ನಾವು ಈ ಲೇಖನದಲ್ಲಿ ಮಾರ್ಚ್ ತಿಂಗಳ ಧನಸ್ಸು ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಧನು ಎಂದರೆ ಬಿಲ್ಲು ಎಂದರ್ಥ .ಬಿಲ್ಲಿಗೆ ಬಾಣ ಹೂಡಿ ಅದಕ್ಕೆ ಗುರಿ ಇಡಬೇಕು . ನಿಮ್ಮ ಜೀವನದ ಉದ್ದೇಶ ಯಾವುದೇ ಕೆಲಸ ಮಾಡಿದರೂ ಅಥವಾ ಯಾವುದೇ ವಿಚಾರ ಆಗಿರಲಿ , ಅದು ಒಂದು ಸಾರ್ಥಕತೆಯ ಕಡೆ ತಲುಪಬೇಕು. ಬಾಣ ಗುರಿ ಮುಟ್ಟಬೇಕು ಎಂದು ಯೋಚನೆ ಮಾಡುತ್ತಿದ್ದರೆ , ನೀವು ಶಿಸ್ತನ್ನು ಪಾಲನೆ ಮಾಡಬೇಕು.
ಆ ಶಿಸ್ತಿಗೆ ತಕ್ಕ ಪ್ರತಿಫಲ ಸಿಗಬೇಕು ಎಂಬ ನಿರೀಕ್ಷೆ ಇರುತ್ತದೆ. ಗಾಬರಿ ಬೇಡ ಮಾರ್ಚ್ ತಿಂಗಳ ಮಟ್ಟಿಗೆ ನಿಮ್ಮ ಗುರಿ ನೆರವೇರುತ್ತದೆ. ನಿಮ್ಮ ಪ್ರಯತ್ನದಿಂದ ಗುರಿ ಮುಟ್ಟುವ ಸಾದ್ಯತೆ ಹೆಚ್ಚು ಇದೆ. ಈ ತಿಂಗಳ ಮೊದಲ ಎರಡನೇ ವಾರದಲ್ಲಿ ರವಿ ಗ್ರಹ ಇರುತ್ತದೆ . ನಿಮ್ಮ ತೃತೀಯಾ ಭಾವದಲ್ಲಿ . ಕೆಲಸ ಕಾರ್ಯಗಳಲ್ಲಿ ಪ್ರಗತಿ, ಯಶಸ್ಸು , ಸರ್ಕಾರಿ ಕೆಲಸ ಕಾರ್ಯಗಳು , ಇತ್ಯಾದಿಗಳಲ್ಲಿ ಒಂದು ಮಟ್ಟಕ್ಕೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ವಿಶೇಷವಾಗಿ ಹದಿನಾಲ್ಕನೇ ತಾರೀಖಿನ ವರೆಗೆ .
ಬೇರೆ ವ್ಯಕ್ತಿಗಳಿಗೂ ಕೂಡ ರವಿ ಒಳ್ಳೆಯದನ್ನೇ ಮಾಡುತ್ತಾನೆ . ಯಶಸ್ಸನ್ನು ತಂದು ಕೊಡುವುದು ಸಾಮಾನ್ಯವಾಗಿ ಜಾಸ್ತಿ . ಯಶಸ್ಸು ಯಾವಾಗಲೂ ರವಿಯಿಂದ ಬರುತ್ತದೆ . ರವಿಯಿಂದ ಯಶಸ್ಸು ಸಿಕ್ಕಿದಾಗ ಹೆಚ್ಚಿನ ಪ್ರಕಾಶ ಕೂಡ ದೊರೆಯುತ್ತದೆ . ನಾಲ್ಕು ಜನರು ನಿಮ್ಮ ಮಧ್ಯೆ ಒಳ್ಳೆಯ ಮಾತನ್ನು ಆಡುವ ರೀತಿ ಆಗುತ್ತದೆ . ನಿಮ್ಮನ್ನು ಗುರುತಿಸುವುದು, ಮಾನ್ಯತೆ ಕೊಡುವುದು, ಸನ್ಮಾನ ಮಾಡುವುದು , ಸನ್ಮಾನ ತೆಗೆದುಕೊಳ್ಳುವ ಯೋಗ್ಯತೆ ನಿಮಗೆ ಇದ್ದರೆ, ಸನ್ಮಾನ ಕೂಡ ಆಗುತ್ತದೆ .
