ಮೀನ ರಾಶಿಯವರ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ.

ನಾವು ಈ ಲೇಖನದಲ್ಲಿ ಮೀನ ರಾಶಿಯವರ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಅನಾಹುತಗಳು ಆಗುವುದಿದ್ದರೆ ಅದು ಸ್ವಲ್ಪದರಲ್ಲೇ ಪಾರಾಗುವ ವಿಚಾರದಲ್ಲಿ ಕೆಲವು ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಿಮ್ಮ ಹಣದ ಚೀಲವನ್ನು ನೀವು ಬಿಳಿಸಿ ಕೊಳ್ಳುತ್ತಿದ್ದರೆ ಯಾರಾದರೂ ನಿಮಗೆ ಎಚ್ಚರಿಕೆಯ ಮಾತನ್ನು ಹೇಳಬಹುದು ಅಥವಾ ಗಾಡಿಯಲ್ಲಿ ಹೋಗುತ್ತಿದ್ದರೆ ನಿಮಗೆ ಅನುಕೂಲಕರವಾದ ಮಾಹಿತಿಯನ್ನು ನೀಡಬಹುದು ನಿಮಗೆ ಅನಾಹುತವಾಗುವ ಸಂಭವವಿದ್ದರೆ ನಿಮ್ಮನ್ನು ತಪ್ಪಿಸುವ ಪ್ರಯತ್ನವಾಗಬಹುದು.

ದೇವರು ಈ ರೀತಿಯಲ್ಲೂ ಸಹ ಬರಬಹುದು. ನೀವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದರೆ ಸ್ವಲ್ಪದರಲ್ಲೇ ನೀವು ಅದನ್ನು ಕಳೆದುಕೊಳ್ಳುವ ಪರಿಸ್ಥಿತಿಯು ಬರಬಹುದು . ಈ ರೀತಿಯ ಪರಿಸ್ಥಿತಿಗಳು ಮೀನ ರಾಶಿಯವರಿಗೆ ಏಕೆ ನಡೆಯುತ್ತಿದೆ. ಸಾಡೆ ಸಾತಿ ನಡೆಯುವ ಸಮಯದಲ್ಲಿ ಆದಷ್ಟು ಎಚ್ಚರಿಕೆಯಿಂದ ಇರಬೇಕು. ತಗಿ-ಬಗ್ಗಿ ನಡೆಯುವ ಅವಶ್ಯಕತೆ ಇರುತ್ತದೆ. ಸ್ವಲ್ಪದರಲ್ಲೇ ಪಾರಾಗುವಂತಹ ಎಚ್ಚರಿಕೆಗಳನ್ನು ನೀಡುತ್ತಿದ್ದೇವೆ. ನೀವು ಗಾಡಿಯಲ್ಲಿ ಹೋಗುವಾಗ ವಾಹನಗಳಲ್ಲಿ ಚಲಿಸುವಾಗ ವೇಗದ ಮಿತಿ ಎಷ್ಟಿರುತ್ತದೆಯೋ ಅಷ್ಟೇ ಹೋಗಬೇಕು.

ನಿಯಮಗಳನ್ನು ಪಾಲಿಸಬೇಕು. ಹೂಡಿಕೆ ಮಾಡುವಾಗ ಹಣವನ್ನು ಖರ್ಚು ಮಾಡುವಾಗ ಹಾಸಿಗೆ ಇದ್ದಷ್ಟು ಮಾತ್ರವೇ ಕಾಲು ಚಾಚಬೇಕು. ಕೆಲವು ಕೆಲಸ ಕಾರ್ಯಗಳನ್ನು ನೀವು ಕೈಗೊಳ್ಳುವಾಗ ಹಿಂದೆ ಮುಂದೆ ನೋಡಿ ಯೋಚನೆ ಮಾಡಿ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ತಲೆಗಟ್ಟಿ ಇದೆ ಎಂದು ಬಂಡೆಗೆ ಚೆಚ್ಚಿಕೊಳ್ಳುವಂತಹ ನಿರ್ಧಾರವನ್ನು ಎಂದಿಗೂ ಸಹ ಮಾಡಬೇಡಿ.

ಮೀನ ರಾಶಿಯವರಿಗೆ ತೃತೀಯ ಭಾಗದಲ್ಲಿ ಬಹಳಷ್ಟು ಗ್ರಹಗಳು ಬಂದು ಕೂರುತ್ತದೆ. ಇದು ಒಂದು ತಿಂಗಳ ಮಟ್ಟಿಗೆ ಇರುತ್ತದೆ. ಒಂದು ಗ್ರಹ ಮಾತ್ರ ಇಡೀ ಒಂದು ತಿಂಗಳ ಮಟ್ಟಿಗೆ ಆಗುವುದಿಲ್ಲ ಒಂದು ವರ್ಷದವರೆಗೂ ಇರುತ್ತದೆ. ಅ ಗ್ರಹ ಯಾವುದು? ಆ ಗ್ರಹ ಏನು ಫಲಗಳನ್ನು ಕೊಡುತ್ತದೆ ಒಳ್ಳೆಯದು ಯಾವುದು ಇದೆ ಎಂಬುದನ್ನು ತಿಳಿದುಕೊಳ್ಳೋಣ. ಆ ಒಳ್ಳೆಯ ವಿಚಾರ ಈ ವರ್ಷದ ಮಟ್ಟಿಗೆ ನಿಮ್ಮನ್ನು ಹೇಗೆ ಕಾಪಾಡಿಕೊಳ್ಳುತ್ತದೆ ಎಂದು ತಿಳಿದುಕೊಳ್ಳೋಣ.

ಅದಕ್ಕೂ ಮೊದಲು ಬೇರೆ ಗ್ರಹಗಳ ಫಲಗಳನ್ನು ತಿಳಿದುಕೊಳ್ಳೋಣ. ಕ್ಷಣಾರ್ಧದಲ್ಲಿ ತಪ್ಪಿಸಿಕೊಳ್ಳುವುದಕ್ಕೆ ಬಹಳ ಮುಖ್ಯವಾದ ಗ್ರಹಗಳು ಎಂದರೆ ಸೂರ್ಯದೇವನ ಕೃಪೆ. ತೃತೀಯ ಭಾವದಲ್ಲಿ ಸೂರ್ಯಗ್ರಹವು ಇರುವಾಗ ವಿಶೇಷವಾಗಿ ಧೈರ್ಯ ತುಂಬುವುದು ಸಾಹಸದ ಭಾವನೆಗಳನ್ನು ನಿಮ್ಮಲ್ಲಿ ತರುವುದು ನಿಮ್ಮಲ್ಲಿ ಚುರುಕುತನವನ್ನು ಉಂಟುಮಾಡುವುದು ಲಾಭವನ್ನು ಪಡೆದುಕೊಳ್ಳುವುದು ಸರ್ಕಾರಿ ಕೆಲಸ ಕಾರ್ಯಗಳು ಒಳಿತನ್ನು ಉಂಟು ಮಾಡುವುದು ನೀವು ಮಾಡುವಂತ

ಕೆಲಸಗಳಿಗೆ ಸಾಧನೆ ಮತ್ತು ಸ್ಫೂರ್ತಿಯನ್ನು ಕೊಡುವುದು ನಿಮ್ಮ ಕೆಲಸ ಕಾರ್ಯಗಳು ನಿಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಈ ಗ್ರಹವು ಮಾಡಿಕೊಡುತ್ತದೆ. ನಿಮ್ಮನ್ನು ಒಳ್ಳೆಯ ಮಾರ್ಗದರ್ಶನದಲ್ಲಿ ನಡೆಯುವಂತೆ ನೋಡಿಕೊಳ್ಳುವುದು ಸೂರ್ಯಗ್ರಹದ ತಾಕತ್ ಆಗಿರುತ್ತದೆ. ರೋಗಗಳಿಂದ ಮುಕ್ತಿ ಸಿಗುತ್ತದೆ. ನಿಮ್ಮ ಶತ್ರುಗಳ ಪರಿಸ್ಥಿತಿಯು ಜಟಿಲವಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಯಾಗುತ್ತದೆ . ಹೊಸ ಹುದ್ದೆಯೂ ನಿಮಗೆ ಸಿಗುತ್ತದೆ. ನೀವು ಮಾಡುವಂತ ಕೆಲಸ ಕಾರ್ಯಗಳಲ್ಲಿ ವೇತನವು ಸಹ ಹೆಚ್ಚಿಗೆಯಾಗುತ್ತದೆ. ಹೂಡಿಕೆಗಳಿಂದ ನಿಮಗೆ ಹಣದ ಲಾಭವಿದೆ.

ನಿಮಗೆ ಬರಬೇಕಾದಂತಹ ಹಣ ವಾಪಸ್ಸು ಕೈಸೆರಲಿದೆ . ಈ ರೀತಿ ಆದಂತಹ ಒಳ್ಳೆ ಘಟನೆಗಳಿಗೆ ಈ ತಿಂಗಳಿನಲ್ಲಿ ಅವಕಾಶವಿದೆ. ಬುಧ ಗ್ರಹವು ದ್ವಿತೀಯ ಭಾಗದಲ್ಲಿ ಇರುತ್ತದೆ . 10ನೇ ತಾರೀಕಿಗೆ ತೃತೀಯ ಭಾವಕ್ಕೆ ಹೋಗುತ್ತದೆ. ಬುಧ ಗ್ರಹಕ್ಕೆ ವಿಶೇಷವಾದ ಶಕ್ತಿಯು ಇರುತ್ತದೆ. ಅಂದರೆ ವಾಕ್ ಶಕ್ತಿಯು ಇರುತ್ತದೆ . ಮಾತಿನಲ್ಲಿ ಹಿಡಿತ ಸಾಧಿಸುವುದು . ನಿಮ್ಮ ಜೀವನದ ಉದ್ದೇಶಕ್ಕೆ ತಕ್ಕಂತೆ ಕೆಲಸ ಮಾಡುವಂತಹ ಜ್ಞಾನವನ್ನು ನಿಮಗೆ ಈ ಗ್ರಹ ತರುತ್ತದೆ. ವಿದ್ಯಾರ್ಥಿಗಳಿಗೆ ವಿಶೇಷವಾದಂತಹ ಯಶಸ್ಸು ದೊರಕುತ್ತದೆ.

ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡಿದ್ದರೆ ಅದರಲ್ಲಿ ಉತ್ತೀರ್ಣ ಆಗುವಿರಿ . ನಿಮ್ಮ ಶ್ರಮಕ್ಕೆ ತಕ್ಕಂತಹ ಪ್ರತಿಫಲ ನಿಮಗೆ ದೊರಕುತ್ತದೆ. ನೀವು ತೆಗೆದುಕೊಳ್ಳುವ ಅಂಕದಿಂದ ನಿಮ್ಮ ಜೀವನ ನಿರ್ಧಾರವಾಗುವುದಿಲ್ಲ. ಅದು ನಿಮ್ಮ ತಪ್ಪು ಕಲ್ಪನೆಯಾಗಿರುತ್ತದೆ. ಜೀವನವನ್ನು ಹೇಗೆ ಅರ್ಥ ಮಾಡಿಕೊಂಡಿರುತ್ತೀರೋ ನೀವು ಎಷ್ಟರಮಟ್ಟಿಗೆ ಪ್ರಾಮಾಣಿಕರಾಗಿರುತ್ತಿರೋ ಮತ್ತು ನೀವು ಜೀವನ ನಡೆಸುವ ಸಾಮರ್ಥ್ಯದ ಮೇಲೆ ನಿಂತಿರುತ್ತದೆ.

ತುಂಬಾ ಸ್ಪರ್ಧಾತ್ಮಕವಾದಂತ ಭಾವನೆಯನ್ನು ಬೆಳೆಸಿಕೊಳ್ಳಬೇಡಿ. ಸಣ್ಣಪುಟ್ಟ ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ ಇದನ್ನು ನಿಗ್ರಹಿಸಿ. ಮುಂದೆ ಹೋಗಿ. ಮಕ್ಕಳನ್ನು ಬೇರೆಯವರ ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ. ಒಂದಷ್ಟು ಬ್ರಹ್ಮಾತ್ಮಕವಾದಂತ ವಾತಾವರಣ ಪದೇ ಪದೇ ಸೃಷ್ಟಿಯಾಗುತ್ತದೆ. ರಾಶಿಯಲ್ಲಿ ಕುಜ ಮತ್ತು ರಾಹು ಒಂದಾಗಿರುವುದರಿಂದ ಕೆಲವೊಂದು ಭ್ರಮೆ ನಿಮಗೆ ಉಂಟಾಗುತ್ತದೆ.

ಸ್ವಲ್ಪ ಮಟ್ಟಿಗೆ ಸರ್ಪದೋಷವೂ ಸಹ ಕಾಣಿಸಿಕೊಳ್ಳುತ್ತದೆ . ಸುಬ್ರಮಣ್ಯ ದೇವರ ಆರಾಧನೆಯನ್ನು ಮಾಡಿ. ತೃತಿಯದಲ್ಲಿ ರವಿ ಮತ್ತು ಗುರು ಇರುವುದರಿಂದ ವಿಶೇಷವಾಗಿ ಗುರುಗಳ ಗ್ರಹ ನಿಮಗೆ ಇರುತ್ತದೆ. ಮಾನಸಿಕ ಸ್ಥಿರತೆ ಧೈರ್ಯ ಆತ್ಮವಿಶ್ವಾಸ ಪರಿಸ್ಥಿತಿಗಳನ್ನ ಎದುರಿಸುವುದಕ್ಕೆ ಬೇಕಾದಂತಹ ಸವಾಲುಗಳನ್ನು ಗುರುಗ್ರಹ ಕೊಡುತ್ತದೆ. ಶ್ರದ್ಧೆ ಮತ್ತು ನಿಷ್ಠೆಯ ಅವಶ್ಯಕತೆ ಇದೆ. ಬ್ರಹ್ಮಾತ್ಮಕ ನಿಲುವುಗಳಿಗೆ ಹೋಗದೆ ಇರುವ ಹಾಗೆ ನೋಡಿಕೊಳ್ಳಿ.

Leave a Comment