ಗರುಡ ಪುರಾಣದ ಪ್ರಕಾರ ಮನುಷ್ಯನಿಗೆ ಸಾವು ಹತ್ತಿರ ಬಂದಾಗ ಅವನು ಈ ಐದು ಸೂಚನೆಗಳನ್ನು ಪಡೆಯುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಸಾವಿಗೆ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳಲು ಪ್ರಾರಂಭಿಸುತ್ತಾನೆ. ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆ. ಬೇಡವೆಂದರು ತಡೆಯಲಾರ ಇದರಿಂದ ಅವನ ಮನಸ್ಸು ಚಂಚಲವಾಗುತ್ತದೆ.
ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತನ್ನ ಮೂಗನ್ನು ನೋಡುವುದಕ್ಕೆ ಆಗುವುದಿಲ್ಲ. ಕೈಯಲ್ಲಿರುವ ರೇಖೆಗಳು ಕೂಡ ಆ ವ್ಯಕ್ತಿಗೆ ಕಾಣಿಸುವುದಿಲ್ಲ. ಕೈಯಲ್ಲಿರುವ ರೇಖೆಯು ವ್ಯಕ್ತಿಯ ಸಂಪೂರ್ಣವನ್ನು ತೋರಿಸುತ್ತದೆ ವ್ಯಕ್ತಿಯು ಸಾವಿನ ಸಮೀಪದಲ್ಲಿ ಇರುವಾಗ ಕೈಯಲ್ಲಿರುವ ರೇಖೆಯನ್ನು ಅಳಿಸಲಾಗುತ್ತದೆ ಹಾಗೂ ನೀರಿನಲ್ಲಿ ಮನುಷ್ಯನ ಬಿಂಬ ಕೂಡ ಕಾಣಲ್ಲ.
ಒಬ್ಬ ವ್ಯಕ್ತಿಯು ಸಾಯುವ ಸಂದರ್ಭದಲ್ಲಿ ಅವನು ನಿಗೂಢ ಬಾಗಿಲನ್ನು ನೋಡುತ್ತಾನೆ. ಕೆಲವರು ಜ್ವಾಲೆಯನ್ನು ನೋಡುತ್ತಾರೆ ಮತ್ತೆ ಕೆಲವರು ಪ್ರಕಾಶಮಾನವಾದ ಬೆಳಕನ್ನು ನೋಡುತ್ತಾರೆ. ಇದು ಅವರ ಸಾವು ಸಮೀಪಿಸುತ್ತದೆ ಎಂಬುದರ ಆ ಸಂಕೇತವಾಗಿದೆ.
ಒಬ್ಬ ವ್ಯಕ್ತಿಯು ಸಾವಿನ ಸಮೀಪದಲ್ಲಿದ್ದಾಗ ಅವನು ಯಮದೂತನನ್ನು ನೋಡುತ್ತಾನೆ. ನಕಾರಾತ್ಮಕ ಶಕ್ತಿಯುತನಿಗೆ ಬಂದಿದೆ ಎಂದು ವ್ಯಕ್ತಿಯು ಭಾವಿಸುತ್ತಾನೆ.
ಒಬ್ಬ ವ್ಯಕ್ತಿಯು ಸಾವಿಗೆ ಮೊದಲು ಅನೇಕ ವಿಚಿತ್ರ ಕನಸುಗಳನ್ನು ಕಾಣಲು ಪ್ರಾರಂಭಿಸುತ್ತಾನೆ. ಪೂರ್ವಜರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಅವರನ್ನು ಭೇಟಿಯಾಗುತ್ತಾರೆ. ಜೊತೆಗೆ ಬರುವಂತೆ ಕರೆಯುತ್ತಾರೆ ಅಂತೆ. ಇದಲ್ಲದೇ ಪೂರ್ವಜರು ಕನಸಿನಲ್ಲಿ ಅಳುವುದನ್ನು ನೋಡುವುದು ಸಹ ಸಾವಿನ ಸೂಚನೆಯಾಗಿದೆ.