ಲಲಿತಾದೇವಿಯ ಪವರ್ ಫುಲ್ ಮಂತ್ರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕೆಲವರಿಗೆ ಲಲಿತಾದೇವಿಯ ಸಹಸ್ರಾನಾಮವನ್ನು ಹೇಳುವುದಕ್ಕೆ ಬರುವುದಿಲ್ಲ. ಹಾಗೆಯೇ ಲಲಿತಾದೇವಿಯ ಅಷ್ಟೋತ್ತರವು ಓದಲು ಕಷ್ಟಕರವಾಗಿರುತ್ತದೆ. ಪ್ರತೀ ಶುಕ್ರವಾರ ಲಲಿತಾದೇವಿಯ ಸಹಸ್ರನಾಮವನ್ನು ಪಠಣೆ ಮಾಡುವುದು ಮತ್ತು ಕೇಳಿಸಿಕೊಳ್ಳುವುದು ಒಳ್ಳೆಯ ಪಾಸಿಟಿವಿಟಿಯನ್ನು ತಂದುಕೊಡುತ್ತದೆ. ನಮ್ಮ ಮನೆ ಮತ್ತು ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿ ಉಂಟಾಗುವುದರ ಜೊತೆಗೆ ಧನಾತ್ಮಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಯಾರಿಗೆ ಲಲಿತಾದೇವಿಯ ಸಹಸ್ರಾನಾಮವನ್ನು ಪಠಣೆ ಮಾಡಲು ಬರುವುದಿಲ್ಲವೋ ಅಂತಹವರು ಲಲಿತಾದೇವಿಯ
ಈ ಒಂದು ಲಲಿತಾದೇವಿಯ ಪವರ್ ಫುಲ್ ಮಂತ್ರವನ್ನು ಪ್ರತೀ ಶುಕ್ರವಾರ ಮತ್ತು ಅಮಾವಾಸ್ಯೆಯ ದಿನ ಈ ಮಂತ್ರವನ್ನು ಪಠಣೆ ಮಾಡುವುದರಿಂದ ಅದ್ಭುತವಾದ ಫಲಗಳು ಸಿಗುತ್ತದೆ. ಈ ಲೇಖನದಲ್ಲಿ ಎರಡು ಮಂತ್ರವನ್ನು ತಿಳಿಸಲಾಗಿದೆ ಒಂದು ಲಲಿತಾ ತ್ರಿಪುರ ಸುಂದರಿಯ ಗಾಯತ್ರಿ ಮಂತ್ರ ಇನ್ನೊಂದು ಲಲಿತಾ ದೇವಿಯ ಬೀಜಾಕ್ಷರಿಯ ಮಂತ್ರ ಈ ಎರಡು ಮಂತ್ರವನ್ನು ಸುಲಭವಾಗಿ ಉದ್ಛರಣೆ ಮಾಡಬಹುದು. ಈ ಎರಡೂ ಮಂತ್ರಗಳಲ್ಲಿ ಯಾವುದು ನಿಮಗೆ ಸುಲಭವೆನಿಸುತ್ತದೆಯೋ ಅದನ್ನು ಉಚ್ಚರಣೆ ಮಾಡಿರಿ.
ಪ್ರತೀ ದಿನ ಈ ಮಂತ್ರವನ್ನು ಹೇಳಿಕೊಂಡರೇ ಸಾಕು ಒಳ್ಳೆಯ ಫಲಗಳು ಸಿಗುತ್ತದೆ. ಈ ಮಂತ್ರವನ್ನು ಪಠಣೆ ಮಾಡುವ ಮೊದಲು ಕೆಲವೊಂದು ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ. ಲಲಿತಾತ್ರಿಪುರ ಸುಂದರಿ ದೇವಿ ಎಂದರೆ ನವಶಕ್ತಿಗಳಲ್ಲಿ ಈ ದೇವರಿಗೆ ಮೂರನೇ ಸ್ಥಾನವಿದೆ. ಈ ದೇವಿಯನ್ನು ಶೋಡಷಿ ರಾಜರಾಜೇಶ್ವರಿ ಎಂದು ಕರೆಯಲಾಗುತ್ತದೆ. ತ್ರಿಪುರ ಸುಂದರಿ ಎಂದರೆ ಮೂರು ಲೋಕದ ಸುಂದರಿ ಎಂದು ಕರೆಯಲಾಗುತ್ತದೆ. ಮಾತೃ ಸ್ವರೂಪಿಯಾದ ಈ ದೇವಿ ಸ್ತ್ರೋತ್ರಪ್ರಿಯೆ.
ಈ ದೇವಿಯನ್ನು ಮೆಚ್ಚಿಸಬೇಕೆಂದರೆ ಸ್ತ್ರೋತ್ರಗಳನ್ನು ಹೇಳಿಕೊಳ್ಳುತ್ತಾ ಮೆಚ್ಚಿಸಬಹುದು. ಈ ದೇವಿಯನ್ನು ಮಂತ್ರ ಸ್ತ್ರೋತ್ರಗಳ ಮುಖಾಂತರ ಈ ದೇವಿಯನ್ನು ಆರಾಧನೆಯನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ 16 ಬಗೆಯ ಏನೇ ಕೋರಿಕೆ ಅಥವಾ ಆಸೆಗಳಿದ್ದರೂ ಬಹಳ ಬೇಗ ಈಡೇರುತ್ತದೆಂಬ ಅರ್ಥ ಬರುತ್ತದೆ ಮತ್ತು ನಮ್ಮ ದೇಹ, ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ಬರುತ್ತದೆ. ಕುಟುಂಬದ ಸಂತೋಷ ಮತ್ತು ನಾವು ಇಷ್ಟಪಡುವ ಜೀವನ ಸಂಗಾತಿಯನ್ನು ಪಡೆಯುವ ಸಲುವಾಗಿ ಹೆಚ್ಚಾಗಿ ಲಲಿತಾದೇವಿಯ ಆರಾಧನೆಯನ್ನು ಮಾಡಬೇಕು. ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಪಾಸಿಟಿವ್ ಇದ್ದರೇ ಮಕ್ಕಳ ಮನಸ್ಸು ಬದಲಾಗುತ್ತದೆ.
ಮಕ್ಕಳು ಹೇಳಿದ ಮಾತು ಕೇಳುವುದಿಲ್ಲ ಮತ್ತು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ತಿಳಿದಾಗ ತಾಯಿಯಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಬೇಡಿಕೊಂಡು ಈ ಮಂತ್ರವನ್ನು ಪಠಣೆ ಮಾಡಿದರೆ ಒಳ್ಳೆದಾಗುತ್ತದೆ. ಲಲಿತಾದೇವಿಯು ಮಾತೃ ಸ್ವರೂಪಿಯಾಗಿರುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಪೂಜೆ ಮಾಡುವ ಹೆಣ್ಣು ಮಕ್ಕಳು ಯಾವಾಗಲೂ ಸಮಾಧಾನಕರವಾಗಿರುತ್ತಾರೆ. ಶತೃಗಳಿಂದ ಏನೇ ಬಾಧೆಯಿದ್ದರೂ ಅದು ಕೂಡ ಬೇಗನೆ ನಿವಾರಣೆಯಾಗುತ್ತದೆ.
ಯಾವುದೇ ಫಲ ಸಿಗಬೇಕಾದರೂ 48 ದಿನಗಳು ಆಗಲೇಬೇಕು. ಹಾಗಾಗಿ ಈ ಸ್ತ್ರೋತ್ರ ಪಾರಾಯಣವನ್ನು 48 ದಿನಗಳವರೆಗೆ ಮಾಡಬಹುದು. ಪ್ರತಿದಿನ 108 ಬಾರಿ ಪಠಣೆ ಮಾಡಬೇಕು. ನೀವು ಸ್ತ್ರೋತ್ರವನ್ನು ಪಾರಾಯಣ ಮಾಡಿದ 40 ದಿನದಲ್ಲೇ ನಿಮಗೆ ಅದರ ಫಲಗಳು ಸಿಗುತ್ತದೆ. ಮುಟ್ಟಾದ ದಿನ ಸ್ತ್ರೋತ್ರ ಪಠಣೆಯನ್ನು ನಿಲ್ಲಿಸಿ ನಂತರ ಮುಂದುವರೆಸಬಹುದು. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಯಾರಾದರೂ ಈ ಸ್ತ್ರೋತ್ರವನ್ನು ಪಾರಾಯಣವನ್ನು ಮಾಡಬಹುದು. 48 ದಿನ ಪಾರಾಯಣ ಮಾಡಲು ಆಗದೇ ಇರುವವರು ಎಂಟು ಶುಕ್ರವಾರ ಅಥವಾ 18 ಶುಕ್ರವಾರ ಮತ್ತು 32 ಶುಕ್ರವಾರ ಲೆಕ್ಕಹಾಕಿಕೊಂಡು ಮಾಡಬಹುದು.
ಶುಕ್ರವಾರ ಸಂಜೆ ಕಾಮಾಕ್ಷಿ ದೀಪವನ್ನು ತುಪ್ಪದಲ್ಲಿ ಹಚ್ಚಿ ಈ ಮಂತ್ರವನ್ನು ಪಠಣೆ ಮಾಡಬೇಕು. ಲಲಿತಾ ತ್ರಿಪುರ ಸುಂದರಿ ದೇವಿಯ ಗಾಯತ್ರಿ ಮಂತ್ರ ಇನ್ನೊಂದು ಬೀಜಾಕ್ಷರಿ ಮಂತ್ರವಾಗಿರುತ್ತದೆ. ಈ ಬೀಜಾಕ್ಷರಿ ಮಂತ್ರವನ್ನು ಗುರುಗಳ ಮೂಲಕವೇ ಉಪದೇಶ ಮಾಡಿಸಿಕೊಂಡು ಪಠಣೆ ಮಾಡಬೇಕು. ನಿಮಗೆ ಯಾರು ಗುರುಗಳು ಸಿಗದೇ ಇದ್ದ ಪಕ್ಷದಲ್ಲಿ ನಿಮ್ಮ ಇಷ್ಟದೇವರ ಗುರುಗಳ ಮುಂದೆ ಅರಳಿ ಮರದ ಎಲೆಯಲ್ಲಿ ಓಂ ಐಂ ಹ್ರೀಂ ಶ್ರೀಂ ಶ್ರೀ ಮಾತ್ರೆ ನಮಃ ಎಂದು ಬರೆಯಿರಿ ಮತ್ತು ಯಾವ ಕಾರಣಕ್ಕೆ ಈ ಪಠಣೆಯನ್ನು ಮಾಡುತ್ತಿದ್ದೀರಿ ಎಂದು ಗುರುಗಳ ಮುಂದೆ ಹೇಳಿಕೊಂಡು ಪಠಣೆಯನ್ನು ಶುರು ಮಾಡಿ.
ಲಲಿತಾ ತ್ರಿಪುರ ಸುಂದರಿ ದೇವಿಯ ಗಾಯತ್ರಿ ಮಂತ್ರವನ್ನು ಪಠಣೆ ಮಾಡುವಾಗ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ. ನಂತರ ಪಠಣೆ ಮಾಡಲು ಶುರು ಮಾಡುವ ಮೊದಲು ಗಣಪತಿಯ ಮಂತ್ರವನ್ನು ಹೇಳಿಕೊಂಡು ನಂತರ ಶುರು ಮಾಡಿದರೇ ಒಳ್ಳೆಯದು. ಮಂತ್ರವನ್ನು ಪಠಣೆ ಮಾಡುವಾಗ 48 ದಿನಗಳ ಕಾಲ ಮಾಂಸಾಹಾರವನ್ನು ಸೇವನೆ ಮಾಡಬಾರದು. ಶುಕ್ರವಾರ ಮಾತ್ರ ಮಂತ್ರವನ್ನು ಪಠಣೆಯನ್ನು ಮಾಡಿದರೇ ಆ ದಿನ ಮಾತ್ರ ಮಾಂಸಾಹಾರವನ್ನು ಸೇವನೆ ಮಾಡಬಾರದು. ಈ ವ್ರತವನ್ನು ಪ್ರಾರಂಭ ಮಾಡಿದ ಮೇಲೆ ಬೇರೆ ಊರಿಗೆ ಹೋಗಬೇಕಾದ ಸಂದರ್ಭ ಬಂದರೆ ಶುಭಕಾರ್ಯಕ್ಕೆ
ಹೋಗಿದ್ದರೇ ಅಲ್ಲಿಯೇ ಮಂತ್ರವನ್ನು ಪಠಣೆ ಮಾಡಬಹುದು. ಅಶುಭ ಕಾರ್ಯಕ್ಕೆ ಹೋಗಿದ್ದರೇ ನೀವು ಬಂದು ಮಂತ್ರ ಪಠಣೆಯನ್ನು ಮುಂದುವರೆಸಬಹುದು. ಅಮಾವಾಸ್ಯೆಯನ್ನು ಕಳೆದುಕೊಂಡು ಶುಕ್ರವಾರ ಪ್ರಾರಂಭ ಮಾಡಿದರೇ ಒಳ್ಳೆಯದು. ಸಂಜೆಯ ವೇಳೆಯಲ್ಲೂ ಪಠಣೆ ಮಾಡಬಹುದು ಮತ್ತು ಸಂಜೆಯ ಸಮಯದಲ್ಲಿ ಪಠಣೆ ಮಾಡಲು ಸಮಯವಿಲ್ಲದವರೂ ಬೆಳಗ್ಗೆ 4:30ರಿಂದ 7 ಗಂಟೆಯ ಒಳಗೆ ಪಠಣೆ ಮಾಡಬಹುದು. ಪ್ರತಿದಿನ ದೇವರಿಗೆ ಬಿಳಿ ಕಲ್ಲುಸಕ್ಕರೆ ಅಥವಾ ಕೆಂಪು ಕಲ್ಲುಸಕ್ಕರೆಯನ್ನು ನೈವೇದ್ಯಕ್ಕೆ ಇಡಿ. ಓಂ ಐಂ ಹ್ರೀಂ ಶ್ರೀಂ ಶ್ರೀ ಮಾತ್ರೆ ನಮಃ ಎಂದು ಪಠಣೆ ಮಾಡಿ ಒಳ್ಳೆಯ ಫಲಗಳು ಸಿಗುತ್ತದೆ. ಕ್ಲೀಂ ತ್ರಿಪುರಾದೇವಿ ವಿದ್ಮಹೇ| ಕಾಮೇಶ್ವರಿ ಧೀಮಹಿ| ತನ್ನಃ ಕ್ಲಿನ್ನೇ ಪ್ರಚೋದಯಾತ್|| ಈ ರೀತಿ ಮಂತ್ರವನ್ನು ಮನಸ್ಸಿನಲ್ಲಿ ಹೇಳಿಕೊಳ್ಳಿ ಜೋರಾಗಿ ಹೇಳಬೇಡಿ.