ಲಕ್ಷ್ಮಿ ನಾರಾಯಣ ರಾಜಯೋಗ ರೂಪುಗೊಂಡಿದೆ. ಇದು ಕೆಲವೊಂದು ರಾಶಿಯವರಿಗೆ ಮಹಾಭಾಗ್ಯ ತರುತ್ತದೆ. ಈ ರಾಶಿಯವರಿಗೆ ಯಾವ ರಾಶಿಯವರಿಗೆ ಒಳಿತಾಗಲಿದೆ? ಎಂಬುದನ್ನು ತಿಳಿಸಿಕೊಡುತ್ತೇವೆ. ಲಕ್ಷ್ಮಿ ನಾರಾಯಣ ಯೋಗವು ಕೆಲವರ ಜೀವನದಲ್ಲಿ ಅಪಾರ ಸಂತೋಷ ಮತ್ತು ಅದೃಷ್ಟ ಮತ್ತು ಸಂಪತ್ತನ್ನು ತರುತ್ತದೆ. ಅದೃಷ್ಟವಂತರು ಈ ದಿನ ನಾರಾಯಣನ ಆಶೀರ್ವಾದವನ್ನು ಪಡೆಯುತ್ತಾರೆ. ಅಲ್ಲದೇ ಶುಭ ಯೋಗದೊಂದಿಗೆ ಭಜರಂಗ ಬಲಿ ಪೂಜೆ ಮಾಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಈ ಯೋಗದಿಂದ ಯಾವ ಐದು ರಾಶಿಯವರಿಗೆ ಅದೃಷ್ಟವಿದೆ ಆ ಅದೃಷ್ಟ ರಾಶಿಗಳು ಯಾವುವು ಎಂದರೆ
ಮಿಥುನ ರಾಶಿ: ಈ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗವು ಮಿಥುನ ರಾಶಿಯವರಿಗೆ ಶುಭ ಫಲಗಳನ್ನು ನೀಡುತ್ತದೆ. ಆದಾಯ ಹೆಚ್ಚಾಗುತ್ತದೆ. ಬಹಳ ದಿನಗಳ ನಿಮ್ಮ ಆಸೆ ನೆರವೇರುತ್ತದೆ. ಅದೃಷ್ಟದ ಬೆಂಬಲದಿಂದ ನೀವು ಅಂದುಕೊಂಡ ಕಾರ್ಯಗಳನ್ನು ಪೂರ್ಣಗೊಳಿಸಬಹುದು. ಅಧಿಕಾರಿ ವರ್ಗ ನಿಮಗೆ ಬೆಂಬಲವನ್ನು ನೀಡುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಯಾವುದೇ ವಿವಾದಾತ್ಮಕ ಸಮಸ್ಯೆಗಳು ಇದ್ದರೂ ಅದರಿಂದ ಮುಕ್ತರಾಗುತ್ತೀರಿ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸುತ್ತದೆ. ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ತೆರಳಿ ದರ್ಶನ ಮಾಡಿದರೆ ಶುಭಕರ.
ಕರ್ಕಾಟಕ ರಾಶಿ: ಈ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗವು ಬಹಳ ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಆಸೆಗಳು ಈಡೇರಲಿದೆ. ನಿಮ್ಮ ಕುಟುಂಬದಲ್ಲಿ ಸಂತೋಷ ನೆಲೆಸಿರುತ್ತದೆ. ಇದುವರೆಗೆ ಇದ್ದ ಒತ್ತಡಕ್ಕೆ ಪರಿಹಾರ ದೊರೆಯಲಿದೆ. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ದೊಡ್ಡ ಕಂಪನಿಯಿಂದ ಉದ್ಯೋಗದ ಅವಕಾಶ ಬರುತ್ತದೆ. ಆತ್ಮೀಯರ ಜೊತೆ ಇದ್ದ ಭಿನ್ನಾಭಿಪ್ರಾಯ ಮರೆಯಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ.
ತುಲಾ ರಾಶಿ: ಈ ರಾಶಿಯವರಿಗೆ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ವೈಯಕ್ತಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ವೃತ್ತಿ ರಂಗದಲ್ಲಿ ನಿಮಗೆ ಉತ್ತಮ ಅವಕಾಶಗಳು ದೊರೆಯುತ್ತದೆ. ಉದ್ಯೋಗದಲ್ಲಿ ಯಶಸ್ಸು ಕಾಣುತ್ತೀರಿ. ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ: ಈ ರಾಶಿಯವರು ಈ ಲಕ್ಷ್ಮಿ ನಾರಾಯಣ ಯೋಗದ ಸಮಯದಲ್ಲಿ ಒಳ್ಳೆಯ ಸಮಾಚಾರವನ್ನು ಕೇಳುವಿರಿ. ಹನುಮಂತನ ವಿಶೇಷ ಆಶೀರ್ವಾದವು ದೊರೆಯಲಿದೆ. ನೀವು ಪ್ರತಿಯೊಂದು ಸಮಸ್ಯೆಗೂ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಹೂಡಿಕೆಯಿಂದ ಲಾಭವಾಗಲಿದೆ. ವೃತ್ತಿ ಜೀವನದಲ್ಲಿ ಸುಧಾರಣೆಗೆ ಅವಕಾಶವಿದೆ ಮತ್ತು ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ.
ಕುಂಭ ರಾಶಿ: ಈ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗವು ಎಲ್ಲಾ ರೀತಿಯ ಅನುಕೂಲಗಳನ್ನು ನೀಡಲಿದೆ. ಹಳೆಯ ಸಮಸ್ಯೆಗಳು ಮರೆಯಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತೋಷ ಮನೆ ಮಾಡಲಿದೆ. ವ್ಯಾಪಾರ ಅಭಿವೃದ್ಧಿಯಾಗಲಿದೆ. ಕುಟುಂಬ ಸದಸ್ಯರ ನಡುವೆ ಪ್ರೀತಿ, ಗೌರವ ಹೆಚ್ಚಾಗುತ್ತದೆ.