ತೃತೀಯದಲ್ಲಿ ರವಿ ಇರುವಾಗ ಆಗುವಂತಹ ವಿಚಾರಗಳು ಇದಾಗಿರುತ್ತವೆ . ಆರೋಗ್ಯ ದೃಢವಾಗುವುದು , ಸ್ಥಿರವಾಗುವುದು, ಆದರೆ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರುತ್ತದೆ . ಏಕೆಂದರೆ , ರವಿಯ ಜೊತೆ ಶನಿ ಗ್ರಹ ತೃತೀಯ ಭಾವಕ್ಕೆ ಬರುತ್ತದೆ .ಬೇರೆ ವಿಚಾರದಲ್ಲಿ ಯಶಸ್ಸು ಸ್ವಲ್ಪ ಜಾಸ್ತಿಯಾಗಿ ಸಿಕ್ಕರೂ ಕೂಡ , ಆರೋಗ್ಯದಲ್ಲಿ ಸ್ವಲ್ಪ ತೊಂದರೆಗಳು , ಮಾನಸಿಕ ವಿಚಾರದಲ್ಲಿ ಸ್ವಲ್ಪ ಏರುಪೇರುಗಳು ಶನಿಯ ಜೊತೆ ರವಿ ಇರುವಾಗ ಆಗುವಂತಹ ಸಮಸ್ಯೆಗಳು .
ತಂದೆ ಮಗನ ವಿಚಾರದಲ್ಲಿ ಗೊಂದಲ ಮತ್ತು ಕಿರಿ ಕಿರಿ ಆಗುವ ಸಾಧ್ಯತೆ ಇದೆ . ಇವರು ವಿಚಾರವನ್ನು ಪರಾಮರ್ಶೆ ಮಾಡಿಯೇ ಒಪ್ಪಿಕೊಳ್ಳುತ್ತಾರೆ . ಈ ರೀತಿ ತಿಕ್ಕಾಟಗಳಿಂದ ಮನಸ್ಸಿಗೆ ತೊಂದರೆ ಮತ್ತು ಆರೋಗ್ಯಕ್ಕೂ ಸಮಸ್ಯೆ ಆಗುವ ಸಾಧ್ಯತೆ ಇದೆ . ಹಾಗೆಯೇ ಶನಿಯ ಜೊತೆ ರವಿ ಇರುತ್ತಾನೆ. ರವಿಯ ಬದಲಾವಣೆ ಆಗುತ್ತದೆ. 14ನೇ ತಾರೀಖಿನ ನಂತರ ರವಿ ಅದೇ ಪರಿಣಾಮಗಳನ್ನು ಕೊಡುತ್ತಾನೆ. ಯಶಸ್ಸನ್ನು ತಂದು ಕೊಡುವುದಕ್ಕೆ ಅದೇ ಜಾಗಕ್ಕೆ ಕುಜ ಗ್ರಹ ಬಂದು ಕೂರುತ್ತದೆ. ಕುಜ ಗ್ರಹ ಶನಿಯ ಜೊತೆ ಬಂದು ಕೂರುತ್ತದೆ.
ಸಣ್ಣ ಪುಟ್ಟ ಕಿರಿಕಿರಿಗಳು ಆಗುವ ಸಾಧ್ಯತೆ ಇದೆ. ಅಣ್ಣ ತಮ್ಮ ನ ನಡುವೆ ಸ್ವಲ್ಪ ಕಿರಿ – ಕಿರಿಗಳು ಇರುತ್ತವೆ. 15 ನೇ ತಾರೀಖಿಗೆ ಕುಜ ದ್ವಿತೀಯಾ ಭಾವಕ್ಕೆ ಬಂದಾಗ ಮತ್ತಷ್ಟು ಒಳ್ಳೆಯ ಪರಿವರ್ತನೆಗಳು ಆಗುವ ಸಾಧ್ಯತೆ ಇದೆ . ನಿಮ್ಮ ಕೆಲಸ ಕ್ಷೀಪ್ರವಾಗಿ ಆಗುವ ರೀತಿ ಕುಜ ಗ್ರಹ ಸಹಾಯ ಮಾಡುತ್ತದೆ. ಈ ಎರಡೂ ಗ್ರಹಗಳ ಒತ್ತಡದಿಂದ ನೀವು ಅಂದುಕೊಳ್ಳುವ ಕೆಲಸ ಆಗುತ್ತದೆ. ವಿದ್ಯಾರ್ಥಿಗಳ ಮಟ್ಟಿಗೆ ಬಹಳ ಚೆನ್ನಾಗಿ ಇರುತ್ತದೆ. ಬುಧ ಗ್ರಹ ಸ್ವಲ್ಪ ಸಮಸ್ಯೆಗಳನ್ನು ತಂದರೂ ಕೂಡ ಗುರುಗಳ ಆಶೀರ್ವಾದ ದಿಂದ ನಿಮಗೆ ತಿಳುವಳಿಕೆ ಹೇಳುವ ವ್ಯಕ್ತಿ ಮಾರ್ಗದರ್ಶನ ಮಾಡಿ ನಿಮ್ಮನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗುತ್ತಾರೆ.
