ನಾವು ಈ ಲೇಖನದಲ್ಲಿ ಮಿಥುನ ರಾಶಿಯವರ, 2024ರ ಯುಗಾದಿಯ ವರ್ಷ ಭವಿಷ್ಯವನ್ನು ತಿಳಿದುಕೊಳ್ಳೋಣ. ಒಳ್ಳೆಯ ಫಲಗಳು ಮತ್ತು ಎಚ್ಚರಿಕೆಗಳು ಮತ್ತು ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ. ಈ ವರ್ಷ ನಿಮಗೆ 12 ನೇ ಮನೆ ಗುರುವಾಗಿರುತ್ತಾನೆ . ಎರಡನೇ ಗುರು ಆಗಿರುತ್ತಾನೆ. 12ನೇ ಗುರು ಅಷ್ಟಾಗಿ ಶುಭಕರನಾಗಿ , ಇರುವುದಿಲ್ಲ .ಕೆಲವೊಂದು ಸಮಸ್ಯೆಗಳು ಸವಾಲುಗಳನ್ನು, ತಂದು ಕೊಡುತ್ತಾನೆ . ಅದರ ಬಗ್ಗೆ ನೀವು ಯಾವ ರೀತಿ ಎದುರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.
ನಿಮ್ಮ ಕೆಲಸ ಕಾರ್ಯಗಳು ಹೆಚ್ಚಿನ ಪರಿಶ್ರಮದಿಂದ ಕೂಡಿರಬೇಕು. ಹೆಚ್ಚಿನ ಸೇವಾ ಮನೋಭಾವನೆಯಿಂದ ಕೂಡಿರಬೇಕು . ಗುರುಗಳ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ಹಿರಿಯರ ಮಾತನ್ನು , ಕೇಳುವ ನಿಟ್ಟಿನಲ್ಲಿ ನಿಮ್ಮ ಭಾವನೆಗಳು ಮತ್ತು ಪ್ರಯತ್ನವಿರಬೇಕು. ಎಲ್ಲರ ಗೌರವಗಳಿಗೆ ಪಾತ್ರರಾಗುವ ಸನ್ನಿವೇಶ ಬರುತ್ತದೆ. ಹಿರಿಯರ ಸೇವೆಯನ್ನು ಮಾಡುವಂತಹ ಕುಟುಂಬದಲ್ಲಿ , ತಂದೆ ತಾಯಿಗಳ ಸೇವೆಯನ್ನು ಮಾಡುವಂತಿರಬೇಕು. ಮನೆಯಲ್ಲಿ ಯಾವುದೇ ಕೆಲಸ ಕಾರ್ಯಗಳಿದ್ದರೂ , ಸರಳವಾಗಿ ಮತ್ತು ಸುಗಮವಾಗಿ ಸಾಗುತ್ತದೆ.
ಬಂಧು ಬಾಂಧವರಲ್ಲಿ ಸಹಾಯವನ್ನು ಕೇಳಬೇಡಿ. ಆತ್ಮೀಯರು ನಿಮಗೆ ಸಹಾಯ ಮಾಡುತ್ತಾರೆ . ನಿಮ್ಮ ಕಷ್ಟಕ್ಕೆ ಸಹಾಯ ಮಾಡುತ್ತಾರೆ .ಎಂಬ ಮನಸ್ಥಿತಿಯಲ್ಲಿ ನೀವು ಇರಬಾರದು . ನೀವು ಏನೇ ಕಾರ್ಯ ಕೆಲಸಗಳನ್ನು , ಮಾಡಿದರು ನೀವು ಬೇರೆಯವರ ಮೇಲೆ ಅವಲಂಬಿತವಾಗದೆ, ನಿಮ್ಮ ಪರಿಶ್ರಮದ ಮೇಲೆ ನಿಲ್ಲಬೇಕು. ಆಗ ಮಾತ್ರ ಅನುಕೂಲಕರವಾಗಿರುವ ಫಲ ಸಿಗುತ್ತದೆ.
ಇದನ್ನು ಎಚ್ಚರಿಕೆಯ ರೂಪದಲ್ಲಿ ತೆಗೆದುಕೊಳ್ಳಿ. ನೀವು ಎಷ್ಟೇ ಸಹಾಯ ಮಾಡಿದರೂ , ನಿಮ್ಮಲ್ಲಿ ತಪ್ಪನ್ನು ಹುಡುಕುವ ನಿಮ್ಮನ್ನು ಕೀಳಾಗಿ ಕಾಣುವ ಜನರು ಇರುತ್ತಾರೆ . ನಿಮ್ಮ ಒಳ್ಳೆಯತನವನ್ನು ಅರಿಯದೆ ಇರುವ ಜನರು ಹೆಚ್ಚಿಗೆ ಇರುತ್ತಾರೆ. ನಿಮ್ಮ ಆಪತ್ ಕಾಲಕ್ಕೆ ಅವರು ಸ್ಪಂದಿಸಲಿಲ್ಲ ಎಂದು ತಲೆಗೆ ಹಾಕಿಕೊಳ್ಳಬೇಡಿ. ನಿಮ್ಮ ಪರಿಶ್ರಮದಿಂದ , ಮಾತ್ರ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ. ನಿಮಗೆ ಆದಾಯದಲ್ಲಿ ಬಹಳ ವೃದ್ಧಿಯಾಗುತ್ತದೆ. ಆದರೆ ಬಂದಂತಹ ದುಡ್ಡನ್ನು, ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ದುಡ್ಡು ಬಂದರೂ ಸಹ ಖರ್ಚು ವಿಪರಿತವಾಗಿ , ಹಣಕಾಸಿನ ಸಮಸ್ಯೆಗಳು ಉದ್ಭವವಾಗುತ್ತದೆ. ದುಡ್ಡಿನ ಬಗ್ಗೆ ಬಹಳ ಜಾಗರೂಕರಾಗಿರಬೇಕು .ಕಡಿವಾಣ ಇರಬೇಕು .ಹಣ ಕಾಸಿನ ವಿಚಾರದಲ್ಲಿ, ಬಹಳ ಹುಷಾರಾಗಿ ವ್ಯವಹಾರಗಳನ್ನು ಮಾಡಬೇಕು. ನೀವು ಯಾವುದೋ, ಒಂದು ವಸ್ತುವನ್ನು ಕೊಳ್ಳಬಹುದು. ಆಸ್ತಿಯನ್ನು ಖರೀದಿಸಬಹುದು. ವಾಹನ ಖರೀದಿಸಬಹುದು .ಅದಕ್ಕೆ ನಿಮ್ಮಲ್ಲಿ ಉತ್ಸಾಹವಿರುತ್ತದೆ. ಚೈತನ್ಯವಿರುತ್ತದೆ. ಅದು ನಿಮ್ಮ ಒಳ್ಳೆಯ ಬೆಳವಣಿಗೆ ಯಾಗಿರುತ್ತದೆ.
ಮನೆಗೆ ಬೇಕಾಗಿರುವಂತಹ ವಸ್ತುಗಳನ್ನು ಖರೀದಿಸಿ ಅದರಿಂದ ನೆಮ್ಮದಿಯ ಜೀವನವನ್ನು ನಡೆಸುವಿರಿ. ಕೆಲವೊಂದು ಜನರು ವಿಶೇಷ ಪುಣ್ಯಕ್ಷೇತ್ರಗಳ ,ದರ್ಶನಗಳನ್ನು ಮಾಡುವಂತಹ ಫಲವಿರುತ್ತದೆ. ಪವಿತ್ರ ಸ್ಥಳಗಳಿಗೆ ಭೇಟಿ ನೀಡಬಹುದು. ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು , ತಂದು ಕೊಡುವಂತದ್ದು ಆಗಿರುತ್ತದೆ. ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇದೆ . ಹೆಚ್ಚಿಗೆ ಶ್ರಮವನ್ನು ಹಾಕುವುದರಿಂದ ನಿಮ್ಮ ಆರೋಗ್ಯ ವೃದ್ಧಿ ,ಧನವೃದ್ದಿ , ಮತ್ತು ಹೆಚ್ಚಿಗೆ ಚಿಂತೆಯನ್ನು ಮಾಡುವ ಬುದ್ಧಿಯು ಕಡಿಮೆಯಾಗಿ ಕೆಲಸವನ್ನು ಪ್ರೀತಿಸುವ ಚೈತನ್ಯ ಬರುತ್ತದೆ.
ನಿಮ್ಮ ಕೆಲಸದಲ್ಲಿ ಭಕ್ತಿ, ನಂಬಿಕೆ, ಪ್ರೀತಿ, ವಿಶ್ವಾಸವಿರಲಿ. ಬೇರೆಯವರ ವಿಷಯದಲ್ಲಿ ಅನಗತ್ಯವಾಗಿ ತಲೆ ಹಾಕಬೇಡಿ. ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಬೇಕು. ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಮೇಲೆ ತಪ್ಪು ಹುಡುಕುವ ಜನರು ಹೆಚ್ಚಿಗೆ ಇರುತ್ತಾರೆ ಗಮನವಿರಲಿ. ಮೋಸ ವಂಚನೆ ಸಂದರ್ಭಗಳು ಕಂಡುಬರುತ್ತದೆ . ಬೇರೆಯವರಿಗೆ ದುಡ್ಡು ಕೊಟ್ಟು ,ಮೋಸ ಹೋಗುವ ಪರಿಸ್ಥಿತಿಗಳು ಎದುರಾಗಬಹುದು . ಶನಿಯು 9ನೇ ಮನೆಯಲ್ಲಿ ಇರುವುದರಿಂದ ನಿಮಗೆ ಅಷ್ಟಾಗಿ ಶುಭಫಲಗಳಿಲ್ಲ.
