ತಿಳಿಯಿರಿ ನಿಮ್ಮ ಹೆಸರಿನ ರಾಶಿ ಯಾವುದು ಅಂತ

ನಾವು ಈ ಲೇಖನದಲ್ಲಿ ನಿಮ್ಮ ಹೆಸರಿನ ರಾಶಿ ಯಾವುದು ಎಂದು ತಿಳಿಯೋಣ . ಕೇವಲ ಒಂದು ನಿಮಿಷದಲ್ಲಿ ನಿಮ್ಮ ಹೆಸರಿನ ಸರಿಯಾದ ರಾಶಿ ನಕ್ಷತ್ರದ ಬಗ್ಗೆ ತಿಳಿದುಕೊಳ್ಳಬಹುದು . ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಸರಿನ ಮೊದಲ ಅಕ್ಷರಕ್ಕೆ ತುಂಬಾ ವಿಶೇಷವಾದ ಮಹತ್ವವನ್ನು ಕೊಟ್ಟಿದ್ದಾರೆ . ವ್ಯಕ್ತಿ ಜನ್ಮ ಪಡೆದ ಸಮಯದಲ್ಲಿ ಚಂದ್ರನು ಯಾವ ರಾಶಿಯಲ್ಲಿ ಇರುತ್ತಾನೋ , ಅದೇ ರಾಶಿಯ ಅನುಸಾರವಾಗಿ ಹೆಸರಿನ ಮೊದಲ ಅಕ್ಷರ ನಿರ್ಧಾರ ಗೊಳ್ಳುತ್ತದೆ . ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದ ಅವರ ರಾಶಿ ಮತ್ತು ನಕ್ಷತ್ರದ ಬಗ್ಗೆ ತಿಳಿಯಬಹುದು . ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ 12 ರಾಶಿಗಳು ಮತ್ತು 27 ನಕ್ಷತ್ರಗಳು ಇರುತ್ತವೆ .

ಪ್ರತಿಯೊಂದು ರಾಶಿಯಲ್ಲಿ ಎರಡು ಅಥವಾ ಮೂರು ನಕ್ಷತ್ರಗಳು ಇರುತ್ತವೆ . ಪ್ರತಿಯೊಂದು ನಕ್ಷತ್ರಗಳಲ್ಲಿ ನಾಲ್ಕು ಚರಣಗಳು ಇರುತ್ತವೆ , ಪ್ರತಿಯೊಂದು ಚರಣಗಳಲ್ಲಿ ನಾಲ್ಕು ಅಕ್ಷರಗಳು ಇರುತ್ತವೆ . ಜನ್ಮ ಸಮಯದಲ್ಲಿ ಯಾವ ಯಾವ ನಕ್ಷತ್ರ ಅಥವಾ ಯಾವ ರಾಶಿಯಲ್ಲಿ ಚಂದ್ರನು ಇರುತ್ತಾನೋ , ಅದರ ಪ್ರಕಾರ ಜನನವಾದ ವ್ಯಕ್ತಿಯ ಹೆಸರನ್ನು ಇಡಲಾಗುತ್ತದೆ . ನಿಮ್ಮ ಹೆಸರಿನ ಅನುಸಾರವಾಗಿ ನಿಮ್ಮ ರಾಶಿ ನಕ್ಷತ್ರ ಮತ್ತು ರಾಶಿ ಸ್ವರೂಪದ ಬಗ್ಗೆ ತಿಳಿಸಲಾಗಿದೆ . ಎಲ್ಲಕ್ಕಿಂತ ಮೊದಲು 12 ರಾಶಿಯ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ . ಈ 12 ರಾಶಿಗಳು ಈ ಪ್ರಕಾರದಲ್ಲಿ ಇರುತ್ತದೆ . ಮೊದಲನೇ ರಾಶಿ ಮೇಷ ರಾಶಿ ,

