ನಾವು ಈ ಲೇಖನದಲ್ಲಿ ನಮ್ಮ ಹಿರಿಯರು ಹೇಳಿರುವ ಉತ್ತಮ ಆರೋಗ್ಯಕ್ಕೆ 35 ಸೂತ್ರಗಳು ಯಾವುದು ಎಂದು ತಿಳಿಯೋಣ . ನಮ್ಮೆಲ್ಲರ ಆರೋಗ್ಯದ ಗುಟ್ಟು ನಮ್ಮ ಹಿರಿಯರು ಹೇಳಿರುವ ಈ 35 ಸೂತ್ರಗಳಲ್ಲಿ ಅಡಗಿದೆ. 1 . ಬೆಳಗ್ಗೆ ಬೇಗ ನಿದ್ದೆಯಿಂದ ಏಳಬೇಕು . ಅಂದರೆ ಸೂರ್ಯ ನೆತ್ತಿ ಮೇಲೆ ಬರುವ ಮುಂಚೆ ಎದ್ದು ಸ್ನಾನ ಮುಗಿಸಬೇಕು
2 . ನಿದ್ದೆಯಿಂದ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು ನಿಮಗೆ ಹೊಸ ದಿನ ಹೊಸ ಅವಕಾಶ ಸಿಕ್ಕಿದೆ ಅದಕ್ಕೆ ದೇವರಲ್ಲಿ ಪ್ರಾರ್ಥಿಸಿ ಇಂದಿನ ನಿಮ್ಮ ದಿನ ಚೆನ್ನಾಗಿರಲಿ ಎಂದು ಕೇಳಿಕೊಳ್ಳಬೇಕು . 3 . ಐಸ್ ಕ್ರೀಂ ತಿನ್ನಲೇ ಬಾರದು.
4 . ಫ್ರಿಡ್ಜ್ ನಲ್ಲಿಟ್ಟು ಹೊರತೆಗೆದ ಆಹಾರ ಪದಾರ್ಥಗಳನ್ನು ಒಂದು ಗಂಟೆಯ ನಂತರ ಉಪಯೋಗಿಸಬೇಕು. 5 . ಬೇಸಿಗೆಯಲ್ಲಿ ತಂಪು ಪಾನೀಯವನ್ನು ಸೇವಿಸಿ ಆದರೆ ಮನೆಯಲ್ಲೇ ತಯಾರಿಸಿದ ಜ್ಯೂಸ್ ಮಾತ್ರ, ಹೊರಗಡೆಯಿಂದ ಸೇವಿಸಬೇಡಿ .
6 . ಮಾಡಿದ ಅಡುಗೆ, ಬಿಸಿಯಾಗಿರುವಾಗಲೇ 40 ನಿಮಿಷಗಳ ಒಳಗೆ ತಿನ್ನಬೇಕು . 7 . ಊಟವಾದ ನಂತರ ಐದರಿಂದ ಹತ್ತು ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು . 8 .ಬೆಳಗ್ಗೆ 10 ಗಂಟೆಯೊಳಗೆ ತಿಂಡಿಯನ್ನು ಸೇವಿಸಬೇಕು .
9 . ಬೆಳಗ್ಗೆ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು . 10 .ಉಪಹಾರದ ನಂತರ ಯಾವುದೇ ಭಾರವಾದ ಕೆಲಸ ಮಾಡಬಾರದು . 11 . ಮಧ್ಯಾಹ್ನದ ಒಳಗೆ ಎರಡರಿಂದ ಮೂರು ಲೋಟ ನೀರು ಕುಡಿಯಬೇಕು . ನಿಮ್ಮನ್ನು ಸದಾ ಹೈಡ್ರೈ ಟ್ ಆಗಿ ಇಟ್ಟುಕೊಳ್ಳಬೇಕು .
12 . ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು . 13 . ನೆಲದ ಮೇಲೆ ಕುಳಿತುಕೊಂಡು ಊಟ ಮಾಡಬೇಕು . 14 . ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು . 15 . ಮಧ್ಯಾಹ್ನದ ಸಾಂಬಾರಿನಲ್ಲಿ ಹುಣಸೆ ಪುಡಿಯನ್ನು ಉಪಯೋಗಿಸಬೇಕು .
16 . ಮಧ್ಯಾಹ್ನ ಹೊಟ್ಟೆ ತುಂಬಾ ಊಟ ಮಾಡಬೇಕು . 17 . ಮಧ್ಯಾಹ್ನದ ಊಟದ ನಂತರ ಮಜ್ಜಿಗೆ ಸೇವಿಸಬೇಕು 18 .ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು . 19 . ಸೂರ್ಯ ಮುಳುಗುವುದಕ್ಕೆ ಮುಂಚೆಯೇ ಊಟ ಮಾಡಬೇಕು .
20 . ರಾತ್ರಿಯ ವೇಳೆ ಮಿತವಾಗಿ ಊಟ ಮಾಡಬೇಕು . 21 . ರಾತ್ರಿ ಊಟದ ನಂತರ ಸ್ವಲ್ಪ ನಡೆಯಬೇಕು . 22 . ರಾತ್ರಿ ಊಟವಾದ ಒಂದು ಗಂಟೆಯ ನಂತರ ಹಾಲು ಕುಡಿಯಬೇಕು. 23 . ರಾತ್ರಿ ವೇಳೆ ಲಸ್ಸಿ ಮಜ್ಜಿಗೆ ಕುಡಿಯಬಾರದು .24 . ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು .
25 . ರಾತ್ರಿ 9 ರಿಂದ 10 ಗಂಟೆಗೆ ಮಲಗಬೇಕು . 26 . ಸಕ್ಕರೆ ಮೈದಾ ಉಪ್ಪು ಕಡಿಮೆ ಉಪಯೋಗಿಸಬೇಕು . 27 . ಹಸ್ತ ಮೈಥುನದ ಚಟವನ್ನು ಬಿಟ್ಟುಬಿಡಿ. ಬಿಡಲು ಸಾಧ್ಯವಿಲ್ಲ ಎಂದಾದರೆ ಅದನ್ನು ಕಡಿಮೆ ಮಾಡಿ . 28 . ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇಬಾರದು .
29 . ಟೀ ಕಾಫಿ ಕುಡಿಯದಿರಲು ಪ್ರಯತ್ನಿಸಿ . 30 . ಹಾಲಿಗೆ ಅರಿಶಿಣ ಬೆರೆಸಿ ಕುಡಿದರೆ ಕ್ಯಾನ್ಸರ್ ಬರುವುದಿಲ್ಲ . 31 .ಆದಷ್ಟು ಮನೆಯ ಆಹಾರವನ್ನು ಸೇವಿಸಿ .32 . ಅಕ್ಟೋಬರ್ ನಿಂದ ಮಾರ್ಚ್ ಚಳಿಗಾಲ ಇರುತ್ತದೆ. ಬೆಳ್ಳಿ ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು .
33 . ಜೂನ್ ನಿಂದ ಸೆಪ್ಟೆಂಬರ್ ಮಳೆಗಾಲ ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು . 34 . ಮಾರ್ಚ್ ನಿಂದ ಜೂನ್ ಬೇಸಿಗೆ ಕಾಲ ಮಣ್ಣಿನ ಪಾತ್ರೆಯಲ್ಲಿ ಇರಿಸಿದ ನೀರನ್ನು ಕುಡಿಯಬೇಕು .35 . ಊಟ ಮಾಡುವಾಗ ನೀರು ಕುಡಿಯಬಾರದು . 30 ನಿಮಿಷದ ನಂತರ ಮಾತ್ರ ನೀರು ಕುಡಿಯಬೇಕು .