ಪತ್ನಿ ಅತೃಪ್ತಳಾದಾಗ ಪತಿ ಹೇಗೆ ತೃಪ್ತಿಪಡಿಸಬಹುದು?

ಪತ್ನಿ ಅತೃಪ್ತಳಾದಾಗ ಪತಿ ಹೇಗೆ ತೃಪ್ತಿಪಡಿಸಬಹುದು. ಹೆಂಡತಿಯ ಈ ಕೆಲವು ವರ್ತನೆಗಳು ಆಕೆ ಗಂಡನ ಮೇಲೆ ಅತೃಪ್ತಿ ಹೊಂದಿದ್ದಾಳೆ ಎಂಬುದನ್ನು ಸೂಚಿಸುತ್ತದೆ.ಸಾಮಾನ್ಯವಾಗಿ ಹೆಂಗಸರು ತಮ್ಮ ಪತಿಯಿಂದ ತೃಪ್ತರಾಗಿರುವುದಿಲ್ಲ. ಅದು ಗಂಡನಿಗೆ ತಿಳಿಯದೇ ಇರಬಹುದು. ಹೆಂಡತಿಯರು ಅತೃಪ್ತರಾದಾಗ ಅವರ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಗಮನಿಸಬಹುದು. ಹೆಂಡತಿ ಅತೃಪ್ತಳಾದಾಗ ಪ್ರದರ್ಶಿಸುವ ಕೆಲವು ಚಿಹ್ನೆಗಳು ಇಲ್ಲಿವೆ ಇದನ್ನು ಅರ್ಥ ಮಾಡಿಕೊಂಡರೆ ಯಾವುದೇ ಪತಿಯು ತನ್ನ ಹೆಂಡತಿಯನ್ನು ತೃಪ್ತಿಪಡಿಸಬಹುದು. ಅಲ್ಲದೇ ಇದರಿಂದ ಸಂಸಾರದಲ್ಲಿ ವಿರಸವೂ ಇರುವುದಿಲ್ಲ. ಹಾಗಾದರೇ ಗಂಡನ ಮೇಲೆ ಹೆಂಡತಿ ತೋರುವ ಅಸಮಾಧಾನ ಲಕ್ಷಣಗಳು ಯಾವುವು ಎಂದರೆ

ಮೌನ ವಹಿಸುವುದು ಹೌದು ಹೆಂಡತಿ ತುಂಬಾ ಸಂತೋಷವಾಗಿದ್ದಾಗ ಅವಳು ತನ್ನ ಗಂಡನೊಂದಿಗೆ ಹಲವು ವಿಚಾರಗಳ ಬಗ್ಗೆ ಮಾತನಾಡುತ್ತಾಳೆ ಯಾವಾಗಲೂ ಬಡಬಡ ಎಂದು ಮಾತನಾಡುತ್ತಿದ್ದ ಹೆಂಡತಿ ಇದ್ದಕ್ಕಿದ್ದಂತೆ ಮೌನವಾಗಿದ್ದರೇ ಅವಳು ಅತೃಪ್ತಳಾಗಿದ್ದಾಳೆಂದು ಅರ್ಥ.

ಅರ್ಥ ಮಾಡಿಕೊಳ್ಳಿ ಅವಳಿಗೆ ಯಾವುದೋ ಕಾರಣಕ್ಕೆ ನಿಮ್ಮ ಮೇಲೆ ಕೋಪವಿದೆ ಎಂದರ್ಥ. ಈ ಲಕ್ಷಣಗಳನ್ನು ಗಮನಿಸಿದ ನಂತರ ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ ಸಮಸ್ಯೆಗೆ ಕಾರಣವೇನು ಎಂಬುದನ್ನು ತಿಳಿಯಿರಿ.

ಪದೇ ಪದೇ ಕೋಪಗೊಳ್ಳುವುದು ಹೌದು. ಹೆಂಡತಿ ಸಾಮಾನ್ಯವಾಗಿ ತನ್ನ ಗಂಡನಿಗೆ ತೊಂದರೆ ಕೊಡಲು ಬಯಸುವುದಿಲ್ಲ ಆದರೇ ಹೆಂಡತಿ ನಿಮ್ಮೊಂದಿಗೆ ಕೋಪಗೊಳ್ಳವುದು ಜಗಳವಾಡಲು ಆರಂಭಿಸಿದರೆ ಅವಳು ಒಂದು ರೀತಿಯ ಅಸಮಾಧಾನದಲ್ಲಿದ್ದಾಳೆ ಎಂದು ಅರ್ಥಮಾಡಿಕೊಳ್ಳಿ. ನೀವು ಇದನ್ನು ಅರ್ಥಮಾಡಿಕೊಂಡ ನಂತರ ನಿಮ್ಮ ಹೆಂಡತಿಯನ್ನು ಮೆಚ್ಚಿಸುವುದು ಮುಂದಿನ ದಾರಿ.

ತನ್ನ ಬಗ್ಗೆ ಮಾತ್ರ ಯೋಚಿಸುವುದು ಹೌದು. ಹೆಂಡತಿ ತನ್ನ ಗಂಡನ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾಳೆ ಎಂದು ಹೇಳಲಾಗುತ್ತದೆ ಆದರೇ ಇದ್ದಕ್ಕಿದ್ದಂತೆ ಅವಳು ತನ್ನ ಬಗ್ಗೆ ಮಾತ್ರ ಯೋಚಿಸಿದರೆ ಅಥವಾ ನಿಮ್ಮ ಬಗ್ಗೆ ಕಾಳಜಿ ವಹಿಸದಿದ್ದರೆ ಅವಳು ಅತೃಪ್ತಳಾಗಿದ್ದಾಳೆ ಎಂದು ಅರ್ಥಮಾಡಿಕೊಳ್ಳಿ. ನಿಮ್ಮ ಹೆಂಡತಿಯೊಂದಿಗೆ ಶಾಂತವಾಗಿ ಮಾತನಾಡಿ. ಅವಳ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಿ ಮತ್ತು ಪರಿಹರಿಸಿ ಸಿನಿಮಾ ಅಥವಾ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಿ ಹೀಗೆ ಮಾಡುವುದರಿಂದ ನಿಮ್ಮ ಹೆಂಡತಿ ತೃಪ್ತಳಾಗುತ್ತಾಳೆ ಮೊದಲಿನಂತೆ ನಿಮ್ಮನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ ಪ್ರಯತ್ನ ಮಾಡಿ ನೋಡಿ.

Leave a Comment