ವೃಷಭ ರಾಶಿ , ಮಿಥುನ ರಾಶಿ , ಕರ್ಕಾಟಕ ರಾಶಿ, ಸಿಂಹ ರಾಶಿ , ಕನ್ಯಾ ರಾಶಿ, ತುಲಾ ರಾಶಿ , ವೃಶ್ಚಿಕ ರಾಶಿ, ಧನಸ್ಸು ರಾಶಿ, ಮಕರ ರಾಶಿ , ಕುಂಭ ರಾಶಿ , ಮತ್ತು ಮೀನ ರಾಶಿ . ಈಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಇರುವ 27 ನಕ್ಷತ್ರಗಳು ಯಾವುದು ಎಂದು ತಿಳಿಯೋಣ . ಈ ನಕ್ಷತ್ರಗಳು ಈ ಪ್ರಕಾರದಲ್ಲಿ ಇರುತ್ತದೆ . ಅಶ್ವಿನಿ , ಭರಣಿ , ಕೃತಿಕಾ , ರೋಹಿಣಿ , ಮೃಗಶಿರ , ಆರಿದ್ರ , ಪುನರ್ವಸು , ಪುಷ್ಯ , ಆಶ್ಲೇಷ , ಮಾಘ , ಪೂರ್ವ ಪಾಲ್ಗುಣಿ , ಉತ್ತರ ಪಾಲ್ಗುಣಿ , ಹಸ್ತ, ಚಿತ್ತ , ಸ್ವಾತಿ , ವಿಶಾಖ , ಅನುರಾಧ , ಜೇಷ್ಠ , ಮೂಲ , ಪೂರ್ವಾಷಾಡ , ಉತ್ತರಾಷಾಡ , ಶ್ರವಣ , ಧನಿಷ್ಠ , ಶತಭಿಷ , ಪೂರ್ವಭಾದ್ರಪದ , ಉತ್ತರಭಾದ್ರಪದ , ರೇವತಿ ಮತ್ತು ಅಭಿಜಿತ ನಕ್ಷತ್ರ .

ಮೊದಲು ಮೇಷ ರಾಶಿಯ ಬಗ್ಗೆ ತಿಳಿಯೋಣ . ಮೇಷ ರಾಶಿಯಲ್ಲಿ ಅಶ್ವಿನಿ , ಭರಣಿ, ಕೃತಿಕಾ ನಕ್ಷತ್ರಗಳು ಇರುತ್ತದೆ . ಒಂದು ವೇಳೆ ನಿಮ್ಮ ಹೆಸರಿನ ಮೊದಲ ಅಕ್ಷರ ಚು , ಚೆ , ಚೋ , ಲಾ , ಲಿ , ಲು , ಲೆ , ಲೊ , ಎ ಅಕ್ಷರದಿಂದ ಶುರುವಾದರೆ , ನಿಮ್ಮ ರಾಶಿ ಮೇಷ ರಾಶಿ ಆಗಿರುತ್ತದೆ . ಮೇಷ ರಾಶಿಯ ಸ್ವರೂಪ ಟಗರಿನ ರೀತಿ ಇರುತ್ತದೆ . ಮೇಷ ರಾಶಿಯ ಸ್ವಾಮಿ ಮಂಗಳ ಗ್ರಹ ಎಂದು ತಿಳಿಯಬಹುದು .

ಇನ್ನೂ ವೃಷಭ ರಾಶಿಯ ಬಗ್ಗೆ ತಿಳಿದುಕೊಳ್ಳೋಣ . ವೃಷಭ ರಾಶಿಯಲ್ಲಿ ಕೃತಿಕಾ , ರೋಹಿಣಿ , ಮತ್ತು ಮೃಗಶಿರ ನಕ್ಷತ್ರಗಳು ಇರುತ್ತದೆ . ಒಂದು ವೇಳೆ ನಿಮ್ಮ ಹೆಸರಿನ ಮೊದಲ ಅಕ್ಷರ ee ,00 , a , Va , ve , vu , Ve , wo, ಬಂದರೆ ನಿಮ್ಮ ರಾಶಿಯು ವೃಷಭ ರಾಶಿ ಆಗುತ್ತದೆ .ವೃಷಭ ರಾಶಿಯ ಸ್ವರೂಪವು ಕೋಣ ಆಗಿದೆ . ಈ ರಾಶಿಯ ಸ್ವಾಮಿ ಶುಕ್ರ ಆಗಿರುತ್ತದೆ .

ಇನ್ನು ಮಿಥುನ ರಾಶಿಯ ಬಗ್ಗೆ ತಿಳಿದುಕೊಳ್ಳೋಣ . ಮಿಥುನ ರಾಶಿಯಲ್ಲಿ ಮೃಗಶಿರ, ಆರಿದ್ರ ಮತ್ತು ಪುನರ್ವಸು ನಕ್ಷತ್ರಗಳು ಬರುತ್ತವೆ . ಒಂದು ವೇಳೆ ನಿಮ್ಮ ಹೆಸರಿನ ಮೊದಲ ಅಕ್ಷರ ಕ , ಕಿ , ಕು , ಘ , oಗ್, ಛ್ , ಕೆ, ಕೋ , ಹ, ಇಂದ ಶುರುವಾದರೆ ನಿಮ್ಮ ರಾಶಿ ಮಿಥುನ ರಾಶಿ ಆಗುತ್ತದೆ . ಇಲ್ಲಿ ಮಿಥುನ ರಾಶಿಯ ಸ್ವರೂಪವೂ ಆಲಿಂಗನ ಭದ್ರ ಆಗಿದೆ . ಇಲ್ಲಿ ರಾಶಿಯ ಸ್ವಾಮಿಯು ಬುಧ ಗ್ರಹ ಆಗಿದೆ .

ಇನ್ನು ಕರ್ಕಾಟಕ ರಾಶಿಯ ಬಗ್ಗೆ ತಿಳಿದುಕೊಳ್ಳೋಣ . ಇಲ್ಲಿ ಕರ್ಕಾಟಕ ರಾಶಿ ನಕ್ಷತ್ರಗಳು ಪುನರ್ವಸು , ಪುಷ್ಯ ಮತ್ತು ಆಶ್ಲೇಷ ನಕ್ಷತ್ರಗಳು ಆಗಿರುತ್ತದೆ . ನಿಮ್ಮ ಹೆಸರಿನ ಮೊದಲ ಅಕ್ಷರ , ಹಾ , ಹೀ , ಹೂ ,ಹೆ ಹೋ , ದೇ, ಡು, ಡಿ ಈ ಅಕ್ಷರಗಳಿಂದ ನಿಮ್ಮ ಹೆಸರು ಶುರುವಾದರೆ , ನಿಮ್ಮ ರಾಶಿ ಕರ್ಕಾಟಕ ರಾಶಿ ಆಗಿರುತ್ತದೆ . ಕರ್ಕಾಟಕ ರಾಶಿಯ ಸ್ವರೂಪವು ಏಡಿ ಆಗಿರುತ್ತದೆ . ರಾಶಿಯ ಸ್ವಾಮಿ ಚಂದ್ರ ಆಗಿದೆ .

ಇನ್ನು ಸಿಂಹ ರಾಶಿಯ ಬಗ್ಗೆ ತಿಳಿದುಕೊಳ್ಳೋಣ . ಸಿಂಹ ರಾಶಿಯಲ್ಲಿ ಮಖಾ , ಪೂರ್ವ ಪಾಲ್ಗುಣಿ , ಉತ್ತರ ಪಾಲ್ಗುಣಿ ನಕ್ಷತ್ರಗಳು ಬರುತ್ತವೆ . ಒಂದು ವೇಳೆ ಯಾವುದಾದರೂ ವ್ಯಕ್ತಿಯ ಮೊದಲ ಅಕ್ಷರ , ಮೀ , ಎಂ , ಮೂ , ಮೆ , ಮೋ , ಟಿ , ಟ , ಟು , ಟೆ ಈ ಅಕ್ಷರಗಳಿಂದ ಶುರುವಾದರೆ ಆ ವ್ಯಕ್ತಿಯ ರಾಶಿ ಸಿಂಹ ರಾಶಿ ಆಗುತ್ತದೆ . ಸಿಂಹ ರಾಶಿಯ ಸ್ವರೂಪವು ಸಿಂಹದ ರೀತಿ ಇರುತ್ತದೆ . ಇಲ್ಲಿ ರಾಶಿಯ ಸ್ವಾಮಿಯು ಸೂರ್ಯ ಆಗಿರುತ್ತದೆ .

ಇನ್ನು ಕನ್ಯಾ ರಾಶಿಯ ಬಗ್ಗೆ ತಿಳಿದುಕೊಳ್ಳೋಣ . ಕನ್ಯಾ ರಾಶಿಯಲ್ಲಿ ಉತ್ತರ ಪಾಲ್ಗುಣಿ , ಹಸ್ತ ಮತ್ತು ಚಿತ್ತ ನಕ್ಷತ್ರಗಳು ಬರುತ್ತದೆ .ಒಂದು ವೇಳೆ ನಿಮ್ಮ ಹೆಸರಿನ ಮೊದಲ ಅಕ್ಷರ , ಧೋ , ಪ, ಪೈ , ಪೂ , ಶ, ನ , ತಾ , ಪೆ, ಪೋ ಅಕ್ಷರಗಳು ಬಂದರೆ ನಿಮ್ಮ ರಾಶಿ ಕನ್ಯಾ ರಾಶಿ ಆಗುತ್ತದೆ . ಕನ್ಯಾ ರಾಶಿಯ ಸ್ವರೂಪವು ಕನ್ಯೆ ಆಗಿದೆ . ರಾಶಿಯ ಸ್ವಾಮಿ ಬುಧ ಆಗಿರುತ್ತದೆ .

ಇನ್ನು ತುಲಾ ರಾಶಿಯ ಬಗ್ಗೆ ತಿಳಿದುಕೊಳ್ಳೋಣ . ಇಲ್ಲಿ ಚಿತ್ತ, ಸ್ವಾತಿ, ಮತ್ತು ವಿಶಾಖ ನಕ್ಷತ್ರಗಳು ಬರುತ್ತವೆ . ಒಂದು ವೇಳೆ ನಿಮ್ಮ ಹೆಸರಿನ ಮೊದಲ ಅಕ್ಷರ , ರಾ , ರಿ , ರು , ರೆ , ರೋ , ತಾ , ತಿ , ತು ಒಂದು ವೇಳೆ ಈ ಅಕ್ಷರಗಳಲ್ಲಿ ನಿಮ್ಮ ಹೆಸರುಗಳು ಬಂದರೆ ತುಲಾ ರಾಶಿ ಆಗಿರುತ್ತದೆ . ತುಲಾ ರಾಶಿಯ ಸ್ವರೂಪವು ತಕ್ಕಡಿ ಆಗಿರುತ್ತದೆ . ರಾಶಿಯ ಸ್ವಾಮಿ ಶುಕ್ರ ಆಗಿರುತ್ತದೆ .

ಇನ್ನು ವೃಶ್ಚಿಕ ರಾಶಿಯ ಬಗ್ಗೆ ತಿಳಿದುಕೊಳ್ಳೋಣ . ವೃಶ್ಚಿಕ ರಾಶಿಯಲ್ಲಿ ವಿಶಾಖ , ಅನುರಾಧ, ಮತ್ತು ಜೇಷ್ಠ ನಕ್ಷತ್ರಗಳು ಬರುತ್ತವೆ. ಒಂದು ವೇಳೆ ನಿಮ್ಮ ಹೆಸರಿನ ಮೊದಲ ಅಕ್ಷರ , ತೋ , ನಾ , ನಿ , ನು , ನೆ , ನೋ , ಯಾ , ಯಿ , ಯು ಅಕ್ಷರಗಳಿಂದ ಶುರುವಾದರೆ ಅದು ವೃಶ್ಚಿಕ ರಾಶಿ ಆಗಿರುತ್ತದೆ . ವೃಶ್ಚಿಕ ರಾಶಿಯ ಸ್ವರೂಪವು ಚೇಳು ಆಗಿರುತ್ತದೆ . ರಾಶಿಯ ಸ್ವಾಮಿ ಮಂಗಳ ಆಗಿರುತ್ತದೆ .

ಇನ್ನು ಧನಸ್ಸು ರಾಶಿಯ ಬಗ್ಗೆ ತಿಳಿದುಕೊಳ್ಳೋಣ . ಇಲ್ಲಿ ಮೂಲ, ಪೂರ್ವಾಷಾಡ , ಮತ್ತು ಉತ್ತರಾಷಾಡ ನಕ್ಷತ್ರಗಳು ಬರುತ್ತವೆ . ಒಂದು ವೇಳೆ ನಿಮ್ಮ ಹೆಸರಿನ ಮೊದಲ ಅಕ್ಷರ , ಯೇ , ಯೋ , ಭಾ , ಭೀ , ಭೂ , ಧ , ಫ , ಧ , ಭೇ ಅಕ್ಷರಗಳು ಬಂದರೆ ನಿಮ್ಮ ರಾಶಿ ಧನಸ್ಸು ರಾಶಿ ಆಗಿರುತ್ತದೆ . ಇಲ್ಲಿ ನಿಮ್ಮ ರಾಶಿಯ ಸ್ವರೂಪವು ಧನಸ್ಸು ಆಗಿರುತ್ತದೆ . ರಾಶಿಯ ಸ್ವಾಮಿ ಬೃಹಸ್ಪತಿ ಅಥವಾ ಗುರು ಗ್ರಹ ಆಗಿದೆ .

