ನಾವು ಈ ಲೇಖನದಲ್ಲಿ ಮಾರ್ಚ್ ತಿಂಗಳ ತುಲಾ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ನಿಮ್ಮ ತಲೆಗೆ ಒಂದು ಆಲೋಚನೆ ಬಂದರೆ ಅದನ್ನು ನೀವು ನಿಜ ಅನ್ನುವ ಮಟ್ಟಿಗೆ ನಂಬುತ್ತೀರಾ .
ಆದರೆ ಅದು ಸ್ವಲ್ಪ ಸಮಯದ ಮಟ್ಟಿಗೆ ಆ ಆಲೋಚನೆಗಳು ಹುಸಿ ಆಗುವ ಸಾಧ್ಯತೆ ಇರುತ್ತದೆ . ಇದು ಮುಂದುವರಿಯುತ್ತಾ ಹೋದರೆ, ಇದು ಬಹಳ ಅಪಾಯಕಾರಿ . ಜೀವನದಲ್ಲಿ ಬಹಳ ಕಷ್ಟ ಆಗುವ ಸಾಧ್ಯತೆ ಇರುತ್ತದೆ .
ನಿಮ್ಮ ಊಹೆ ಮತ್ತು ನಿರೀಕ್ಷೆಗಳನ್ನು ಮೀರಿ ಘಟನೆಗಳು ನಡೆಯುತ್ತವೆ . ಕೆಲಸಗಳಲ್ಲಿ ಏರುಪೇರು ಆಗುವ ಸಾಧ್ಯತೆ ಇರುತ್ತದೆ . ಮಾನಸಿಕ ಒತ್ತಡ ಉಂಟಾಗುವ ಸಾಧ್ಯತೆ ಇದೆ .ನಮಗೆ ಬೇಕಾಗಿರುವ ವ್ಯಕ್ತಿಗಳ ಮೇಲೆ ನಮ್ಮ ಊಹೆ ಅವರ ಬಗ್ಗೆ ತಪ್ಪಾಗಿ ಇರುತ್ತವೆ. ಇದರಿಂದ ವ್ಯಕ್ತಿಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ . ಈ ವಿಚಿತ್ರ ಪರಿಸ್ಥಿತಿಯಿಂದ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ . ಏಳನೇ ತಾರೀಖಿನ ಹೊತ್ತಿಗೆ ಬಹಳ ಮಹತ್ವದ ಬದಲಾವಣೆಗಳು ಈ ತಿಂಗಳಲ್ಲಿ ನಡೆಯುತ್ತದೆ .
ಎರಡು ಗ್ರಹಗಳಿಗೆ ನಿಮ್ಮ ಮಟ್ಟಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ .ಶುಕ್ರ ಗ್ರಹ ಮತ್ತು ಬುಧ ಗ್ರಹ . ಶುಕ್ರ ಗ್ರಹದ ರಕ್ಷಣೆ , ನಿಮ್ಮ ಮಕ್ಕಳು ಮತ್ತು ನಿಮ್ಮ ವಹಿವಾಟುಗಳಲ್ಲಿ ಲಾಭ ತಂದು ಕೊಡುತ್ತದೆ . ವ್ಯಾಪಾರದ ಮೇಲೆ ಶುಕ್ರ ಗ್ರಹದ ಆಶೀರ್ವಾದ ಇರುತ್ತದೆ . ಮಾನಸಿಕ ನೆಮ್ಮದಿ ಮತ್ತು ಖುಷಿಯನ್ನು ಶುಕ್ರ ಗ್ರಹ ತಂದುಕೊಡುತ್ತದೆ . 7ನೇ ತಾರೀಕಿನ ನಂತರ ಆಗುವ ಪರಿವರ್ತನೆಯಿಂದ ನೀವು ಸ್ವಲ್ಪ ಮಟ್ಟಿಗೆ ಎಚ್ಚರಿಕೆಯಿಂದ ಇರಬೇಕು . ವಾಹನ ಚಲಾವಣೆಯ ವಿಚಾರದಲ್ಲಿ ಆಕ್ಸಿಡೆಂಟ್ ಆಗುವ ಸಾಧ್ಯತೆ ಇರುತ್ತದೆ .
ತಪ್ಪು ಗ್ರಹಿಕೆಯಿಂದ ಆಗಿ ಜೀವನದಲ್ಲಿ ಕೂಡ ಅಪಘಾತಗಳು ನಡೆಯುವ ಸಾಧ್ಯತೆ ಇದೆ . ಆಶ್ಚರ್ಯ ವಾಗುವ ರೀತಿ ಘಟನೆಗಳು ನಡೆಯುತ್ತವೆ . ನಿರೀಕ್ಷೆ ಮಾಡದೇ ಇರುವ ಘಟನೆಗಳು ನಡೆಯುತ್ತವೆ . ಏಳನೇ ತಾರೀಖಿನ ನಂತರ ಶುಕ್ರ ಗ್ರಹದಿಂದ ನಡೆಯುವ ಘಟನೆಗಳು . ನಿಮ್ಮ ಆತ್ಮವಿಶ್ವಾಸ ಕೂಡ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇರುತ್ತದೆ . ಆತ್ಮವಿಶ್ವಾಸಕ್ಕೆ ಸಹಕಾರ ಕೊಡುವ ವಿಚಾರಗಳು ಎಂದರೆ ಪ್ರಾರ್ಥನೆ , ಯೋಗ, ಜ್ಞಾನ ಇಂತಹ ವಿಚಾರದಲ್ಲಿ ಮನಸ್ಸನ್ನು ತೊಡಗಿಸಿ ಕೊಳ್ಳುವುದರಿಂದ ,
ಆತ್ಮವಿಶ್ವಾಸ ಹೆಚ್ಚಿಸಲು ಸಾಧ್ಯವಾಗುತ್ತದೆ . ದುಡ್ಡಿನ ವಿಚಾರದಲ್ಲಿ ಕೂಡ ಸಣ್ಣ ಪುಟ್ಟ ತೊಂದರೆಗಳು ಇವೆ . ಯಾವುದನ್ನು ಬೇಗ ಖರೀದಿ ಮಾಡಲು ಹೋಗಬೇಡಿ . ಪರಾಮರ್ಶಿಸಿ ಖರೀದಿ ಮಾಡಬೇಕು . ಎಚ್ಚರವಾಗಿ ಖರೀದಿ ಮಾಡುವುದರಿಂದ ನಷ್ಟ ಆಗುವುದನ್ನು ತಡೆಗಟ್ಟಬಹುದು . ಏಳನೇ ತಾರೀಖಿನ ನಂತರ ಶುಕ್ರ ಗ್ರಹ ನಕಾರಾತ್ಮಕ ಸ್ಥಾನಕ್ಕೆ ಬರುತ್ತದೆ . ಬುಧ ಗ್ರಹ ನಿಮ್ಮ ಮಟ್ಟಿಗೆ ಧನಾತ್ಮಕವಾಗಿ ವರ್ತಿಸುತ್ತದೆ . ಆರನೇ ಭಾವಕ್ಕೆ ಬುಧ ಗ್ರಹ ಪರಿವರ್ತನೆ ಆದಾಗ , ಬಹಳ ಒಳ್ಳೆಯ ಪರಿಣಾಮಗಳನ್ನು ತಂದುಕೊಡುತ್ತದೆ .
ಮುಖ್ಯವಾಗಿ ಹೇಳುವುದಾದರೆ ಯಶಸ್ಸು ದೊರೆಯುತ್ತದೆ . ವಿದ್ಯಾರ್ಥಿಗಳು ಬಹಳ ಒಳ್ಳೆಯ ಪರಿವರ್ತನೆಯನ್ನು ನಿರೀಕ್ಷೆ ಮಾಡಬಹುದು. ಪಠ್ಯ ಹಾಗೂ ಪಠ್ಯೇತ್ತರ ವಿಚಾರಗಳಲ್ಲಿ ಪ್ರಗತಿಯನ್ನು ಕಾಣಬಹುದು . ನಿಮ್ಮ ಭೌದ್ಧಿಕ ಚಾಕಚಕ್ಯತೆ ತುಂಬಾ ಮೊನಚಾಗಿ ಇರುತ್ತದೆ. ವಿಚಿತ್ರ ಸ್ಥಿತಿಗಳು ನಿರ್ಮಾಣವಾಗುತ್ತದೆ . ಏರುಪೇರುಗಳು ಇವೆ . ನೀವು ಅಂದುಕೊಳ್ಳುವ ಘಟನೆಗಳು ನಡೆಯುವುದಿಲ್ಲ . ವಿಶೇಷವಾಗಿ ನಿಮ್ಮ ಸುಖ ಸ್ಥಾನದಲ್ಲಿ ಇರುವ ಕುಜ ಗ್ರಹ ಸಾಕಷ್ಟು ಕಿರಿ ಕಿರಿಗಳನ್ನು ಉಂಟುಮಾಡುತ್ತದೆ . ನಿಮ್ಮ ಆಲೋಚನೆಗಳಲ್ಲಿ ವ್ಯತಿರಿಕ್ತವಾದ ಪ್ರಭಾವವನ್ನು ಬೀರುತ್ತದೆ . ಎಚ್ಚರಿಕೆಯಿಂದ ಇರಬೇಕು ನಿಮ್ಮ ಗ್ರಹಿಕೆ ತಪ್ಪಾಗುವ ಸಾಧ್ಯತೆ ಇರುತ್ತದೆ .
