ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಿಮ್ಮ ಮನೆಯಲ್ಲಿ ದೇವರ ಕೊಣೆಯಲ್ಲಿ ಲಕ್ಷ್ಮಿ ದೇವಿಗೆ ಪ್ರಿಯವಾಗುವಂತಹ ಈ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಐಶ್ವರ್ಯ ನೆಮ್ಮದಿ ಸಂತೋಷ ತುಂಬಿ ತುಳುಕುತ್ತದೆ ಮನೆಯಲ್ಲಿ ಎಷ್ಟೋ ಪೂಜೆಗಳನ್ನು ಮಾಡಿದರು ಫಲ ಪ್ರಾಪ್ತಿ ಆಗ್ತಿಲ್ಲ ಮನಸ್ಸಿಗೆ ನೆಮ್ಮದಿ ಆಗುತ್ತಿಲ್ಲ ಹಣವನ್ನು ಉಳಿಸುವುದಕ್ಕೆ ಆಗುತ್ತಿಲ್ಲ ಎನ್ನುವುದಾದರೆ ದೇವರ ಕೋಣೆಯಲ್ಲಿ ತಪ್ಪದೇ ಈ ವಸ್ತುಗಳನ್ನು ಇಡೀ ಅನೇಕ ಬದಲಾವಣೆಗಳನ್ನು ನೀವು ನೋಡಬಹುದು. ಯಾವ ವಿಧವಾದ ವಸ್ತುಗಳ ನೀಡಬೇಕು ಅದರಿಂದ ಏನಾಗುತ್ತದೆ ಎಂಬುದನ್ನು ಈ ಒಂದು ಸಂಚಿಕೆಯಲ್ಲಿ ನಾನು ನಿಮಗೆ ತಿಳಿಸುತ್ತೇವೆ.
ನಿಮ್ಮ ಮನೆಯಲ್ಲಿ ದೇವರಿಗೆ ಇಷ್ಟವಾದಂತಹ ಅಥವಾ ಇಡಲೇ ಬೇಕಾದಂತಹ ವಸ್ತುಗಳು ಯಾವುದೆಂದರೆ ಮೊದಲನೇದಾಗಿ ನವಿಲುಗರಿ. ನವಿಲುಗರಿನ ದೇವರ ಕೋಣೆಯಲ್ಲಿ ಇಡಬೇಕು ಏಕೆಂದರೆ ನವಿಲುಗರಿಯ ಸಾಕ್ಷಾತ್ ನವಗ್ರಹಗಳ ಶಕ್ತಿಯನ್ನು ಹೊಂದಿರುತ್ತದೆ, ಆದ್ದರಿಂದ ದೇವರ ಕೋಣೆಯಲ್ಲಿ ತಪ್ಪದೆ ನವಿಲುಗರಿಗಳನ್ನು ಇಟ್ಟರೆ ಆ ಮನೆಗೆ ನವಗ್ರಹಗಳ ಶಕ್ತಿ ಎನ್ನುವುದು ಪ್ರಾಪ್ತಿಯಾಗುತ್ತದೆ ಸದಾಕಾಲ ನವಗ್ರಹಗಳ ಅನುಗ್ರಹ ಮನೆಯಲ್ಲಿ ನೆನೆಸಿರುತ್ತದೆ. ಹಾಗೂ ಎರಡನೇದಾಗಿ ದೇವರ ಕೋಣೆಯಲ್ಲಿ ತಪ್ಪದೇ ಹಸು ಹಾಗೂ ಕರುವಿನ ಗೊಂಬೆಯನ್ನು ಇಡಬೇಕು. ಸಕಲ ದೇವರುಗಳ ಸ್ವರೂಪವಾದ
ಗೋಮಾತೆಯನ್ನು ದೇವರ ಕೋಣೆಯಲ್ಲಿ ಪ್ರತಿನಿತ್ಯ ಇಟ್ಟು ಅಗರ ಬತ್ತಿಯ ದೂಪವನ್ನು ತೋರಿಸುತ್ತಾ ಬಂದರೆ ಸಕಲ ಪ್ರಯೋಜನಗಳು ಆ ಮನೆಗೆ ಪ್ರಾಪ್ತಿಯಾಗುತ್ತದೆ. ಇನ್ನು ಮೂರನೇಯದಾಗಿ ಅರಿಶಿನದ ಅಕ್ಷತೆ, ಹೌದು ದೇವರ ಮನೆಯಲ್ಲಿ ಲಕ್ಷ್ಮಿ ದೇವಿಗೆ ಪ್ರಿಯವಾದಂತಹ ಅರಿಶಿನ ಧರಿಸಿದಂತಹ ಅಕ್ಷತೆ ಇಟ್ಟರೆ ಲಕ್ಷ್ಮಿ ದೇವಿಯ ಅಂಶ ಸದಾ ಕಾಲ ಮನೆಯಲ್ಲಿ ನೆಲೆಸುತ್ತದೆ. ಹಾಗೆಯೇ ನಾಲ್ಕನೇದಾಗಿ ದೇವರ ಕೋಣೆಯಲ್ಲಿ ಒಂದು ಚಿಕ್ಕ ಛತ್ರಿ ಯನ್ನ ಇಟ್ಟುಕೊಳ್ಳಬೇಕು ಚಿಕ್ಕದಾಗಿ ಬೆಳ್ಳಿಯ ಲೋಹದಲ್ಲಾಗಿರಬಹುದು ಅಥವಾ ಪಂಚಲೋಹದಲ್ಲಾಗಿರಬಹುದು ಒಂದು ಚಿಕ್ಕ ಛತ್ರಿ ಯನ್ನು ಮಾಡಿಸಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಏರ್ಪಾಡು ಮಾಡಿಕೊಳ್ಳಬೇಕು.
ಹೀಗೆ ಮಾಡಿದರೆ ಸಕಲ ದೇವತೆಗಳ ಅನುಗ್ರಹ ಮನೆಗೆ ಪ್ರಾಪ್ತಿಯಾಗುತ್ತದೆ. ಹಾಗೆಯೇ ಐದನೆಯದಾಗಿ ದೇವರ ಕೋಣೆಯಲ್ಲಿ ಚಾಮರವನ್ನು ಇಟ್ಟುಕೊಳ್ಳಬೇಕು ಚಾಮರ ಎಂದರೆ ಭಗವಂತನಿಗೆ ಉಪಚಾರ ಮಾಡಬೇಕಾದರೆ ಚಾಮರವನ್ನು ಬಳಸಲಾಗುತ್ತದೆ ಇಂತಹ ಶಕ್ತಿಯುತವಾದ ಚಾಮರವನ್ನು ದೇವರ ಕೋಣೆಯಲ್ಲಿ ಇಡುವುದರಿಂದ ಕೆಲಸ ಕಾರ್ಯಗಳು ಕೂಡ ಯಶಸ್ವಿಯಾಗಿ ಆಗುತ್ತದೆ ಹಾಗೂ ಶುಭಫಲಗಳು ಪ್ರಾಪ್ತಿಯಾಗುತ್ತದೆ. ಹಾಗೆಯೇ ಲಕ್ಷ್ಮಿ ದೇವಿಗೆ ಅರಿಶಿನ ಬಣ್ಣದಲ್ಲಿರುವ ಕವಡೆಗಳು ಎಂದರೆ ಇಷ್ಟ ಆದ್ದರಿಂದ ಲಕ್ಷ್ಮಿ ದೇವಿಯ ಪ್ರೀತಿಗೋಸ್ಕರ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಆರು ಅಥವಾ ಒಂಬತ್ತು ಸಂಖ್ಯೆಯಲ್ಲಿ
ಅರಿಶಿನದ ಕವಡೆಯನ್ನು ಏರ್ಪಾಡುಕೊಳ್ಳಬೇಕು ಹೀಗೆ ಮಾಡಿದರೆ ಲಕ್ಷ್ಮಿ ದೇವಿಯ ಕೃಪೆ ಮನೆಯಲ್ಲಿ ಸದಾ ಕಾಲ ನೆಲೆಸಿರುತ್ತದೆ ಹಾಗೆಯೇ ಲಕ್ಷ್ಮಿ ದೇವಿಗೆ ಎಷ್ಟು ಪ್ರಿಯವಾದ ದಕ್ಷಿಣ ಆವೃತ ಶಂಕವನ್ನು ದೇವರ ಕೋಣೆಯಲ್ಲಿ ಏರ್ಪಾಡು ಮಾಡಿಕೊಳ್ಳಬೇಕು. ವಿಷ್ಣುಮೂರ್ತಿ ಹಾಗೂ ಲಕ್ಷ್ಮೀದೇವಿ ಇಬ್ಬರಿಗೂ ಶಂಕವೆಂದರೆ ಬಲು ಪ್ರೀತಿ ಶಂಕವನ್ನು ದೇವರ ಕೋಣೆಯಲ್ಲಿ ಇರ್ಪಾಡು ಮಾಡಿ ಪ್ರತಿನಿತ್ಯ ಒಂದು ಕೆಂಪು ಬಣ್ಣದ ಅಥವಾ ಬಿಳಿ ಬಣ್ಣದ ಪುಷ್ಪವನ್ನು ಅರ್ಪಿಸುತ್ತಾ ಪೂಜೆಯನ್ನು ಮಾಡುತ್ತ ಬಂದರೆ ಆರೋಗ್ಯ ಐಶ್ವರ್ಯ ಮನೆಯಲ್ಲಿ ಸಿದ್ಧಿಯಾಗುತ್ತದೆ. ಹಣಕಾಸಿನಂತೆ ಏಳಿಗೆಯೂ ಆಗುತ್ತಾ ಹೋಗುತ್ತದೆ
ಹಾಗೆಯೇ ಮನೆಯಲ್ಲಿ ಪಾದರಸವನ್ನು ಇಟ್ಟರೆ ತುಂಬಾ ಒಳ್ಳೆಯದು ಪಾದರಸವನ್ನು ಯಾವಾಗಲೂ ಗಂಧದ ಚಕ್ಕೆ ಜೊತೆಗೆ ಇಟ್ಟುಕೊಳ್ಳಬೇಕು ಯಾವಾಗಲೂ ಒಂಟಿಯಾಗಿ ಪಾದರಸವನ್ನು ಇಡಬಾರದು ಪಾದರಸ ಹಾಗೂ ಗಂಧದ ಚಿಕ್ಕ ಚಕ್ಕೆಯನ್ನು ಒಟ್ಟಿಗೆ ಇಟ್ಟರೆ ವಿಷ್ಣು ದೇವರ ಅನುಗ್ರಹ ಲಕ್ಷ್ಮಿ ದೇವರ ಅನುಗ್ರಹ ಸಕಲ ದೇವತೆಗಳ ಅನುಗ್ರಹ ಪರಮೇಶ್ವರನ ಅನುಗ್ರಹ ಇಡಿ ಮನೆಗೆ ಇಡೀ ಕುಟುಂಬದ ಸದಸ್ಯರಿಗೆ ಪ್ರಾಪ್ತಿಯಾಗುತ್ತದೆ. ಮಾಡುವ ಕೆಲಸದಲ್ಲಿ ದೈವ ಬಲದಿಂದ ಯಶಸ್ಸು ಕಾಣುತ್ತದೆ ಹಾಗೆಯೇ ಶಂಖ, ಚಕ್ರ, ನಾಮ ಇರುವಂತಹ ಪಾತ್ರೆ ಅಥವಾ ಲೋಟವನ್ನು ವಿಶೇಷವಾಗಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಏರ್ಪಾಡು ಮಾಡಿಕೊಳ್ಳಬೇಕು. ಬೆಳ್ಳಿಯ ಲೋಹ ಅಥವಾ ತಾಮ್ರದ ವಾಗಿರಬಹುದು ಏನು ಮಾಡಿದೆ
ಇಟ್ಟರೆ ದೇವರ ಕೋಣೆಯಲ್ಲಿ ತುಂಬಾ ಒಳ್ಳೆಯದು ಈ ಒಂದು ವಸ್ತುವನ್ನು ಇಡುವುದರಿಂದ ಲಕ್ಷ್ಮೀದೇವಿ ಅಂಶ ಮನೆಗೆ ಪ್ರಾಪ್ತಿಯಾಗುತ್ತದೆ ಈ ಒಂದು ಪಾತ್ರೆ ಅಥವಾ ಲೋಟವನ್ನು ಧನಲಕ್ಷ್ಮಿ ಕುಂಚ ಎಂದು ಕರೆಯಲಾಗುತ್ತದೆ . ಈ ಒಂದು ಪಾತ್ರೆಯಲ್ಲಿ ಅಕ್ಕಿ ಅಥವಾ ನಾಣ್ಯವನ್ನು ತುಂಬಿಸಿ ದೇವರ ಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡುತ್ತಾ ಬರಬೇಕು. ಕೊನೆಯದಾಗಿ ದೇವರ ಕೋಣೆಯಲ್ಲಿ ಅರಿಶಿಣ, ಕುಂಕುಮ, ಬಳೆಗಳು, ಕಾಡಿಗೆ ಹಾಗೂ ಕನ್ನಡಿ ಇವಿಷ್ಟನ್ನು ಕೂಡ ಅಷ್ಟದಳ ರಂಗೋಲಿಯನ್ನು ಬರೆದು ಅದರ ಮೇಲೆ ಪೀಠದ ಮೇಲೆ ಅಥವಾ ಮಣೆಯ ಮೇಲೆ ಏರ್ಪಾಡು ಮಾಡಿಕೊಂಡರೆ ಲಕ್ಷ್ಮಿ ದೇವಿಯ ಪರಿಪೂರ್ಣವಾದಂತಹ ಅನುಗ್ರಹ ಪ್ರಾಪ್ತಿಯಾಗುತ್ತವೆ.
ಹಾಗೆ ಲಕ್ಹ್ಮೀ ದೇವಿಗೆ ತಾವರೆಯ ಬೀಜಗಳಿದ್ದರೆ ತುಂಬಾ ಇಷ್ಟ ಆದ್ದರಿಂದ ದೇವರ ಕೋಣೆಯಲ್ಲಿ ತಾವರೆಯ ಬೀಜವನ್ನು ತಪ್ಪದೇ ಏರ್ಪಾಡು ಮಾಡಿಕೊಳ್ಳಬೇಕು. ನೋಡಿದ್ದೀರಲ್ಲ ಲಕ್ಷ್ಮಿ ದೇವಿಯ ಅನುಗ್ರಹಕ್ಕೋಸ್ಕರ ಪರಮೇಶ್ವರನ ಅನುಗ್ರಹಕ್ಕೋಸ್ಕರ ಸಕಲ ದೇವತೆಗಳ ಅನುಗ್ರಹಕ್ಕೋಸ್ಕರ ವಿಷ್ಣುವಿನ ಶಕ್ತಿಗೋಸ್ಕರ ಮನೆಯಲ್ಲಿ ಯಾವೆಲ್ಲ ವಸ್ತುಗಳನ್ನು ಅಂದರೆ ದೇವರ ಕೋಣೆಯಲ್ಲಿ ಇಡಬೇಕಾದ ವಸ್ತುಗಳ ಬಗ್ಗೆ ಇವತ್ತಿನ ಈ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೀರಿ.ಸ್ನೇಹಿತರೆ ಈ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು.