ಜೀವನದ ಕಹಿ ಸತ್ಯ

0

ನಾವು ಈ ಲೇಖನದಲ್ಲಿ ಜೀವನದ ಕಹಿ ಸತ್ಯ ಮನಸ್ಸಿಗೆ ಮುಟ್ಟುವ ಮಾತುಗಳು ಯಾವುದು ತಿಳಿಯೋಣ .
ಪ್ರೀತಿ ಎಂಥವರನ್ನೂ ಬೇಕಾದರೂ ಬದಲಾವಣೆ ಮಾಡುತ್ತದೆ ಎ೦ದು ಹೇಳುತ್ತಾರೆ. ಅದು ಸುಳ್ಳು ದುಡ್ಡು ಮತ್ತು ಆಸ್ತಿ ಎಂಥವರನ್ನು ಬೇಕಾದರೂ ಬದಲಾವಣೆ ಮಾಡುತ್ತದೆ. ಇದ್ದಾಗ ಕಲ್ಲಾಗಿ ಹೋದಾಗ, ಹೂವಾಗಿ ಔಷಧಿ ಕೊಟ್ಟ ಹಾಗೆ ಮಾಡಿ , ವಿಷ ಕೊಟ್ಟವರೇ ಎಲ್ಲ ….

ಆದಷ್ಟು ನಮಗೆ ನಾವೇ ಸಮಾಧಾನ ಮಾಡಿಕೊಂಡು ಬದುಕುವುದನ್ನು ಕಲಿತು ಬಿಡಬೇಕು. ಏಕೆಂದರೆ ಇಲ್ಲಿ ಕಣ್ಣೀರು ಒರೆಸುವವರಿಗಿಂತ ಕಣ್ಣೀರು ಬರಿಸುವವರೇ ಜಾಸ್ತಿ . ಅವಶ್ಯಕತೆ ಇದ್ದಾಗ ಮಾತ್ರ ನಮ್ಮನ್ನು ನೆನಪು ಮಾಡುವವರೇ ಬುದ್ದಿವಂತರು. ಅವರ ಮೇಲೆ ಅತಿಯಾದ ನಂಬಿಕೆ ಇಟ್ಟ ನಾವೇ ದಡ್ಡರು .

ಒಳ್ಳೆಯ ಮಾತು ಯಾರಿಗೂ ಇಷ್ಟ ಆಗುವುದಿಲ್ಲ . ಹಾಗೆಯೇ ಒಳ್ಳೆಯ ಮನಸ್ಸು ಕೂಡ ಯಾರಿಗೂ ಬೇಗ ಅರ್ಥ ಆಗುವುದಿಲ್ಲ .ತುಂಬಾ ಕಾರ್ಯನಿರತ ಇದ್ದವರನ್ನು ಯಾವತ್ತು ತೊಂದರೆ ಮಾಡಬಾರದು . ಅವರೆ ನನ್ನನ್ನು ಬಿಟ್ಟುಬಿಡು ಅನ್ನೋ ಮೊದಲು ನಾವೇ ದೂರ ಹೋಗಿ ಬಿಡಬೇಕು .

ನಾವು ಯಾರ ಮೇಲೆ ಜಾಸ್ತಿ ನಂಬಿಕೆ ಇಟ್ಟು ಅವರ ಮುಂದೆ ನಮ್ಮ ಮನದಾಳದ ಮಾತು ಹೇಳಿ ಕೊಳ್ಳುತೇವೋ ಅವರೆ ನವಗೆ ಸುಲಭವಾಗಿ ಮೋಸ ಮಾಡುತ್ತಾರೆ.ಅರಿಯದೆ ಮಾಡುವ ನೂರು ತಪ್ಪುಗಳನ್ನು ಕ್ಷಮಿಸಬಹುದು. ಆದರೆ ಅರಿತು ಮಾಡುವ ಒಂದು ತಪ್ಪನ್ನು ಕ್ಷಮಿಸುವುದು ತುಂಬಾ ಕಷ್ಟ .

ಹಸಿದಾಗ ಸಿಗದ ಅನ್ನ , ದಣಿದಾಗ ಸಿಗದ ನೆರಳು, ದುಃಖ ಇದ್ದಾಗ ಬಾರದ ಸಂಬಂಧ , ಕಷ್ಟದಲ್ಲಿ ಇದ್ದಾಗ ಬಾರದ ಸ್ನೇಹ , ಶವ ಆದಾಗ ತೋರುವ ಪ್ರೀತಿ ಯಾವತ್ತೂ ವ್ಯರ್ಥ …. ಒಂದು ಎಲೆ ಉದುರುತ್ತಾ ಹೇಳಿತಂತೆ ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ. “ಅರಿತು ನಡೆ ಅದೇ ಜೀವನ ಎಂದು

ಹುಡುಕಿದರೆ ದೇವರೇ ಸಿಗುವ , ಈ ದೇಶದಲ್ಲಿ, ಸಮಸ್ಯೆಗಳಿಗೆ ಪರಿಹಾರ ಯಾವ ಲೆಕ್ಕ….. ! ಸ್ವಲ್ಪ ತಾಳ್ಮೆ ಮತ್ತು ಪ್ರಯತ್ನ ಬೇಕು ಅಷ್ಟೇ …. ಮೋಸ ಮಾಡಿ ಜೀವನದಲ್ಲಿ ನೆಮ್ಮದಿಯಾಗಿ ಇರುವುದು, ಇತಿಹಾಸದಲ್ಲಿ ಯಾರು ಇಲ್ಲ ಆದರೆ ಮೋಸ ಹೋಗಿ ಜೀವನದಲ್ಲಿ ಗೆದ್ದು ನೆಮ್ಮದಿಯಾಗಿ ಇರುವುದು ಇತಿಹಾಸ ಸೃಷ್ಟಿ ಮಾಡಿದ್ದಾರೆ. ….!

ಪ್ರಪಂಚದಲ್ಲಿ ನಮ್ಮವರು ಅಂತ ಯಾರಾದರು ಇದ್ದಾರೆ ಅಂದರೆ, ಅದು ಸಮಯ ಮಾತ್ರ . ಏಕೆಂದರೆ ಸಮಯ ಒಳ್ಳೆಯದಾಗಿ ಇದ್ದರೆ ಎಲ್ಲರೂ ನಮ್ಮವರು. ಇಲ್ಲವೆಂದರೆ ಯಾರೂ ಇಲ್ಲ.

ನೀವು ಸುಂದರವಾಗಿ ಇದ್ದರೆ ಅದು ನಿಮ್ಮ ತಂದೆ – ತಾಯಿಯ ಉಡುಗೊರೆ . ನೀವು ನಿಮ್ಮ ಜೀವನವನ್ನು ಸುಂದರ ಮಾಡಿಕೊಂಡರೆ, ಅದು ನೀವು ನಿಮ್ಮ ತಂದೆ – ತಾಯಿಗೆ ಕೊಡುವ ಉಡುಗೊರೆ . ಈ ಲೋಕದಲ್ಲಿ ಕೆಟ್ಟ ಕೆಲಸ ಮಾಡಿ, ಹಾಳಾದವರಿಗಿಂತ ಹೇಳಿದ ಮಾತು ಕೇಳಿ ಹಾಳಾದವರ ಸಂಖ್ಯೆ ಅತಿ ಹೆಚ್ಚು …..!

ಹಿಂದಿನ ಕಾಲದಲ್ಲಿ ಜನ ಕಲ್ಲಿನಿಂದ ಬೆಂಕಿ ಹಚ್ಚುತ್ತಿದ್ದರು . ಈಗಿನ ಜನ ಬರೀ ಮಾತಿನಲ್ಲೇ ಬೆಂಕಿ ಹಚ್ಚುತ್ತಾರೆ. ವ್ಯಕ್ತಿಯ ವ್ಯಕ್ತಿತ್ವ ಗಡಿಯಾರದಲ್ಲಿ ಇರುವ ಸಂಖ್ಯೆ ಆಗಿರಬೇಕು. ಕಾಲಕ್ಕೆ ತಕ್ಕಂತೆ ಬದಲಾಗುವ ಮುಳ್ಳಾಗಬಾರದು. ಮುಳುಗಲಿ ಎಂದು ನನ್ನವರು ನನ್ನನ್ನು ತಳ್ಳಿ ಬಿಟ್ಟರು. ಅದರ ಪರಿಣಾಮ ನಾನು ಈಜುವುದನ್ನು ಕಲಿತೆ…

ನಂಬಿಕೆ ಬಂದರೆ ಕಣ್ಣು ಮತ್ತು ಮನಸ್ಸಿನ ಸಂಬಂಧದ ಹಾಗಿರಬೇಕು. ಕಣ್ಣು ನೋಡಿದ್ದನ್ನು ಮನಸ್ಸು ನಂಬುತ್ತದೆ, ಹಾಗೆ ಮನಸ್ಸಿಗೆ ನೋವಾದರೆ ಕಣ್ಣು ಅಳುತ್ತದೆ. ಬಂದಂತೆ ಬದುಕು ಸ್ವೀಕರಿಸುವವನಿಗೆ ಬದುಕು ಆನಂದದಿಂದ ಸ್ವಾಗತಿಸುತ್ತದೆ. ಕಷ್ಟದಲ್ಲಿ ನಗುತ್ತಿರುವವನನ್ನು ಕಂಡು ಬದುಕೇ ಅವನಿಗೆ ತಲೆ ಬಾಗುತ್ತದೆ.

ನಮ್ಮನ್ನು ನೋಡಿ ಉರಿದುಕೊಳ್ಳುವವರೇ ನಮ್ಮ ಬದುಕಿನ ಉತ್ತಮ ಮಾರ್ಗ ದರ್ಶಕರು . ಸ್ಪೂರ್ತಿ ತುಂಬುವ ಹೃದಯಗಳು ನಮ್ಮೊಟ್ಟಿಗೆ ಇದ್ದರೆ, ಅಸಾಧ್ಯವೂ ಸಾಧ್ಯವಾಗುತ್ತದೆ. ಮನುಷ್ಯನಿಗೆ ಸ್ವಲ್ಪ ಭಯ ಎಂಬುವುದು ಇರಬೇಕು . ಹಾಗೆಯೇ ಆ ಸಮಯಕ್ಕೆ ಸರಿಯಾಗಿ ದಿಟ್ಟ ನಿರ್ಧಾರ ಕೈಗೊಳ್ಳುವ ಧೈರ್ಯವೂ ಇದ್ದರೆ ಬದುಕಿನಲ್ಲಿ ಹಿಂತಿರುಗಿ ನೋಡುವ ಮಾತೇ ಇರುವುದಿಲ್ಲ .

Leave A Reply

Your email address will not be published.