ಮಹಿಳೆಯರೇ ಈ ಲೇಖನವನ್ನು ತಪ್ಪದೇ ಓದಿರಿ

ಮಹಿಳೆಯರೇ ಈ ಲೇಖನವನ್ನು ತಪ್ಪದೇ ಓದಿರಿ. ಪೀರಿಯಡ್ಸ್ ಸಮಯದಲ್ಲಿ ಮನೆಯಿಂದ ಹೊರಗೆ ಇರಬೇಕಾ? ಮನೆ ಒಳಗೆ ಇದ್ದರೆ ಅದು ಮನಗೆ ತೊಂದರೆನಾ ಅನಿಷ್ಟನಾ ಮನೆಗೆ ಆಗಿ ಬರೋದಿಲ್ವಾ? :- ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಬಹಳ ಕೆಲಸ ಮಾಡುತ್ತಿದ್ದರು. ಮುಟ್ಟಿನ ಸಮಯದಲ್ಲಿ ಹೆಂಗಸರು ಮನೆ ಒಳಗೆ ಇದ್ದರೆ ಏನಾದರೂ ಕೆಲಸ ಮಾಡುತ್ತಾರೆ ಎಂದು ಅವರನ್ನು ಹೊರಗಡೆ ಪ್ರತ್ಯೇಕವಾಗಿ ಸ್ಥಳ ಮಾಡಿ ಅಲ್ಲಿ ಪ್ರತ್ಯೇಕ ಚಾಪೆ ದಿಂಬು ತಟ್ಟೆ ಚೊಂಬು ಎಲ್ಲವೂ ಕೊಡುತ್ತಿದ್ದರು. ಕಾರಣ ಇಷ್ಟೇ ಪ್ರಶಾಂತವಾಗಿ ಇದ್ದು, ವಿಶ್ರಾಂತಿ ಪಡೆಯಲಿ ಬರಿ ಬಾಯಿ ಮಾತಿನಲ್ಲಿ ಹೇಳಿದರೆ ಕೇಳುವುದಿಲ್ಲ ಎಂದು ಪದ್ಧತಿ, ಸಂಪ್ರದಾಯ ಎಂದು ಹೇಳಿದರು ಹಿರಿಯರು. ಆದರೆ ಇದು ಬರು ಬರುತ್ತಾ ಮೂಢನಂಬಿಕೆಯಾಗಿದೆ. ತುಂಬಾ ಬೆನ್ನು ನೋವಿದ್ದಾಗ ಚಾಪೆ ಮೇಲೆ ಮಲಗುವುದು ಒಳ್ಳೆಯದು ಇದೆ ಕಾರಣಕ್ಕೆ ನೆಲದ ಮೇಲೆ ಮಲಗಲು ಹೇಳುವುದು. ಸರಿಯಾದ ಸಮಯಕ್ಕೆ ಊಟ ತಿಂಡಿ ನೀರು ಎಲ್ಲವನ್ನೂ ತೆಗೆದುಕೊಂಡು ಆ ಮೂರು ದಿನವಾದರೂ ಹೆಂಗಸರು ನೆಮ್ಮದಿಯಾಗಿ ಇರಲಿ ಎಂಬುದು ಹಿರಿಯರ ಉದ್ದೇಶವಾಗಿತ್ತು.

ಪೀರಿಯಡ್ಸ್ ಆದಾಗ ತಕ್ಷಣವೇ ತಲೆ ಸ್ನಾನ ಮಾಡಬೇಕಾ? ಮಾಡದೇ ಇದ್ದರೇ ಅದು ಪಾಪವಾಗುತ್ತಾ : – ಪ್ರತಿ ತಿಂಗಳು ಮಹಿಳೆಯರಿಗೆ ಮುಟ್ಟಾಗುತ್ತದೆ. ಇದೊಂದು ಸಹಜ ಪ್ರಕ್ರಿಯೆ. ಇದರಲ್ಲಿ ಮಹಿಳೆಯರ ದೇಹದಿಂದ ಅಶುದ್ಧ ರಕ್ತ ಹೊರಬರುತ್ತದೆ. ಮುಟ್ಟಾದ ಸಮಯದಲ್ಲಿ ಮಹಿಳೆಯರಿಗೆ ರಕ್ತಸ್ರಾವವಾಗುವುದು ಬಹಳ ಮುಖ್ಯ. ಇದರಿಂದ ದೇಹದ ಕಲ್ಮಶಗಳು ಚೆನ್ನಾಗಿ ಹೊರಬರುತ್ತವೆ. ರಕ್ತಸ್ರಾವವು ಮುಕ್ತವಾಗಿ ದೇಹದಿಂದ ಹೊರ ಹೋಗಲು ದೇಹವು ಬೆಚ್ಚಗಿರುವುದು ಅವಶ್ಯಕವಾಗಿದೆ. ಪ್ರತಿ ಮಹಿಳೆಯ ಮುಟ್ಟಿನ ಪ್ರಕ್ರಿಯೆ ವಿಭಿನ್ನವಾಗಿರುತ್ತದೆ. ಕೆಲವರಿಗೆ ಮೂರು ದಿನ ಕೆಲವರಿಗೆ 5 ಮತ್ತು ಕೆಲವರಿಗೆ 7 ದಿನಗಳವರೆಗೆ ರಕ್ತ ಸ್ರಾವವಾಗುತ್ತದೆ. ಈ ಎಲ್ಲದರಲ್ಲೂ ಮೊದಲು ಮೂರು ದಿನಗಳು ಬಹಳ ಮುಖ್ಯ. ಈ ದಿನಗಳಲ್ಲಿ ತಲೆ ಸ್ನಾನ ಮಾಡಿದರೆ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಕ್ತಸ್ರಾವವು ಸರಿಯಾಗಿ ಆಗುವುದಿಲ್ಲ.

ಜೊತೆಗೆ ಮಹಿಳೆಗೆ ಅನೇಕ ಸಮಸ್ಯೆಗಳ ಅಪಾಯವೂ ಹೆಚ್ಚಾಗುತ್ತದೆ. ಯಾವ ಸಮಸ್ಯೆ ಎದುರಾಗಬಹುದು? ಮುಟ್ಟಾದಾಗ ರಕ್ತಸ್ರಾವ ಆಗದಿದ್ದರೆ ಉಳಿದ ರಕ್ತವು ಹೆಪ್ಪುಗಟ್ಟುವಿಕೆ ಮತ್ತು ಉಂಡೆಗಳ ರೂಪಾವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಸೋಂಕಿನ ಸಮಸ್ಯೆ ಹೊಟ್ಟೆನೋವು ಬರಬಹುದು. ಅನೇಕ ಬಾರಿ ಔಷಧದ ಮೂಲಕ ಈ ಗಡ್ಡೆಯನ್ನು ತೆಗೆಯಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಡಿಎನ್ ಸಿ ಮಾಡಲೂ ಅವಕಾಶವಿದ್ದರೂ ಇದಕ್ಕೆ ಸಮಯಕ್ಕೆ ಸರಿಯಾಗಿ ನೋಡಿಕೊಳ್ಳದಿದ್ದರೆ ಈ ಗೆಡ್ಡೆಗಳು ಕ್ಯಾನ್ಸರ್ ರೂಪವನ್ನು ಸಹ ಪಡೆಯಬಹುದು. ಏನು ಮಾಡಬೇಕು: ಮುಟ್ಟಿನ ಸಂದರ್ಭದಲ್ಲಿ ರಕ್ತಸ್ರಾವ ಮುಕ್ತವಾಗಿ ಆಗಲು ಮುಟ್ಟಾದ ಮೂರು ದಿನಗಳ ನಂತರ ತಲೆ ಸ್ನಾನ ಮಾಡಿ ನೀವು ಮೂರನೇ ದಿನದಲ್ಲಿ ತಲೆ ಸ್ನಾನ ಮಾಡುವಾಗ ಉಗುರು ಬೆಚ್ಚಗಿನ ನೀರನ್ನು ಬಳಸಿ ಇದನ್ನು ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆಯಾಗುತ್ತದೆ ಏಕೆಂದರೆ ಇದು ರಕ್ತದ ಹರಿವನ್ನು ಸುಧಾರಿಸುತ್ತದೆ. ಜೊತೆಗೆ ನೋವನ್ನು ನಿವಾರಿಸುತ್ತದೆ.

