ನಾವು ಈ ಲೇಖನದಲ್ಲಿ ಮುತ್ತೈದೆಯರು ಈ ರೀತಿಯ ತಪ್ಪು ಮಾಡಬಾರದು , ಎಂಬುದನ್ನು ನೋಡೋಣ.
ಹಿಂದೂ ಸಂಪ್ರದಾಯದಲ್ಲಿ ಮದುವೆಯಾದಂತಹ ಪ್ರತಿ ಮಹಿಳೆಯರಿಗೆ ಮಾಂಗಲ್ಯ ಎನ್ನುವುದು ಬಹಳ ಅಮೂಲ್ಯವಾದ ಆಭರಣವಾಗಿರುತ್ತದೆ
ಶುಭ ಲಗ್ನ ಮುಹೂರ್ತದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಅವರ ಆಶೀರ್ವಾದ ಪಡೆದು, ಪವಿತ್ರ ಅರಿಶಿಣ ದಾರದಲ್ಲಿ ಕಟ್ಟಿರುವ ತಾಳಿಯನ್ನು ಗಂಡು ಹೆಣ್ಣಿಗೆ ಕಟ್ಟಿದರೆ ಹಿಂದೂ ಸಂಪ್ರದಾಯದಲ್ಲಿ ದಂಪತಿಗಳು ಎಂದು ಅರ್ಥ
ಮಂಗಳಸೂತ್ರ ಇದ್ದರೆ ಕರಿಮಣಿ ,ಹವಳ ,ತಾಳಿಯ ಜೋಡಣೆ ಪತಿಯದೀರ್ಘಾಯುಷ್ಯ ಕ್ಕಾಗಿ ಪತ್ನಿ ಇದನ್ನು ಪ್ರತಿಕ್ಷಣ ಧರಿಸಬೇಕು … ಆದರೆ ಕಾಲ ಬದಲಾದಂತೆ ಮಂಗಳ ಸೂತ್ರದ ವಿನ್ಯಾಸಗಳು ಧರಿಸುವ ಬಗೆಯೂ ಬದಲಾಗಿದೆ . ಆದರೆ ಮಾಂಗಲ್ಯಕ್ಕೆ ಇರುವ ದೈವಿಕ ಮಹತ್ವ ಮಾತ್ರ ಬದಲಾಗಿಲ್ಲ
ಇಂತಹ ಮಾಂಗಲ್ಯದ ವಿಷಯದಲ್ಲಿ ಸ್ತ್ರೀಯರು ತಪ್ಪುಗಳನ್ನು ಮಾಡುವುದರಿಂದ , ಗಂಡ ಹೆಂಡತಿಯ ಮಧ್ಯೆ ಕಲಹಗಳು ಉಂಟಾಗುತ್ತದೆ, ಬಾಂದವ್ಯ ಹಳಸುತ್ತದೆ
ಹೆಣ್ಣು ಮಕ್ಕಳು ಯಾವಾಗ ಬೇಕೋ ಅವಾಗ ಕತ್ತಿನಿಂದ ತಾಳಿಯನ್ನು ಬಿಚ್ಚಿಡುವ ತಪ್ಪನ್ನು ಮಾಡಬಾರದು. ಶುಕ್ರವಾರ ಮತ್ತು ಮಂಗಳವಾರ ತುಂಬಾ ವಿಶೇಷವಾದ ದಿನಗಳು ಆ ದಿನಗಳಲ್ಲಿ ಮುತ್ತೈದೆಯರು ಮಾಂಗಲ್ಯವನ್ನು ಬಿಚ್ಚಿಡುವ ತಪ್ಪನ್ನು ಮಾಡಬಾರದು
ಎಷ್ಟೋ ಜನ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಬಟ್ಟೆ ಪಿನ್ ಅನ್ನು ತಮ್ಮ ಜೊತೆ ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಅಂದರೆ ಕತ್ತಿನಲ್ಲಿ ಹಾಕಿಕೊಳ್ಳುವ ಸರಕ್ಕೆ ಅಥವಾ ಮಾಂಗಲ್ಯಕ್ಕೆ ಬಟ್ಟೆ ಪಿನ್ನನ್ನು ಹಾಕುತ್ತಾರೆ ……
