ನಾವು ಈ ಲೇಖನದಲ್ಲಿ ಮಹಿಳೆಯರು ಹುಟ್ಟಿದ ತಿಂಗಳ ಆಧಾರದ ಮೇಲೆ ಅವರ ಮನಸ್ಥಿತಿ ಮತ್ತು ಮನೋಭಾವ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ. ನೀರಿನ ಮೇಲಿನ ಮೀನಿನ ಹೆಜ್ಜೆಯ ಗುರುತುಗಳನ್ನು ಕಂಡುಹಿಡಿಯಬಹುದು . ಆದರೆ ಹುಡುಗಿಯರ ಮನಸ್ಸಿನಲ್ಲಿ ನಡೆಯುವ ಆಲೋಚನೆಗಳನ್ನು ತಿಳಿದುಕೊಳ್ಳಲು ತುಂಬಾ ಕಷ್ಟ . ಆ ಆಲೋಚನೆಗಳು ಸಾಗರದಷ್ಟು ಆಳವಾಗಿ ಇರುತ್ತವೆ.
ಆಗಸದಷ್ಟು ಅಗಲವಾಗಿ ಇರುತ್ತವೆ. ಇನ್ನು ಕೆಲವೊಮ್ಮೆ ಹುಡುಗಿಯರು ಮಾಡುತ್ತಿರುವ ಆಲೋಚನೆಗಳು ಏನು ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ . ಅವರ ಆಲೋಚನೆಗಳು ಯಾವ ಕಡೆಗೆ ಹೋಗುತ್ತಿರುವೆ ಎಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಹುಡುಗಿಯರ ಆಲೋಚನೆ , ಗುಣ ಹೇಗೆ ತಿಳಿದುಕೊಳ್ಳುವುದು ಅನ್ನೋದನ್ನ ನೋಡೋಣ . ಆಕೆ ಹುಟ್ಟಿದ ತಿಂಗಳ ಆಧಾರದ ಮೇಲೆ ಹುಡುಗಿಯ ಮನೋಭಾವ , ಗುಣಗಳನ್ನು ತಿಳಿಯಬಹುದು .
ಮೊದಲನೆಯದಾಗಿ ಜನವರಿ ತಿಂಗಳಲ್ಲಿ ಹುಟ್ಟಿದವರು ತುಂಬಾ ನಿಯತ್ತಾಗಿ , ನೀತಿಯಿಂದ ಇರುತ್ತಾರೆ. ಇವರಲ್ಲಿ ಅಪ್ರತಿಮ ಪ್ರತಿಭೆ ಇರುತ್ತದೆ . ಅಷ್ಟೇ ಅಲ್ಲದೆ ಇವರ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದರೆ , ಕೋಪ ಮಾಡಿಕೊಂಡು ಅವರನ್ನು ದ್ವೇಷಿಸಲು ಆರಂಭಿಸುತ್ತಾರೆ . ಸ್ವತಂತ್ರವಾಗಿ ಬದುಕುವ ಇಚ್ಛೆ ಉಳ್ಳವರು ಆಗಿರುತ್ತಾರೆ . ನಾಯಕತ್ವದ ಲಕ್ಷಣಗಳು ಇವರಲ್ಲಿ ಪುಷ್ಕಳವಾಗಿ ಇರುತ್ತದೆ .
ಇನ್ನು ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರು ತುಂಬಾ ರೋಮಾಂಚಕವಾಗಿ ಇರುತ್ತಾರೆ . ಹಾಗೂ ಸಹನೆ ಇವರಲ್ಲಿ ಹೆಚ್ಚಾಗಿರುತ್ತದೆ . ಇತರರ ಬಗ್ಗೆ ಪ್ರೀತಿ , ಬಾಂಧವ್ಯ, ಅನುಕಂಪ, ಪ್ರೇಮ , ಹೆಚ್ಚಾಗಿರುತ್ತದೆ . ಈ ತಿಂಗಳಲ್ಲಿ ಹುಟ್ಟಿದವರು ಯಾರಿಗೂ ಬಹು ಬೇಗ ಅರ್ಥವಾಗುವುದಿಲ್ಲ . ಇವರು ಒಂದೊಂದು ಸಮಯದಲ್ಲಿ ಒಂದೊಂದು ರೀತಿಯಾಗಿ ಇರುತ್ತಾರೆ .. ಇವರಿಗೆ ಯಾರಾದರೂ ಮೋಸ ಮಾಡಿದರೆ , ಅವರನ್ನು ಜೀವನದಲ್ಲಿ ಯಾವತ್ತಿಗೂ ಅವರನ್ನು ಕ್ಷಮಿಸುವುದಿಲ್ಲ .
ಇನ್ನು ಮಾರ್ಚ್ ತಿಂಗಳಲ್ಲಿ ಹುಟ್ಟಿದ ಹುಡುಗಿಯರ ಮನೋಭಾವನೆಗಳು ಯಾವ ರೀತಿ ಇರುತ್ತದೆ ಎಂದರೆ , ಹೆಚ್ಚು ಧೈರ್ಯವಂತರು ಆಗಿರುತ್ತಾರೆ . ಹೆಚ್ಚು ನೀತಿ ಉಳ್ಳವರು ಆಗಿರುತ್ತಾರೆ. ವಿಶ್ವಾಸ ಪಾತ್ರರು ಆಗಿರುತ್ತಾರೆ. ಪ್ರೀತಿಸುವವರನ್ನು ತುಂಬಾ ಗಾಢವಾಗಿ ಪ್ರೀತಿಸುವವರು ಆಗಿರುತ್ತಾರೆ . ಯಾರನ್ನಾದರೂ ಪ್ರೀತಿಯಲ್ಲಿ ಬೀಳಿಸುವುದು ಭಾರಿ ಕಷ್ಟ ಎಂದು ಹೇಳಲಾಗುತ್ತದೆ. ಈ ತಿಂಗಳಲ್ಲಿ ಹುಟ್ಟಿದ ಹುಡುಗಿಯರು ನಿಮ್ಮನ್ನು ಪ್ರೀತಿಸಿದರೆ , ನೀವೇ ಅದೃಷ್ಟವಂತರು ಎಂದು ತಿಳಿಯಬಹುದು . ಎಂತಹುದೇ ಕಷ್ಟ ಬಂದರೂ ಧೈರ್ಯ ಹೊಂದುವುದಿಲ್ಲ .
ಇನ್ನು ಏಪ್ರಿಲ್ ತಿಂಗಳಲ್ಲಿ ಹುಟ್ಟಿದವರು ತುಂಬಾ ಬುದ್ಧಿವಂತರು .ಯಾವುದೇ ಕೆಲಸ ಆದರೂ ಸರಳವಾಗಿ ಸುಲಭವಾಗಿ ಮಾಡಿ ಮುಗಿಸುತ್ತಾರೆ . ಎಲ್ಲರ ಮನಸ್ಸನ್ನು ಕೂಡ ತುಂಬಾ ಸರಳವಾಗಿ ಗೆಲ್ಲುವವರು ಆಗಿರುತ್ತಾರೆ. ತಮ್ಮ ಹುಡುಗ ಬೇರೆಯವರನ್ನು ಇಷ್ಟ ಪಡುವುದನ್ನು ಇವರು ಯಾವುದೇ ಕಾರಣಕ್ಕೂ ಇಷ್ಟಪಡುವುದಿಲ್ಲ . ಈ ತಿಂಗಳಲ್ಲಿ ಹುಟ್ಟಿದವರಿಗೆ ಸ್ವಲ್ಪ ಅಸೂಯೆ ಜಾಸ್ತಿ. ಇವರಿಗೆ ಆಕರ್ಷಣೀಯವಾದ ವ್ಯಕ್ತಿತ್ವ ಇರುತ್ತದೆ .ಅಷ್ಟೇ ಅಲ್ಲದೆ ಕ್ರಿಯಾತ್ಮಕವಾಗಿ ವ್ಯವಹಾರವನ್ನು ಗೆಲ್ಲಿಸುವಲ್ಲಿ ಸಮರ್ಥರು ಆಗಿರುತ್ತಾರೆ.
ಇನ್ನು ಮೇ ತಿಂಗಳಲ್ಲಿ ಹುಟ್ಟಿದವರು ಇವರು ತುಂಬಾ ಸುಂದರಿಯರು ಆಗಿರುತ್ತಾರೆ . ಇವರ ಪ್ರೀತಿಯಲ್ಲಿ ಬಿದ್ದರೆ ಅಪಾಯದ ವಲಯದ ಒಳಗೆ ಇದ್ದಂತೆ . ಸ್ವಂತ ನಿರ್ಣಯವನ್ನು ಇವರು ತೆಗೆದುಕೊಳ್ಳುವುದಿಲ್ಲ . ಶ್ರಮ ಪಟ್ಟು ದುಡಿಯುವ ಗುಣ ಇವರಿಗೆ ಹೆಚ್ಚಾಗಿ ಇರುತ್ತದೆ .ಅಷ್ಟೇ ಅಲ್ಲದೆ ಇವರು ತುಂಬಾ ನೀತಿಯಿಂದ ಕೂಡಿದವರು ಆಗಿರುತ್ತಾರೆ .
ಇನ್ನು ಜೂನ್ ತಿಂಗಳಲ್ಲಿ ಹುಟ್ಟಿದವರು ಸೃಜನಾತ್ಮಕತೆಯ ಜೊತೆಗೆ ಒಳ್ಳೆಯ ಮಾತುಗಾರಿಕೆಯನ್ನು ಬಲ್ಲವರು ಆಗಿರುತ್ತಾರೆ. ಯಾವುದೇ ಮಾತನ್ನು ಅವರು ತುಂಬಾ ಆಲೋಚಿಸಿ ಅವರು ಆ ವಿಷಯವನ್ನು ಇತರರ ಮುಂದೆ ಇಡುತ್ತಾರೆ . ಯಾವ ವಿಷಯದಲ್ಲೂ ಇವರು ಮುಖದ ಮೇಲೆ ಮಾತನಾಡುವವರು ಆಗಿರುತ್ತಾರೆ . ಇವರು ತಮ್ಮ ಬೆನ್ನ ಹಿಂದೆ ಮಾತನಾಡುವವರ ಬಗ್ಗೆ ದ್ವೇಷವನ್ನು ಸಾಧಿಸುತ್ತಾರೆ .
ಇನ್ನು ಜುಲೈಯಲ್ಲಿ ಹುಟ್ಟಿದ ಹುಡುಗಿಯರು ತುಂಬಾ ಸುಂದರಿಯರು ಆಗಿರುತ್ತಾರೆ .ಹಾಗೂ ನೀಯತ್ತಿನ ಹುಡುಗಿಯರು ಆಗಿರುತ್ತಾರೆ . ವಿವಾದಗಳಿಗೆ ತುಂಬಾ ದೂರ ಇರುತ್ತಾರೆ . ಸುತ್ತ ಮುತ್ತಲಿರುವ ವ್ಯಕ್ತಿಗಳನ್ನು ತುಂಬಾ ಅನ್ಯೂನ್ಯವಾಗಿ ನೋಡಿಕೊಳ್ಳುತ್ತಾರೆ . ಇವರಲ್ಲಿ ಕರುಣೆ ಜಾಸ್ತಿ ಇರುತ್ತದೆ . ಸಂಬಂಧಗಳನ್ನು ಕಾಪಾಡಿಕೊಳ್ಳುತ್ತಾರೆ . ಇವರಿಗೆ ಒಂದು ಬಾರಿ ನೋಯಿಸಿದರೆ , ಇವರು ಮೊದಲ ಸ್ಥಿತಿಗೆ ಬರುವುದಕ್ಕೆ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಾರೆ .
ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಹುಡುಗಿಯರಿಗೆ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ . ಒಳ್ಳೆಯ ಮನಸ್ಸು ವ್ಯಕ್ತಿತ್ವ ಹೊಂದಿರುತ್ತಾರೆ . ಇವರಲ್ಲಿ ಹಾಸ್ಯ ಪ್ರಜ್ಞೆ ಎಲ್ಲರ ದೃಷ್ಠಿ ನಿಮ್ಮ ಮೇಲೆ ಇರಬೇಕೆಂದು ಹಂಬಲಿಸುತ್ತಾರೆ. ಇವರು ಎಲ್ಲರಿಗೂ ಆಕರ್ಷಣೀಯವಾಗಿ ಮತ್ತು ರೋಮ್ಯಾಂಟಿಕ್ ಆಗಿ ಕಾಣುತ್ತಾರೆ .
ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದ ಹುಡುಗಿಯರು ಕ್ರಮ ಶಿಕ್ಷಣ ಹೆಚ್ಚಾಗಿರುತ್ತದೆ . ಸೌಂದರ್ಯಕ್ಕೆ ಪ್ರತಿರೂಪ ಇವರು ಆಗಿರುತ್ತಾರೆ . ಮೋಸ ಮಾಡುವವರನ್ನು ಯಾವತ್ತಿಗೂ ಕ್ಷಮಿಸುವುದಿಲ್ಲ . ಅಷ್ಟೇ ಅಲ್ಲದೆ ಪ್ರತಿಕಾರ ಪಡೆಯುವವರೆಗೂ ಬಿಡುವುದಿಲ್ಲ . ಯಾರಿಗೂ ಹೇಳೋದಿಲ್ಲ ಅದನ್ನ ಅರ್ಥ ಮಾಡಿಕೊಂಡು ಮೋಸ ಮಾಡುವವರನ್ನು ಎಂದಿಗೂ ಇವರು ಕ್ಷಮಿಸುವುದಿಲ್ಲ .ಅದನ್ನು ಅರ್ಥ ಮಾಡಿಕೊಂಡು ಅದರಂತೆ ನಡೆಯಲು ಬಯಸುತ್ತಾರೆ .
ಇನ್ನೂ ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದ ಹುಡುಗಿಯರು ಚಿಕ್ಕ ಚಿಕ್ಕ ವಿಷಯಗಳಿಗೆ ಭಯ ಜಾಸ್ತಿ ಭಾವೋದ್ವೇಗ ಕೂಡ ಹೆಚ್ಚು . ನೋಡಲು ತುಂಬಾ ಸೌಂದರ್ಯವಾಗಿ ಇರುತ್ತಾರೆ . ಭಾವನೆಗಳನ್ನು ಯಾರ ಬಳಿ ಹಂಚಿಕೊಳ್ಳುವುದಿಲ್ಲ. ಇತರೆ ಹುಡುಗಿಯರಿಗೆ ಇವರು ಅಂದರೆ ಇಷ್ಟ ಇರೋದಿಲ್ಲ. ಇವರನ್ನು ನೋಡಿ ಅಸೂಯೆ ಪಡುವವರು ಹೆಚ್ಚು. ಕೆಲವೊಮ್ಮೆ ಇವರಿಗೆ ಅನಾವಶ್ಯಕ ತೊಂದರೆಗಳು ಉಂಟಾಗಬಹುದು.
ಇನ್ನೂ ನವೆಂಬರ್ ತಿಂಗಳಲ್ಲಿ ಹುಟ್ಟಿದ ಹುಡುಗಿಯರು ಬೇರೆ ಹುಡುಗಿಯರಿಗಿಂತ ಒಂದು ಮೆಟ್ಟಿಲು ಜಾಸ್ತಿ ಇರುತ್ತಾರೆ. ಇವರ ಬಳಿ ಸುಳ್ಳು ಹೇಳಿದರೆ, ಬಹು ಬೇಗ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇವರು ತುಂಬಾ ಸೂಕ್ಷ್ಮವಾಗಿ ಆಲೋಚನೆ ಮಾಡುತ್ತಾರೆ. ಇವರು ನೋಡಲು ತುಂಬಾ ಆಕರ್ಷಣೀಯವಾಗಿ ಇರುತ್ತಾರೆ.
ಇನ್ನೂ ಡಿಸೆಂಬರ್ ತಿಂಗಳಲ್ಲಿ ಹುಟ್ಟಿದ ಹುಡುಗಿಯರು ಎಂತಹ ಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಸಮಸ್ಯೆಗಳಿಂದ ಇವರು ಬಹಳ ಸುಲಭವಾಗಿ ಹೊರ ಬರುತ್ತಾರೆ. ಇವರಿಗೆ ಅದೃಷ್ಟ ಸುಲಭವಾಗಿ ಒಲಿದು ಬರುತ್ತದೆ . ಇವರು ಬಹಳ ಮುಕ್ತ ಮನಸ್ಸಿನವರು ಆಗಿರುತ್ತಾರೆ.
ಹೀಗೆ ಆಯಾ ತಿಂಗಳಲ್ಲಿ ಹುಟ್ಟಿದ ಹುಡುಗಿಯರ ಮನೋಭಾವಗಳು ಈ ರೀತಿಯಾಗಿ ಇರುತ್ತದೆ. ಎಂದು ತಿಳಿಸಲಾಗಿದೆ.