ಹಾಸಿಗೆ ಹತ್ತಿರ ಈ ವಸ್ತು ಇದ್ದರೆ ಜೀವನ ಉದ್ದಾರ ಆಗೋದಿಲ್ಲ

ರಾತ್ರಿ ಮಲಗುವಾಗ ನಿಮ್ಮ ಹಾಸಿಗೆಯ ಹತ್ತಿರ ಇದನ್ನು ಮಾತ್ರ ಇಟ್ಟುಕೊಂಡು ಮಲಗಬೇಡಿ. ಮಲಗಿದರೇ ಘೋರವಾದ ಕಷ್ಟಗಳು ಬೆನ್ನಟ್ಟುತ್ತವೆ ಎಂಬ ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ರಾತ್ರಿ ಮಲಗಲು ನಿಮ್ಮ ರೂಂ ಗೆ ಹೋಗುತ್ತೀರುವ ಸಂದರ್ಭದಲ್ಲಿ ಕೆಲವೊಂದು ವಸ್ತುಗಳನ್ನು ನೋಡಬಾರದು ಎಂದು ಹೇಳಲಾಗುತ್ತದೆ. ಆಗೆಯೇ ಕೆಲವೊಂದು ವಸ್ತುಗಳನ್ನು ಅಪ್ಪಿತಪ್ಪಿಯೂ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳಬಾರದು.

ಇದರಿಂದ ದರಿದ್ರ ಹುಡುಕಿಕೊಂಡು ಬರುತ್ತದೆ. ಕಷ್ಟಗಳು ಕರಗುವುದೇ ಇಲ್ಲ. ನೆಗೆಟಿವ್ ಎನರ್ಜಿ ಸದಾ ಮನೆ ಮಾಡುತ್ತದೆ. ಅನಾರೋಗ್ಯ ಕಾಡುತ್ತದೆ. ಬಡತನ ತಾಂಡವವಾಡುತ್ತದೆ. ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದರಿಂದ ಒಳ್ಳೆಯದಾಗುತ್ತದೆ ಮತ್ತು ಜೀವನದಲ್ಲಿ ಏಳಿಗೆಯಾಗುತ್ತದೆ? ಹಣಕಾಸಿನ ತೊಂದರೆ ಬರುವುದಿಲ್ಲ,ಆರೋಗ್ಯ ಚೆನ್ನಾಗಿರುತ್ತದೆ, ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆಂದು ವಾಸ್ತುಶಾಸ್ತ್ರ ಸ್ಪಷ್ಟವಾಗಿ ಹೇಳಿದೆ. ವ್ಯಕ್ತಿಯ ಮನಸ್ಸು ಮತ್ತು ದೇಹ ಹೊಸ ಚೈತನ್ಯ ಪಡೆಯಬೇಕೆಂದರೆ ಒಳ್ಳೆಯ ನಿದ್ದೆ ಬೇಕೇ ಬೇಕು.

ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದ ಪ್ರಕಾರ ಮಲಗಿ ನಿದ್ದೆ ಮಾಡುವಾಗ ಇಂತದ್ದೇ ದಿಕ್ಕಿಗೆ ತಲೆ ಇಟ್ಟು ನಿದ್ರಿಸಬೇಕೆಂಬ ನಿಯಮವಿದೆ. ಪ್ರತಿ ದಿಕ್ಕಿಗೂ ಅದರದ್ದೇ ಆದ ಶುಭಫಲಗಳಿವೆ. ಶಾಸ್ತ್ರಗಳು ಮತ್ತು ವೇದ ಪುರಾಣಗಳ ಪ್ರಕಾರ ಬ್ರಾಹ್ಮಿ ಮುಹೂರ್ತಕ್ಕೆ ಅದರದ್ದೇ ಆದ ವೈಶಿಷ್ಟ್ಯವಿದೆ. ಬ್ರಾಹ್ಮಿ ಮುಹೂರ್ತ ಎಂದರೆ ಬ್ರಹ್ಮ ಮುಹೂರ್ತ ಎಂದು ಹೇಳಲಾಗುತ್ತದೆ. ಇದನ್ನು ಪ್ರಾತಃಕಾಲವೆಂದು ಸಹ ಕರೆಯಲಾಗುತ್ತದೆ. ಅರುಣ, ಸೂರ್ಯ, ನಾರಾಯಣನ ಸಾರಥಿ. ಆಗಾಗಿ ಸೂರ್ಯನ ಉದಯವನ್ನು ಅರುಣೋದಯವೆಂದು ಸಹ ಕರೆಯಲಾಗುತ್ತದೆ. ಶ್ರೀಕೃಷ್ಣ ಹೇಳುವಂತೆ ಬ್ರಾಹ್ಮಿ ಮುಹೂರ್ತದಲ್ಲಿ ಬೇಗ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು.

ಧ್ಯಾನ, ಯೋಗ, ಜಪ, ಪೂಜೆ ಮುಂತಾದ ಸತ್ಕರ್ಮಗಳನ್ನು ಮಾಡುವುದರಿಂದ ಮನುಷ್ಯನಿಗೆ ಹೆಚ್ಚು ಫಲ ಸಿಗುತ್ತದೆ. ಇದರಿಂದ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವ ವ್ಯಕ್ತಿಗೆ ಜೀವನದಲ್ಲಿ ಎಂದೂ ನಿರಾಶೆ, ಸೋಲು ಇರುವುದಿಲ್ಲ. ಆ ವ್ಯಕ್ತಿಗಳ ಮೇಲೆ ದೇವರ ಅನುಗ್ರಹ ಸದಾ ಇದ್ದೇ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಪಕ್ಕದಲ್ಲಿ ಇಟ್ಟುಕೊಂಡು ಮಲಗಬಾರದು. ಆ ವಸ್ತುಗಳು ಮನೆ, ಮನಸ್ಸಿನ ನೆಮ್ಮದಿ, ಹಣಕಾಸು,

ವಿದ್ಯಾರ್ಥಿಗಳ ಭವಿಷ್ಯ ಇದಕ್ಕೆಲ್ಲಾ ತುಂಬಾ ಅಡ್ಡಿ ಮಾಡುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ತುಂಬಾ ಜನ ಈ ತಪ್ಪುಗಳನ್ನು ಮಾಡುತ್ತಿರುತ್ತಾರೆ. ನೀವು ಸಹ ಮಲಗುವಾಗ ಈ ವಸ್ತುಗಳನ್ನು ಜೊತೆಯಲ್ಲಿಟ್ಟುಕೊಳ್ಳಬೇಡಿ. ವಾಸ್ತುಶಾಸ್ತ್ರದ ಪ್ರಕಾರ ಮಲಗುವಾಗ ತಮ್ಮ ಕಾಲನ್ನು ದಕ್ಷಿಣ ಮತ್ತು ಪೂರ್ವ ದಿಕ್ಕಿಗೆ ಇಟ್ಟುಕೊಳ್ಳಬಾರದು ಅಂದರೆ ದಕ್ಷಿಣ ಮತ್ತು ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು. ಈ ರೀತಿ ಮಾಡುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ ಮತ್ತು ಜೀವನದಲ್ಲಿ ಏಳಿಗೆ ಇರುತ್ತದೆ.

ಮಲಗುವ ಕೋಣೆಯ ಒಳಗಡೆ ಅಥವಾ ಮಂಚದ ಕೆಳಗೆ ಚಪ್ಪಲಿಯನ್ನು ಬಿಡಬಾರದು. ಕಷ್ಟಕ್ಕೆ ನಾವೇ ಆಮಂತ್ರಣ ಕೊಟ್ಟ ಹಾಗೆ ಆಗುತ್ತದೆ. ಮಲಗುವ ಸಮಯದಲ್ಲಿ ಅಥವಾ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬಾರದು. ನಾವು ಮಲಗಿರುವುದು ಕನ್ನಡಿಯಲ್ಲಿ ಕಾಣಿಸಬಾರದು. ಇದರಿಂದ ಭಯ, ಕೆಟ್ಟ ಕನಸ್ಸು ಬೀಳುವುದು ಹೆಚ್ಚು ಆಗುತ್ತದೆ ಮತ್ತು ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ. ರಾತ್ರಿ ದಂಪತಿಗಳ ಪ್ರತಿಬಿಂಬ ಕನ್ನಡಿಯಲ್ಲಿ ಬಿದ್ದರೇ ಅವರ ನಡುವೆ, ವೈಮನಸ್ಸು, ಜಗಳ ಹೆಚ್ಚಾಗುತ್ತದೆ. ಮಲಗುವ ಎದುರು ಕನ್ನಡಿ ಇದ್ದರೇ ರಾತ್ರಿ ಪೇಪರ್ ಅಥವಾ ಬಟ್ಟೆಯಿಂದ ಮುಚ್ಚಬೇಕು.

ಜೊತೆಗೆ ಮಲಗುವ ಕಡೆಯಲ್ಲಿ ಯಾವ ತರಹದ ಎಣ್ಣೆಯನ್ನು ಇಟ್ಟುಕೊಳ್ಳಬಾರದು. ಇದು ನೆಗೆಟಿವ್ ಎನರ್ಜಿಯನ್ನು ಆಕರ್ಷಣೆ ಮಾಡುತ್ತದೆ. ವಿದ್ಯಾರ್ಥಿಗಳು ಯಾವತ್ತಿಗೂ ಅಪ್ಪಿತಪ್ಪಿಯೂ ಪುಸ್ತಕವನ್ನು ತಲೆ ಕೆಳಗೆ ಇಟ್ಟುಕೊಂಡು ಮಲಗಬಾರದು. ಹೀಗೆ ಮಾಡಿದರೇ ಓದಿರುವುದೆಲ್ಲಾ ವಿದ್ಯಾರ್ಥಿಗಳ ತಲೆಯಲ್ಲಿ ಉಳಿಯುವುದಿಲ್ಲ. ಪುಸ್ತಕವನ್ನು ಸರಸ್ವತಿ ದೇವಿಗೆ ಹೋಲಿಸಿರುವುದರಿಂದ ಅವಮಾನ ಮಾಡಿದಂತೆ ಆಗುತ್ತದೆ, ದೇವಿಯ ಕೃಪೆ ದೊರೆಯುವುದಿಲ್ಲ. ಹಣ, ಚಿನ್ನವನ್ನು ತಲೆ ಕೆಳಗೆ ಇಟ್ಟುಕೊಂಡು ಮಲಗಬಾರದು. ಇದರಿಂದ ದುಂದುವೆಚ್ಚ ಹೆಚ್ಚು ಆಗುತ್ತದೆ. ಹಣ ಕೈಯಲ್ಲಿ ಉಳಿಯುವುದಿಲ್ಲ.

ಮಲಗುವ ಕೋಣೆಯಲ್ಲಿ ಪೊರಕೆಯನ್ನು ಯಾವತ್ತೂ ನಿಲ್ಲಿಸಬಾರದು. ಸಿಗರೇಟ್, ಡ್ರಿಂಕ್ಸ್, ಅಶ್ಲೀಲ ಚಿತ್ರಗಳು ಮಲಗುವ ಕೋಣೆಯಲ್ಲಿ ಇದ್ದರೇ ನೆಗೆಟಿವ್ ಎನರ್ಜಿ ಹೆಚ್ಚು ಆಗುತ್ತದೆ. ರಾತ್ರಿ ಮಾಡಲೇಬಾರದು ಕೆಲಸಗಳು ಎಂದರೆ ಉಗುರು ಕತ್ತರಿಸಬಾರದು. ಇದರಿಂದ ಲಕ್ಷ್ಮಿ ಕೃಪೆ ದೊರೆಯುವುದಿಲ್ಲ. ಹೆಣ್ಣು ಮಕ್ಕಳು ತಲೆ ಕೂದಲನ್ನು ಬಿಟ್ಟುಕೊಂಡು ಮಲಗಬಾರದು ಹೀಗೆ ಮಾಡಿದರೇ ಗಂಡನ ಆಯಸ್ಸು ಕಡಿಮೆಯಾಗುತ್ತದೆಂದು ಹಿರಿಯರು ಹೇಳುತ್ತಾರೆ. ಸೂರ್ಯ ಮುಳುಗಿದ ಮೇಲೆ ಕಸವನ್ನು ಗುಡಿಸಬಾರದು. ರಾತ್ರಿಯ ವೇಳೆ ಸೆಂಟ್ ಹಾಕಿಕೊಳ್ಳಬಾರದು. ಅವರತ್ತ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ. ಅಂತಹವರಿಗೆ ಮಾನಸಿಕ ಕಿರಿಕಿರಿ ತಪ್ಪುವುದಿಲ್ಲ. ಇದರಿಂದ ನಾವು ಅಂದುಕೊಂಡ ಕೆಲಸವನ್ನು ಸಾಧಿಸಲು ಆಗುವುದಿಲ್ಲ.

Leave a Comment