ನಿಮ್ಮ ಬುದ್ಧಿ ಸ್ವಲ್ಪ ವಿಚಿತ್ರವಾಗಿ ಆಡಲು ಶುರುಮಾಡುತ್ತದೆ. ಒಂದು ವಿಚಾರದ ಬಗ್ಗೆ ಹೆಚ್ಚಿನ ಗಮನ ವಹಿಸುವ ಹಾಗೆ ನೋಡಿಕೊಳ್ಳಿ . ನಿಮ್ಮ ಗುರು ಹಿರಿಯರ ಮಾತನ್ನು ಕೇಳಿದರೆ ಈ ತಿಂಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಈ ತಿಂಗಳಲ್ಲಿ ನಿಮ್ಮ ಗಮನ ಹೆಚ್ಚಾಗಿ ಅಂದರೆ, ವಿಶೇಷವಾಗಿ ಸುಖದ ಮೇಲೆ ಇರುತ್ತದೆ. ಖುಷಿಗಾಗಿ ನಿಮ್ಮ ಗಮನ ಹರಿಸಬೇಕು. ನೀವು ವಿಶೇಷವಾಗಿ ಸ್ನೇಹಿತರ ಜೊತೆ ಸಮಯ ಕಳೆಯುವ ಹಾಗೆ ಇರುತ್ತದೆ. ಕೆಲಸದ ಒತ್ತಡದಿಂದ ನಿಮಗೆ ಬೇಟಿ ಮಾಡಲು ಸಾಧ್ಯವಾಗುವುದಿಲ್ಲ,
ಅಂತಹ ಒಂದು ಸಂದರ್ಭ ಎದುರಾಗುವ ಸಾಧ್ಯತೆ ಇದೆ. ಸ್ನೇಹಿತರಿಂದ ಸ್ಪೂರ್ತಿ ಸಿಗುವ ಸಾಧ್ಯತೆ ಇದೆ . ನಿಮಗೆ ಹಣ ಸಿಗಲು ನಾಲ್ಕು ಐದು ಗ್ರಹಗಳು ಕೆಲಸ ಮಾಡುತ್ತಿರುತ್ತವೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ . ಧನ ಸ್ಥಾನಕ್ಕೆ ಪ್ರಭಾವ ಬೀರುವ ಬಹಳಷ್ಟು ಗ್ರಹಗಳು ಇವೆ. ಹಣಕಾಸಿನ ವಿಚಾರದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜಾತಕದ ಬಲಾಬಲಗಳು, ದಶ ಭುಕ್ತಿ , ಸನ್ನಿವೇಶಗಳು , ಇದರ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ . ಒಟ್ಟಾರೆಯಾಗಿ ಇಲ್ಲಿ ಧನ ಸ್ಥಾನದ ಮೇಲೆ ಗ್ರಹಗಳು ಪ್ರಭಾವ ಬೀರುತ್ತವೆ . ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಬಹಳ ಒಳ್ಳೆಯ ಪರಿವರ್ತನೆಗಳು ಆಗುವ ಸಾಧ್ಯತೆ ಇದೆ. ಆಶಾವಾದವನ್ನು ಬಿಡಬೇಡಿ. ಅದೇ ನಿಮ್ಮನ್ನು ಮುಂದೆ ಕರೆದುಕೊಂಡು ಹೋಗುತ್ತದೆ.