ನಾವು ಈ ಲೇಖನದಲ್ಲಿ ಆಷಾಢ ಮಾಸ ಪ್ರಾರಂಭ . ಮನೆಯಲ್ಲಿ ಯಾವ ರೀತಿಯ ಸಿದ್ಧತೆ ಮಾಡಿ ಕೊಳ್ಳುಬೇಕು ಎಂದು ತಿಳಿದು ಕೊಳ್ಳೋಣ . ಆಷಾಢ ಮಾಸದಲ್ಲಿ ಪ್ರತಿಯೊಂದು ದಿನವೂ ಕೂಡ ಶ್ರೇಷ್ಠವಾಗಿರುತ್ತದೆ . ಹಾಗಾಗಿ ಕೆಲವೊಂದು ವಸ್ತುಗಳನ್ನು ಖರೀದಿ ಮಾಡಿ ಇಟ್ಟುಕೊಳ್ಳಬೇಕು . ಹೆಣ್ಣು ಮಕ್ಕಳು ಈ ದಿನಕ್ಕೋಸ್ಕರ ಕಾಯುತ್ತಿರುತ್ತಾರೆ . ಆಷಾಢ ಮಾಸದಲ್ಲಿ ಶಕ್ತಿ ದೇವತೆಯನ್ನು ಹೆಚ್ಚಾಗಿ ಆರಾಧನೆ ಮಾಡುವುದರಿಂದ , ನಮ್ಮ ಮನೆ ದೇವರ ಹರಕೆಗಳು ಅಥವಾ ಯಾವುದಾದರೂ ವ್ರತವನ್ನು ಪ್ರಾರಂಭ ಮಾಡಲು ತುಂಬಾ ಒಳ್ಳೆಯ ಸಮಯ ಎಂದು ಹೇಳಬಹುದು .
ಶುಕ್ರವಾರದ ದಿನ ನಿಂಬೆಹಣ್ಣಿನ ದೀಪವನ್ನು ಹಚ್ಚಲು ಈ ಆಷಾಢ ಮಾಸ ತುಂಬಾ ಪ್ರಶಸ್ತವಾಗಿರುತ್ತದೆ . ಹಾಗಾಗಿ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ . ನಮಗೆ ಅವಶ್ಯಕತೆ ಇರುವ ವಸ್ತುಗಳನ್ನು ಈ ಆಷಾಢ ಮಾಸದಲ್ಲಿ ಖರೀದಿ ಮಾಡಬಹುದು . ನಮ್ಮ ಸಂಪ್ರದಾಯದಲ್ಲಿ ಪ್ರತಿಯೊಂದು ಮಾಸಕ್ಕೂ ಕೂಡ ಬಹಳ ಪ್ರಾಮುಖ್ಯತೆ ಇರುತ್ತದೆ .ಒಂದೊಂದು ಮಾಸಗಳ ಹಿಂದೆ ಒಂದೊಂದು ಅರ್ಥಗಳು ಇರುತ್ತವೆ . ವಿಭಿನ್ನವಾದ ಅರ್ಥಗಳು ಇರುತ್ತದೆ .
ಈ ಮಾಸಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಮಾಸ ಎಂದರೆ ಅದು ಆಷಾಢ ಮಾಸ . ಈ ಆಷಾಢ ಮಾಸದಲ್ಲಿ ಹೆಚ್ಚಾಗಿ ದೈವಿಕ ಕಾರ್ಯಗಳನ್ನು ಮಾಡುತ್ತೇವೆ . ಆದರೆ ಯಾವುದೇ ಒಂದು ಶುಭ ಕಾರ್ಯಗಳನ್ನು ಮಾಡುವುದಿಲ್ಲ . ಈ ಆಷಾಢ ಮಾಸದಿಂದ ಚಾತುರ್ಮಾಸ ಕೂಡ ಪ್ರಾರಂಭವಾಗುತ್ತದೆ . ಈ ಮಾಸದಲ್ಲಿ ನಾಲ್ಕು ತಿಂಗಳುಗಳ ಕಾಲ ವಿಷ್ಣು ಯೋಗ ನಿದ್ರೆಗೆ ಜಾರುತ್ತಾರೆ . ಹಾಗಾಗಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ . ಆಷಾಢ ಮಾಸದಲ್ಲಿ ಯಾರು ಕೂಡ ಮನೆ ಬದಲಾಯಿಸುವುದಿಲ್ಲ ಮತ್ತು ಹಾಲು ಕೂಡ ಉಕ್ಕಿಸುವುದಿಲ್ಲ . ಬೆಳಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ಹಾಲು ಉಕ್ಕಿಸುವುದು ತುಂಬಾ ಒಳ್ಳೆಯದು .
ಸಂಜೆಯ ಸಮಯದಲ್ಲಿ ಯಾರು ಹಾಲನ್ನು ಉಕ್ಕಿಸುವುದಿಲ್ಲ . ಇದೇ ಜುಲೈ 5 ನೇ ತಾರೀಕು ಅಮಾವಾಸ್ಯೆ ಇದೆ . ಈ ಅಮಾವಾಸ್ಯೆ ಆದ ನಂತರ ಆಷಾಢ ಮಾಸ ಪ್ರಾರಂಭವಾಗುತ್ತದೆ . ಆರನೇ ತಾರೀಖಿನಿಂದ ಆಷಾಢ ಮಾಸ ಪ್ರಾರಂಭವಾಗುತ್ತದೆ . ಇದನ್ನು ಆಷಾಢ ಅಮಾವಾಸ್ಯೆ ಎಂದು ಕೂಡ ಕರೆಯಲಾಗುತ್ತದೆ . ಜುಲೈ 5 ನೇ ತಾರೀಕು ಬೆಳಿಗ್ಗೆ 5 ಗಂಟೆಗೆ ಅಮಾವಾಸ್ಯೆ ತಿಥಿ ಪ್ರಾರಂಭವಾಗುತ್ತದೆ . ಮಾರನೇ ದಿನ ಆರನೇ ತಾರೀಕು ಬೆಳಿಗ್ಗೆ 4 ಗಂಟೆಗೆ ಅಮಾವಾಸ್ಯೆ ತಿಥಿ ಮುಕ್ತಾಯವಾಗುತ್ತದೆ .
ಹಾಗಾಗಿ ಶುಕ್ರವಾರದ ದಿನ ಅಮಾವಾಸ್ಯೆಯನ್ನು ಆಚರಣೆ ಮಾಡಬೇಕು . ಆಷಾಢದ ಲಕ್ಷ್ಮಿ ಪೂಜೆ ಮಾಡುವವರು ಇದ್ದರೆ , ಈ ದಿನ ಪ್ರಾರಂಭ ಮಾಡಬಹುದು . ಈ ದಿನದಲ್ಲಿ ಲಕ್ಷ್ಮಿ ಪೂಜೆ ಮತ್ತು ಯಾವುದೇ ರೀತಿಯ ವ್ರತಗಳನ್ನು ಪ್ರಾರಂಭ ಮಾಡಬಹುದು . ಅದಕ್ಕಿಂತ ಮೊದಲು ಮನೆಯಲ್ಲೂ ಕೂಡ ಕೆಲವು ತಯಾರಿಗಳನ್ನು ಮಾಡಿಕೊಳ್ಳಬೇಕು . ಉಪಯೋಗಿಸದೆ ಇರುವ ವಸ್ತುಗಳನ್ನು ಮನೆಯಿಂದ ಹೊರಗಡೆ ಹಾಕಬೇಕು . ಹಳೆಯ ವಸ್ತುಗಳನ್ನು ಇಟ್ಟು ಕೊಳ್ಳುವುದರಿಂದ ಶೇಖರಣೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ .
ಬೇಡದೇ ಇರುವ ವಸ್ತುಗಳನ್ನು ಹೊರಗಡೆ ಹಾಕಿ . ಅಮಾವಾಸ್ಯೆಗೂ ಮೊದಲೇ ಬೇಡದೆ ಇರುವ ವಸ್ತುಗಳನ್ನು ಮನೆಯಿಂದ ಹೊರಗಡೆ ಹಾಕಬೇಕು . ಪೂಜಾ ಸಾಮಾಗ್ರಿಗಳನ್ನು ವಿವರವಾಗಿ ತಿಳಿದುಕೊಂಡು ತಯಾರು ಮಾಡಿ ಇಟ್ಟುಕೊಳ್ಳಬೇಕು . ಈ ಸಾಮಾಗ್ರಿಗಳನ್ನು ಅಮಾವಾಸ್ಯೆಗೂ ಮುನ್ನ ತಂದು ಇಟ್ಟು ಕೊಳ್ಳಬೇಕು. ಪೂಜಾ ಕೋಣೆಗೆ ಏನು ಅವಶ್ಯಕತೆ ಇರುತ್ತದೆ ಅದನ್ನೆಲ್ಲಾ ರೆಡಿ ಮಾಡಿ ಇಟ್ಟುಕೊಳ್ಳಬೇಕು . ಮನೆಯಲ್ಲಿ ಸಮೃದ್ಧಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ . ಈ ಆಷಾಢ ಮಾಸವನ್ನು ಶೂನ್ಯ ಮಾಸ ಎಂದು ಕೂಡ ಕರೆಯಲಾಗುತ್ತದೆ . ಹಾಗಾಗಿ ಈ ಒಂದು ಮಾಸದಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳನ್ನು ಮಾಡುವುದಿಲ್ಲ . ಈ ಆಷಾಢ ಮಾಸದಿಂದ ಚಾತುರ್ಮಾಸ ಕೂಡ ಪ್ರಾರಂಭ ಆಗುತ್ತದೆ . ನಾಲ್ಕು ತಿಂಗಳುಗಳ ಕಾಲ ವಿಷ್ಣು ಯೋಗ ನಿದ್ರಿಗೆ ಜಾರುವುದರಿಂದ ಯಾವುದೇ ರೀತಿಯ ಶುಭ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ . ಇದು ಚಾತುರ್ಮಾಸದ ಮೊದಲ ತಿಂಗಳು ಆಗಿರುತ್ತದೆ . ಹಾಗಾಗಿ ಈ ತಿಂಗಳಲ್ಲಿ ಶುಭ ಕಾರ್ಯಗಳಿಗಿಂತ ದೇವರ ಕಾರ್ಯಗಳನ್ನು ಹೆಚ್ಚಾಗಿ ಮಾಡುತ್ತಾರೆ . ದೇವರನ್ನು ಹೆಚ್ಚಾಗಿ ಆರಾಧನೆ ಮಾಡಬೇಕು . ಮನೆ ದೇವರ ಹರಕೆಗಳು ಇದ್ದರೆ ಈ ತಿಂಗಳಲ್ಲಿ ಮಾಡಬಹುದು . ಶಕ್ತಿ ದೇವತೆಗಳಿಗೆ ಸಂಬಂಧಪಟ್ಟ ಏನೇ ಹರಕೆಗಳು ಇದ್ದರೂ ಕೂಡ ಈ ಆಷಾಢ ಮಾಸದಲ್ಲಿ ಅದನ್ನು ಮಾಡಬಹುದು . ಪ್ರತಿದಿನ ತಾಮ್ರದ ಚೊಂಬಿನಲ್ಲಿ ನೀರು ತುಂಬಿಸಿ ಇಟ್ಟು , ಬೆಳಗ್ಗೆ ಸೂರ್ಯನಿಗೆ ಅರ್ಘ್ಯವನ್ನು ಕೊಡುತ್ತಾ ಬಂದರೆ , ಮನೆಯಲ್ಲಿ ಅಭಿವೃದ್ಧಿ ಆಗುತ್ತದೆ .ಈ ಆಷಾಢ ಮಾಸದಲ್ಲಿ ಗಣಪತಿ , ಆದಿಶಕ್ತಿ , ಸೂರ್ಯ , ಮತ್ತು ಲಕ್ಷ್ಮೀ ನಾರಾಯಣರನ್ನು ಆರಾಧನೆ ಮಾಡಬೇಕು . ಲಕ್ಷ್ಮೀ ದೇವಿಗೆ ಶುಕ್ರವಾರದ ದಿನ ಕಮಲ ಮತ್ತು ಕೆಂಪು ಹೂಗಳನ್ನು ಅರ್ಪಣೆ ಮಾಡುವುದರಿಂದ , ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ . ಹಣದ ಸಮಸ್ಯೆಗಳು ನಿವಾರಣೆ ಆಗುತ್ತಾ ಹೋಗುತ್ತದೆ . ಆಷಾಢ ಮಾಸದಲ್ಲಿ ಯಾವುದೇ ರೀತಿಯ ಹೋಮಗಳು ಯಜ್ಞಗಳನ್ನು ಮಾಡಬಹುದು . ದಾನಗಳನ್ನು ಕೊಡುವುದರಿಂದ ಒಳ್ಳೆಯ ಫಲಗಳನ್ನು ತಂದುಕೊಡುತ್ತದೆ . ಆಷಾಢ ಮಾಸದ ಪ್ರತಿಯೊಂದು ದಿನವೂ ಕೂಡ ವಿಶೇಷತೆಯನ್ನು ಹೊಂದಿರುತ್ತದೆ . ಆಷಾಢ ಮಾಸದಲ್ಲಿ ಬರುವ ಏಕಾದಶಿ ಅಥವಾ ಹುಣ್ಣಿಮೆ ಇವುಗಳಿಗೆ ಹೆಚ್ಚಿನ ಮಹತ್ವ ಇರುತ್ತದೆ . ಹಾಗಾಗಿ ಈ ಒಂದು ಆಷಾಢ ಮಾಸದ ಪೂರ್ವ ಸಿದ್ಧತೆಗಳನ್ನು ಈ ರೀತಿಯಾಗಿ ಮಾಡಿಕೊಳ್ಳಬೇಕು . ಯಾವುದಾದರೂ ಗಿಡಗಳು ಅಥವಾ ತುಳಸಿ, ಗಿಡಗಳನ್ನು ತರಬೇಕು ಎಂದುಕೊಂಡಿದ್ದರೆ ಈ ತಿಂಗಳ 7ನೇ ತಾರೀಕು ಪ್ರಶಸ್ತವಾಗಿರುತ್ತದೆ . ನೀವು ಹಬ್ಬಕ್ಕೆ ಸೀರೆ , ಚಿನ್ನ , ಬೆಳ್ಳಿ ಈ ರೀತಿಯಾದ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂದರೆ, ಈ ತಿಂಗಳ ಏಳನೇ ತಾರೀಕು ಭಾನುವಾರ ಖರೀದಿ ಮಾಡುವುದರಿಂದ ಒಳ್ಳೆಯ ಫಲಗಳನ್ನು ನೀಡುತ್ತದೆ ಎಂದು ಹೇಳಬಹುದು . ಈ ದಿನ ರವಿ ಪುಷ್ಯಾಮೃತ ಯೋಗ ಇರುತ್ತದೆ . ಈ ರೀತಿಯ ಪುಷ್ಯ ನಕ್ಷತ್ರ ಭಾನುವಾರ ಅಥವಾ ಗುರುವಾರ ಬರುವ ದಿನ ಮನೆಗೆ ಗಿಡಗಳನ್ನು ತೆಗೆದುಕೊಂಡು ಬಂದರೆ ಒಳ್ಳೆಯ ಸಮೃದ್ಧಿಯನ್ನು ತಂದುಕೊಡುತ್ತದೆ . ಆ ದಿನ ಪೂಜೆಗೆ ಶ್ರೇಷ್ಠವಾದಂತಹ ವೀಳ್ಯದೆಲೆ ಗಿಡ , ತುಳಸಿ ಗಿಡ ಮನೆಗೆ ತೆಗೆದುಕೊಂಡು ಬರುವುದು ತುಂಬಾ ಒಳ್ಳೆಯದು . ಈ ರೀತಿಯಾದ ಆಷಾಢ ಮಾಸಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಲಾಗಿದೆ .