ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ,ಶ್ರಾವಣ ಮಾಸದ ಶಿವನಿಗೆ ಅತ್ಯಂತ ಪ್ರಿಯವಾದ ತಿಂಗಳು. ಈ ತಿಂಗಳು ಪ್ರತಿಯೊಂದು ಮಾಸವು ಹಬ್ಬದಂತೆ ಭಾಸವಾಗುತ್ತದೆ. ಈ ಬಾರಿಯ ಶ್ರಾವಣ ಮಾಸವು ಆಗಸ್ಟ್ 5 ರಂದು ಸೋಮವಾರದಿಂದ ಪ್ರಾರಂಭವಾಗಲಿದೆ. ಈ ಸಮಯದಲ್ಲಿ ನೀವು ಶಿವನನ್ನು ಮೆಚ್ಚಲು ಬಯಸಿದರೆ, ಶಿವನಿಗೆ ರುದ್ರಾಭಿಷೇಕ ಮತ್ತು ಜನಾಭಿಷೇಕವನ್ನು ಮಾಡಬೇಕು. ಮತ್ತೊಂದೆಡೆ, ಶ್ರಾವಣ ಮಾಸದಲ್ಲಿ ಕೆಲವೊಂದು ಕೆಲಸಗಳನ್ನು ಅಪ್ಪಿ ತಪ್ಪಿಯು ಮಾಡಬಾರದು ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ನಾವು ಈ ತಪ್ಪುಗಳನ್ನು ಮಾಡುವುದರಿಂದ ಶಿವನ ಕೋಪಕ್ಕೆ ಗುರಿಯಾಗುವಂತಾಗಬಹುದು.
ಶ್ರಾವಣ ಮಾಸದಲ್ಲಿ ನಾವು ಯಾವೆಲ್ಲ ತಪ್ಪುಗಳನ್ನು ಮಾಡಬಾರದು ಎಂದು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.
ತಿನ್ನುವ ಈ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ಇರಲಿ. ಶ್ರಾವಣ ಮಾಸದಲ್ಲಿ ಯಾವುದೇ ವ್ಯಕ್ತಿ ತಪ್ಪಾಗಿಯೂ ಮಾಂಸ ಮತ್ತು ಮಧ್ಯವನ್ನು ಸೇವಿಸಬಾರದು. ಈ ಸಮಯದಲ್ಲಿ ಈ ವಸ್ತುಗಳನ್ನು ಸೇವಿಸುವುದರಿಂದ ಶುಭ ಫಲ ನೀಡುವುದಿಲ್ಲ. ಶ್ರಾವಣ ಮಾಸದಲ್ಲಿ ಬೆಳ್ಳುಳ್ಳಿ ಈರುಳ್ಳಿ ಮತ್ತು ಬದನೆಕಾಯಿ ಅಂತಹ ತಾಮಸಿಕ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು.
ಎಣ್ಣೆಯನ್ನು ಹಚ್ಚಬೇಡಿ : ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರಾವಣ ಮಾಸದಲ್ಲಿ ಯಾವುದೇ ವ್ಯಕ್ತಿ ದೇಹಕ್ಕೆ ಎಣ್ಣೆಯನ್ನು ಹಚ್ಚಬಾರದು. ಈ ತಿಂಗಳಲ್ಲಿ ಎಣ್ಣೆಯನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಲು ಸೇವಿಸುವುದನ್ನು ತಪ್ಪಿಸಿ : ಪವಿತ್ರ ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಶಿವ ಪೂಜೆಯನ್ನು ಮಾಡುವುದಕ್ಕಿಂತಲೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ಮಾಸದಲ್ಲಿ ಶಿವಲಿಂಗಕ್ಕೆ ನೀರಿನ ಅಭಿಷೇಕವನ್ನು, ಹಾಲಿನ ಅಭಿಷೇಕವನ್ನು, ಎಳನೀರಿನ ಅಭಿಷೇಕವನ್ನು ಹೀಗೆ ನಾನಾ ರೀತಿಯ ಅಭಿಷೇಕವನ್ನು ಮಾಡಲಾಗುತ್ತದೆ.
ಶಿವಲಿಂಗಕ್ಕೆ ಶ್ರಾವಣ ಮಾಸದಲ್ಲಿ ಹಾಲಿನ ಅಭಿಷೇಕ ಮಾಡುವುದರಿಂದ ಈ ಮಾಸದಲ್ಲಿ ನಾವು ಹಾಲನ್ನು ಸೇವಿಸಬಾರದು. ಬದಲಾಗಿ, ಹಾಲನ್ನು ಶಿವನಿಗೆ ಅರ್ಪಿಸಬೇಕು. ಯಾವುದೇ ವ್ಯಕ್ತಿಯನ್ನು ಅಗೌರವಗೊಳಿಸಬಾರದು :
ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರಾವಣ ಮಾಸದಲ್ಲಿ ಯಾವುದೇ ವ್ಯಕ್ತಿಯನ್ನು ತಪ್ಪಾಗಿಯೂ ಅಗೌರವಗೊಳಿಸಬಾರದು ಮತ್ತು ಇತರೆ ವ್ಯಕ್ತಿಯ ಬಗ್ಗೆ ನಾವು ನಕಾರಾತ್ಮಕ ಆಲೋಚನೆಗಳನ್ನು ನಾವು ನಮ್ಮ ಮನಸ್ಸಿನಲ್ಲಿ ತಂದುಕೊಳ್ಳಬಾರದು.
ಹಾಗೂ ಇತರರ ಬಗ್ಗೆ ನಾವು ನಿಂದನೀಯ ಪದಗಳನ್ನು ಬಳಸಬಾರದು. ಈ ಸಮಯದಲ್ಲಿ ಮಹಾದೇವನನ್ನು ಮನಃಪೂರ್ವಕವಾಗಿ ಆರಾಧಿಸುವುದು ಉತ್ತಮ. ಹಾಸಿಗೆಯ ಮೇಲೆ ಮಲಗುವುದನ್ನು ತಪ್ಪಿಸಿ: ಪವಿತ್ರ ಶ್ರಾವಣ ಮಾಸದಲ್ಲಿ ಯಾವುದೇ ಉಪವಾಸ ವ್ರತ ಮಾಡುವವರು ಹಾಗೂ ಮಾಡದೇ ಇರುವವರು ಹಾಸಿಗೆಯ ಮೇಲೆ ಮಲಗಬಾರದು. ಅದರಲ್ಲೂ ಈ ಮಾಸದಲ್ಲಿ ಯಾರಾದರೂ ಉಪವಾಸ ವ್ರತ ಮಾಡುತ್ತಿದ್ದರೆ ಅವರು ದಿನದಲ್ಲಿ ಒಂದು ಬಾರಿ ಮಾತ್ರ ಮಲಗಬೇಕು ಎನ್ನುವ ನಂಬಿಕೆ. ಉಳಿದ ಸಮಯಗಳಲ್ಲಿ ಅವರು ಶಿವ ಭಕ್ತಿಯಲ್ಲಿ ಮಗ್ನರಾಗಬೇಕು ಶಿವ ಕೀರ್ತನೆಯನ್ನು ಮಾಡಬೇಕು. ಸ್ನೇಹಿತರೆ ಈ ಒಂದು ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿರಿ ಧನ್ಯವಾದಗಳು.