ನಾವು ಈ ಲೇಖನದಲ್ಲಿ ಸುಖ ಸಂಸಾರಕ್ಕೆ ಕೆಲವು ಗುಟ್ಟುಗಳು ಯಾವುವು ಎಂದು ತಿಳಿದುಕೊಳ್ಳೋಣ. ಸಂಸಾರದಲ್ಲಿ ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ ನಾಜೂಕಾಗಿ ಇದ್ದರೆ, ಮಾತ್ರ ಸುಖ ಸಂಸಾರ ನಿಮ್ಮದಾಗುತ್ತದೆ. ನಿಮ್ಮ ಮೊಬೈಲ್ ವಾಲ್ಪೇಪರ್ ಗೆ ನಿಮ್ಮಿಬ್ಬರ ಫೋಟೋ ಹಾಕಿಕೊಳ್ಳಿ ತೋರಿಕೆಗೆ ಅಲ್ಲ ಪ್ರೀತಿಯಿಂದ .
ಪತಿಗೆ ಕೋಪಗೊಳಿಸುವ ಕೆಲಸವನ್ನು ಮಾಡಬೇಡಿ. ನಿಮ್ಮ ಪತಿಯನ್ನು ತಮಾಷೆಗೂ ಕೂಡ ಬೇರೆಯವರೊಂದಿಗೆ ಹೋಲಿಕೆ ಮಾಡಿ ಮಾತನಾಡಲೇ ಬೇಡಿ. ನಿಮ್ಮ ಬೇಕು ಬೇಡಗಳನ್ನು ಹೇಳುವ ರೀತಿ ಕೋಪದಿಂದ ಇರಬಾರದು, ತುಂಬಾ ನಾಜೂಕಾಗಿ ಇರಬೇಕು. ವಾರಕ್ಕೊಮ್ಮೆಯಾದರೂ ನಿಮ್ಮ ಪತಿಯ ಫೇವರೆಟ್ ಡಿಶ್ ಮಾಡಿ.
ಅವರಿಗೆ ಇಷ್ಟ ಆಗೋ ರೀತಿ ರೆಡಿ ಆಗಿ ನಿಮ್ಮ ಮೇಲೆ ದೃಷ್ಟಿ ಬಿಟ್ಟು, ಬೇರೆ ಕಡೆ ಹೋಗದ ರೀತಿ ನಾಜುಕಿನಿಂದ ಇರಿ.ಪತಿ ಇದ್ದರೂ ಸಹ ಅವರ ಜೊತೆ ಮಾತನಾಡದೆ, ಗಮನ ಕೊಡದೆ ಮೊಬೈಲ್ ಅಥವಾ ಟಿವಿ ಅಂತ ಕೂರಬೇಡಿ. ಪತಿ ಮನೆಗೆ ಬರುತ್ತಲೇ ಸಮಸ್ಯೆಗಳನ್ನು ಹೇಳಬೇಡಿ, ಆದಷ್ಟು ತಾಳ್ಮೆಯಿಂದ ಇರಿ .ನೀವು ಅವರ ದುಡಿಮೆಗೆ ಮಾತ್ರ ಬೆಲೆ ಕೊಡುತ್ತೀರಾ. ಅವರಿಗಲ್ಲ ಎಂಬ ಭಾವನೆ ಬರದಂತೆ ನಡೆದುಕೊಳ್ಳಿ .
ಅಡುಗೆ ರುಚಿಯ ಬಗ್ಗೆ ನಿಮ್ಮನ್ನು ಹೀಯಾಳಿಸಿದರೆ , ಬೇಜಾರಾಗಬೇಡಿ ಅಡುಗೆ ಚೆನ್ನಾಗಿಲ್ಲದಿದ್ದರೆ ಚೆನ್ನಾಗಿ ಮಾಡಲು ಕಲಿಯಿರಿ . ಹೆಣ್ಣಿಗೆ ಅದು ದೊಡ್ಡ ಕಷ್ಟವೇ ಅಲ್ಲ . ಒಂದು ವೇಳೆ ಅಡುಗೆ ರುಚಿ ಆಗಿದ್ದರೂ ಕೂಡ ಚೆನ್ನಾಗಿಲ್ಲ ಅಂದ್ರೆ ತಲೆಕೆಡಿಸಿಕೊಳ್ಳದೆ ಇದ್ದುಬಿಡು.
ಮನೆಯ ಎಲ್ಲಾ ವಸ್ತುಗಳು ಆಯಾ ಸ್ಥಳದಲ್ಲಿ ಇರಲಿ. ಇದು ಕೂಡ ಕೆಲವೊಮ್ಮೆ ಜಗಳಕ್ಕೆ ಕಾರಣವಾಗುತ್ತದೆ . ನಾನು ಮನೆ ಕೆಲಸದವಳಾ ಏನಿದು ಇಷ್ಟೊಂದು ಕೆಲಸ ಎಂದು ಬೇಜಾರಾಗಬೇಡಿ. ಅದರ ಬದಲು ಇದೆಲ್ಲಾ ನನ್ನ ಕರ್ತವ್ಯ ಅಂತ ತಿಳಿಯಿರಿ.
ಮಕ್ಕಳಾದ ಮೇಲೆ ಇನ್ನೇನಿದೆ ಎಂದು ಪತಿಯನ್ನು ಕಡೆಗಣಿಸಬೇಡಿ . ಯಾವಾಗಲೂ ಪತಿಯ ಇಷ್ಟಾನುಸಾರ ಇದ್ದು ನೋಡಿಕೊಳ್ಳಿ ಸಂಸಾರ ಸುಖಮಯಾವಾಗಿರುತ್ತದೆ. ನನ್ನ ಮಾತಿಗೆ ಬೆಲೆಯಿಲ್ಲ, ನನ್ನ ಬಗ್ಗೆ ಕಾಳಜಿ ಇಲ್ಲಾ ಅಂತ ನೀವು ಕೂಡ ಪತಿಯನ್ನು ಕಡೆಗಣಿಸಬೇಡಿ. ಪತಿಯನ್ನು ಪ್ರೀತಿ, ಗೌರವ, ಕಾಳಜಿ ಕೊಟ್ಟು ನಿಮ್ಮ ದಾರಿಯಲ್ಲಿ ಇರುವಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.
ಪತಿಯ ಮನೆಯವರನ್ನು ನಿಂದಿಸಬೇಡಿ .ಒಂದು ವೇಳೆ ಏನಾದರೂ ಸಮಸ್ಯೆ ಇದ್ದಲ್ಲಿ ಸೂಕ್ಷ್ಮವಾಗಿ ಪತಿಗೆ ಅರ್ಥ ಮಾಡಿಸಿ. ಮನೆ ಮುರಿಯುವುದೇ ಪರಿಹಾರವಲ್ಲ .
ಸಾಧ್ಯವಾದಷ್ಟು ಅವಲಂಭಿತ ಆಗೋದನ್ನ ಕಡಿಮೆ ಮಾಡಿ. ಅವರು ಹಾಗೆ ಅಂದರೂ, ಇವರು ಹಾಗೆ ಅಂದರೂ, ಅಂತ ನೆನೆಸಿಕೊಂಡು ಕೊರಗಬೇಡಿ. ಆಗ ನಿಮಗೆ ತೊಂದರೆ ಕೊಡಬೇಕು ಅಂತ ಅನಿಸಿದವರಿಗೆ ನೀವು ಸುಲಭವಾಗಿ ಮಣೆ ಹಾಕಿದಂತೆ ಆಗುತ್ತದೆ. ಅದರ ಬದಲು ಬಂಡೆ ಕಲ್ಲಿನಂತೆ ಇದ್ದು ಬಿಡಿ. ಕೆಟ್ಟವರ ನಿಂದನೆ ನಿಮಗೆ ನೋವು ಮಾಡಲೇಬಾರದು ಅಷ್ಟು ಗಟ್ಟಿಯಾಗಿ ಇದ್ದು ಬಿಡಿ. ಒಟ್ಟಾರೆಯಾಗಿ ಏನನ್ನು ಬಯಸದೇ ನಿಸ್ವಾರ್ಥಿಯಾಗಿ ಸಂಸಾರಕ್ಕಾಗಿ ಬದುಕಿ. ನಿಮ್ಮನ್ನು ಆದಷ್ಟು ದೃಢವಾಗಿ ತಯಾರು ಮಾಡಿಕೊಳ್ಳಿ ಮುಖ್ಯವಾಗಿ ಸ್ವತಂತ್ರವಾಗಿ ಆಗಿ ಇರಿ ಎಂದು ಹೇಳಲಾಗಿದೆ.