ವೃಷಭರಾಶಿಯ ಏಪ್ರಿಲ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಯಾವೆಲ್ಲಾ ಲಾಭಗಳು ಇವೆ? ಏನು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು? ವೃಷಭ ರಾಶಿಯ ಸಮಸ್ಯೆಗಳಿಗೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳೋಣ. ವೃಷಭ ರಾಶಿಯ ಜನ್ಮ ನಕ್ಷತ್ರಗಳು ಕೃತಿಕ ನಕ್ಷತ್ರದ 2,3, ಮತ್ತು 4ನೇ ಚರಣ, ರೋಹಿಣಿ ನಕ್ಷತ್ರದ ನಾಲ್ಕೂ ಚರಣಗಳು, ಮೃಗಶಿರ ನಕ್ಷತ್ರದ ಮೊದಲೆರೆಡು ನಕ್ಷತ್ರಗಳು ಸೇರಿರುವುದೇ ವೃಷಭರಾಶಿ. ವೃಷಭರಾಶಿಯವರು ದಯಾಮಯಿಗಳು,
ವಿಧೇಯರು, ಯಾರಿಗಾದರೂ ತೊಂದರೆ ಇತ್ತು ಎಂದರೇ ಸಹಿಸುವುದಿಲ್ಲ. ಸರಳ ಮತ್ತು ಸಜ್ಜನರಾಗಿರುವಂತಹವರು ಮತ್ತು ಎಲ್ಲರನ್ನೂ ಪ್ರೀತಿಸುವಂತಹವರು ವ್ಯಕ್ತಿಗಳು ವೃಷಭರಾಶಿಯ ವ್ಯಕ್ತಿಗಳಾಗಿರುತ್ತಾರೆ. ಈ ಏಪ್ರಿಲ್ ತಿಂಗಳಿನಲ್ಲಿ ವೃಷಭರಾಶಿಯವರಿಗೆ ಏನೆಲ್ಲಾ ಫಲಗಳು ಸಿಗುತ್ತಿವೆ ಎಂದರೆ ಕೋರ್ಟ್ ಕಛೇರಿ ಮತ್ತು ಕಾನೂನಿಗೆ ಸಂಬಂಧಪಟ್ಟ ಸಮಸ್ಯೆಗಳು ಇದ್ದರೇ ಬಹಳ ನಿಧಾನವಾಗಿ ತಾಳ್ಮೆಯಿಂದ ಮತ್ತು ಬುದ್ಧಿವಂತಿಕೆಯಿಂದ ನಿಭಾಯಿಸುವಂತಹ ಪ್ರಯತ್ನವನ್ನು ಮಾಡಿಕೊಳ್ಳಿ.
ಯಾವುದೇ ಸಮಸ್ಯೆ ಇದ್ದರೂ ಅದನ್ನು ತಾಳ್ಮೆಯಿಂದ ಶಾಂತ ರೀತಿಯಲ್ಲಿ ಬಗೆಹರಿಸಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ಒಳ್ಳೆಯ ಲಾಭವನ್ನು ನಿರೀಕ್ಷೆ ಮಾಡಬಹುದು. ಎಂತಹ ಕೆಲಸ ಕೊಟ್ಟರೂ ಅದನ್ನು ಚಾಣಾಕ್ಷತನದಿಂದ ಮಾಡುವಂತಹ ಗುಣವನ್ನು ವೃಷಭರಾಶಿಯವರು ಹೊಂದಿರುತ್ತಾರೆ. ಕೆಲಸವನ್ನು ಹೆಚ್ಚು ಶ್ರದ್ಧೆಯಿಂದ ಮಾಡುವುದರಿಂದ ಆದಾಯವು ಹೆಚ್ಚಳವಾಗುತ್ತದೆ. ಅರಿತವಾದ ಕಬ್ಬಿಣದ ವಸ್ತುಗಳ ಜೊತೆ ಇರುವ ವ್ಯಕ್ತಿಗಳು ಸ್ವಲ್ಪ ಎಚ್ಚರಿಕೆಯಿಂದಿರಬೇಕು.
ಹಣಕಾಸಿನ ಸಮಸ್ಯೆ, ಮನೆಯಲ್ಲಿನ ಹೊಂದಾಣಿಕೆಯ ತೊಂದರೆ, ಕೆಲವೊಂದು ತೊಂದರೆಗಳನ್ನು ತಾಳ್ಮೆಯಿಂದ, ಬುದ್ಧಿವಂತಿಕೆಯಿಂದ ನಿಭಾಯಿಸಬೇಕು. ಸಣ್ಣ ಮತ್ತು ದೊಡ್ಡ ಪ್ರಮಾಣ ಯಾವ ವ್ಯಾಪಾರ ಆದರೂ ನೀವು ಶ್ರಮಪಟ್ಟಿದ್ದಕ್ಕೆ ಸರಿಯಾದ ಪ್ರತಿಫಲ ಸಿಗುತ್ತದೆ. ಆದಷ್ಟು ಖರ್ಚನ್ನು ಕಡಿಮೆ ಮಾಡಿಕೊಳ್ಳಿ. ಉಪಕಸುಬು ಮತ್ತು ಕುಲಕಸುಬುಗಳಿಂದ ಬಹಳ ಉಪಯೋಗವಾಗುತ್ತದೆ. ಮದುವೆ ಬಗ್ಗೆ ಚಿಂತೆ ಮಾಡುತ್ತಿದ್ದರೇ ಒಳ್ಳೆಯದ್ದು ಆಗುತ್ತದೆ. ಹೊಸ ವಾಹನ ಕೊಂಡುಕೊಳ್ಳಬೇಕು ಎಂದೆನಿಸಿದರೇ ಕೊಂಡುಕೊಳ್ಳಬಹುದು.
ಸೈಟ್ ಕೊಂಡುಕೊಳ್ಳಬಹುದು, ಬೆಲೆ ಬಾಳುವ ವಸ್ತುಗಳನ್ನು ಕೊಂಡುಕೊಳ್ಳುವ ಅವಕಾಶಗಳು ಚೆನ್ನಾಗಿವೆ. ನಿಮ್ಮ ಆದಾಯದ ಲೆಕ್ಕವನ್ನು ಹಾಕಿ ಮುಂದುವರೆದರೇ ಒಳ್ಳೆಯದು, ಸಾಲವನ್ನು ಮಾಡಿ ಪರದಾಟಬೇಡ. ವಿದ್ಯಾರ್ಥಿಗಳಿಗೆ ಜವಾಬ್ದಾರಿಯುತ ಸ್ಥಾನಮಾನಗಳು ಸಿಗುತ್ತದೆ. ಉದ್ಯೋಗದಲ್ಲಿ ಲಾಭ ಕಂಡುಬರುತ್ತದೆ. ಉದ್ಯೋಗವನ್ನು ಬದಲಿಸುವ ಸನ್ನಿವೇಶ ಕೆಲವರಿಗೆ ಕಂಡುಬರುತ್ತದೆ. ಕುಟುಂಬ ಸದಸ್ಯರ ಜೊತೆ ಸೇರಿಕೊಂಡ ವ್ಯಾಪಾರ, ವ್ಯವಹಾರದಲ್ಲಿ ಬಹಳಷ್ಟು ಅನುಕೂಲ ಮತ್ತು ಲಾಭಗಳು ಇವೆ.
ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಿ ಮತ್ತು ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಜನರ ನಡುವೆ ಎಚ್ಚರಿಕೆಯಿಂದಿರಿ ಮತ್ತು ಕೆಲಸ ಕಾರ್ಯಗಳಿಗೆ ಹೆಚ್ಚಿನ ಗಮನವನ್ನು ಕೊಡಿ. ರಾಜಕಾರಣಿಗಳಿಗೆ ಓಡಾಟ ಹೆಚ್ಚು ಇರುವುದರಿಂದ ಒತ್ತಡದಲ್ಲಿರುತ್ತೀರಿ ಮತ್ತು ಒಳ್ಳೆಯ ಸ್ಥಾನಮಾನಗಳನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಸವಾಲುಗಳು ಹೆಚ್ಚು ಇರುವುದರಿಂದ ಕಷ್ಟಪಟ್ಟು ಓದಬೇಕು. ಹೆಚ್ಚು ಸ್ಪರ್ಧೆ ಇರುವುದರಿಂದ ಚೆನ್ನಾಗಿ ಅಭ್ಯಾಸ ಮಾಡಿಕೊಂಡರೇ ಮಾತ್ರ ನಿಮ್ಮ ಬೆಳವಣಿಗೆ ಸಾಧ್ಯ.
ಕೃಷಿಕರಿಗೆ ಸವಾಲುಗಳ ನಡುವೆಯೂ ಒಳ್ಳೆಯ ಫಲಗಳು ಇವೆ. ರಂಗಭೂಮಿ ಮತ್ತು ಚಿತ್ರೋದ್ಯಮದ ಕಲಾವಿದರಿಗೆ ಹೆಚ್ಚಿನ ಪ್ರಯತ್ನ ಮಾಡಿದರೇ ಅನುಕೂಲಕರವಾಗಿದೆ. ಈ ತಿಂಗಳು ನಿಮ್ಮ ಸಮಸ್ಯೆಗಳಿಗೆ ಏನೆಲ್ಲಾ ಪರಿಹಾರ ಮಾಡಿಕೊಳ್ಳಬೇಕೆಂದರೆ ಶ್ರೀಸತ್ಯಾನಾರಾಯಣ ಸ್ವಾಮಿಯ ಪೂಜೆ ಮತ್ತು ಶ್ರೀವೆಂಕಟೇಶ್ವರ ಸ್ವಾಮಿಯ ಆರಾಧನೆಯನ್ನು ಮಾಡಿರಿ, ಕಪ್ಪು ದಾರದಲ್ಲಿ ಗಂಧದ ಕಟ್ಟಿಗೆಯನ್ನು ಧರಿಸುವುದು, ಚಿಕ್ಕದಾದ ಗಂಧದ ಮಣಿಯನ್ನು ಧರಿಸಿರಿ ಬಹಳ ಒಳ್ಳೆಯ ಫಲಗಳು ಸಿಗುತ್ತದೆ. ಕಷ್ಟದಲ್ಲಿರುವವರಿಗೆ ದಾನವನ್ನು ಮಾಡಿರಿ ಒಳ್ಳೆಯ ಶುಭಫಲಗಳು ಸಿಗುತ್ತದೆ.