ಕುಜ ಗ್ರಹ ಚತುರ್ಥ ಭಾವದಿಂದ ಪಂಚಮ ಭಾವಕ್ಕೆ 15 ನೇ ತಾರೀಖಿಗೆ ಪರಿವರ್ತನೆ ಗೊಳ್ಳುತ್ತದೆ. ಶನಿ ಮತ್ತು ಕುಜ ಪಂಚಮದಲ್ಲಿ ಸೇರಿಕೊಂಡು , ಪೂರ್ವ ಪುಣ್ಯ ಸ್ಥಾನ .ಆದಾಯ ವೃತ್ತಿ ಈ ತರಹದ ವಿಚಾರದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಬಹುದು . ಅದೃಷ್ಟ ಕೂಡ ನಿಮಗೆ ಇರುವುದಿಲ್ಲ . ಮಕ್ಕಳ ವಿಚಾರದಲ್ಲಿ ಸ್ವಲ್ಪ ಕಳವಳ ಶುರುವಾಗುತ್ತದೆ . ಆರೋಗ್ಯದ ಬಗ್ಗೆ ಅಥವಾ ಅವರ ಆಟ, ಪಾಠ , ಓಟಗಳ ಬಗ್ಗೆ , ಒಳಗೊಂಡಿರುತ್ತವೆ. ಕೆಲವು ಕಾರಣಗಳಿಗಾಗಿ ಸಾಕಷ್ಟು ಕಿರಿ ಕಿರಿಗಳು ಉಂಟಾಗುತ್ತವೆ .
ಪಂಚಮ ಶನಿ ಮೊದಲೇ ಇದೆ. ಅಲ್ಲಿ ಕುಜ ಕೂಡ ಪುನಃ ಸೇರಿಕೊಂಡು ಒಂದಷ್ಟು ಸಂಕೀರ್ಣ ಪರಿಸ್ಥಿತಿಯನ್ನು ತರುತ್ತವೆ. ನಿಮ್ಮ ಯಶಸ್ಸು ಕುಂಠಿತವಾಗುವ ಸಾಧ್ಯತೆ ಇದೆ . ರವಿ ಕೂಡ ಪಂಚಮ ಭಾವದಲ್ಲೇ ಇರುತ್ತದೆ . ಮಾರ್ಚ್ 14ನೇ ತಾರೀಖಿನ ವರೆಗೆ . ನಂತರ ಷಷ್ಠ ಭಾವಕ್ಕೆ ರವಿ ಹೋದಾಗ , ಬಹಳಷ್ಟು ಧನಾತ್ಮಕ ಫಲಗಳು ನಿಮಗೆ ಗೋಚರವಾಗುತ್ತವೆ . ಅಂದರೆ ನೀವು ಅಂದುಕೊಳ್ಳುವ ವಿಚಾರಗಳು ಒಂದು ಹಂತಕ್ಕೆ ಸತ್ಯ ಅನಿಸುವುದಕ್ಕೆ ಶುರುವಾಗುತ್ತದೆ . ನಿಮ್ಮ ಊಹೆ , ಆಲೋಚನೆ , ತರ್ಕ , ಇವುಗಳೆಲ್ಲವೂ ಉಲ್ಟಾ ಆಗುತ್ತದೆ . ಇವುಗಳು ಯಶಸ್ಸಿನ ಕಡೆ ನಿಮ್ಮನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ .
ನಿಮಗೆ ವ್ಯತಿರಿಕ್ತವಾದ ಘಟನೆಗಳು ನಡೆಯುತ್ತಿದ್ದವು .ವ್ಯಕ್ತಿಗಳು ಕೂಡ ಬಹಳ ವಿರುದ್ಧವಾಗಿ ವರ್ತಿಸುತ್ತಿದ್ದರು . ನೀವು ಅಂದು ಕೊಳ್ಳುವುದೇ ಬೇರೆ ಅವರ ಆಲೋಚನೆ ಬೇರೆಯಾಗಿ ಇರುತ್ತಿತ್ತು . ಇಂತಹ ವಿಚಾರಗಳು ಸರಿಯಾಗುವುದಕ್ಕೆ ಶುರುವಾಗುತ್ತದೆ.. ಇದರಲ್ಲಿ ಸ್ವಲ್ಪ ನಿರಾಳ ಸಿಗುವ ಸಾಧ್ಯತೆ ಇದೆ . ತನ್ನಿಂದ ತಾನೇ ಸರಿಯಾಗುವ ವಿಚಾರ ಇದಾಗಿರುತ್ತದೆ . ಆದ್ದರಿಂದ ನೀವು ಎಚ್ಚರಿಕೆಯನ್ನು ತೆಗೆದುಕೊಳ್ಳಲೇಬೇಕು . ನಿಮಗೆ ಹೆಚ್ಚಿನ ತೊಂದರೆ ಆಗುವುದರಿಂದ ತಪ್ಪಿಸಿಕೊಳ್ಳುವುದಕ್ಕೆ , ಸಂಬಂಧಗಳನ್ನು ಸರಿ ಮಾಡಿಕೊಳ್ಳುವುದಕ್ಕೆ ಶ್ರಮ
ಪಡಲೇಬೇಕಾಗುತ್ತದೆ . ಮೊದಲನೆಯದಾಗಿ ನಿಮ್ಮ ಮನಸ್ಸಿಗೆ ಒಂದು ಆಲೋಚನೆ ಬರುತ್ತದೆ .
