ಮಂಗನ ಬಳ್ಳಿಯ ಚಮತ್ಕಾರಿಕ ಶಕ್ತಿಗಳಿಂದ ಯೋಚಿಸಿದ್ದೇ ಆಗುತ್ತದೆ ಬಯಸಿದ್ದೇ ಸಿಗುತ್ತದೆ

0

ನಾವು ಈ ಲೇಖನದಲ್ಲಿ ಮಂಗನ ಬಳ್ಳಿಯ ಚಮತ್ಕಾರಿಕ ಶಕ್ತಿಗಳಿಂದ ಯೋಚಿಸಿದ್ದೇ ಆಗುತ್ತದೆ. ಮತ್ತು ಹೇಗೆ ಬಯಸಿದ್ದೇ ಸಿಗುತ್ತದೆ. ಎಂದು ತಿಳಿಯೋಣ . ಮಂಗನ ಬಳ್ಳಿಯನ್ನು ಹಲವಾರು ಬಾರಿ ನೀವು ನೋಡಿರುತ್ತೀರಾ . ಆದರೆ ಅದನ್ನು ನೋಡಿದರೂ ನಿರ್ಲಕ್ಷ್ಯ ಮಾಡಿರುತ್ತೀರಾ . ಇದರ ಆಶ್ಚರ್ಯಕರವಾದ ಮತ್ತು ಚಮತ್ಕಾರಿಕ ಲಾಭದ ಬಗ್ಗೆ ತಿಳಿಯೋಣ .

ಇಲ್ಲಿ ಇದರ ಬಳಕೆಯನ್ನು ಯಾವ ಯಾವ ರೀತಿ ಮಾಡಬಹುದು , ಹಣಕಾಸಿನ ಸಮಸ್ಯೆ ಇರಲಿ, ಅಥವಾ ನಿಮ್ಮ ಮನೆಯ ಮೇಲೆ ತಂತ್ರ – ಮಂತ್ರ ಕ್ರಿಯೆಗಳನ್ನು ಯಾರಾದರೂ ಮಾಡಿದ್ದರೆ, ಶತ್ರುಗಳ ತೊಂದರೆ ಇದ್ದರೆ , ಅದಕ್ಕೆ ಇದರ ಬಳಕೆಯನ್ನು ಮಾಡಬಹುದು . ಜೊತೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ಇದರ ಲಾಭಗಳು ಅಸಂಖ್ಯಾತ ಆಗಿದೆ. ಇದರ ಬಗ್ಗೆ ನೀವು ತಿಳಿದರೆ, ನಿಮಗೆ ಅಚ್ಚರಿ ಆಗುತ್ತದೆ. ಮಂಗನ ಬಳ್ಳಿಯನ್ನು ಅಮರ ಬೇಲ , ಅಮೃತ ಫಲ ಎಂದು ಕರೆಯುತ್ತಾರೆ . ಇದು ಒಂದು ಗುಣಕಾರಿ ಸಸ್ಯ ಆಗಿದೆ.

ಪ್ರಾಚೀನ ಕಾಲದಿಂದಲೂ ಇದರ ಉಪಯೋಗವನ್ನು ಆಯುರ್ವೇದದಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ . ಮಂಗನ ಬಳ್ಳಿಯ ಬೇರು, ಇದರ ಎಲೆ , ಇದರ ಬಳ್ಳಿಯನ್ನು ಹಿಡಿದುಕೊಂಡು ಎಲ್ಲಾ ಭಾಗಗಳಲ್ಲಿ ಔಷಧಿಯ ಗುಣ ಇರುತ್ತದೆ . ಇದರ ಬಳಕೆಯನ್ನು ಹಲವಾರು ಪ್ರಕಾರದ ಔಷಧಿಗಳಲ್ಲಿ ಬಳಸುತ್ತಾರೆ . ಮಂಗನ ಬಳ್ಳಿಯು ಹಲವಾರು ಪ್ರಕಾರಗಳ ರೋಗಗಳಾದ ಬೊಜ್ಜು, ಮಧುಮೇಹ , ಅಸಿಡಿಟಿ , ಇಂತಹ ರೋಗಗಳನ್ನು ನಾಶ ಮಾಡುವಲ್ಲಿ ಉತ್ತಮವಾಗಿದೆ . ಇದರಲ್ಲಿ ಅತಿಯಾದ ಆ್ಯಂಟಿ ಆಕ್ಸಿಡೆಂಟ್ , ವಿಟಮಿನ್ ಸಿ ,