ಪೀರಿಯಡ್ಸ್ ಸಮಯದಲ್ಲಿ ದೇವರ ಪೂಜೆ ಮಾಡಬಹುದಾ?:- ಒಮ್ಮೆ ಯೋಚಿಸಿ ಶೌಚಾಲಯಕ್ಕೆ ಹೋಗಿ ಸ್ನಾನ ಮಾಡದೇ ಪೂಜೆ ಮಾಡಲು ಮನಸ್ಸು ಒಪ್ಪುತ್ತದಾ? ಅಥವಾ ಧೂಳು ಕಸದಲ್ಲಿ ಕೆಲಸ ಮಾಡಿ ಸ್ನಾನ ಮಾಡದೇ ಪೂಜೆ ಮಾಡಲು ಮನಸ್ಸು ಒಪ್ಪುತ್ತದಾ? ಅದೇ ರೀತಿ ದೇಹದಲ್ಲಿ ರಕ್ತಸ್ರಾವ ಆಗುತ್ತಿರುವಾಗ ಪೂಜೆ ಮಾಡಲು ಮನಸ್ಸು ಒಪ್ಪುವುದಿಲ್ಲ. ಪೂಜೆ ಮಾಡಲು ಎನಿಲ್ಲದಿದ್ದರು ನಡೆಯುತ್ತದೆ ಆದರೆ ಏಕಾಗ್ರತೆ ಶ್ರದ್ಧೇ ಬಹಳ ಮುಖ್ಯ . ಪೀರಿಯಡ್ಸ್ ಸಮಯದಲ್ಲಿ ಖಂಡಿತವಾಗಿಯೂ ಮನಸ್ಸು ಶಾಂತವಾಗಿ ಇರುವುದಿಲ್ಲ. ಕಾರಣ ಹಾರ್ಮೋನ್ಸ್ ಇನ್ ಬ್ಯಾಲೆನ್ಸ್ ಆಗುವುದರಿಂದ ಏನೋ ಕಿರಿ ಕಿರಿ ಕೋಪ ಬೇಜಾರು ಜೊತೆಗೆ ದೇಹಕ್ಕೆ ಸುಸ್ತು ಸೊಂಟ ನೋವು ಕೆಲವರಿಗೆ ಹೊಟ್ಟೆ ನೋವು ಎಲ್ಲವೂ ಆಗುತ್ತಿರುತ್ತದೆ.

ಇನ್ನು ಪೂಜೆ ಮಾಡಲು ಹೇಗೆ ಸಾಧ್ಯ. ಅಲ್ಲವೇ ಈ ಮೂರ್ನಾಲ್ಕು ದಿನ ವಿಶ್ರಾಂತಿಗಾಗಿ ಮೀಸಲಿಡುವುದು ಬಹಳ ಮುಖ್ಯ. ಬೇರೆಲ್ಲಾ ಯೋಚನೆ ಅಗತ್ಯವೇ ಇಲ್ಲ. ಆರೋಗ್ಯದ ಬಗ್ಗೆ, ಶುದ್ಧತೆ ಬಗ್ಗೆ ಕಾಳಜಿ ಬಹಳ ಮುಖ್ಯ. ಇನ್ನೂ ಹೆಂಗಸರೇ ಪೂಜೆ ಮಾಡಬೇಕೆಂದು ಯಾವ ಶಾಸ್ತ್ರದಲ್ಲೂ ಹೇಳಿಲ್ಲ. ಕೆಲವು ವ್ರತ ಆಚರಣೆ ಬಿಟ್ಟು. ಬೇರೆ ಸಮಯದಲ್ಲಿ ಹೆಂಡತಿ ಮುಟ್ಟಾದಾಗ ಮನೆಯ ಯಜಮಾನ ಅಂದರೆ ಪತಿಯು ಧಾರಾಳವಾಗಿ ಪೂಜೆ ಮಾಡಬಹುದು. ಇದರಿಂದ ಅರ್ಧ ಪುಣ್ಯ ಹೆಂಡತಿಗೂ ದೊರೆಯುತ್ತದೆ. ಅದಲ್ಲದೇ ಮುಟ್ಟಿನ ಸಮಯದಲ್ಲಿ ಹೆಂಡತಿಗೆ ಮನೆಯ ಕೆಲಸದಲ್ಲಿ ಪತಿಯು ಸಹಾಯ ಮಾಡುವುದು ಕರ್ತವ್ಯವಾಗಿರುತ್ತದೆ. ಇದರಿಂದ ಹೆಂಡತಿಗೂ ಕೂಡ ಸಂತೋಷವಾಗುತ್ತದೆ. ಅನುಸರಿಸುವಾಗ ಹೆಣ್ಣು ಮಕ್ಕಳ ಆರೋಗ್ಯ ತುಂಬಾ ಚೆನ್ನಾಗಿ ಇರುತ್ತಿತ್ತು. ಆದರೆ ಈಗ ಮುಟ್ಟಿನ ದಿನಗಳಲ್ಲೂ ಹೆಣ್ಣು ಮಕ್ಕಳು ವಿಶ್ರಾಂತಿ ಪಡೆಯಲಾಗದಷ್ಟು ಬದಲಾವಣೆಯಾಗಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಗರ್ಭಕೋಶದ ಸಮಸ್ಯೆಗಳು ಹೆಚ್ಚಾಗುತ್ತಿದೆ ಆದ್ದರಿಂದ ಒಮ್ಮೆ ಯೋಚಿಸಿ ಯಾವುದು ಸರಿ ಯಾವುದು ತಪ್ಪು .

Leave a Comment