ನಾವು ಈ ಲೇಖನದಲ್ಲಿ ಮನೆಯಲ್ಲಿ ಕೆಲವೊಂದು ವಾಸ್ತು ಸಲಹೆಗಳನ್ನು ಅಳವಡಿಸಿ ಅದ್ಭುತ ಬದಲಾವಣೆ ಹೇಗೆ ಆಗುತ್ತದೆ. ಎಂದು ತಿಳಿಯೋಣ . ಇಲ್ಲಿ ನಾವು ವಾಸ್ತುವಿಗೆ ಸಂಬಂಧಪಟ್ಟ ಕೆಲವೊಂದು ವಿಷಯಗಳನ್ನು ತಿಳಿಸಲಾಗಿದೆ. ಮೊದಲಿಗೆ ವಾಸ್ತು ಎಂದರೆ, ಭೂಮಿ, ಜಲ, ಅಗ್ನಿ , ವಾಯು ಮತ್ತು ಆಕಾಶ , ಈ ಪಂಚಭೂತಗಳನ್ನು ಕ್ರಮಬದ್ಧ ಪ್ರಮಾಣದ ಪರಸ್ಪರ ಸಂಬಂಧವನ್ನು ವಾಸ್ತು ಎನ್ನುತ್ತಾರೆ .ಪಂಚಭೂತಗಳ ಆಧಾರದ ಮೇಲೆ ರಚಿತವಾದಂತ ಶಾಸ್ತ್ರವೇ ವಾಸ್ತು ಶಾಸ್ತ್ರ.
ಕೆಲವೊಂದು ಮನೆಗಳನ್ನು ವಾಸ್ತು ಪ್ರಕಾರ ಕಟ್ಟಿರುತ್ತಾರೆ. ಇನ್ನು ಕೆಲವೊಂದು ಮನೆಗಳನ್ನು ವಾಸ್ತು ಪ್ರಕಾರ ಕಟ್ಟಿರುವುದಿಲ್ಲ. ವಾಸ್ತು ಪ್ರಕಾರ ಕಟ್ಟಿರಲಿ, ಅಥವಾ ಕಟ್ಟಿರದೆ ಇರಲಿ , ಕೆಲವೊಂದು ವಿಷಯಗಳು ನೀವು ಕೂಡ ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡರೆ ಬಹು ಬೇಗನೆ ಬದಲಾವಣೆ ಕಾಣಬಹುದು . ಜೊತೆಗೆ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಅಂದರೆ , ನಕಾರಾತ್ಮಕ ಶಕ್ತಿಯು ಕಳೆದು ಹೋಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಪುನಹ ಬರುತ್ತದೆ ಎಂದು ಅರ್ಥ .
ಮೊದಲನೆಯ ಸಲಹೆ ಏನೆಂದರೆ , ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಕೆಂಪು ಬಣ್ಣದ ಡೋರ್ ಮ್ಯಾಟ್ ಅನ್ನು ಹಾಕುವುದು ಒಳ್ಳೆಯದು. ಕೆಂಪು ಬಣ್ಣಕ್ಕೆ ಕೆಟ್ಟ ದೃಷ್ಟಿ ಆಕರ್ಷಣೆ ಮಾಡುವ ಸಾಮರ್ಥ್ಯ ಇದೆ .
ಎರಡನೆಯ ಸಲಹೆ ಏನೆಂದರೆ,
ಪ್ರತಿಯೊಬ್ಬರ ಮನೆಯಲ್ಲೂ ಗಡಿಯಾರ ಇದ್ದೇ ಇರುತ್ತದೆ . ಗಡಿಯಾರ ಸೂರ್ಯ ದೇವನ ಪ್ರತೀಕ . ಗಡಿಯಾರವು ನಮ್ಮ ಜೀವನವನ್ನು ಪ್ರತಿ ಬಿಂಬಿಸುತ್ತದೆ. ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಗಡಿಯಾರವನ್ನು ಇಡದೆ ಹೋದರೆ ಅದರಿಂದ ಕೆಲವು ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಗಡಿಯಾರವನ್ನು ಯಾವ ಪರಿಸ್ಥಿತಿಯಲ್ಲೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ದಕ್ಷಿಣ ದಿಕ್ಕು ಯಮನ ದಿಕ್ಕು. ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಕೆಟ್ಟ ಸಮಯವೂ ಪ್ರಾರಂಭವಾಗುತ್ತದೆ .
ಜೊತೆಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಮನೆಯ ಮುಖ್ಯ ದ್ವಾರಕ್ಕೆ ಅಥವಾ ಬಾಗಿಲ ಮೇಲೆ ಗಡಿಯಾರವನ್ನು ಇಡಬಾರದು. ಯಾಕೆಂದರೆ ನಾವು ಒಳಗೆ ಮತ್ತು ಹೊರಗೆ ಓಡಾಡುವಾಗ ನಮ್ಮ ತಲೆಯ ಮೇಲೆ ಗಡಿಯಾರ ವಿರುತ್ತದೆ. ಆದ್ದರಿಂದ ನಾವು ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ . ಗಡಿಯಾರವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಟ್ಟರೆ, ಅದು ಕುಟುಂಬ ಸದಸ್ಯರ ಆರೋಗ್ಯವನ್ನು ವೃದ್ಧಿ ಮಾಡುತ್ತದೆ. ಜೊತೆಗೆ ಶುಭ ಸಮಯ ಪ್ರಾರಂಭವಾಗಿ ಜೊತೆಗೆ ಧನ ಪ್ರಾಪ್ತಿಯಾಗುತ್ತದೆ .
ಮೂರನೆಯ ಸಲಹೆ ಏನೆಂದರೆ,
ಪೂರ್ವ ಮತ್ತು ಉತ್ತರ ದಿಕ್ಕಿಗೆ ನಿಂತು ಅಡುಗೆ ಮಾಡಬೇಕು. ದಕ್ಷಿಣ ದಿಕ್ಕಿಗೆ ಮುಖ ಮಾಡಿ ಪಾತ್ರೆ ತೊಳೆಯಬೇಕು.
ನಾಲ್ಕನೇ ಸಲಹೆ ಏನೆಂದರೆ, ಪ್ರತಿಯೊಬ್ಬರು ಅಡುಗೆ ಮಾಡುವುದಕ್ಕೆ ಬಳಸುವ ಪಾತ್ರೆಗಳನ್ನು ತೊಳೆದ ನಂತರ ಉಲ್ಟಾ ಇಡುತ್ತಾರೆ . ಈ ರೀತಿ ಮಾಡಬಾರದು . ಊಟ ಮಾಡಲು ಬಳಸುವ ತಟ್ಟೆ ಮತ್ತು ಲೋಟಗಳನ್ನು ಉಲ್ಟಾ ಇಟ್ಟರೆ ಮನೆಗೆ ದರಿದ್ರ ಆವರಿಸುತ್ತದೆ . ಜೊತೆಗೆ ಅನ್ನದ ಕೊರತೆ ಉಂಟಾಗುತ್ತದೆ .
ಐದನೇ ಸಲಹೆ ಎಂದರೆ, ನಾವು ಕೆಲವರ ಮನೆಗಳಲ್ಲಿ ಒಂದು ಗಾಜಿನ ಲೋಟದಲ್ಲಿ ನೀರು ಹಾಕಿ, ನೀರಿನಲ್ಲಿ ನಿಂಬೆಹಣ್ಣು ಹಾಕಿರುವುದನ್ನು ನೋಡಿರುತ್ತೇವೆ . ಆದರೆ ಈ ರೀತಿ ಏಕೆ ಮಾಡುತ್ತಾರೆ ಎಂದು ಕೆಲವರಿಗೆ ತಿಳಿದಿರುವುದಿಲ್ಲ . ನಿಂಬೆ ಹಣ್ಣನ್ನು ಒಂದು ಗಾಜಿನ ಲೋಟದಲ್ಲಿ ನೀರು ಹಾಕಿ ಇಡುವುದರಿಂದ, ಯಾವುದೇ ಕೆಟ್ಟ ಶಕ್ತಿಯ ಕಣ್ಣುಗಳು ನಿಮ್ಮ ಮೇಲೆ ಬೀಳುವುದಿಲ್ಲ . ಇನ್ನು ನಿಮ್ಮ ಮೇಲೆ ಅಥವಾ ನಿಮ್ಮ ಮನೆಯ ಮೇಲೆ ಮಾಟ , ಮಂತ್ರ, ವಾಮಾಚಾರ ಪ್ರಯೋಗ ಆಗಿದ್ದರೆ , ಆಗ ನಿಂಬೆಹಣ್ಣು ಕೊಳೆತು ಹೋಗುತ್ತದೆ . ಪ್ರತಿದಿನ ನೀರನ್ನು ಬದಲಾಯಿಸಬೇಕು . ಇನ್ನು ನೀರಿನ ಬಣ್ಣ ಬದಲಾದರೆ ಅಥವಾ ನಿಂಬೆಹಣ್ಣು ಕೊಳೆತರೆ ಹೊಸ ನಿಂಬೆಹಣ್ಣು ಇಡಬೇಕು .
ಆರನೇ ಸಲಹೆ ಎಂದರೆ, ಗೋಮಾತೆಯ ವಿಗ್ರಹ ಅಥವಾ ಫೋಟೋವನ್ನು ಪೂಜಾ ಕೋಣೆಯಲ್ಲಿ ಹಿಟ್ಟು ಪೂಜೆ ಮಾಡಿದರೆ ತುಂಬಾ ಒಳ್ಳೆಯದು . ಯಾಕೆಂದರೆ ಗೋವಿನಲ್ಲಿ ಎಲ್ಲಾ ದೇವಾನುದೇವತೆಗಳು ನೆಲೆಸಿರುತ್ತಾರೆ . ಮತ್ತು ಗೋಮಾತೆ ನಮ್ಮ ಮನೆಯಲ್ಲಿ ಇರುವ ಎಲ್ಲಾ ಕಷ್ಟಗಳನ್ನು ದೂರ ಮಾಡಿ , ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುತ್ತದೆ .
ಏಳನೇ ಸಲಹೆ ಎಂದರೆ, ಕಲ್ಲು ಉಪ್ಪನ್ನು ಗಾಜಿನ ಬೌಲ್ ನಲ್ಲಿ ಹಾಕಿ , ಯಾವುದಾದರೂ ಒಂದು ಮೂಲೆಯಲ್ಲಿ ಯಾರಿಗೂ ಕಾಣದಂತೆ ಇಡಬೇಕು . ಈ ರೀತಿ ಮಾಡುವುದರಿಂದ ವಾಸ್ತು ದೋಷ ಇರುವುದಿಲ್ಲ . ದೋಷದ ಜೊತೆಗೆ ಕ್ರಿಮಿಕೀಟಗಳು ಸಹ ತೊಲಗುತ್ತವೆ . ಇದನ್ನು 15 ದಿನಕ್ಕೆ ಒಂದು ಸಲ ಬದಲಾಯಿಸಬೇಕು . ರಾಹುವಿಗೆ ಇಷ್ಟವಾದ ಗಾಜಿನ ಬೌಲಿನಲ್ಲಿ ಉಪ್ಪು ಹಾಕಿ ಇಟ್ಟರೆ ನಕಾರಾತ್ಮಕ ಶಕ್ತಿ ಮನೆಯಲ್ಲಿ ಇರುವುದಿಲ್ಲ .
ಎಂಟನೇಯ ಸಲಹೆ ಎಂದರೆ, ಮಲಗುವ ಕೋಣೆಯಲ್ಲಿ ಕನ್ನಡಿ ಇರಬಾರದು . ಯಾಕೆಂದರೆ ಬೆಳಿಗ್ಗೆ ನಿದ್ರೆಯಿಂದ ಎದ್ದ ನಂತರ ನಮ್ಮ ಮುಖವನ್ನು ನಾವೇ ಕನ್ನಡಿಯಲ್ಲಿ ನೋಡಿಕೊಳ್ಳಬಾರದು . ಹಾಗೇನಾದರೂ ಕನ್ನಡಿ ಇದ್ದರೆ ರಾತ್ರಿಯ ಸಮಯದಲ್ಲಿ ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಬೇಕು .
ಒಂಬತ್ತನೇ ಸಲಹೆ ಎಂದರೆ , ಸಾಮಾನ್ಯವಾಗಿ ಮನೆಯಲ್ಲಿ ಕೆಲವರು ಹಳೆಯ ಕ್ಯಾಲೆಂಡರ್ ಅನ್ನು ಹೊಸ ಕ್ಯಾಲೆಂಡರ್ ಕೆಳಗೆ ಹಾಕಿರುತ್ತಾರೆ .ಮನೆಯ ಗೋಡೆಯ ಮೇಲೆ ಯಾವುದೇ ಕಾರಣಕ್ಕೂ ಹಳೆಯ ಕ್ಯಾಲೆಂಡರ್ ಅನ್ನು ಹಾಕಬಾರದು . ಈ ರೀತಿ ಹಾಕುವುದರಿಂದ ನಿಮಗೆ ಮುಂಬರುವ ಅವಕಾಶಗಳು ನಿಂತು ಹೋಗುತ್ತವೆ .