ಜೊತೆಗೆ ಅನ್ಯ ಪೋಷಕ ತತ್ವಗಳು ಇರುತ್ತದೆ . ಇವು ಶರೀರಕ್ಕೆ ತುಂಬಾ ಗುಣಕಾರಿ ಉಪಯುಕ್ತ ಆಗಿದೆ. ಇದು ಮನುಷ್ಯನ ಹಿಮ್ಯುನಿಟಿಯನ್ನು ಜಾಸ್ತಿ ಮಾಡಿ ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ ಮಾಡುತ್ತದೆ . ಇದು ಪುರುಷರ ಹಲವಾರು ಸಮಸ್ಯೆಗಳನ್ನು ದೂರ ಮಾಡುವುದರಲ್ಲಿ ಸಹಾಯಕ ಆಗಿದೆ . ಪುರುಷರಿಗೋಸ್ಕರ ಇದು ರಾಮಬಾಣ ಔಷಧಿ ಆಗಿದೆ . ಇದು ಮನುಷ್ಯರ ಮಾಂಸ ಖಂಡಗಳ ರಚನೆಯಲ್ಲಿ ಸಹಾಯ ಮಾಡುತ್ತದೆ .ನಪುಂಸಕತೆಯ ಸಮಸ್ಯೆಯಿಂದ ಉಳಿಸುತ್ತದೆ .

ಮಂಗನ ಬಳ್ಳಿಯು ಪುರುಷರಲ್ಲಿ ಪ್ರೋಸ್ಟೀಜ್ ಸಮಸ್ಯೆಯನ್ನು ದೂರ ಮಾಡುವಲ್ಲಿ ಸಹಾಯಕವಾಗಿದೆ. ಇದು ಪುರುಷರಿಗೆ ಸುಸ್ತು ಮತ್ತು ಆಯಾಸದಲ್ಲಿ ಮುಕ್ತಿ ಕೊಡಿಸುತ್ತದೆ .ಈ ರೀತಿಯಾಗಿ ಮಂಗನ ಬಳ್ಳಿಯು ಪುರುಷರಿಗೆ ಆದಾಯದಾಯಕವಾಗಿದೆ . ಮಂಗನ ಬಳ್ಳಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ . ರಕ್ತ ಸಂಚಾರ ಸರಿಯಾಗಿ ಮಾಡುವಲ್ಲಿ ಸಹಾಯಕವಾಗಿದೆ .

ನಿಯಮಿತ ರೂಪದಲ್ಲಿ ಇದರ ಬಳಕೆಯನ್ನು ಮಾಡಿದರೆ , ಹೃದಯದ ಆರೋಗ್ಯ ಉತ್ತಮವಾಗುತ್ತದೆ . ಮಂಗನ ಬಳ್ಳಿಯಲ್ಲಿ ಎನ್ವಿಯಾದಂತಹ ರೋಗದ ಜೊತೆ ಹೋರಾಡುವ ಶಕ್ತಿ ಕೂಡ ಇದೆ .ಇದರಲ್ಲಿ ಐರನ್ ಕ್ಯಾಲ್ಸಿಯಂ ವಿಟಮಿನ್ ಸಿ ತತ್ವಗಳು ಇದೆ . ಹಿಮೋಗ್ಲೋಬಿನ್ ಕೊರತೆಯನ್ನು ಪೂರ್ಣಗೊಳಿಸಿ , ರಕ್ತವನ್ನು ಶುದ್ಧೀಕರಿಸುತ್ತದೆ . ಇಲ್ಲಿ ಕೆಲವು ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ತಿಳಿಸಲಾಗಿದೆ .

ಇನ್ನು ಇದರ ಉಪಾಯವನ್ನು ತಂತ್ರ ಶಾಸ್ತ್ರದಲ್ಲಿ ಆಗಲಿ, ಜ್ಯೋತಿಷ್ಯ ಶಾಸ್ತ್ರದಲ್ಲಿ ಆಗಲಿ, ಮಾಡಲಾಗುತ್ತದೆ . ಒಂದು ವೇಳೆ ಯಾವುದಾದರೂ ವ್ಯಕ್ತಿಯಲ್ಲಿ ರಾಹು ಕೇತು ಗ್ರಹ ಕೆಟ್ಟದಾಗಿ ಇದ್ದರೆ , ವ್ಯಕ್ತಿಯಲ್ಲಿ ರಾಹು ಕೇತುವಿನ ಸಮಸ್ಯೆ ಉಂಟಾದಾಗ , ಧನ ಸಂಪತ್ತಿನ ಸಮಸ್ಯೆಗಳು ಉಂಟಾಗುತ್ತದೆ . ರಾಹು ಕೇತುಗಳು ವ್ಯಕ್ತಿಯನ್ನು ರಾಜನನ್ನಾಗಿಸುತ್ತದೆ . ಒಂದು ವೇಳೆ ಅವು ಕೆಟ್ಟ ದೃಷ್ಟಿಯನ್ನು ಹಾಕಿದರೆ ,