ಬಟ್ಟೆ ಪಿನ್ ಕಬ್ಬಿಣದ ವಸ್ತು ಕಬ್ಬಿಣದ ವಸ್ತುವಿನ ಮೇಲೆ ಶನಿದೇವರ ಪ್ರಭಾವ ಇರುತ್ತದೆ,ಅಂದರೆ ಶನಿ ದೇವರಿಗೆ ಕೋಪ ತರಿಸುವ ವಸ್ತು ಎಂದರೆ ಅದು ಕಬ್ಬಿಣ, ಆದ್ದರಿಂದ ಯಾವುದೇ ಕಾರಣಕ್ಕೂ ಬಟ್ಟೆ ಪಿನ್ಗಳನ್ನು ತಾಳಿ ಸರದಲ್ಲಿ ಧರಿಸಬೇಡಿ
ತಾಳಿ ಸರಕ್ಕೆ ಬಟ್ಟೆ ಪಿನ್ ಧರಿಸಿದ್ದರೆ , ಅದರಿಂದ ಗಂಡ ಹೆಂಡತಿ ನಡುವೆ ಕಲಹಗಳು ಹೆಚ್ಚಾಗುತ್ತವೆ . ಶತೃತ್ವ ಮತ್ತು ಬಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ
ಮಾಂಗಲ್ಯಕ್ಕೆ ವಿಶೇಷವಾದ ಶಕ್ತಿ ಇದೆ ,ಅದನ್ನು ಶಿವಶಕ್ತಿ ಸ್ವರೂಪ ಎಂದು ಕರೆಯುತ್ತಾರೆ. ಗಂಡನಿಗೆ ಆಯಸ್ಸು ಕಡಿಮೆ ಆಗಬಾರದು ಎಂದರೆ , ಮಾಂಗಲ್ಯದಲ್ಲಿ ಕಬ್ಬಿಣದ ವಸ್ತುಗಳನ್ನು ಹಾಕಿಕೊಳ್ಳಬಾರದು …. ಮದುವೆಯಾದ ಗಂಡಸರು ಕೂಡ ಮಾಂಗಲ್ಯಕ್ಕೆ ವಿಶೇಷವಾದ ಗೌರವವನ್ನು ನೀಡಬೇಕು…
ಅತ್ಯಂತ ಉದ್ದವಾದ ಮಾಂಗಲ್ಯ ಸರವನ್ನು ಹಾಕಿಕೊಳ್ಳಬಾರದು . ಮಾಂಗಲ್ಯ ಸರವು ನಮ್ಮ ಹಣೆಗೆ ತಾಗುವಷ್ಟು ಉದ್ದ ಇರಬೇಕು ಅಷ್ಟೇ ತಾಳಿಯ ಮುಂಭಾಗಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಸುಮ್ಮನಾಗಿ ಬಿಡುತ್ತೀವಿ . ಆದರೆ ತಾಳಿಯ ಹಿಂಬಾಗಕ್ಕೂ ಕೂಡ ಅರಿಶಿಣ ಕುಂಕುಮ ಹಚ್ಚಬೇಕು
ಮಾಂಗಲ್ಯದ ಪಕ್ಕದಲ್ಲಿ ಕರಿಮಣಿ ಯನ್ನು ಹಾಕುವುದನ್ನು ಬಹಳ ಹಿಂದಿನಿಂದಲೂ ಹಿಂದೂ ಸಂಪ್ರದಾಯದಲ್ಲಿ ಪಾಲಿಸಿಕೊಂಡು ಬಂದಿದ್ದಾರೆ .ಮಾಂಗಲ್ಯ ಪಕ್ಕದಲ್ಲಿ ಕರಿಮಣಿಯನ್ನು ಹಾಕುವುದರಿಂದ ಗಂಡನ ಆಯುಷ್ಯ ಹೆಚ್ಚಾಗುತ್ತದೆ . ಯಾವುದೇ ತೊಂದರೆಗಳು ಬರುವುದಿಲ್ಲ
ಕೆಲವೊಬ್ಬರು ಎಲ್ಲರಿಗೂ ಕಾಣುವ ಹಾಗೆಯೇ ಮಾಂಗಲ್ಯ ಸರವನ್ನು ಹಾಕಿಕೊಂಡಿರುತ್ತಾರೆ ,ತಾಳಿಯನ್ನು ಯಾರಿಗೂ ಸಹ ತೋರಿಸಬಾರದು . ಅದನ್ನು ಯಾವಾಗಲೂ ಮರೆ ಮಾಚಿ ಇಡಬೇಕು, ತಾಳಿಯನ್ನು ಎಲ್ಲರಿಗೂ ತೋರಿಸಿಕೊಂಡು ಓಡಾಡಿದರೆ ದೃಷ್ಟಿ ತಾಕುತ್ತದೆ ಇದರಿಂದ ಗಂಡ ಹೆಂಡತಿಯ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುತ್ತದೆ
ಕರಿಮಣಿಯನ್ನು ಶಿವನಿಗೆ ಹೋಲಿಸುತ್ತಾರೆ .ತಾಳಿಯನ್ನು ಕಟ್ಟುವ ಅರಿಶಿಣದ ದಾರವನ್ನು ಪಾರ್ವತಿಗೆ ಹೋಲಿಸುತ್ತಾರೆ , ಇವೆರಡನ್ನು ಜೊತೆಯಾಗಿ ಹಾಕುವುದರಿಂದ ಶಿವ ಪಾರ್ವತಿ ಇಬ್ಬರ ಆಶೀರ್ವಾದ ಇರುತ್ತದೆ . ಜೊತೆಗೆ ಅವರ ವೈವಾಹಿಕ ಜೀವನವು ಶಿವ ಪಾರ್ವತಿಯರಂತೆ ಇರಲಿ ಎಂಬ ಉದ್ದೇಶದಿಂದ ಮಾಂಗಲ್ಯದಲ್ಲಿ ಕರಿಮಣಿ ಹಾಕಬೇಕೆನ್ನುತ್ತಾರೆ
ಕಪ್ಪು ಕರಿಮಣಿಗಳು ಶನಿಗ್ರಹದ ಸಂಕೇತವಾಗಿದೆ ,ತಾಳಿಯಲ್ಲಿ ಇರುವ ಚಿನ್ನ ಗುರು ತತ್ವವನ್ನು ಹೊಂದಿದೆ . ಶನಿ ಮತ್ತು ಗುರುವಿನ ಪರಸ್ಪರ ಕ್ರಿಯೆಯು ಸಂತೋಷ ದಾಂಪತ್ಯ ಜೀವನವನ್ನು ಸೂಚಿಸುತ್ತದೆ
ಕೆಲವರು ತಾಳಿಯ ಪಕ್ಕದಲ್ಲಿ ಕರಿಮಣಿಯನ್ನು ಹಾಕಿಕೊಂಡು ಕಷ್ಟಗಳು ಹೆಚ್ಚಾಗುತ್ತವೆ ಎಂದು ಹೇಳುತ್ತಾರೆ .ಆದರೆ ಸತ್ಯ ಏನೆಂದರೆ ತಾಳಿಯ ಪಕ್ಕದಲ್ಲಿ ಕರಿಮಣಿಯನ್ನು ಹಾಕಿಕೊಳ್ಳಲೇಬೇಕು
ಮಂಗಳಸೂತ್ರವನ್ನು ಧರಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ .ದೇಹದಲ್ಲಿ ರಕ್ತದ ಹರಿವನ್ನು ನಿಯಂತ್ರಿಸುತ್ತದೆ . ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ . ಮಹಿಳೆಯರ ದೇಹದ ಎದೆಯ ಭಾಗದಲ್ಲಿರುವ ಉಷ್ಣತೆಯನ್ನು ಹೀರಿಕೊಳ್ಳುತ್ತದೆ