5 ಕಾಳು ಮೆಣಸಿನಿಂದ ದೊಡ್ಡ ದೊಡ್ಡ ಕಷ್ಟಗಳು ಕರಗುತ್ತವೆ

0

ನಾವು ಈ ಲೇಖನದಲ್ಲಿ 5 ಕಾಳು ಮೆಣಸಿನಿಂದ ದೊಡ್ಡ ದೊಡ್ಡ ಕಷ್ಟಗಳು ಹೇಗೆ ಕರಗುತ್ತವೆ ಎಂದು ತಿಳಿದುಕೊಳ್ಳೋಣ. ಕೇವಲ ಒಂದು ವಾರದಲ್ಲಿ ಕಷ್ಟಗಳು ಕರಗಿ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂಬ ಕುತೂಹಲಕಾರಿ ರಹಸ್ಯವನ್ನು ಇಲ್ಲಿ ತಿಳಿದುಕೊಳ್ಳೋಣ . ಜೀವನದಲ್ಲಿ ಕಷ್ಟ ಸುಖ ಇದ್ದೇ ಇರುತ್ತದೆ . ಬರೀ ಹಗಲು ಇರಲಿ ಎಂದು ಬಯಸುವುದಕ್ಕೆ ಸಾಧ್ಯವಿಲ್ಲ .ರಾತ್ರಿ ಇದ್ದ ಹಾಗೆ ಕಷ್ಟ ಸುಖ, ಸಿಹಿ, ಕಹಿ ಇದ್ದೇ ಇರುತ್ತದೆ . ಜೀವನದಲ್ಲಿ ಸುಖ ಬಂದಾಗ ಹಿಗ್ಗಬಾರದು.

ಕಷ್ಟ ಬಂದಾಗ ಕುಗ್ಗಬಾರದು . ಕಷ್ಟಗಳು ಬಂದಾಗ ಧೈರ್ಯವಾಗಿ ಎದುರಿಸಿ ಗೆಲ್ಲಬೇಕು . ಇದಕ್ಕಾಗಿ ಮನೆಯಲ್ಲಿ ಸಿಗುವ ಕೆಲವು ವಸ್ತುಗಳಿಂದ ಕೆಲವು ಉಪಾಯಗಳನ್ನು ನೀವು ಮಾಡಿ ಗೆದ್ದು ನೆಮ್ಮದಿಯಿಂದ ಜೀವನ ಸಾಗಿಸಬಹುದು . ಅಡುಗೆ ಮನೆಯಲ್ಲಿ ಸಿಗುವ ವಸ್ತುವನ್ನು ಬಳಸಿ ಹೇಗೆ ಶ್ರೀಮಂತರಾಗಬಹುದು ಎಂಬುದನ್ನು ನೋಡೋಣ . ಅಡುಗೆ ಮನೆಯಲ್ಲಿ ಇರುವ ವಸ್ತುಗಳು ನೇರವಾಗಿ ಗ್ರಹಗಳ ಜೊತೆ ಸಂಬಂಧವನ್ನು ಹೊಂದಿದ್ದು , ಈ ವಸ್ತುಗಳು ನಮ್ಮ ಜೀವನದಲ್ಲಿ ಚಮತ್ಕಾರಿ ಪ್ರಭಾವವನ್ನು ಬೀರುತ್ತವೆ .