ಇವು ಮನುಷ್ಯನ ಬುದ್ಧಿಯನ್ನು ಹೇಗೆ ನಾಶ ಮಾಡುತ್ತದೆ ಎಂದರೆ , ಬೆಳಕಿನಲ್ಲೂ ಸಹ ಆ ವ್ಯಕ್ತಿಗೆ ಕತ್ತಲೆ ಕಾಣುತ್ತದೆ . ಕೆಲವರು ಪ್ರತಿ ಸಮಯದಲ್ಲೂ ಕೆಟ್ಟದ್ದಾಗಿ ಯೋಚನೆ ಮಾಡುತ್ತಿರುತ್ತಾರೆ . ಜೀವನದಲ್ಲಿ ಏನು ಮಾಡಬೇಕು ಎಂಬುದು ಅವರ ಗಮನಕ್ಕೆ ಬರುತ್ತಿರುವುದಿಲ್ಲ . ಇನ್ನೊಬ್ಬರ ಬಗ್ಗೆ ತಿಳಿದುಕೊಳ್ಳಲು ಇವರಿಗೆ ಆಸಕ್ತಿ ಹೆಚ್ಚಾಗುತ್ತದೆ . ಇದರಿಂದ ಇವರು ಸಮಾಜದಲ್ಲಿ ಹಾಳಾಗುತ್ತಾರೆ .

ಇದಕ್ಕೆ ಕಾರಣ ರಾಹು ಕೇತು ಎಂದು ತಿಳಿಯಲಾಗುತ್ತದೆ . ಯಾವುದಾದರೂ ವ್ಯಕ್ತಿಯಲ್ಲಿ ರಾಹು ಕೇತು ಕೆಟ್ಟದಾಗಿ ಇದ್ದರೆ , ಅಂತಹ ವ್ಯಕ್ತಿಗಳು ಹರಿತವಾದ ಕಾರ್ಯಗಳಲ್ಲಿ ಇರುತ್ತಾರೆ . ಜೀವನವನ್ನ ಸರ್ವ ನಾಶ ಮಾಡಿಕೊಳ್ಳುತ್ತಾರೆ . ಇಂಥಹ ವ್ಯಕ್ತಿಗಳು ಬೆಳಕಿನಲ್ಲಿ ಕತ್ತಲೆಯನ್ನು ಹುಡುಕುತ್ತಾರೆ . ಈ ಮಾತಿನ ಅರ್ಥ ಇವರಿಗೆ ಸಕಾರಾತ್ಮಕವಾಗಿ ಇರುವುದು ಏನು ಕಾಣಿಸುವುದಿಲ್ಲ .

ಕೇವಲ ಅವರಿಗೆ ನಕಾರಾತ್ಮಕತೆ ಕಾಣುತ್ತಿರುತ್ತದೆ .ಯಾವಾಗ ವ್ಯಕ್ತಿಗೆ ಕೇವಲ ನಕಾರಾತ್ಮಕತೆ ಕಾಣುತ್ತದೆಯೋ , ಈ ಮಾತಿನ ಅರ್ಥ ಅವರ ಸರ್ವನಾಶ ನಿಶ್ಚಯಗೊಂಡಿರುತ್ತದೆ . ಏಕೆಂದರೆ ಶಾಸ್ತ್ರ ಇರಲಿ, ಧರ್ಮ ಇರಲಿ , ವಿಜ್ಞಾನವಿರಲಿ, ಎಲ್ಲರೂ ಧನಾತ್ಮಕವಾಗಿ ಯೋಚನೆ ಮಾಡಿ ಎಂದು ಹೇಳುತ್ತಾರೆ . ಒಳ್ಳೆಯ ಕಾರ್ಯಗಳನ್ನು ಮಾಡಬೇಕು . ಎಂದು ಹೇಳುತ್ತಾರೆ . ರಾಹು ಕೇತುಗಳ ಸ್ಥಿತಿ ಕೆಟ್ಟು ಹೋದಾಗ ಪಿತೃ ದೋಷ ಕೂಡ ಅಂಟುತ್ತದೆ . ಪಿತೃ ದೋಷದ ಕಾರಣದಿಂದಾಗಿ ಇಂತಹ ವ್ಯಕ್ತಿಗಳು ಸೂರ್ಯನ ಪ್ರಕಾಶ ಎದುರು ಅಂಧಕಾರದಲ್ಲಿ ಜೀವನ ಮಾಡುತ್ತಾರೆ .

ಇವರು ತಮ್ಮ ಜೀವನದಲ್ಲಿ ಏನನ್ನು ಸಹ ಮಾಡುವುದಿಲ್ಲ . ಯಾರು ಸಹ ಕೆಟ್ಟದಾಗಿ ಯೋಚನೆ ಮಾಡಲು ಇಷ್ಟಪಡುವುದಿಲ್ಲ . ನಕಾರಾತ್ಮಕವಾಗಿ ಯೋಚನೆ ಮಾಡುವುದರಿಂದ ವ್ಯಕ್ತಿಯು ದುಃಖವನ್ನು ಪಡೆದುಕೊಳ್ಳುತ್ತಾನೆ . ಕಷ್ಟಗಳು ಇವರನ್ನು ಆವರಿಸಿರುತ್ತದೆ . ಇಲ್ಲ ಇದೇ ಗ್ರಹಗಳು ಸಾತ್ ಕೊಡುವುದಿಲ್ಲ ಎಂದರೆ , ವ್ಯಕ್ತಿ ಹೇಗೆ ಬೇಕಾದರೂ ಯೋಚನೆ ಮಾಡುತ್ತಾನೆ . ಸ್ವತಹ ತಾವೇ ಕಷ್ಟದಲ್ಲಿ ಬದುಕುತ್ತಾರೆ . ಹಾಗಾಗಿ ರಾಹು ಕೇತು ತುಂಬಾ ಶಕ್ತಿಶಾಲಿಯಾಗಿ ಇರುವುದು ಬಹಳ ಮುಖ್ಯವಾಗಿದೆ . ನಾವು ಯಾವಾಗ ನಕಾರಾತ್ಮಕವಾಗಿ ಯೋಚನೆ ಮಾಡುತ್ತೇವೆ ಆಗ ದುಃಖ ಮತ್ತು ಭಯ ತುಂಬಾ ಕೆಟ್ಟದಾಗಿ ಕಾಡುತ್ತವೆ .

ಹಾಗಾಗಿ ನೀವು ಮಂಗನ ಬಳ್ಳಿಯನ್ನು ತೆಗೆದುಕೊಂಡು ಬರಬೇಕು . ಯಾವುದಾದರೂ ಮಂಗಳವಾರದ ದಿನ ಅಥವಾ ಶನಿವಾರದ ದಿನ ಚೆನ್ನಾಗಿರುವ ಮಂಗನ ಬಳ್ಳಿಯನ್ನು ತೆಗೆದುಕೊಂಡು ಬನ್ನಿ . ಇದನ್ನು ಸ್ವಚ್ಛವಾದ ನೀರಿನಿಂದ ತೊಳೆದ ನಂತರ , ಕೇವಲ ಒಂದು ಚಿಕ್ಕ ಕೆಲಸವನ್ನು ಮಾಡಬೇಕು . ಮಂಗನ ಬಳ್ಳಿಯನ್ನು ರುಬ್ಬಿ ಪೇಸ್ಟ್ ರೀತಿ ಮಾಡಿ ಇಟ್ಟುಕೊಳ್ಳಬೇಕು . ಇದರಲ್ಲಿ ಸ್ವಲ್ಪ ಕುಂಕುಮವನ್ನು ಸೇರಿಸಬೇಕು . ಈ ಪೇಸ್ಟ್ ತಯಾರಾದ ನಂತರ , ಒಂದು ಭೋಜ ಪತ್ರದ ಮೇಲೆ ಒಂದು ಮಂತ್ರವನ್ನು ಬರೆಯಿರಿ .

ಇದು ಯಾವ ರೀತಿಯ ವಿಧಿಯಾಗಿದೆ ಎಂದರೆ , ಜೀವನವಿಡೀ ರಾಹು ಕೇತು ನಿಮಗೆ ತೊಂದರೆಯನ್ನು ಕೊಡುವುದಿಲ್ಲ .ಇಲ್ಲಿ ಪಿತೃ ದೇವರು ಕೂಡ ನಿಮಗೆ ಸಾತ್ ಕೊಡುತ್ತಾರೆ .ಒಂದು ವೇಳೆ ಭೋಜ ಪತ್ರ ನಿಮ್ಮ ಬಳಿ ಇಲ್ಲ ಎಂದರೆ , ಸಾಧಾರಣ ಹಾಳೆಯಲ್ಲಿ ಪ್ರಯೋಗ ಮಾಡಬಹುದು .ಇಲ್ಲಿ ನಿಮ್ಮ ಪೂರ್ವಜರೇ ಜೀವನದಲ್ಲಿ ಯಶಸ್ವಿಯಾಗುವಂತೆ ಮಾಡುತ್ತಾರೆ .

ಇಲ್ಲಿ ಆ ಪೇಸ್ಟ್ ನಿಂದ ಹಾಳೆ ಅಥವಾ ಭೋಜ ಪತ್ರದ ಮೇಲೆ ಈ ಮಂತ್ರವನ್ನು ಬರೆಯಬೇಕು . ಮಂತ್ರವು ಈ ಪ್ರಕಾರದಲ್ಲಿ ಇದೆ . ” ಓಂ ರೀಂ ರಾಹುಂ ಕೇತು ಶಾಂತಿ ಹೀ” ! ಮಂಗಳವಾರ ಅಥವಾ ಶನಿವಾರದ ದಿನ ಇದನ್ನು ತಯಾತದಲ್ಲಿ ಹಾಕಿ ಕಟ್ಟಿಕೊಂಡು ಬಲಗೈನ ಭುಜದಲ್ಲಿ ಕಟ್ಟಿಕೊಳ್ಳುವುದರಿಂದ ಸಂಪೂರ್ಣ ಪ್ರಕಾರದ ರಾಹು ಕೇತು ದೋಷಗಳು ನಷ್ಟ ಆಗುತ್ತದೆ .ಮೊದಲಿಗೆ ಪಿತೃ ದೋಷವು ಕೂಡ ತಕ್ಷಣವೇ ದೂರ ಆಗುತ್ತದೆ . ಇವುಗಳ ಜೊತೆಗೆ ಯಾವುದಾದರೂ ವ್ಯಕ್ತಿಗೆ ಕಾಲು ಸರ್ಪ ದೋಷ ಅಂಟಿಕೊಂಡಿದ್ದರೆ , ಇಂತಹ ವ್ಯಕ್ತಿಗಳು ಕನಸಿನಲ್ಲಿ ಕೆಟ್ಟ ಕನಸು ಕಂಡು ಹೆದರಿ ಕೊಳ್ಳುತ್ತಿರುತ್ತಾರೆ .

ಇವರ ಮನಸ್ಸಿನಲ್ಲಿ ಯಾವತ್ತಿಗೂ ಭಯವೇ ಇರುತ್ತದೆ . ಇಲ್ಲಿ ಕಾಲು ಸರ್ಪ ದೋಷಕ್ಕೆ ಹಲವಾರು ಸಂಕೇತಗಳು ಇರುತ್ತವೆ . ಯಾವಾಗ ಕಾಲು ಸರ್ಪದೋಷ ಯಾವುದಾದರೂ ವ್ಯಕ್ತಿಗೆ ತೊಂದರೆ ಕೊಡುತ್ತದೆಯೋ ಮಂಗನ ಬಳ್ಳಿಯ ಸಹಾಯದಿಂದ ಕಾಲು ಸರ್ಪ ದೋಷವನ್ನು ದೂರ ಮಾಡಬಹುದು . ಮಂಗನ ಬಳ್ಳಿ ನೋಡಿದರೆ ಹಾವಿನ ರೀತಿ ಇರುತ್ತದೆ. ಒಂದು ಮರದ ಮೇಲೆ ಇದು ಬೆಳೆಯಲು ಶುರು ಮಾಡಿದರೆ, ಅದು ಇಡೀ ಮರವನ್ನೇ ಆವರಿಸಿಕೊಳ್ಳುತ್ತದೆ. ಮಂಗನ ಬಳ್ಳಿಯನ್ನು ತೆಗೆದುಕೊಂಡು ಕಪ್ಪು ಬಣ್ಣದ ಬಟ್ಟೆಯಲ್ಲಿ ಹಾಕಿ , ಅದರಲ್ಲಿ ಎಂಟು ಮೆಣಸಿನ ಕಾಳುಗಳನ್ನು ಹಾಕಿ , ಎಕ್ಕದ ಗಿಡದ ಹೂವನ್ನು ಜೊತೆಗೆ ಹಾಕಿ ಕಟ್ಟಿದರೆ , ಈ ಗಂಟನ್ನು ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಿದರೆ , ಇದರಿಂದ ಕಾಲು ಸರ್ಪ ದೋಷವೂ ಒಂದು ತಿಂಗಳಲ್ಲಿ ಶಾಂತವಾಗುತ್ತದೆ ಎಂದು ಹೇಳಲಾಗಿದೆ.

Leave A Reply

Your email address will not be published.