ಈ ಎರಡೂ ವಸ್ತುವನ್ನು ಯಾವುದೇ ಕಾರಣಕ್ಕೂ ದಾನ ಮಾಡಬೇಡಿ. ದಾನ ಮಾಡಿದರೇ ಏಳು ತಲೆಮಾರಿನವರೆಗೂ ಉದ್ಧಾರವಾಗುವುದಿಲ್ಲ ಎಂಬ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ದೇವಸ್ಥಾನಕ್ಕೆ ಹೋದಾಗ ಕೆಲವು ಭಕ್ತರು ದೇವರಲ್ಲಿ ತಲ್ಲೀನರಾಗಿರುತ್ತಾರೆ. ಅಕ್ಕಪಕ್ಕ ಏನು ಆಗುತ್ತಿದೆ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ. ಭಯ, ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡುತ್ತಿರುತ್ತಾರೆ. ನಮಗೆ ಕಣ್ಣಿಗೆ ಏನು ಕಾಣುತ್ತದೆ ಎಂದರೆ ಆ ವ್ಯಕ್ತಿ ಏನು ಕಷ್ಟಪಡುತ್ತಿದ್ದಾನೆ ಎಂದು ಅಂದರೆ ಆ ವ್ಯಕ್ತಿಯು ತಾನು ಕಷ್ಟಪಡುತ್ತಿರುವುದನ್ನು
ಬೇರೆಯವರಿಗೆ ಹೇಳಿಕೊಳ್ಳುವುದಕ್ಕೆ ಆಗದೇ ಒದ್ದಾಡುತ್ತಿರುತ್ತಾರೆ. ಕೊನೆಗೆ ದೇವರ ಮುಂದೆ ಶರಣಾಗಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಅದರಿಂದ ಮುಕ್ತರನ್ನಾಗಿ ಮಾಡು ಎಂದು ಕೇಳಿಕೊಳ್ಳುತ್ತಾರೆ. ದೇವರಿಂದ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗಬಹುದು ಆದರೇ ಅದರಿಂದ ಮುಕ್ತಿ ಪಡೆಯಲು ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಅದೇನೆಂದರೆ ಕೆಲವೊಂದು ವಸ್ತುಗಳನ್ನು ದಾನ ಮಾಡಬೇಕು. ಆದರೇ ಕೆಲವೊಂದು ವಸ್ತುಗಳನ್ನು ದಾನ ಮಾಡಬೇಡಿ. ಮಹಾಶಿವಪುರಾಣಗಳಲ್ಲಿ ಉಲ್ಲೇಖವಿರುವುದನ್ನು ದಾನ ಮಾಡಿ ನೋಡಿ
ಆಗ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆಂದು ಗೊತ್ತಾಗುತ್ತದೆ. ಆದರೇ ಯಾವುದೇ ಕಾರಣಕ್ಕೂ ಈ ಎರಡು ವಸ್ತುಗಳನ್ನು ದಾನ ಮಾಡಲೇಬಾರದು. ಆ ಎರಡು ವಸ್ತುಗಳು ಯಾವುವು ಯಾವ ವಸ್ತುವನ್ನು ದಾನ ಮಾಡಿದರೇ ಶ್ರೇಷ್ಠ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಶಿವಪುರಾಣದಲ್ಲಿ ತಿಳಿಸಿರುವಂತೆ ಶಿವನನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಮಾಡಿದರೇ ಶಿವನನ್ನು ಒಲಿಸಿಕೊಳ್ಳಬಹುದು. ಆತ ಭಕ್ತರಿಗೆ ಕೃಪಾಕಟಾಕ್ಷದ ಮಳೆಯನ್ನೇ ಸುರಿಸಿಬಿಡುತ್ತಾನೆ.
ಶಿವನ ಅನುಗ್ರಹ ಪಡೆದವರು ಜೀವನದಲ್ಲಿರುವಂತಹ ದುಃಖ ಮತ್ತು ಭಯದಿಂದ ಮುಕ್ತರಾಗಿಬಿಡುತ್ತಾರೆ ಮತ್ತು ಯಾವ ಎರಡು ವಸ್ತುವನ್ನು ಅಪ್ಪಿತಪ್ಪಿಯೂ ದಾನ ಮಾಡಬಾರದೆಂದು ಉಲ್ಲೇಖವಿದೆ. ಅಷ್ಟೇ ಅಲ್ಲ ಅವುಗಳನ್ನು ದಾನ ಮಾಡಿದರೇ ಏನು ಪರಿಣಾಮ ಆಗುತ್ತದೆಂದು ಈ ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ.
ದಾನಕ್ಕೆಂದೆ ಪ್ರಖ್ಯಾತಿಯಾದ ಕರ್ಣನ ನಿಮಗೆಲ್ಲರಿಗೂ ಗೊತ್ತೇ ಇದೆ. ಮಹಾಭಾರತದಲ್ಲಿ ಶ್ರೀಕೃಷ್ಣನು ಬ್ರಾಹ್ಮಣ ರೂಪದಲ್ಲಿ ಕರ್ಣನ ಬಳಿ ಬಂದು ಭಿಕ್ಷೆಯನ್ನು ಕೇಳುತ್ತಾನೆ.
ಆದರೇ ಕರ್ಣ ತನ್ನ ಜೀವರಕ್ಷಕವಾಗಿರುವ ಕವಚವನ್ನು ಹಿಂದೆ ಮುಂದೆ ನೋಡದೇ ತನ್ನ ಕವಚವನ್ನು ಬ್ರಾಹ್ಮಣನಿಗೆ ದಾನದ ರೂಪದಲ್ಲಿ ಕೊಟ್ಟಿದ್ದ. ಇನ್ನೊಂದು ಪೌರಾಣಿಕ ಕತೆಯ ಪ್ರಕಾರ ದೈತ್ಯ ರಾಜ ಬಲಿ ಚಕ್ರವರ್ತಿ ಮಹಾವಿಷ್ಣುವಿನ ಪರಮ ಭಕ್ತ ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದನು. ತನ್ನ ರೀತಿಯಲ್ಲಿ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲವೆಂಬ ಅಹಂಕಾರ ತಲೆಗೇರಿರುತ್ತದೆ. ದೈತ್ಯರಾಜನಾದರೂ ಯಾವುದೇ ಪಾಪ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವುದಿಲ್ಲ.
ತನ್ನ ನೆರೆಹೊರೆಯ ರಾಕ್ಷಕರಿಗೆ ಎಲ್ಲಾ ರೀತಿಯ ಸಹಾಯ ಮತ್ತು ಪ್ರೋತ್ಸಾಹವನ್ನು ನೀಡುತ್ತಿದ್ದ. ಇವನ ಕಾಟ ಹೆಚ್ಚಾಗುತ್ತಿದ್ದಂತೆ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ವಿಷ್ಣು ಬಾಲಕನ ರೂಪ ತಾಳಿ ಬಲಿಚಕ್ರವರ್ತಿಯ ಮುಂದೆ ನಿಂತು ನನ್ನ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನ ಮಾಡಬಹುದೇ ಎಂದು ಕೇಳುತ್ತಾನೆ. ಪ್ರಜಾಪಾಲನೆಯಲ್ಲಿ ಹೆಸರು ಮಾಡಿರುವ ನನಗೆ ಪುಟ್ಟ ಬಾಲಕನ ಬೇಡಿಕೆಯನ್ನು ಈಡೇರಿಸುವ ಯೋಗ್ಯತೆ ಇಲ್ಲವಾ
ಎಂಬ ಅಹಂಕಾರದಿಂದ ಬಲೀಂದ್ರ ಮಹಾರಾಜ ವಾಮನಿಗೆ ನೀನು ಕೇಳುವ ಮೂರು ಹೆಜ್ಜೆ ನೀಡುವಷ್ಟು ಜಾಗವನ್ನು ನೀಡುತ್ತೇನೆಂದು ವಚನವನ್ನು ಕೊಡುತ್ತಾನೆ. ಭೂಮಿಯನ್ನು ದಾನ ಪಡೆಯುವಾಗ ವಾಮನ ಮೂರ್ತಿ ಆಕಾಶದುದ್ದಕ್ಕು ಬೆಳೆಯುತ್ತಾನೆ. ಒಂದು ಪಾದವನ್ನು ಭೂಮಿಯ ಮೇಲೆ ಇನ್ನೊಂದು ಪಾದವನ್ನು ಆಕಾಶದ ಮೇಲೆ ಇರಿಸುತ್ತಾನೆ. ಇನ್ನೊಂದು ಪಾದವನ್ನು ಇಡಲು ಜಾಗ ಕಾಣುತ್ತಿಲ್ಲ ಎಲ್ಲಿ ಇಡಬೇಕು ಎಂದು ಕೇಳಿದಾಗ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ನನ್ನ ತಲೆಯ ಮೇಲೆ ಪಾದವಿಡು ಎಂದು ಹೇಳುತ್ತಾನೆ. ನಿಮ್ಮ ಪಾದವನ್ನು ನನ್ನ ತಲೆಯ ಮೇಲೆ ಇಡುವುದರ
ಮೂಲಕ ತನ್ನ ಪಾಪವೆಲ್ಲಾ ನಾಶವಾಗಲಿ ಎಂದು ಕೇಳುತ್ತಾನೆ. ನಂತರ ತನ್ನ ಪಾದವನ್ನು ಬಲೀಂದ್ರನ ತಲೆಯ ಮೇಲೆ ಇರಿಸಿ ಪಾತಾಳಕ್ಕೆ ಕಳುಹಿಸುತ್ತಾನೆ. ಹಾಗೆಯೇ ದಾನಿ ಹರಿಶ್ಚಂದ್ರನ ಕತೆ ಯಾರಿಗೆ ಗೊತ್ತಿಲ್ಲ ಹೇಳಿ ಋಷಿ ಮುನಿ ವಿಶ್ವಮಿತ್ರನಿಗೆ ಮಾತು ಕೊಟ್ಟಿದ್ದಕ್ಕಾಗಿ ತನ್ನ ಸರ್ವಸ್ವವನ್ನು ದಾನದ ರೂಪದಲ್ಲಿ ಕೊಟ್ಟು ಹೆಂಡತಿ ಮಗನೊಂದಿಗೆ ಕಾಶಿಗೆ ಹೋಗಿಬಿಟ್ಟ, ಅಲ್ಲಿ ಹೆಂಡತಿ ಮತ್ತು ಮಗನನ್ನು ಕೂಲಿಗಾಗಿ ಮಾರಿ ಹೆಣ ಸುಡುವ ಕಾರ್ಯಕ್ಕೆ ನಿಂತುಬಿಟ್ಟಿದ್ದ.
ಆ ಸಮಯದಲ್ಲಿ ಏನೇನೋ ಕಷ್ಟಗಳು ಆತನ ಮುಂದೆ ಬಂದರೂ ತಾನು ರಾಜನೆಂಬುದನ್ನು ಮರೆತು ಕರ್ತವ್ಯದಲ್ಲಿ ನಿರತನಾಗಿದ್ದನು. ಇಂತಹ ಮಹಾಪುರುಷರ ಮಹತ್ತ್ವವನ್ನು ಕತೆ ಮತ್ತು ಪುರಾಣಗಳಲ್ಲಿ ನೋಡಬಹುದು. ದಾನಕ್ಕೆ ಅದರದ್ದೇ ಆದ ಮಹತ್ತ್ವವಿದೆ. ಕೆಲವೊಮ್ಮೆ ಕಷ್ಟಗಳ ಪರಿಹಾರಕ್ಕೂ ದಾನಗಳನ್ನು ಮಾಡಲಾಗುತ್ತದೆ. ದೊಡ್ಡಮಟ್ಟದ ದಾನ ಮಾಡುವುದು ಅವಶ್ಯಕತೆ ಇಲ್ಲ, ನಿಮ್ಮಿಂದ ಎಷ್ಟು ದಾನ ಮಾಡಲು ಸಾಧ್ಯವಾಗುತ್ತದೆಯೋ ಅಷ್ಟು ಮಾಡಿದರೂ ಸಾಕು. ಅದರಿಂದ ನಿಮ್ಮ ಅನೇಕ ಕಷ್ಟಗಳು ತನ್ನಿಂದ ತಾನೇ ದೂರವಾಗುತ್ತಾ ಹೋಗುತ್ತದೆ. ಶಾಸ್ತ್ರಗಳ ಪ್ರಕಾರ ನೀವು ಏನನ್ನಾದರೂ
ದಾನ ಮಾಡಿ ಸಾಕು ಮುಂದಿನ ದಿನಗಳಲ್ಲಿ ನೂರು ಪಟ್ಟು ನಿಮ್ಮ ಬಳಿಯೇ ಬಂದು ಸೇರುತ್ತಾ ಹೋಗುತ್ತದೆ. ಇದನ್ನು ಕೂಡ ಶಿವ ಪುರಾಣಗಳಲ್ಲಿ ಹೇಳಲಾಗಿದೆ. ಹಾಗಾದರೇ ಯಾವ ಯಾವ ವಸ್ತುಗಳನ್ನು ದಾನದ ರೂಪದಲ್ಲಿ ಕೊಟ್ಟರೇ ಶ್ರೇಷ್ಠವೆಂದು ತಿಳಿಸುತ್ತೇವೆ. ಉಪ್ಪನ್ನು ದಾನ ಮಾಡಬಹುದು. ಅದು ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ರೂಪದಲ್ಲಿ ನಿಮ್ಮ ಜೀವನದಲ್ಲಿರುವ ಸಮಸ್ಯೆಗಳಿಂದ ನಿಮ್ಮನ್ನು ಮುಕ್ತಿಗೊಳಿಸಬಹುದು. ವಿಶೇಷವಾಗಿ ಕೆಲವು ಕಷ್ಟಗಳು ನಿಮ್ಮನ್ನು ಬದುಕಲು ಬಿಡುವುದಿಲ್ಲ. ಸಾಯಲು ಬಿಡುವುದಿಲ್ಲ ಅಂತಹ ಕಷ್ಟಗಳು ಜೀವನವನ್ನೇ ನರಕ ಮಾಡಿಬಿಟ್ಟರೇ ಉಪ್ಪನ್ನು ದಾನದ ರೂಪದಲ್ಲಿ ಕೊಟ್ಟುಬಿಡಿ.
ಆದರೇ ಉಪ್ಪನ್ನು ದಾನದ ರೂಪದಲ್ಲಿ ಕೊಡುವಾಗ ಒಂದು ವಿಷಯವನ್ನು ನೆನಪಿಡಿ ಉಪ್ಪನ್ನು ನೇರವಾಗಿ ಕೈನಲ್ಲಿ ಕೊಡಬಾರದು. ಉಪ್ಪಿನ ಪ್ಯಾಕ್ ಅನ್ನು ನೆಲದ ಮೇಲೆ ಇಟ್ಟು ದಾನದ ರೂಪದಲ್ಲಿ ಎಂದು ಹೇಳಿ ಕೊಟ್ಟುಬಿಡಿ. ಹರಳು ಉಪ್ಪನ್ನು ದಾನವಾಗಿ ಕೊಟ್ಟರೇ ಇನ್ನು ಉತ್ತಮ. ಹಾಗೆಯೇ ಬೆಲ್ಲವನ್ನು ದಾನದ ರೂಪದಲ್ಲಿ ಕೊಡುವುದರಿಂದ ಕುಟುಂಬದಲ್ಲಿ ವೈಮನಸ್ಸು ಉಂಟಾಗಿದ್ದಲ್ಲಿ ಅದು ಸರಿ ಹೋಗುತ್ತದೆ. ವಿಶೇಷವಾಗಿ ಗಂಡ ಹೆಂಡಿತಿಯರ ನಡುವೆ ಇರುವ ವೈಮನಸ್ಸು ದೂರವಾಗುತ್ತದೆ. ಇದರ ಜೊತೆಗೆ ಸೋಮವಾರದಂದು ತಪ್ಪದೇ ಬೆಲ್ಲವನ್ನು ಶಿವಲಿಂಗಕ್ಕೆ ಅರ್ಪಿಸಿ.
ಆ ಮಹಾದೇವ ನಿಮ್ಮ ಸಂಬಂಧ ಸಿಹಿಯಾಗಿರುವಂತೆ ನೋಡಿಕೊಳ್ಳುತ್ತಾನೆ. ಆಕಳ ತುಪ್ಪವನ್ನು ದಾನದ ರೂಪದಲ್ಲಿ ಕೊಡಬಹುದು. ಇದನ್ನು ದಾನದ ರೂಪದಲ್ಲಿ ಕೊಟ್ಟರೇ ನಿಮ್ಮ ಮನೆಯಲ್ಲಿರುವ ಪುಟ್ಟ ಮಕ್ಕಳಿಗೆ ಯಾವುದೇ ರೀತಿಯ ಕಾಯಿಲೆಗಳು ಕಾಡುವುದಿಲ್ಲ. ತುಪ್ಪವನ್ನು ದಾನ ಮಾಡುವಾಗ ಮಕ್ಕಳ ಕೈನಿಂದ ಸ್ಪರ್ಶಿಸಿ ಕೊಟ್ಟರೇ ಉತ್ತಮ ಹಾಗೆಯೇ ತುಪ್ಪವನ್ನು ಶಿವನಿಗೆ ಅರ್ಪಿಸಿದರೇ ಶಿವನ ಜೊತೆ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ. ಹಾಗಾದರೇ ಯಾವುದನ್ನು ದಾನದ ರೂಪದಲ್ಲಿ ಕೊಡಬಾರದ ವಸ್ತುಗಳು ಎಂದರೆ ಬಟ್ಟೆ ಮತ್ತು ಲೋಹದ ವಸ್ತುಗಳನ್ನು ಯಾವುದೇ ಕಾರಣಕ್ಕೂ ದಾನದ ರೂಪದಲ್ಲಿ ಕೊಡಬೇಡಿ. ಹಾಳಾದ ಹಳೆಯ ಪುಸ್ತಕಗಳನ್ನು ದಾನ ಮಾಡಬೇಡಿ. ಇವುಗಳನ್ನು ದಾನ ಮಾಡಿದರೇ ಇನ್ನಷ್ಟು ಕಂಕಟಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ದಾನ ಮಾಡದಿರಿ.