ನಾವು ಈ ಲೇಖನದಲ್ಲಿ ನೀರಿಗೆ ಈ ವಸ್ತು ಬೆರೆಸಿ , ತುಳಸಿಗೆ ಹಾಕುವುದರಿಂದ ದುಡ್ಡು ಹಾಗೂ ಶತ್ರುಗಳ ವಿಷಯದಲ್ಲಿ ಆಗುವ ಬದಲಾವಣೆ ಹೇಗೆ ಇರುತ್ತದೆ ಎಂದು ತಿಳಿಯೋಣ . ಶತ್ರುಗಳ ಕಾಟದಿಂದ ಮುಕ್ತಿಯನ್ನು ಹೊಂದಲು ಅವರಿಂದ ಆಗುವ ಕಷ್ಟ , ದುಃಖ , ಅಸೂಯೆಗಳಿಂದ ಪಾರಾಗಲು ಯಾರಿಗೂ ತಿಳಿಯದ ಹಾಗೆ ಈ ಎರಡು ವಸ್ತುಗಳನ್ನು ಮಣ್ಣಿನಲ್ಲಿ ಬಚ್ಚಿಡಬೇಕು . ತುಳಸಿ ಗಿಡಕ್ಕೆ ಈ ನೀರನ್ನು ಅರ್ಪಿಸಬೇಕು . ಬಿಳಿ ಕಾಗದದ ಮೇಲೆ ಈ ದೇವರ ಹೆಸರನ್ನು ಕಣ್ಣು ಕಪ್ಪಿನ ಸಹಾಯದಿಂದ ಬರೆದು ,
ಈ ವಿಧವಾಗಿ ಸಂಕಲ್ಪ ಮಾಡಿಕೊಳ್ಳಬೇಕು . ಇಲ್ಲಿ ತಿಳಿಸುವ ಈ ನಾಲ್ಕು ವಿಶೇಷವಾದ ಪರಿಹಾರಗಳು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ . ಶತ್ರುಗಳಿಂದ ಆಗುವ ಮಾಟ , ಮಂತ್ರ , ವಾಮಾಚಾರ , ಅಸೂಯೆ, ದ್ವೇಷ, ದುಷ್ಟ ಶಕ್ತಿಗಳಿಂದ ಆಗುವ ಸಮಸ್ಯೆಗಳು ಹಾಗೂ ಆ ಶಕ್ತಿಗಳ ಪ್ರಭಾವಗಳು ನಡೆಯದಂತೆ ಮಾಡುತ್ತದೆ. ಭಯಂಕರವಾದ ಶತ್ರು ಭಾದೆಗಳು ದೂರವಾಗಲು ತಾಂತ್ರಿಕ ಪರಿಹಾರಗಳನ್ನು ತಪ್ಪದೇ ಪಾಲಿಸಬೇಕು. ಅವುಗಳು : –
ಮೊದಲನೆಯದಾಗಿ 38 ಕಪ್ಪು ಉದ್ದಿನ ಕಾಳನ್ನು ತೆಗೆದುಕೊಳ್ಳಬೇಕು . 40 ಅಕ್ಕಿ ಕಾಳುಗಳನ್ನು ತೆಗೆದುಕೊಳ್ಳಬೇಕು. ಇವುಗಳನ್ನು ತೆಗೆದುಕೊಂಡ ನಿರ್ಜನ ಪ್ರದೇಶ ಅಥವಾ ಮನೆಯಿಂದ ದೂರ ಯಾರು ಓಡಾಡದೇ ಇರುವ ಜಾಗದಲ್ಲಿ ಹೋಗಿ , ಸ್ವಲ್ಪ ಮಣ್ಣನ್ನು ಹಗೆದು, ಚಿಕ್ಕ ಗುಂಡಿಯನ್ನು ತೊಡಬೇಕು . ಆ ಒಂದು ಗುಂಡಿಯ ಒಳಗೆ 38 ಉದ್ದಿನಕಾಳುಗಳು . 40 ಅಕ್ಕಿ ಕಾಳುಗಳನ್ನು ಹಾಕಿ ವಿಶೇಷವಾಗಿ ನಮಸ್ಕಾರ ಮಾಡಿಕೊಳ್ಳಬೇಕು. ನೀವು ಆ ಗುಂಡಿಗೆ ಕಾಳುಗಳನ್ನು ಹಾಕಬೇಕಾದರೆ , ಶತ್ರುಗಳ ಹೆಸರನ್ನು ಹೇಳಬೇಕು . ನಂತರ ಚಿಕ್ಕ ಗುಂಡಿಯನ್ನು ಮುಚ್ಚಿ ಅದರ ಮೇಲೆ ನಿಂಬೆ ಹಣ್ಣನ್ನು ಕೂಡ ಹೊಡೆಯಬೇಕು . ಈ ವಿಶೇಷ ತಾಂತ್ರಿಕ ತಂತ್ರವನ್ನು ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನವೇ ಮಾಡಿಕೊಳ್ಳಬೇಕು .