ನೀವು ಆಲೋಚನೆಯ ಪ್ರಕಾರ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಬೇಕು .ಆಲೋಚನೆ ಸಾವಿರ ಬೇಕಾದರೂ ಮಾಡಬಹುದು, ಆದರೆ ಅದನ್ನು ಕಾರ್ಯಗತ ಮಾಡುವಾಗ ಹೆಚ್ಚಿನ ಎಚ್ಚರದ ಅವಶ್ಯಕತೆ ಇದೆ . ದುಡುಕಿ ನೀವು ಕ್ರಮವನ್ನು ಕೈಗೊಳ್ಳಬಾರದು . ಮನಸ್ಸಿನಲ್ಲಿ ನೀವು ಪರಾಮರ್ಶೆಗೊಳಿಸಿ ನಂತರ ಅದನ್ನು ನಿರ್ವಹಿಸಬೇಕು . ಸಾಧಕ ಬಾಧಕಗಳ ವಿಚಾರ ಮಾಡಿ ಚರ್ಚೆಯನ್ನು ಕೂಡ ಮಾಡಬೇಕು . ವಿರುದ್ಧ ಅಭಿಪ್ರಾಯಗಳನ್ನು ನೀವು ವಿಶೇಷವಾಗಿ ಕಲೆ ಹಾಕಬೇಕು .
ಒಂದು ವಿಷಯ ಅಂದರೆ ಅಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಎರಡು ವಿಚಾರಗಳು ಇರುತ್ತವೆ . ಆ ಋಣಾತ್ಮಕ ವಿಚಾರಗಳು ಏನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು . ನಿಮ್ಮ ತಲೆಯಲ್ಲಿ ಆಲೋಚನೆಗಳು ಬಂದರೆ ಅದಕ್ಕೆ ವಿರುದ್ಧವಾದ ಅಭಿಪ್ರಾಯಗಳು ಇರುತ್ತವೆ.. ಅವುಗಳನ್ನು ಕಲೆ ಹಾಕಿ ಸಮತೋಲನ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡಬೇಕು . ಆಗ ಸರಿಯಾದ ತೀರ್ಮಾನಕ್ಕೆ ಬರುವುದಕ್ಕೆ ಸಾಧ್ಯವಾಗುತ್ತದೆ .ಆ ವಿಷಯದಲ್ಲಿ ಒಂದು ಗ್ರಹಿಕೆ ನಿಮಗೆ ದೊರೆಯುತ್ತದೆ .
ಯಾವುದೇ ಕಾರಣಕ್ಕೂ ಬೇಗ ತೀರ್ಮಾನವನ್ನು ತೆಗೆದುಕೊಳ್ಳಬಾರದು . ತಾಳ್ಮೆಯಿಂದ ಕಾಯುವುದರಿಂದ ಬಹಳ ಪ್ರಯೋಜನಗಳಾಗುವ ಸಾಧ್ಯತೆ ಇದೆ. . ದುಡುಕುವುದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ . ನಾವು ಐದು ನಿಮಿಷ ಕೂಡ ಕಾಯುವುದಿಲ್ಲ . ಹಠಾತ್ತಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ . ಕುಜ ಮತ್ತು ರವಿ ಎರಡು ಗ್ರಹಗಳು ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಶುರು ಮಾಡುತ್ತವೆ . ಎರಡು ಗ್ರಹಗಳು ಕಷ್ಟದ ಸ್ಥಿತಿಯಲ್ಲಿ ಇರುತ್ತವೆ . ನಾಲ್ಕನೇ ತಾರೀಖಿನ ನಂತರ ಬಹಳಷ್ಟು ಪ್ರಯೋಜನಗಳನ್ನು ಕಾಣಬಹುದು . ಒಟ್ಟಾರೆಯಾಗಿ ಮಿಶ್ರ ಫಲಗಳು ದೊರೆಯುತ್ತವೆ ಎಂದು ಹೇಳಬಹುದು .