ನಮಸ್ತೆ ಓದುಗರೇ.ಇಂದು ನಾವು ಬಹಳ ವಿಶಿಷ್ಟವಾದ ಒಂದು ವಿಚಾರವನ್ನು ತಿಳಿಯೋಣ ಬನ್ನಿ. ಅದಕ್ಕೂ ಮುಂಚೆ ನಮ್ಮ ಪೇಜ್ ಗೆ ಲೈಕ್ ಮಾಡಿ. ಮನೆ ಅಂದ ಮೇಲೆ ದೇವರ ಕೋಣೆ, ದೇವರ ಕೋಣೆಯಲ್ಲಿ ಹಲವು ರೀತಿಯ ಫೋಟೋಗಳನ್ನು ಇಟ್ಟಿರುತ್ತೇವೆ. ಈ ಫೋಟೋಗಳಲ್ಲಿ ಯಾವ ದೇವರ ಫೋಟೋ ಇಡುವುದು ಬಹಳ ಮುಖ್ಯ,ಮನೆಯಲ್ಲಿ ಯಾವ ಬಗೆಯ ದೇವರ ಫೋಟೋ ದೇವರ ಕೋಣೆಯಲ್ಲಿ ಇಡಬೇಕು ಎನ್ನುವುದನ್ನು ತಿಳಿಯೋಣ ಬನ್ನಿ
ಈ ಫೋಟೋಗಳನ್ನು ಇಟ್ಟರೆ ಧನಲಕ್ಷ್ಮಿ ಧಾನ್ಯ ಲಕ್ಷ್ಮಿ ಹಾಗೂ ಮನೆಯಲ್ಲಿ ನೆಮ್ಮದಿ, ಆರೋಗ್ಯ, ಹಾಗೂ ಶಾಂತಿ ಇರುತ್ತದೆ ಎಂದು ಹೇಳುತ್ತಾರೆ.ಹಾಗಾದ್ರೆ ಆ ಫೋಟೋಗಳು ಯಾವುವು ಅಂದರೆ ಒಂದನೆಯದು ಶ್ರೀರಾಮನ ಪಟ್ಟಾಭಿಷೇಕ ಮಹೋತ್ಸವದ ಫೋಟೋ ಪ್ರತೀ ಮನೆಯಲ್ಲೂ ಇದ್ದರೆ ಒಳ್ಳೆಯದು.ಈ ಫೋಟೋವನ್ನು ಇಟ್ಟು ಪೂಜಿಸುವುದರಿಂದ ರಾಮ ನ ಸಹಿತ ಸೀತಾ ಮಾತಯೂ ಹಾಗೂ ಆಂಜನೇಯ, ಲಕ್ಷ್ಮಣ, ಭರತ ಶತ್ರುಘ್ನ ರ ಸಮೇತ ಈ ಫೋಟೋದಲ್ಲಿ ಇರುವುದರಿಂದ ಎಲ್ಲರ ಅನುಗ್ರಹ ಪಡೆಯಲು ಸಹಕಾರಿ ಎಂದು ಹೇಳುತ್ತಾರೆ.
ಈ ಫೋಟೋ ಕ್ಕೆ ಒಂದು ಹೂ ಮುಡಿಸಿ ಭಕ್ತಿಯಿಂದ ನಮಿಸಿ ಪೂಜೇಮಾಡಿದರೆ ಒಳ್ಳೆಯದು ಆಗುತ್ತದೆ ಎನ್ನುತ್ತಾರೆ.ಇನ್ನೂ ಎರಡನೇ ಫೋಟೋ ಎಂದರೆ ಅರ್ಧನಾರೀಶ್ವರ ಫೋಟೋ. ಕೆಲವರು ತಪ್ಪು ತಿಳಿದಿದ್ದಾರೆ ಅರ್ದನಾರೀಶ್ವರ ಫೋಟೋ ಇಡುವುದು ಮನೆಯಲ್ಲಿ ತಪ್ಪು ಎಂದು, ಆದರೆ ಅದು ತಪ್ಪಲ್ಲ.
ಪ್ರತಿ ಮನೆಯಲ್ಲೂ ಅರ್ಧನಾರೀಶ್ವರ ಫೋಟೋ ಇಡುವುದು ಬಹಳ ಒಳ್ಳೆಯದು.ಇದರಿಂದ ಪತಿ ಪತ್ನಿಯರ ನಡುವೆ ಅನ್ಯೋನ್ಯ ಸಂಬಂಧ,ಪರಸ್ಪರ ಪ್ರೀತಿ ಇರುತ್ತದೆ ಎನ್ನುತ್ತಾರೆ ಪಂಡಿತರು.ಇನ್ನೂ ಪೂಜೆ ಮಾಡುವುದು ಹೇಗೆ ಎಂದರೆ ಈಶ್ವರನಿಗೆ ಶುಭ್ರವಾದ ಬಿಳಿ ಹೂ ಹಾಗೂ ಪಾರ್ವತಿ ಮಹಾ ತಾಯಿಗೆ ಕೆಂಪು ಬಣ್ಣದ ಹೂ ಮುಡಿಸಿ ಭಕ್ತಿಯಿಂದ ಪೂಜೆ ಮಾಡಬೇಕು.
ಹಾಗೆಯೇ ಮತ್ತೊಂದು ಮನೆಯಲ್ಲಿ ಇರಬೇಕಾದ ಫೋಟೋ ಎಂದರೆ ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋ.ಮನೆಗೆ ತಗಲುವ ಗೃಹ ದೋಷಗಳು, ಪೀಡೆ ಹಾಗೂ ನರದೃಷ್ಟಿ ಅಂತಹ ಸಕಲ ಬಾದೆಗಳಿಂದ ರಕ್ಷಿಸಲು ಆಂಜನೇಯನ ಈ ಫೋಟೋ ಬಹಳ ಸಹಕಾರಿ.ಈ ಫೋಟೋ ಇದ್ದರೆ ಸಕಲ ರೀತಿಯಲ್ಲೂ ಬಾಧೆಗಳು ನಿವಾರಣೆ ಆಗುತ್ತದೆ ಎನ್ನುತ್ತಾರೆ ಪಂಡಿತರು.ಇನ್ನೂ ಮಗದೊಂದು ಫೋಟೋ ಎಂದರೆ ಶ್ರೀಮನ್ನಾರಾಯಣ ಹಾಗೂ ಲಕ್ಷ್ಮಿ ದೇವಿಯ ಒಂದೇ ಫೋಟೋದಲ್ಲಿ ಇರುವ ಫೋಟೋ.
ಹಾಗೆ ಲಕ್ಷ್ಮಿ ದೇವಿಯ ಇನ್ನೊಂದು ಫೋಟೋ ಎಂದರೆ ಲಕ್ಷ್ಮಿ ದೇವಿಯು ಸರೋವರದಲ್ಲಿ ತಾವರೆ ಮೇಲೆ ಕೂತು ಅಭಯ ಹಸ್ತ ಇರುವ ಫೋಟೋ ಇಟ್ಟರೆ ತುಂಬಾ ಒಳ್ಳೆಯದು.ಇಂತ ಫೋಟೋ ಇಟ್ಟು ಪೂಜಿಸಿ ಕುಂಕುಮಾರ್ಚನೆ ಮಾಡುವುದರಿಂದ ಲಕ್ಷ್ಮಿ ದೇವಿಯು ಅನುಗ್ರಹ ಪ್ರಾಪ್ತಿ ಸುಲಭವಾಗುತ್ತದೆ ಎಂದು ಹೇಳುತ್ತಾರೆ.
ಹಾಗೆಯೇ ಗ್ರಾಮದ ದೇವತೆಯನ್ನು ಫೋಟೋ ಇಟ್ಟು ಪೂಜಿಸಿ ಒಳ್ಳೆದಾಗುತ್ತದೆ. ಹಾಗೆಯೇ ಮತ್ತೊಂದು ಮಾತು. ಒಂದೇ ತರದ ತುಂಬಾ ದೇವರ ಫೋಟೋ ಮನೆಯಲ್ಲಿ ಇಡುವುದು ಒಳ್ಳೆಯದು ಅಲ್ಲ.ಇಷ್ಟು ಮನೆಯಲ್ಲಿ ಯಾವ ಯಾವ ಫೋಟೋ ಇಡಬೇಕು ಎಂಬುದರ ಒಂದಷ್ಟು ಮಾಹಿತಿ. ಇಷ್ಟ ಆಗಿದ್ದರೆ ಜೈ ಆಂಜನೇಯ ಎಂದು ಕಾಮೆಂಟ್ ಮಾಡಿ, ಶೇರ್ ಮಾಡಿ ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೂ ತಿಳಿಸಿ. ಸರ್ವರಿಗೂ ಒಳ್ಳೆದಾಗಲಿ.