ಇನ್ನು ಮಕರ ರಾಶಿಯ ಬಗ್ಗೆ ತಿಳಿದುಕೊಳ್ಳೋಣ . ಇಲ್ಲಿ ಉತ್ತರಾಷಾಢ , ಶ್ರವಣ ಮತ್ತು ಧನಿಷ್ಠ ನಕ್ಷತ್ರಗಳು ಬರುತ್ತವೆ . ಒಂದು ವೇಳೆ ನಿಮ್ಮ ಹೆಸರಿನ ಮೊದಲ ಅಕ್ಷರ , ಭೋ , ಜಾ , ಜಿ , ಖಿ , ಖು , ಖೇ , ಖೋ , ಗ , ಈ ಅಕ್ಷರಗಳಿಂದ ಶುರುವಾದರೆ ಅದು ಮಕರ ರಾಶಿ ಆಗಿರುತ್ತದೆ . ಮಕರ ರಾಶಿಯ ರಾಶಿ ಸ್ವರೂಪವು ಮೊಸಳೆ ಆಗಿರುತ್ತದೆ . ರಾಶಿಯ ಸ್ವಾಮಿ ಶನಿ ಆಗಿದೆ .

ಇನ್ನೂ ಕುಂಭ ರಾಶಿಯ ಬಗ್ಗೆ ತಿಳಿದುಕೊಳ್ಳೋಣ . ಈ ರಾಶಿಯಲ್ಲಿ ಧನಿಷ್ಠ , ಶತಭಿಷ ಮತ್ತು ಪೂರ್ವಭಾದ್ರಪದ ನಕ್ಷತ್ರ ಇರುತ್ತದೆ .ಯಾವುದಾದರೂ ವ್ಯಕ್ತಿಯ ಹೆಸರಿನ ಮೊದಲ ಅಕ್ಷರ
ಗು, ಗೆ , ಗೋ , ಸ , ಸಿ , ಸೆ , ಸು ಸೋ , ಡಾ ಈ ಅಕ್ಷರಗಳು ಬಂದರೆ ಕುಂಭ ರಾಶಿ ಆಗಿರುತ್ತದೆ . ಇವರ ರಾಶಿಯ ಸ್ವರೂಪ ಕುಂಭದ ರೀತಿ ಇರುತ್ತದೆ . ರಾಶಿಯ ಸ್ವಾಮಿ ಶನಿ ಆಗಿರುತ್ತಾರೆ .

ಇನ್ನೂ ಮೀನ ರಾಶಿಯ ಬಗ್ಗೆ ತಿಳಿದುಕೊಳ್ಳೋಣ . ಈ ರಾಶಿಯಲ್ಲಿ ಪೂರ್ವಭಾದ್ರಪದ , ಉತ್ತರಭಾದ್ರಪದ ಮತ್ತು ರೇವತಿ ನಕ್ಷತ್ರಗಳು ಬರುತ್ತವೆ .ಒಂದು ವೇಳೆ ನಿಮ್ಮ ಹೆಸರಿನ ಮೊದಲ ಅಕ್ಷರ ಡಿ , ಡು, ಠ , ಝೂ , ದೇ , ಎ , ಡೊ , ಚಾ , ಚಿ ಈ ಅಕ್ಷರಗಳು ಬಂದರೆ ನಿಮ್ಮ ರಾಶಿ ಮೀನ ರಾಶಿ ಆಗುತ್ತದೆ . ರಾಶಿಯ ಸ್ವರೂಪ ಮೀನಿನ ರೀತಿ ಇರುತ್ತದೆ . ರಾಶಿಯ ಸ್ವಾಮಿ ಗುರು ಗ್ರಹ ಆಗಿರುತ್ತದೆ .

Leave a Comment