ಮನೆಯಿಂದ ಹೋಗಬೇಕಾದರೆ ಹಾಗೂ ಮನೆಗೆ ಬರಬೇಕಾದರೂ ಕೂಡ ಯಾರೊಂದಿಗೂ ಮಾತನಾಡಬಾರದು . ಈ ತಂತ್ರಗಳ ಪ್ರಭಾವದಿಂದ ಶತ್ರುಗಳ ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳುವುದಿಲ್ಲ . ಶತ್ರುಗಳು ಕೂಡ ನಿಮಗೆ ಮಿತ್ರರಾಗುತ್ತಾ ಹೋಗುತ್ತಾರೆ . ಅವರಿಂದ ಇಷ್ಟು ದಿನ ಆಗುತ್ತಿರುವ ಅನ್ಯಾಯ, ನೋವು, ದುಷ್ಟ ಶಕ್ತಿಗಳ ಪ್ರಭಾವ ನಿಮ್ಮ ಮೇಲೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ . ಹಾಗೆಯೇ ಶತ್ರುಗಳು ನಿಮ್ಮ ಹಿಂದೆ ಏನೋ ಮಾಡುತ್ತಿದ್ದಾರೆ, ನಮ್ಮ ಹಿಂದೆ ಪಿತೂರಿ ಮಾಡುತ್ತಿದ್ದಾರೆ , ಎಂದಾಗ ಕೂಡ ಈ ವಿಶೇಷ ಪರಿಹಾರವನ್ನು ನೀವು ಮಾಡಬಹುದು . ಗುಂಡಿಯಲ್ಲಿ ಅಕ್ಕಿ ಕಾಳು ಮತ್ತು ಉದ್ದಿನ ಕಾಳುಗಳನ್ನು ಹಾಕಬೇಕಾದರೆ , ಮರೆಯದೆ ಶತ್ರುಗಳ ಹೆಸರನ್ನು ಹೇಳಿಕೊಳ್ಳಬೇಕು .
ಹಾಗೆಯೇ ಎರಡನೇಯದಾಗಿ ಶತ್ರುಗಳಿಂದ ತೀರಾ ಜೀವನ ಹದಗೆಟ್ಟಿದೆ , ಅವರಿಂದ ಮಾನಸಿಕ ನೆಮ್ಮದಿಯೇ ಇಲ್ಲ , ಆರೋಗ್ಯದ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿದೆ ಎಂದರೆ , ಒಂದು ತಾಮ್ರದ ಚಂಬಿಗೆ ನೀರನ್ನು ಹಾಕಿ , ಕೆಂಪು ಚಂದನವನ್ನು ತಾಮ್ರದ ನೀರಿರುವ ಚಂಬಿಗೆ ಹಾಕಬೇಕು . ಹಾಕುವಾಗ ಶತ್ರುಗಳ ಹೆಸರನ್ನು ಹೇಳಿ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು . ಪ್ರತಿನಿತ್ಯ ಮಲಗುವಾಗ ದಿಂಬಿಗೆ ಸಮೀಪದಲ್ಲಿ ಇಟ್ಟುಕೊಂಡು ಮಲಗಬೇಕು . ಪ್ರತಿದಿನ ಬೆಳಿಗ್ಗೆ ಎದ್ದು ಆ ನೀರನ್ನು ತುಳಸಿ ಗಿಡಕ್ಕೆ ಹಾಕುತ್ತಾ ಬರಬೇಕು .ಇದನ್ನು ಮಾಡುವುದರಿಂದ ಕ್ರಮಕ್ರಮವಾಗಿ ಶತ್ರುಗಳ ಭಾದೆ ದೂರವಾಗುತ್ತದೆ . ಶತ್ರುಗಳಿಂದ ಶೀಘ್ರವಾಗಿ ಮುಕ್ತಿ ದೊರೆಯುತ್ತದೆ . ಈ ಒಂದು ತಂತ್ರವನ್ನು ನಿಮ್ಮ ಸಮಸ್ಯೆ ಮುಗಿಯುವವರೆಗೂ ಮಾಡುತ್ತ ಬರಬೇಕು .
ಹಾಗೆಯೇ ಮೂರನೆಯದಾಗಿ ಶತ್ರುಗಳು ಸಮೂಹವಾಗಿ ನಶಿಸಿ ಹೋಗಲು , ಮತ್ತು ಗುಂಪು ಗುಂಪಾಗಿ ಶತ್ರುಗಳು ನಶಿಸಿ ಹೋಗಲು ಬಿಳಿ ಕಾಗದದ ಮೇಲೆ ಈ ರೀತಿ ಬರೆದು ಒಂದು ತಂತ್ರವನ್ನು ಮಾಡಿಕೊಳ್ಳಬೇಕು . ಒಂದು ಬಿಳಿ ಕಾಗದದ ಮೇಲೆ ತ್ರಿಭುಜ ಆಕೃತಿಯನ್ನು ಬರೆದು ಕೊಳ್ಳಬೇಕು . ಆ ತ್ರಿಭುಜದ ಒಳಗಡೆ ಕಣ್ಣು ಕಪ್ಪನ್ನು ತೆಗೆದುಕೊಂಡು ,
“ಓಂ ಶನ್ವೇಶ್ಚರಾಯ ನಮಃ” ಎಂದು ಬರೆದು ಕೊಳ್ಳಬೇಕು. ಬರೆದ ಮಂತ್ರವು ತ್ರಿಭುಜದ ಒಳಗಡೆ ಇರಬೇಕು . ಈ ಒಂದು ಕಾಗದವನ್ನು ಮಡಚಿ ನಿಮ್ಮ ಬಳಿ 43 ದಿನಗಳವರೆಗೆ ಇಟ್ಟುಕೊಳ್ಳಬೇಕು . 44ನೇ ದಿನ ಈ ಒಂದು ಕಾಗದವನ್ನು ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು . ಕಾಗದದ ಮೇಲೆ ” ಓಂ ಶನ್ವೇಶ್ವರಾಯ ನಮಃ ” ಎಂದು ಕಣ್ಕಪ್ಪಿನ ಸಹಾಯದಿಂದ ಬರೆಯುವಾಗ ಶತ್ರುಗಳ ಹೆಸರನ್ನು ತಪ್ಪದೇ ಹೇಳಿಕೊಳ್ಳಬೇಕು . ವಿಶೇಷವಾಗಿ ಸಂಕಲ್ಪವನ್ನು ಮಾಡಿಕೊಳ್ಳಬೇಕು .
ಕೊನೆಯದಾಗಿ ಶನಿವಾರ ಮಧ್ಯಾಹ್ನದ ದಿನ ನಿಂಬೆ ಹಣ್ಣಿನಿಂದ ಮತ್ತೊಂದು ಕೆಲಸವನ್ನು ಮಾಡಬೇಕಾಗುತ್ತದೆ . ಶನಿವಾರ ಮಧ್ಯಾಹ್ನ 4 ರಸ್ತೆಗಳು ಸೇರುವ ಜಾಗಕ್ಕೆ , ಒಂದು ನಿಂಬೆಹಣ್ಣು, ಚಾಕು, ಕೇಸರಿ , ಅಥವಾ ಸಿಂಧೂರವನ್ನು ತೆಗೆದುಕೊಂಡು ಹೋಗಿರಬೇಕು . ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ನಿಂತು , ನಿಂಬೆ ಹಣ್ಣನ್ನು ನಾಲ್ಕು ಭಾಗವಾಗಿ ಕುಯ್ಯಬೇಕು . ಒಂದೊಂದು ನಿಂಬೆಹಣ್ಣಿನ ಹೋಳಿಗೂ ಕೇಸರಿಯ ಬಟ್ಟನ್ನು ಇಡಬೇಕು . ಶತ್ರುಗಳ ಹೆಸರನ್ನು
ಹೇಳುತ್ತಾ ಪೂರ್ವ, ಪಶ್ಚಿಮ , ಉತ್ತರ , ಮತ್ತು ದಕ್ಷಿಣ ಹೀಗೆ ನಾಲ್ಕು ದಿಕ್ಕಿಗೂ ಒಂದೊಂದು ನಿಂಬೆಹಣ್ಣಿನ ಹೋಳುಗಳನ್ನು ಎಸೆದು ಯಾರೊಂದಿಗೂ ಮಾತನಾಡದೆ ತಿರುಗಿ ನೋಡಿದೆ ಮನೆಗೆ ಕೈಕಾಲು ತೊಳೆದು ಪ್ರವೇಶವನ್ನು ಮಾಡಬೇಕು . ಈ ನಿಂಬೆ ತಂತ್ರದಿಂದ ನಿಮ್ಮ ಮೇಲೆ ಕತ್ತಿ ಮಸೆಯುವ ಹಾಗೆ ಅಸೂಯೆ , ದ್ವೇಷ ಮಸೆಯುವ ಶತ್ರುಗಳು ಶಾಂತಿ ಆಗುತ್ತಾರೆ . ಶತ್ರುಗಳು ನಿಮ್ಮ ಮೇಲೆ ಮಾಡಿಸುವಂತಹ ವಾಮಾಚಾರ , ಮಾಟ ಮಂತ್ರದ , ಪ್ರಯೋಗದ ಶಕ್ತಿಗಳು ಸಂಪೂರ್ಣವಾಗಿ ನಿಂತು ಹೋಗುತ್ತದೆ . ಆ ಶಕ್ತಿಗಳು ನಿಮ್ಮ ಮೇಲೆ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳಲಾಗಿದೆ .