ಬೆಳಿಗ್ಗೆ ಎದ್ದ ತಕ್ಷಣ ಗಡಿಯಾರವನ್ನು ನೋಡಬಾರದು. ಅದರಲ್ಲೂ ಕೆಟ್ಟು ನಿಂತಿರುವ ಹಾಗೂ ಒಡೆದಿರುವ ಗಡಿಯಾರವನ್ನು ನೋಡಲೇಬಾರದು. ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವ ಅಭ್ಯಾಸ ಅನೇಕ ಜನರಿಗೆ ಇರುತ್ತದೆ. ಆದರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ದೊಡ್ಡ ತಪ್ಪು. ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಲೇಬಾರದು.
ಪ್ರತಿದಿನ ಬೆಳಗ್ಗೆ ಎದ್ದು ಇನ್ನೊಬ್ಬರ ನೆರಳನ್ನು ನೋಡುವುದು ಸಹ ಒಳ್ಳೆಯದಲ್ಲ. ಇದು ನಿಮ್ಮ ಜೀವನದಲ್ಲಿ ಇರುವ ಮುಖ್ಯವಾದ ಒಬ್ಬರಿಗೆ ನಕಾರಾತ್ಮಕ ಶಕ್ತಿಯನ್ನು ತರುವ ಸೂಚನೆಯಾಗಿರುತ್ತದೆ.ಮನೆಯಲ್ಲಿರುವ ಮುರಿದುಹೋದ ಪಾತ್ರೆಗಳು ಹಾಳಾಗಿ ನಿಂತಿರುವ ವಸ್ತುಗಳು ಹಾಗೂ ಹಾಳಾದ ಪೀಠೋಪಕರಣಗಳನ್ನು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ನೋಡಬಾರದು ಅದು ಶುಭವಲ್ಲ ಎಂದು ಹೇಳಲಾಗುತ್ತದೆ.
ಮುಂಜಾನೆ ಎದ್ದ ತಕ್ಷಣ ನೇರವಾಗಿ ಅಡುಗೆ ಮನೆಗೆ ಹೋಗಬೇಡಿ. ಸ್ನಾನ ಅಥವಾ ಮುಖವನ್ನು ತೊಳೆದ ನಂತರವೇ ಅಡುಗೆ ಮನೆಗೆ ಪ್ರವೇಶಿಸಬೇಕು. ನೇರವಾಗಿ ಶುಚಿಯಾಗದೆ ಅಡುಗೆ ಮನೆಯಲ್ಲಿರುವ ಒಲೆಯನ್ನು ನೋಡುವುದು ಶುಭವಲ್ಲ. ರಾತ್ರಿ ಮಲಗುವ ಮುನ್ನ ಸಿಂಕ್ ನಲ್ಲಿರುವ ಎಲ್ಲಾ ಪಾತ್ರೆಗಳನ್ನು ತೊಳೆದಿರಬೇಕು. ಮುಂಜಾನೆ ಎದ್ದ ತಕ್ಷಣ ಸಿಂಕ್ ನಲ್ಲಿರುವ ಮುಸುರೆ ಪಾತ್ರೆಗಳನ್ನು ನೋಡಬಾರದು.
ಅಡುಗೆ ಮನೆಯಲ್ಲಿರುವ ಹಲವು ಪಾತ್ರೆಗಳು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಹಾಗೆ ಮುಂಜಾನೆ ಎದ್ದ ತಕ್ಷಣ ಅವುಗಳನ್ನು ನೋಡುವುದು ಶುಭವಲ್ಲ ಎಂದು ಹೇಳುತ್ತಾರೆ. ಆರೋಗ್ಯ ದೃಷ್ಟಿಯಲ್ಲಿ ಕುಂಬಳಕಾಯಿಯನ್ನು ತಿನ್ನುವುದು ಒಳ್ಳೆಯದು ಹಾಗೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂಜಾನೆ ಎದ್ದ ತಕ್ಷಣ ಕುಂಬಳಕಾಯಿಯನ್ನು ನೋಡುವುದು ಶುಭವಲ್ಲ.
ಇನ್ನು ಬೆಳಗ್ಗೆ ಎದ್ದ ನಂತರ ಚಾಕು, ಚೂರಿ, ಕತ್ತರಿ ಹಾಗೂ ಉದ್ದನೆಯ ಕೋಲುಗಳು ಹಾಗೂ ಹರಿತವಾದ ಯಾವುದೇ ಆಯುಧಗಳನ್ನು ನೋಡುವುದು ಶುಭವಲ್ಲ.ಬೆಳಿಗ್ಗೆ ಎದ್ದ ತಕ್ಷಣ ಆಕ್ರಮಣಕಾರಿ ಪ್ರಾಣಿ ಅಥವಾ ಪಕ್ಷಿಗಳ ಚಿತ್ರಗಳನ್ನು ಮನೆಯ ಗೋಡೆಯ ಮೇಲೆ ಅಥವಾ ಮೊಬೈಲ್ ನಲ್ಲಿ ಟಿವಿಯಲ್ಲಿ ನೋಡುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ.