ಶ್ರೀಚಕ್ರವನ್ನು ಮನೆಯಲ್ಲಿ ಇಟ್ಟುಕೊಂಡು ಪೂಜೆಯನ್ನ ಮಾಡಬಹುದಾ? ಮಾಡಬಾರದ? ಮನೆಯಲ್ಲಿ ಯಾರು ಈ ಶ್ರೀಚಕ್ರವನ್ನು ಪೂಜೆ ಮಾಡಬಹುದು? ಪೂಜಾ ವಿಧಾನವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಇತ್ತೀಚೆಗೆ ಶ್ರೀಚಕ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದು ಹೆಚ್ಚಾಗುತ್ತಿದೆ. ತುಂಬಾ ಮಡಿ ನಿಯಮಗಳಿಂದ ಶ್ರೀಚಕ್ರವನ್ನು ಪೂಜೆ ಮಾಡಬೇಕು. ಯಾರ ಮನೆಯಲ್ಲಿ ದೇವರ ಮನೆ ಪ್ರತ್ಯೇಕವಾಗಿ ಇರುತ್ತದೆಯೋ ಅಂತಹವರ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ ಮಾಡಬಹುದು.
ಶ್ರೀ ಚಕ್ರ ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದು, ಶುಕ್ರವಾರ, ಭಾನುವಾರ ಹುಣ್ಣಿಮೆಯ ದಿನಗಳಲ್ಲಿ ಅಧಿಕವಾದ ಫಲಗಳು ಸಿಗುತ್ತದೆ. ಯಾರ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ ಮಾಡುತ್ತಾರೋ ಅಂತಹವರ ಮನೆಯಲ್ಲಿ ಆದಿಶಕ್ತಿ ಪರಮೇಶ್ವರಿ ವಾಸವಿರುತ್ತಾಳೆ. ಅಂತಹ ಮನೆಗಳಲ್ಲಿ ದಾರಿದ್ರ್ಯ ತೊಲಗಿ ಶಾಂತಿನೆಲೆಸಿರುತ್ತದೆ. ಏಕೆಂದರೆ ದೇವಿಯು ಶಾಂತಿ ಸ್ವರೂಪಳಾಗಿ ಶ್ರೀಚಕ್ರದಲ್ಲಿ ನೆಲೆಸಿರುತ್ತಾಳೆ. ಯಾರ ಮನೆಯಲ್ಲಿ ಶ್ರೀಚಕ್ರದ ಪೂಜೆ ನಡೆಯುತ್ತದೆಯೋ ಅಂತಹವರ ಮನೆಯಲ್ಲಿ ಸಂಪತ್ತಿಗೆ ಕೊರತೆ ಇರುವುದಿಲ್ಲ.
ಪ್ರತೀ ಶುಕ್ರವಾರ ಲಲಿತಾ ಅಷ್ಟೋತ್ತರ ಸಹಿತ ಕುಂಕಮ ಅರ್ಚನೆ ಮಾಡಿದರೆ ಇಷ್ಟಾರ್ಥಗಳು ಬಹಳ ಬೇಗ ಈಡೇರುತ್ತದೆ. ಶ್ರೀಚಕ್ರದ ಆರಾಧನೆಯನ್ನು ಮಾಡುವವರನ್ನು ದುಷ್ಟಶಕ್ತಿಗಳು, ಮಾಟಮಂತ್ರಗಳಿಂದ ತೊಂದರೆ ಉಂಟಾಗುವುದಿಲ್ಲ. ಕೆಟ್ಟ ದೃಷ್ಟಿ ತಾಕುವುದಿಲ್ಲ ಮತ್ತು ಶತೃಗಳ ಬಾಧೆಗಳು ಅವರನ್ನು ಏನು ಮಾಡಲು ಸಾಧ್ಯವಾಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಶ್ರೀಚಕ್ರವು ಬಹಳ ಒಳ್ಳೆಯದು. ಶ್ರೀಚಕ್ರವನ್ನು ಖರೀದಿ ಮಾಡುವಾಗ ಶಾಸ್ತ್ರಜ್ಞರಿಗೆ ತೋರಿಸಿ ಮಂಡಲ
ಮತ್ತು ಮೂಲೆಗಳು ಸರಿಯಾಗಿ ಇದೆಯಾ ಮತ್ತು ಸ್ಪಷ್ಟತೆಯಿಂದ ಕೂಡಿದಿಯಾ ಎಂದು ನೋಡಿ ಕೊಂಡುಕೊಳ್ಳಬೇಕು. ಶ್ರೀಚಕ್ರದ ಸುತ್ತ 8 ದಳದ ಕಮಲವಿರಬೇಕು. ಹೊರಗಡೆ 16 ದಳದ ಕಮಲವಿರಬೇಕು. ಹೊಸದಾಗಿ ತಂದ ಶ್ರೀಚಕ್ರವನ್ನು ಯಾವುದಾದರೂ ದೇವಿ ದೇವಸ್ಥಾನದಲ್ಲಿ ಅಭಿಷೇಕವನ್ನು ಮಾಡಿಸಿ ಆ ನಂತರ ಮನೆಯಲ್ಲಿಟ್ಟುಕೊಂಡು ಪೂಜೆ ಮಾಡಬಹುದು. ಮಂಡಲದ ಮಧ್ಯಭಾಗದಲ್ಲಿ ಶ್ರೀ ಎಂದು ಬರೆದಿರುತ್ತದೆ. ಶ್ರೀ ಎಂದರೆ ಸಾಕ್ಷಾತ್ ದುರ್ಗಾಪರಮೇಶ್ವರಿ ಒಂಭತ್ತು ತ್ರಿಕೋನದ ಮಧ್ಯೆ ಬಿಂದುವಿರುತ್ತದೆ. ನವಶಕ್ತಿಯಾದ ದೇವಿ ಅದರ ಮಧ್ಯದಲ್ಲಿ ವಾಸ ಮಾಡುತ್ತಾಳೆ.
ಈ ಚಕ್ರದ ಮೇಲ್ಮುಖ ಅಗ್ನಿತತ್ತ್ವವನ್ನು ಹೊಂದಿರುತ್ತದೆ. ಅದರ ಸುತ್ತಲೂ ಇರುವ ವೃತ್ತ ವಾಯುತತ್ತ್ವವನ್ನು ಹೊಂದಿದೆ. ಮಧ್ಯದ ಬಿಂದು ಜಲತತ್ತ್ವ ಹಾಗೂ ಅದರ ತಳ ಭೂ ತತ್ತ್ವವನ್ನು ಹೊಂದಿದೆ. ಸ್ಫಟಿಕದ ಶ್ರೀಚಕ್ರ ತುಂಬಾ ಶ್ರೇಷ್ಠ. ಶ್ರೀ ಶಂಕರಾಚಾರ್ಯರು ಮೊದಲು ಶ್ರೀಚಕ್ರದ ಆರಾಧನೆಯನ್ನು ಮಾಡಿದರು. ಯಾರ ಮನೆಯಲ್ಲಿ ಶ್ರೀಚಕ್ರವನ್ನು ಆರಾಧನೆಯನ್ನು ಮಾಡುತ್ತಿರುತ್ತಾರೋ ಅಂತಹವರ ಮನೆಯ ಸದಸ್ಯರು ಒಳ್ಳೆಯ ನಡೆ ನುಡಿ, ಸಂಪ್ರದಾಯಸ್ಥರಾಗಿರುತ್ತಾರೆ.
ಸದಾ ಸಂತೋಷ, ನೆಮ್ಮದಿ, ಆರೋಗ್ಯವಂತರಾಗಿರುತ್ತಾರೆ. ಕೀರ್ತೀ ಖ್ಯಾತಿಗಳು ಆ ಮನೆಯನ್ನ ಹುಡುಕಿಕೊಂಡು ಬರುತ್ತದೆ. ಶ್ರೀಚಕ್ರವು ತ್ರಿಶಕ್ತಿಗಳ ಸ್ವರೂಪವೆಂದು ಹೇಳುತ್ತಾರೆ. ಶ್ರೀಚಕ್ರ ದೇವತೆಯು ಸತ್ಯ ಸ್ವರೂಪಳು, ಸಕಲ ಆಧಾರರೂಪಳು, ಸಮಸ್ತ ಅಪೇಕ್ಷೆಗಳನ್ನು ಜಗತ್ತಿಗೆ ನೀಡುವವಳು. ಮಹಾಲಕ್ಷ್ಮಿ, ಮಹಾಕಾಳಿ ಮತ್ತು ಮಹಾಸರಸ್ವತಿ ಸ್ವರೂಪಳು, ಶಿವಶಕ್ತಿಯು ಆಗಿರುತ್ತಾಳೆ. ಶ್ರೀ ಎನ್ನುವ ಪದಕ್ಕೆ ಅದ್ಭುತವಾದ ಶಕ್ತಿ ಇದೆ. ನಾವು ಏನೇ ಬರೆಯಬೇಕಾದರೂ ಶ್ರೀ ಎಂದು ಬರೆದು ಪ್ರಾರಂಭ ಮಾಡುತ್ತೇನೆ.
ಶ್ರೀ ಎಂದರೆ ಶ್ರೀಹರಿಯ ಸ್ವರೂಪ. ಶಾಂತಿ, ಐಶ್ವರ್ಯ, ಸುಖ, ನೆಮ್ಮದಿ, ಸಂಪತ್ತನ್ನು ಕೊಡುವಂತದ್ದು ದೈವಿಕ ಪುರುಷರಿಗೆ ವೇದಾದಿ ಜ್ಞಾನವನ್ನು ಕೊಟ್ಟು ಪುತ್ರ ಪೌತ್ರಾದಿ ಸಂಮೃದ್ಧಿಯನ್ನು ಕೊಡುವವಳೇ ಶ್ರೀ ಎಂಬ ಅರ್ಥವಿದೆ. ಚಕ್ರವೆಂದರೆ ಲೋಕವನ್ನು ದುಷ್ಟರಿಂದ ರಕ್ಷಿಸಿ ಶಿಷ್ಟರನ್ನು ಪಾಲನೆ ಮಾಡುತ್ತಾ ಭವ ಎಂಬ ಸಂಸಾರದಲ್ಲಿ ಚಕ್ರದಂತೆ ಗುಡುಗುತ್ತಾ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಿ ಶ್ರೀಹರಿಯ ಸೇವೆಗೆ ಪಾದಗಳಿಗೆ ತಲುಪಿಸುವುದು ಎಂದರ್ಥ. ದುರ್ಗಾದೇವಿಯು ಶಾಂತ ಸ್ವರೂಪವಾಗಿ ವಾಸ ಮಾಡುತ್ತಿರುತ್ತಾಳೆ ಹಾಗಾಗಿ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ ಮಾಡಿದರೆ ಆ ಮನೆಯಲ್ಲಿ ಶಾಂತಿ, ಸಂಮೃದ್ದಿ ಇರುತ್ತದೆ.
ಶ್ರೀಚಕ್ರಕ್ಕೆ ಕುಂಕುಮಾರ್ಚಯನೆಯನ್ನು ಮಾಡಿ ಆ ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಒಳಿತಾಗುತ್ತದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನ ಪಂಚಾಮೃತ ಅಭಿಷೇಕವನ್ನು ಮಾಡಿ ಆ ನಂತರ ಕುಂಕುಮಾರ್ಚನೆಯನ್ನು ಮಾಡಿದರೆ ಒಳ್ಳೆಯ ಫಲಗಳು ಸಿಗುತ್ತದೆ. ನಾನ್ ವೆಜ್ ತಿನ್ನುವವರು ಶ್ರೀಚಕ್ರವನ್ನು ಪೂಜೆ ಮಾಡಿದ ದಿನ ಮಾಂಸಾಹಾರ ಸೇವನೆ ನಿಷೇಧವಾಗಿದೆ. ಶ್ರೀ ಚಕ್ರವನ್ನು ಪೂಜೆ ಮಾಡುವಾಗ ಈ ಚಿಕ್ಕ ಮಂತ್ರವನ್ನು ಹೇಳಿಕೊಂಡು ಪೂಜೆ ಮಾಡಿ ಅದು ಹೀಗಿದೆ ಶ್ರೀಂ ಶ್ರೀಯೇ ನಮಃ . ಶ್ರೀ ಚಕ್ರದ ಅಷ್ಟೋತ್ತರವನ್ನು ಪಠಣೆ ಮಾಡಲು ಕಷ್ಟವಾದವರು ಈ ಚಿಕ್ಕ ಮಂತ್ರವನ್ನು 108 ಸಲ ಪೂಜೆಯ ಸಮಯದಲ್ಲಿ ಹೇಳಿಕೊಳ್ಳಬಹುದು.