ಈ ವಸ್ತುಗಳನ್ನು ಉಪಯೋಗಿಸಿ ಜೀವನದ ಬಹುತೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು . ಉಪಾಯಗಳು ಎಂದಿಗೂ ಅನುತ್ತೀರ್ಣ ಆಗುವುದಿಲ್ಲ . ನೀವು ಕಷ್ಟಪಟ್ಟು ಕೆಲಸ ಮಾಡಿದರು ಕೈಯಲ್ಲಿ ಹಣ ನಿಲ್ಲುತ್ತಿರುವುದಿಲ್ಲ . ಇಂತಹ ತೊಂದರೆಗಳನ್ನು ದೂರ ಮಾಡುವುದಕ್ಕೆ , ಮತ್ತು ಅದೃಷ್ಟವನ್ನು ಬಲ ಪಡಿಸುವುದಕ್ಕೆ ಕರಿ ಮೆಣಸಿನ ಕಾಳಿನ ಕೆಲವು ಉಪಾಯಗಳು ತುಂಬಾ ಶಕ್ತಿ ಯುತವಾಗಿ ಇರುತ್ತದೆ . ಈ ಕರಿ ಮೆಣಸಿನ ಕಾಳಿಗೆ ಸಂಬಂಧಿಸಿದ ಕೆಲವು ವಿಶೇಷ ತಂತ್ರಗಳನ್ನು ಇಲ್ಲಿ ತಿಳಿಸಲಾಗಿದೆ . ಈ ಉಪಾಯವನ್ನು ಭಕ್ತಿ ಮತ್ತು ವಿಶ್ವಾಸದಿಂದ ಮಾಡಿದರೆ ಖಂಡಿತವಾಗಿ ಯಶಸ್ಸು ದೊರೆಯುತ್ತದೆ .

ಮೊದಲನೇ ಉಪಾಯ ಐದು ಮೆಣಸಿನ ಕಾಳುಗಳನ್ನು ನಿಮ್ಮ ಬಲಗೈಯಲ್ಲಿ ಹಿಡಿದುಕೊಂಡು ಏಳು ಸಲ ನಿಮ್ಮ ತಲೆಯ ಮೇಲಿಂದ ಕ್ಲಾಕ್ ವೈಸ್ ಅಲ್ಲಿ ನೀವಾಳಿಸಬೇಕು . ನಂತರ ಆ ಕಾಳುಗಳನ್ನು ಒಂದು ಪೇಪರ್ ನಲ್ಲಿ ಇಟ್ಟುಕೊಂಡು , ಯಾರು ಇಲ್ಲದ ಜಾಗದಲ್ಲಿ ನಿಂತು ನಿಮ್ಮ ಇಚ್ಛೆಯನ್ನು ಮನಸ್ಸಿನಲ್ಲಿ ಹೇಳಿಕೊಂಡು , ನಿಮ್ಮ ಸಮಸ್ಯೆಗೆ ಪರಿಹಾರ ಆಗಬೇಕು ಎಂದು ಯುನಿವರ್ಸ್ ಗೆ ಪ್ರಾರ್ಥನೆ ಮಾಡಿಕೊಳ್ಳಬೇಕು .

ಮೊದಲನೇ ಕಾಳುಮೆಣಸನ್ನು ಪೂರ್ವ ದಿಕ್ಕಿಗೆ , ಎರಡನೇ ಕಾಳನ್ನು ಪಶ್ಚಿಮ ದಿಕ್ಕಿಗೆ , ಮೂರನೇ ಕಾಳನ್ನು ಉತ್ತರ ದಿಕ್ಕಿಗೆ , ನಾಲ್ಕನೇ ಕಾಳನ್ನು ದಕ್ಷಿಣ ದಿಕ್ಕಿಗೆ ಎಸೆಯಬೇಕು . ನಾಲ್ಕು ದಿಕ್ಕಿಗೂ ಒಂದೊಂದು ಕಾಳನ್ನು ಎಸೆಯಬೇಕು . ಐದನೇ ಕಾಳನ್ನು ಆಕಾಶಕ್ಕೆ ಮೇಲಕ್ಕೆ ಎಸೆದು ,ಹಿಂದೆ ತಿರುಗಿ ನೋಡದೆ ಮನೆಗೆ ಬರಬೇಕು . ಈ ಸಣ್ಣ ಉಪಾಯದಿಂದ ನಿಮ್ಮ ಎಲ್ಲಾ ತರಹದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು . ಈ ಉಪಾಯ ಯಾವತ್ತಿಗೂ ಪೇಲ್ ಆಗುವುದಿಲ್ಲ .ಇದು ಶಕ್ತಿಯುತ ಉಪಾಯ ಆಗಿರುತ್ತದೆ .