ಕುಟುಂಬದಲ್ಲಿ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು . ಕೋಪ ಮಾಡಿಕೊಳ್ಳುವುದು ಸಣ್ಣ ಸಣ್ಣ ವಿಚಾರಕ್ಕೆ ಜಗಳ ಮಾಡಿಕೊಳ್ಳುವುದು ಇಂತಹ ವಾಗ್ವಾದಗಳಿಂದ , ದೂರ ಉಳಿಯುವುದು ಒಳ್ಳೆಯದು. ಕೆಲವೊಂದು ಹಿತಕರವಾದ ,ಮತ್ತು ಅಹಿತಕರವಾದ ಘಟನೆಗಳು ನಡೆಯುತ್ತವೆ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಂತಹ ಸಮಯದಲ್ಲಿ ದೈಹಿಕವಾಗಿ. ಯಾವುದೋ ಒಂದು ಭಾರವನ್ನು ಎತ್ತುವುದು ಶ್ರಮವನ್ನು , ತೆಗೆದುಕೊಳ್ಳುವುದನ್ನು ಮಾಡಬೇಡಿ . ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸಿ .
ಊಟದ ಮೇಲೆ ನಿಗಾ ಇರಲಿ. ದೈನಂದಿನ ಚಟುವಟಿಕೆಗಳ ಮೇಲೆ ಗಮನವಿಟ್ಟುಕೊಳ್ಳಿ. ಮಕ್ಕಳ ಆರೋಗ್ಯದ , ಬಗ್ಗೆ ವಿದ್ಯಾಭ್ಯಾಸದ, ಬಗ್ಗೆ ಮತ್ತು ಹಣಕಾಸಿನ ವಿಚಾರದ ಬಗ್ಗೆ ಅವರ ಬೇಕು ಬೇಡಗಳ ಬಗ್ಗೆ ನಿಮ್ಮ ಗಮನ ಹೆಚ್ಚಿಗೆ ಇರಲಿ. ಮಾನಸಿಕ ಚಿಂತೆಗಳು ಸ್ವಲ್ಪ ದೂರವಾಗಿದ್ದರು ಕೂಡ ಎಚ್ಚರಿಕೆಯ ಅಗತ್ಯವಿದೆ. ಕೆಲಸದ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಒಳ್ಳೆಯದು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ, ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಕಂಡುಬರುತ್ತದೆ. ಈ ವರ್ಷದಲ್ಲಿ ಗುರು 12ನೇ ಮನೆಯಲ್ಲಿ ಇರುತ್ತಾನೆ . ಮತ್ತು ಶನಿ ಒಂಬತ್ತನೇ ಮನೆಯಲ್ಲಿ ಇರುವುದರಿಂದ , ಶುಭ ಮತ್ತು ಅಶುಭ ಫಲಗಳನ್ನು ಎರಡನ್ನು ಕಾಣುತ್ತೀರಾ.
ಇದರಿಂದ ನೀವು ಶನಿ ಮಂತ್ರ ಪಠಣೆಯನ್ನು, ಮಾಡಬೇಕಾಗುತ್ತದೆ .ಆಶ್ವಿಜ ಮತ್ತು ಕಾರ್ತಿಕ ಮಾಸ ತುಂಬಾ ಒಳ್ಳೆಯ ಮಾಸಗಳಾಗಿರುತ್ತದೆ. ಮತ್ತು ಆಷಾಡ ಮಾಸ , ಎರಡು ಏಳು ಹನ್ನೆರಡು ,ತಿಥಿಗಳು ಸೋಮವಾರ ಸ್ವಾತಿ ನಕ್ಷತ್ರ ನಿಮಗೆ ತುಂಬಾ ಘಾತವಾಗಿರುತ್ತದೆ .ಇಂಥಹ ಸಂದರ್ಭದಲ್ಲಿ ನೀವು ಎಚ್ಚರಿಕೆಯಿಂದ ಕೆಲಸ ಮಾಡಿಕೊಳ್ಳಬೇಕಾಗುತ್ತದೆ. ಸಾಧ್ಯವಾದರೆ, ಶನಿ ಶಾಂತಿಯನ್ನು ಮಾಡಿಸಿಕೊಳ್ಳಿ. ಗುರುರಾಯರ ದರ್ಶನವನ್ನು ಮಾಡಿ .ಹಿರಿಯರ ಅನುಗ್ರಹವನ್ನು ಪಡೆದುಕೊಳ್ಳಿ. ಹಿರಿಯರ ಮಾರ್ಗದರ್ಶನದಲ್ಲಿ, ನಡೆಯುವ ಪ್ರಯತ್ನವನ್ನು ಮಾಡಿದರೆ ಬಹಳ ಒಳ್ಳೆಯ ಫಲಗಳು ಸಿಗುತ್ತದೆ .