ನಾವು ಈ ಲೇಖನದಲ್ಲಿ ನಾಲ್ಕು ಜನರೊಂದಿಗೆ ಮಾತನಾಡುವಾಗ ನಿಮ್ಮ ವರ್ತನೆ ಹೀಗಿದ್ದರೆ ಚೆನ್ನಾಗಿರುತ್ತದೆ ಎಂಬ ವಿಷಯದ ಬಗ್ಗೆ ತಿಳಿಯೋಣ .1 . ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು . 2 . ಬೇರೆಯವರು ಮಾತನಾಡುವಾಗ ಅರ್ಧಕ್ಕೆ ಮಾತನಾಡಬಾರದು .
3 . ಬೇರೆಯವರ ಮಾತನ್ನು ಕೇಳುವ ಸಹನೆ ಇರಬೇಕು . 4 .ನಿಮ್ಮ ಮಾತಿನ ಅಗತ್ಯ , ಅನಿವಾರ್ಯ ಇದ್ದರೆ ಮಾತ್ರ ಮಾತನಾಡಬೇಕು . 5 . ಕೊನೆ ಪಕ್ಷ ನಿಮ್ಮ ಮಾತಿಗೆ ಅಲ್ಲಿ ಗೌರವ ಇರಬೇಕು . 6 . ಆಡುವ ಮಾತು ಬೇರೆಯವರನ್ನು ನೋಯಿಸದಂತೆ ಇರಬೇಕು.
7 . ಮಾತನಾಡುವಾಗ ಸಮಯಪ್ರಜ್ಞೆ ಅವಶ್ಯಕ . 8 . ಸಂದರ್ಭಕ್ಕೆ ತಕ್ಕಂತೆ ಮಾತನಾಡಬೇಕು . 9 . ಅನಾವಶ್ಯಕ ಮಾತುಗಳು ಬೇಡ . 10 . ಮಾತು ಸ್ಪಷ್ಟವಾಗಿರಬೇಕು . 11 . ಮಾತನಾಡುವಾಗ
ಉಳಿದವರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಗಮನಿಸಬೇಕು.
12 . ಮುಖ ಗಂಟು ಹಾಕಿ ಮಾತನಾಡಬಾರದು . 13 . ಮಾತು ವಾದ ಮಾಡುವಂತೆ ಇರಬಾರದು . 14 . ಮಾತಿನಲ್ಲಿ ಅಹಂ ಇರಬಾರದು . 15 . ಮಾತನಾಡುವಾಗ ಸಂಕುಚಿತ ಮನೋಭಾವ ಬಿಟ್ಟು ಹೃದಯ ಶ್ರೀಮಂತಿಕೆ ತೋರಿಸಬೇಕು.
16 . ಮಾತು ತಿಳಿ ಹಾಸ್ಯದಿಂದ ಕೂಡಿದ್ದು ಸ್ನೇಹ ಪೂರ್ವಕವಾಗಿ ಇರಬೇಕು.17 . ಆಡುವ ಪ್ರತಿ ಮಾತಿನಲ್ಲೂ ಆತ್ಮವಿಶ್ವಾಸ ಇರಬೇಕು. ಈ ಮೇಲಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ, ಎಂತವರ ಸ್ನೇಹ ಬೇಕಾದರೂ ಸಂಪಾದಿಸಬಹುದು , ಅಲ್ಲದೆ ಒಳ್ಳೆಯ ಮಾತುಗಾರರೂ ಕೂಡ ಆಗಬಹುದು ಎಂದು ಹೇಳಲಾಗಿದೆ