ಎರಡನೇ ಉಪಾಯ , ಮಾಟ ವಾಮಾಚಾರದಂತಹ ನಕಾರಾತ್ಮಕ ಪ್ರಭಾವ , ತಂತ್ರ , ದೃಷ್ಟಿ , ಶತ್ರು ಕಾಟ ಇದ್ದರೆ , ಈ ಉಪಾಯವನ್ನು ಮಾಡಿ . ಇದನ್ನು ನಿಮಗೆ ನೀವೇ ಮಾಡಿಕೊಳ್ಳಬಹುದು . ಅಥವಾ ನಿಮ್ಮ ಮನೆಯ ಸದಸ್ಯರು ಮಾಡಬಹುದು . ಐದು ಮೆಣಸಿನ ಕಾಳುಗಳನ್ನು ನಿಮ್ಮ ಬಲಗೈಯಲ್ಲಿ ಹಿಡಿದುಕೊಂಡು , ಏಳು ಸಲ ನಿಮ್ಮ ತಲೆಯ ಮೇಲಿಂದ ನೀವಾಳಿಸಿ ಕೊಳ್ಳಬೇಕು . ನಂತರ ಈ ಕಾಳುಗಳನ್ನು ಮನೆಯ ಯಾವುದಾದರು ಮೂಲೆಯಲ್ಲಿ ಒಂದು ಸಣ್ಣ ಬಟ್ಟಲಿನಲ್ಲಿ ಇಟ್ಟು ಸುಡಬೇಕು .

ನಂತರ ನಿಮ್ಮ ಮನಸ್ಸಿನಲ್ಲಿರುವ ಇಚ್ಛೆಯನ್ನು ಹೇಳುತ್ತಾ , ನಂತರ ನನ್ನ ದಾರಿಗೆ ಅಡ್ಡ ಇರುವ ಎಲ್ಲವನ್ನು ದೂರ ಮಾಡಿಕೊಡು , ಎಂದು ಯುನಿವರ್ಸ್ ಗೆ ಪ್ರಾರ್ಥನೆ ಮಾಡಬೇಕು . ಆ ಬೂದಿಯನ್ನು ನಂತರ ಮನೆಯವರೆಗೆ ಎಸೆಯಬೇಕು . ಎಸೆದ ನಂತರ ಯಾವುದೇ ಮಾಟ ಮಂತ್ರ ದೃಷ್ಟಿ ಶತ್ರು ಕಾಟ ಎಲ್ಲಾ ಹೋಯಿತು ಎಂದು ಹೇಳಿಕೊಳ್ಳಬೇಕು . ಈ ರೀತಿ ಮಾಡುವುದರಿಂದ ಮಾಟ ಮಂತ್ರಗಳಿಂದ ಮುಕ್ತಿ ಸಿಗುತ್ತದೆ . ಮತ್ತು ಶತ್ರುಗಳ ಕಾಟದಿಂದ ಮುಕ್ತಿ ಸಿಗುತ್ತದೆ .

ಮೂರನೇ ಉಪಾಯ .ಯಾವುದೇ ಕೆಲಸಕ್ಕೂ ಕೈ ಹಾಕಿದರು ಯಶಸ್ಸು ಸಿಗುತ್ತಿಲ್ಲ ಎಂದರೆ, ಈ ಉಪಾಯವನ್ನು ಮಾಡಿ ನೋಡಿ . ನೀವು ಯಾವುದೇ ಕೆಲಸಕ್ಕೆ ಹೋಗುವ ಮುನ್ನ ಎರಡರಿಂದ ಮೂರು ಮೆಣಸು ಕಾಳುಗಳನ್ನು ಮನೆಯ ಹೊರಗಡೆ ಹಾಕಿ . ಮನೆಯಿಂದ ಹೊರಗಡೆ ಹೋಗುವಾಗ ಮೆಣಸು ಕಾಳುಗಳನ್ನು ತುಳಿದು ನಿಮ್ಮ ಇಚ್ಛೆಯನ್ನು ಹೇಳುತ್ತಾ ಹೋಗಿ . ಹಿಂದೆ ನೋಡದೆ ನಿಮ್ಮ ಕೆಲಸಕ್ಕೆ ಹೋಗಬೇಕು . ಈ ರೀತಿ ಮಾಡುವುದರಿಂದ ನಿಮ್ಮ ಕೆಲಸದಲ್ಲಿರುವ ಎಲ್ಲಾ ಅಡೆತಡೆಗಳು ದೂರವಾಗುತ್ತದೆ .

ನಾಲ್ಕನೇ ಉಪಾಯ . ಕರಿ ಮೆಣಸಿನ ಉಪಾಯವು ಶನಿಗ್ರಹದ ತೊಂದರೆಗಳನ್ನು ತೊಡೆದು ಹಾಕುವುದಕ್ಕೆ ತುಂಬಾ ಉಪಯುಕ್ತವಾಗಿದೆ . ಇದಕ್ಕಾಗಿ ಕರಿಮೆಣಸು ಮತ್ತು ಹನ್ನೊಂದು ರೂಪಾಯಿಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ನಿರ್ಗತಿಕರಿಗೆ ದಾನ ಮಾಡಿ . ಕರಿ ಮೆಣಸಿನ ಈ ಉಪಾಯವು ಶನಿಯ ಪ್ರಭಾವವನ್ನು ತೊಡೆದು ಹಾಕುವುದಕ್ಕೆ ಸಹಾಯ ಮಾಡುತ್ತದೆ .

ಐದನೇ ಉಪಾಯ . ನಿಮ್ಮ ನೌಕರಿಯಲ್ಲಿ ನೀವು ಅಡೆ-ತಡೆಗಳನ್ನು ಎದುರಿಸುತ್ತಿದ್ದರೆ , ಮಂಗಳವಾರ ಐದು ಕರಿ ಮೆಣಸಿನ ಕಾಳುಗಳನ್ನು ತೆಗೆದುಕೊಂಡು , ಮನೆಯ ಹೊರಗಡೆ ಪೂರ್ವಕ್ಕೆ ಮುಖ ಮಾಡಿ ನಿಂತು , ನಿಮ್ಮ ಎಲ್ಲಾ ಇಷ್ಟ ದೇವತೆಗಳನ್ನು ಸ್ಮರಿಸಿ ನಿಮ್ಮ ಇಚ್ಛೆಯನ್ನು , ಹೇಳಿ ಅದನ್ನು ಹೊರಗಡೆ ಎಸೆಯಬೇಕು . ಈ ರೀತಿ ಮಾಡುವುದರಿಂದ ನೀವು ಶೀಘ್ರದಲ್ಲಿ ಉತ್ತಮ ಕೆಲಸವನ್ನು ಪಡೆಯಬಹುದು . ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ .

ಆರನೇ ಉಪಾಯ . ಬಟ್ಟೆಯಲ್ಲಿ ಏಳು ಕರಿಮೆಣಸು ಕಾಳುಗಳನ್ನು ಮತ್ತು ಮತ್ತು ಒಂದು ನಾಣ್ಯವನ್ನು ಇಟ್ಟು ಕಟ್ಟಿ ನಿಮ್ಮ ತಿಜೋರಿಯಲ್ಲಿ ಇಡಬೇಕು . ಈ ರೀತಿ ಮಾಡುವುದರಿಂದ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ . ಮತ್ತು ನಿಮ್ಮ ತಿಜೋರಿ ಯಾವಾಗಲೂ ಹಣದಿಂದ ತುಂಬಿರುತ್ತದೆ .

ಏಳನೇ ಉಪಾಯ . ಕೆಟ್ಟ ಕಣ್ಣು ದೃಷ್ಟಿ ದೋಷಗಳನ್ನು ತೊಡೆದು ಹಾಕುವುದಕ್ಕೆ , ಕಪ್ಪು ಬಟ್ಟೆಯಲ್ಲಿ ಮೂರು ಕರಿಮೆಣಸನ್ನು ಹಾಕಿ, ಅದರಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿ ಮನೆಯ ಹೊರಗಿನ ಅರಳಿ ಮರದ ಬಳಿ ಇಡಬೇಕು . ಈ ಪರಿಹಾರದಿಂದ ಮನೆಗೆ ಇರುವ ಕೆಟ್ಟ ಕಣ್ಣು ದೃಷ್ಟಿ ನಿವಾರಣೆಯಾಗುತ್ತದೆ .

Leave A Reply

Your email address will not be published.