ವೃಷಭ ರಾಶಿಗೆ ಕೆಟ್ಟದ್ದಾಗೋ ಛಾನ್ಸೇ ಇಲ್ಲ!

0

ನಾವು ಈ ಲೇಖನದಲ್ಲಿ ವೃಷಭ ರಾಶಿಯ ಫಲಗಳ ಬಗ್ಗೆ ತಿಳಿದುಕೊಳ್ಳೋಣ. 2024ರ ಶನಿಯ ಫಲ ಯಾವ ರೀತಿ ಇರುತ್ತದೆ ಎಂದು ನೋಡೋಣ . ಒಂದು ಅದ್ಭುತ ರೀತಿಯ ಅವಕಾಶ, ಹೊಸ ರೀತಿಯ ಯೋಜನೆಗಳು, ಉದ್ಯೋಗದ ವಿಚಾರದಲ್ಲಿ ಶುಭ ಸುದ್ದಿ , ಜೊತೆಗೆ ಬಹಳಷ್ಟು ಜನರಿಗೆ ಪ್ರಶಂಸೆ ,ಖ್ಯಾತಿ , ಹೆಸರು ಕೂಡ ಸಿಗಬಹುದು . ಅಂತಹ ಒಳ್ಳೆಯ ದಿನಗಳು 2024 ರ ವರ್ಷ ಒಳ್ಳೆಯ ಸಮಾಚಾರ ಕೊಡುತ್ತದೆ . ಶನಿಯ ಕೃಪೆ ಕೂಡ ಚೆನ್ನಾಗಿರುತ್ತದೆ. ಇಷ್ಟು ದಿನ ಕೂಡ ನಕಾರಾತ್ಮಕತೆ ಆಗಿರಲಿಲ್ಲ.

ನಿಮ್ಮಿಂದ ಆಗುವ ಒಂದು ಅಚಾತುರ್ಯದಿಂದ ಎಲ್ಲವೂ ಕೂಡ ಹಾಳಾಗುತ್ತದೆ . ಈ ವರ್ಷ ಶನಿ ಪರಿವರ್ತನೆ ಆಗುವುದಿಲ್ಲ ಆದ್ದರಿಂದ ಅಸಡ್ಡೆ ಮಾಡಬೇಡಿ . ಆದರೆ ವಕ್ರ ಶನಿ , ಶನಿ ಹಸ್ತ ಇವೆರಡು ಘಟನೆಗಳು ಒಂದರ ಮೇಲೆ ಒಂದರಂತೆ ತೊಂದರೆ ಕೊಡಲು ಶುರು ಮಾಡುತ್ತವೆ . 2023ರ ಜನವರಿಯಿಂದಲೇ ಶನಿ ನಿಮ್ಮ ಹತ್ತನೇ ಮನೆಯಲ್ಲಿ ಬಂದು ಕೂತಿರುತ್ತಾನೆ . ಅದು ಕುಂಭ ರಾಶಿ ಆಗುತ್ತದೆ . ಹತ್ತನೇ ಮನೆಗೆ ಉದ್ಯೋಗ ಸ್ಥಾನ ಎಂದು ಕರೆಯುತ್ತಾರೆ . ಇಲ್ಲಿಯ ತನಕ ವೃಷಭ ರಾಶಿಯ ಬಹಳಷ್ಟು ಜನರಿಗೆ ಬಹಳಷ್ಟು ಕ್ಷೇತ್ರಗಳಲ್ಲಿ ಲಾಭಗಳು ಆಗಿರುತ್ತದೆ . ಒಳ್ಳೆಯ ಅವಕಾಶಗಳು ಕೂಡ ಸಿಕ್ಕಿರುವ ಸಾಧ್ಯತೆ ಕೂಡ ಇದೆ.

ಸಣ್ಣ ಪುಟ್ಟ ಗೊಂದಲಗಳು ಕಿರಿ ಕಿರಿಗಳು ಇದ್ದರೂ , ಶನಿಯಿಂದ ಅಷ್ಟೊಂದು ತಲೆ ಕೆಡುವ ಪರಿಸ್ಥಿತಿ ಬಂದಿರುವುದಿಲ್ಲ . ಹಾಗೆಯೇ ಕೆಲವರಿಗೆ ಅನಿರೀಕ್ಷಿತವಾಗಿ ಗೆಲುವು , ಅಂದುಕೊಂಡಿರುವ ಕೆಲಸ ಸರಳವಾಗಿ , ಮುಗಿದಿರುತ್ತದೆ . ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳ ನಡುವೆ ಹೊಂದಾಣಿಕೆ ಚೆನ್ನಾಗಿರುತ್ತದೆ . ಯಾವುದೇ ರೀತಿಯ ಒತ್ತಡಗಳು ಇಲ್ಲದೆ ಸರಳವಾಗಿ ಕೆಲಸಗಳು ನಡೆದುಕೊಂಡು ಹೋಗುತ್ತಿರುತ್ತವೆ . ವೃಷಭ ರಾಶಿಯ ಜನರಿಗೆ ಆಜ್ಞೆ ಮಾಡುವ ಗುಣ ಇರುತ್ತದೆ.

ಅಂದರೆ ತಮ್ಮ ಮೂಗಿನ ನೇರಕ್ಕೆ ಎಲ್ಲ ವಿಚಾರಗಳು ನಡೆಯಬೇಕು ಅಂದುಕೊಳ್ಳುತ್ತಾರೆ . ಬೇರೆಯವರ ಮುಂದೆ ಬೇಗ ತಲೆ ಬಾಗುವುದಿಲ್ಲ . ಅಥವಾ ಸೋಲನ್ನು ಒಪ್ಪಿಕೊಳ್ಳುವುದಿಲ್ಲ . ಹಾಗಾಗಿ ಈ ರಾಶಿಯಲ್ಲಿ ಹುಟ್ಟಿದ ಬಹಳಷ್ಟು ಜನರು ಕೆಲಸ ಮಾಡುವ ಕಡೆ ಎಲ್ಲರನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಮಾಡುತ್ತಾರೆ . ಅಥವಾ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲೂ ಕೂಡ ಯಾವತ್ತೂ ಮುಂದೆ ಇರುತ್ತಾರೆ. ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ಯಾವ ರೀತಿ ಜನರ ಮನಸ್ಸನ್ನು ಗೆಲ್ಲಬೇಕು ,

ಹೀಗೆ ಎಲ್ಲ ರೀತಿಯಲ್ಲೂ ಯೋಚನೆ ಮಾಡಿ ಗೆಲುವಿನ ಕಡೆ ಹೋಗುತ್ತಿರುತ್ತಾರೆ . ಈ ರಾಶಿಯವರು ಕೆಲಸದ ವಿಚಾರವಾಗಿ ವಿದೇಶಕ್ಕೆ ಹೋಗಿ ಬಂದಿರುವ ಸಾಧ್ಯತೆ ಇರುತ್ತದೆ . ಇಲ್ಲಾ ಅಂದರೆ ಮುಂದೆ ಹೋಗುವ ಪಟ್ಟಿಯಲ್ಲಿ ನಿಮ್ಮ ಹೆಸರು ಕೂಡ ಬರಬಹುದು . ಇದು ಕೂಡ ಶನಿಯ ಕೃಪೆಯಿಂದ ಆಗುವಂತದ್ದು . ನಿರುದ್ಯೋಗಿಗಳಿಗೆ ಮತ್ತು ಓದು ಮುಗಿದವರಿಗೆ ಕೆಲಸ ಸಿಗುವ ಸಾಧ್ಯತೆ ಇರುತ್ತದೆ . ಶನಿ ಪರಿವರ್ತನೆ 2023ರಲ್ಲಿ ಆಗಿರುವುದರಿಂದ ಈಗಾಗಲೇ ಕೆಲಸ ಸಿಕ್ಕಿರುವ ಸಾಧ್ಯತೆ ಕೂಡ ಇರುತ್ತದೆ .

ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸಬೇಕು ಅನ್ನುವ ಉದ್ದೇಶ ನಿಮ್ಮದಾಗಿದ್ದರೆ, ಇದರ ಬಗ್ಗೆ ನಿಮ್ಮ ಉನ್ನತ ಮಟ್ಟದಲ್ಲಿ ಇರುವವರ ಗಮನ ಕೂಡ ಸೆಳೆದಿರುತ್ತೀರಾ . ಪ್ರಶಂಸೆ ಕೂಡ ಸಿಗುವ ಸಮಯ ಇದಾಗಿರುತ್ತದೆ . ಸಣ್ಣ ಪುಟ್ಟ ಕಿರಿಕಿರಿ ಮನಸ್ತಾಪ ಇದ್ದರೂ, ಕೂಡ ಅವುಗಳೆಲ್ಲ ಅತಿರೇಖಕ್ಕೆ ಹೋಗುವುದಿಲ್ಲ . ಹೆಚ್ಚಿನ ಲಾಭ ಆಗಿಲ್ಲಾ ಅಂದರೂ , ಕೂಡ ಹೆಚ್ಚಾಗಿ ನಷ್ಟ ಕೂಡ ಹಾಗಿರುವುದಿಲ್ಲ . 2024ರಲ್ಲಿ ಎಲ್ಲಾ ಒಳ್ಳೆಯ ರೀತಿ ಆಗುತ್ತಿದೆ ಎಂದುಕೊಳ್ಳುವ ಹೊತ್ತಿಗೆ ಶನಿ ಒಂದು ಸಣ್ಣ ಶಾಕ್ ಕೊಡುತ್ತಾನೆ .

ಫೆಬ್ರವರಿ 11 ರಿಂದ ಮುಂದಿನ 37 ದಿನಗಳ ತನಕ ಅಂದರೆ ಮಾರ್ಚ್ 18ರ ತನಕ , ಶನಿ ಹಸ್ತ ಆಗುತ್ತದೆ . ಶನಿ ಅಗೋಚರನಾಗಿ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ .ಶನಿ ಸೂರ್ಯನಿಗೆ ಹತ್ತಿರ ಆಗುತ್ತಾನೆ . ಇದರಿಂದ ನಿಮಗೆ ನಷ್ಟ ಆಗುವ ಸೂಚನೆ ಕಾಣುತ್ತದೆ . ಬಹಳಷ್ಟು ಜನರಿಗೆ ಈ 37 ದಿನಗಳಲ್ಲಿ ಹಿಮ್ಮುಖ ಆಗುವ ಸಾಧ್ಯತೆ ಇರುತ್ತದೆ . ವ್ಯಾಪಾರ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಅಷ್ಟೊಂದು ಚೆನ್ನಾಗಿರುವುದಿಲ್ಲ . ಮಾಡುವ ಕೆಲಸ ನಿಧಾನ ಆಗುವ ಸಾಧ್ಯತೆ ಇದೆ . ಕೆಲವರ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ ಕೂಡ ಇದೆ .

ಮತ್ತೆ ಜಿಗುಪ್ಸೆ ಕೂಡ ಬರುವ ಸಾಧ್ಯತೆ ಇದೆ. ಕುಟುಂಬಕ್ಕೆ ಸಮಯ ಕೊಡುವುದಕ್ಕೆ ಆಗುತ್ತಿಲ್ಲ ಎಂದು ಕೆಲವರ ಮನಸ್ಸಿನಲ್ಲಿ ನಕಾರಾತ್ಮಕತೆ ಮೂಡುವ ಸಾಧ್ಯತೆ ಇರುತ್ತದೆ . ನಕಾರಾತ್ಮಕತೆಯ ಕಡೆಗೆ ಮನಸ್ಸು ವಾಲುತ್ತಿರುತ್ತದೆ . ಈ ರಾಶಿಯವರು ತಮ್ಮ ಕೆಲಸವನ್ನು ಬೇರೆಯವರ ಕೈಯಲ್ಲಿ ಮಾಡಿಸುತ್ತಾರೆ . ಇಂಥಹ ಪರಿಸ್ಥಿತಿಗಳು ಬರುವ ಸಾಧ್ಯತೆ ಇದೆ . ಸಣ್ಣ ಕಾರಣಕ್ಕೆ ಕೆಲಸ ಬಿಡುವ ಸಾಧ್ಯತೆ ಕೂಡ ಇರುತ್ತದೆ . ತಮ್ಮ ಒಳ್ಳೆಯ ಭವಿಷ್ಯಕ್ಕೋಸ್ಕರ ಕೆಲಸ ಬಿಟ್ಟು ಊರೂರು ತಿರುಗುವ ಹಾಗೆ ಆಗಬಹುದು .

ಎಚ್ಚರಿಕೆಯಿಂದ ಯೋಚನೆ ಮಾಡಿ ನಿಮ್ಮ ಮುಂದಿನ ಹೆಜ್ಜೆಯನ್ನು ಇಡಬೇಕು . ಒಂದೇ ಸಲ ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಬೇಡ . ಆಸೆ ತನದಿಂದ ಬೇಜಾರು ಆಗುವುದು, ಮನಸ್ತಾಪ ಆಗುವುದು ,ಕೆಲವರಿಗೆ ಅವಮಾನ ಆಗುವ ಸಾಧ್ಯತೆ ಕೂಡ ಇರುತ್ತದೆ . ಫೆಬ್ರವರಿ 11 ರಿಂದ ಮಾರ್ಚ್ 18ರ ತನಕ ತಾಳ್ಮೆ ಇಟ್ಟುಕೊಳ್ಳುವುದು ಒಳ್ಳೆಯದು . ಇದು ಸ್ವಲ್ಪ ಸಮಯ ಆಗಿರುವುದರಿಂದ, ಅಷ್ಟು ದೊಡ್ಡ ತೊಂದರೆ ಆಗುವ ಸಾಧ್ಯತೆ ಇರುವುದಿಲ್ಲ . ಆದರೂ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರದಿಂದ ಇರಬೇಕು . ಸಣ್ಣ ಆಚಾತುರ್ಯ ನಡೆದರು ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ . ಮಾರ್ಚ್ 18ಕ್ಕೆ ಶನಿ ಉದಯ ಆಗುತ್ತದೆ .

ನಂತರ ನಿಮ್ಮ ಜೀವನ ಸರಳವಾಗಿ ಮುಂದುವರೆಯುತ್ತದೆ . ಜೂನ್ 29 ಕ್ಕೆ ಶನಿ ಕುಂಭ ರಾಶಿಯಲ್ಲಿ ವಕ್ರನಾಗುತ್ತಾನೆ. ಅಂದರೆ ಹಿಮ್ಮುಖವಾಗಿ ಚಲಿಸುವುದಕ್ಕೆ ಶುರು ಮಾಡುತ್ತಾನೆ .ಇದು ಒಂದು ದೊಡ್ಡದಾದ ಬಿರುಗಾಳಿಯನ್ನು ನಿಮ್ಮ ಜೀವನದಲ್ಲಿ ಉಂಟು ಮಾಡುತ್ತದೆ .ಸಾಮಾನ್ಯವಾಗಿ ಶನಿಯ ಬಗ್ಗೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ . ಮುಖ್ಯವಾಗಿ ನೀವು ಗಳಿಸಿರುವ ಹೆಸರು ,ಕೀರ್ತಿ , ಖ್ಯಾತಿ ಇವುಗಳೆಲ್ಲವನ್ನು ನೀವು ಹಾಳು ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ .ಅಥವಾ ಯಾರಾದರೂ ಸುಳ್ಳು ಆಪಾಧನೆ ಕೂಡ ಮಾಡಬಹುದು .

ಜನರಿಂದ ಪ್ರಶಂಸೆ ಗಳಿಸುವುದು, ಅದು ಈಗ ಬೈಗುಳವಾಗಿ ಬದಲಾವಣೆ ಆಗುತ್ತದೆ . ಜೂನ್ 29ರಿಂದ ನವೆಂಬರ್ 15 ರ ತನಕ ಅಂದರೆ ಸುಮಾರು 4 ಹೊರೆ ತಿಂಗಳು ಈ ಸಮಯ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನೀವು ಕೆಲಸ ಮಾಡುವ ಕಡೆ ಅತ್ಯಂತ ತಾಳ್ಮೆಯಿಂದ ವರ್ತಿಸಬೇಕು . ನೀವು ಸಿಟ್ಟಾಗಿ ನಡೆದುಕೊಳ್ಳುವುದರಿಂದ ಪರಿಸ್ಥಿತಿ ಹಾಳಾಗುವ ಸಾಧ್ಯತೆ ಇರುತ್ತದೆ . ಕೆಲಸದ ಹೊರೆ ಕೂಡ ಜಾಸ್ತಿಯಾಗುತ್ತದೆ . ವ್ಯಾಪಾರ ವ್ಯವಹಾರದ ವಿಚಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇರುತ್ತದೆ .

ಇದು ವಿರುದ್ಧ ಆಗುವ ಸಮಯ ಆಗಿರುತ್ತದೆ .ಯಾವುದೇ ವಿಚಾರದಲ್ಲಿ ತೃಪ್ತಿ ಸಮಾಧಾನ ಇರುವುದಿಲ್ಲ . ಬೇರೆಯವರ ಜೊತೆ ಹೋಲಿಕೆ ಮಾಡಿ ನೋಡಬಹುದು . ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ . ದೈಹಿಕವಾಗಿ ಕೂಡ ಪೆಟ್ಟು ಬೀಳುವ ಸಾಧ್ಯತೆ ಇದೆ . ಎಚ್ಚರಿಕೆಯಿಂದ ಇರಬೇಕಾದ ಸಮಯ ಇದಾಗಿರುತ್ತದೆ . ಕುಟುಂಬದಲ್ಲೂ ಕೂಡ ಸಮಾಧಾನ ಇರುವುದಿಲ್ಲ . ಕೆಲಸದ ವಿಚಾರ ಒತ್ತಡದಿಂದ ಮನೆಯಲ್ಲಿ ತೊಂದರೆ ಆಗುವ ಸಾಧ್ಯತೆ ಇದೆ .

ಜಾಸ್ತಿ ಕೆಲಸ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ . ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ . ಶನಿಯ ಮಂತ್ರಗಳನ್ನು ಜಪ ಮಾಡಿ . ಸಾಧ್ಯವಾದಷ್ಟು ಶನಿವಾರದ ದಿನ ಶನಿ ದೇವಾಲಯಕ್ಕೆ ಭೇಟಿ ನೀಡಿ . ಭಕ್ತಿಯಿಂದ ಎಳ್ಳು ಎಣ್ಣೆ ಅಥವಾ ಸಾಸಿವೆ ಎಣ್ಣೆ ದೀಪ ಹಚ್ಚೋದು ಒಳ್ಳೆಯದು . ನಿಮ್ಮ ಕೆಲಸದಲ್ಲಿ ಪ್ರಗತಿ ಕಾಣಲು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಂದು ಹೇಳಲಾಗಿದೆ.

Leave A Reply

Your email address will not be published.