆ ಇದೆ ಉತ್ತಮವಾಗಿರುತ್ತದೆ . ಹಲವಾರು ಕಿರಿ ಕಿರಿಗಳು ಇರುತ್ತವೆ .ವಿಶ್ವಾಸ ಅರ್ಹತೆಯಿಂದ ವರ್ತಿಸುವುದೇ ಕ್ಷೇಮವಾಗಿ ಇರುತ್ತದೆ . ಇದು ಮಹತ್ವದ ಸೂಚನೆಯಾಗಿರುತ್ತದೆ . ವಿದ್ಯಾರ್ಥಿಗಳಿಗೆ ಮರೆವಿನ ಸಮಸ್ಯೆ ಉಂಟಾಗಬಹುದು . ಆ ಸಂದರ್ಭಕ್ಕೆ ಒಂದಷ್ಟು ವಿಚಾರಗಳು ನೆನಪಿಗೆ ಬರದೇ ಇರುವುದು . ಅದಕ್ಕಾಗಿ ಹೆಚ್ಚಿನ ಶ್ರಮಪಟ್ಟು ಅಭ್ಯಾಸ ಮಾಡಬೇಕು . ಸಾಧ್ಯವಾದಷ್ಟು ತಿಳಿದುಕೊಳ್ಳುವುದಕ್ಕೆ ಪ್ರಯತ್ನ ಪಡಬೇಕು . ಹೆಚ್ಚಾಗಿ ತಿಳಿದುಕೊಂಡಾಗ ನೆನಪಿನಲ್ಲಿ ಉಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ . ಆಗುವುದನ್ನು ತಡೆಯುವುದರ ಬದಲು ಒಂದು ಸದ್ಭಾವನೆಯನ್ನು ಬೆಳೆಸಿಕೊಳ್ಳಬೇಕು . ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಿಮ್ಮಿಂದ ಸಮಾಜಕ್ಕೆ ಸಹಾಯ ಆಗುತ್ತಿರುತ್ತದೆ . ಇಂತಹ ಒಂದು ತೃಪ್ತಿ ನಿಮಗೆ ಇರಬೇಕು .